ಪವಿತ್ರ ಹಜ್ ಯಾತ್ರೆ: ಮದೀನಾದಿಂದ ಮಕ್ಕಾಕ್ಕೆ ಹೊರಟಿದ್ದಾರೆ ಯಾತ್ರಾರ್ಥಿಗಳು
ಮದೀನಾ, ಆ.14: ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಗಾಗಿ ವಿಶ್ವಾದ್ಯಂತದಿಂದ ಆಗಮಿಸಿರುವ ಯಾತ್ರಿಕರು ಎಂಟು ದಿನಗಳ ಮದೀನಾ ವಾಸ್ತವ್ಯದ ಬಳಿಕ ಶನಿವಾರ ಮಕ್ಕಾಕ್ಕೆ ಪ್ರಯಾಣ ಆರಂಭಿಸಿದ್ದಾರೆ.
ವಿಶ್ವದೆಲ್ಲೆಡೆಯಿಂದ ಹಜ್ ನಿರ್ವಹಣೆಗಾಗಿ ಆಗಮಿಸಿದ್ದ ಲಕ್ಷಾಂತರ ಯಾತ್ರಿಕರು ಎಂಟು ದಿನಗಳ ಕಾಲ ಮದೀನಾದಲ್ಲಿ ವಾಸ್ತವ್ಯ ಹೂಡಿದ್ದರು. ಇಲ್ಲಿ ಶುಕ್ರವಾರ ಜುಮಾ ನಮಾಝ್‌ಗೆ ಲಕ್ಷಾಂತರ ಜನರು ಸೇರಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸಿರುವ 600ಕ್ಕೂ ಅಧಿಕ ಮಂದಿಯೂ ಇದರಲ್ಲಿ ಸೇರಿದ್ದಾರೆ. ಮಂಗಳೂರಿನ ಮೊದಲ ತಂಡವು ಮದೀನಾದಿಂದ ಶನಿವಾರ ಮಕ್ಕಾಕ್ಕೆ ಪ್ರಯಾಣ ಬೆಳೆಸಿದೆ. ಎರಡನೆ ತಂಡ ಇಂದು ಹೊರಡಲಿದ್ದು, ಕೊನೆಯ ತಂಡವು ಆಗಸ್ಟ್ 16ರಂದು ಪವಿತ್ರಾ ನಗರ ಮಕ್ಕಾದತ್ತ ಪಯಣ ಆರಂಭಿಸಲಿದೆ ಈ ಬಾರಿ ಹಜ್ ಯಾತ್ರೆಗೆ ಭಾರತದಿಂದ ಹೊರಟ ಮೊದಲ ತಂಡವು ಆಗಸ್ಟ್ 5ರಂದು ಮದೀನಾಕ್ಕೆ ಪ್ರಯಾಣ ಬೆಳೆಸಿದ್ದರೆ, ಕೊನೆಯ ತಂಡವು ಆಗಸ್ಟ್ 7ರಂದು ತಲುಪಿತ್ತು.
-ವರದಿ: ಹಮೀದ್ ಪಡುಬಿದ್ರೆ
Next Story