ಪುಷ್ಪಲತಾ
ನರಿಂಗಾನ, ಆ.13: ಅಲ್ ಮದೀನಾ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಪುಷ್ಪಲತಾ (42) ಗುರುವಾರ ಹೃದಯಾಘಾತದಿಂಧ ನಿಧನ ಹೊಂದಿದ್ದಾರೆ. ಅಲ್ ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರಾಗಿ ಸೇವೆಯಲ್ಲಿದ್ದರು. ಅಲ್ ಮದೀನಾ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಯೂನುಸ್ ಅಹ್ಸನಿ ಅಲ್ ಕಾಮಿಲಿ, ಹನೀಫ್ ಮಾಸ್ಟರ್, ಹಾರಿಸ್ ಮಾಸ್ಟರ್, ಸಿಬ್ಬಂದಿ ವರ್ಗ, ಆಡಳಿತ ಸಮಿತಿ ಸದಸ್ಯರು ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತಿ, ಪುತ್ರಿ ಮತ್ತು ತಾಯಿಯನ್ನು ಅಗಲಿದ್ದಾರೆ.
Next Story