ಭಾರತೀಯರು ಮೆಚ್ಚಿದ್ದ ಪಾಕ್ ಕ್ರಿಕೆಟಿಗ ಹನೀಫ್ ಮುಹಮ್ಮದ್
ಗವಾಸ್ಕರ್ ಅವರಿಂದ ‘ಒರಿಜಿನಲ್ ಲಿಟ್ಲ್ ಮಾಸ್ಟರ್’ ಎಂದು ಹೊಗಳಿಸಿಕೊಂಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ
1978ರಲ್ಲಿ ಭಾರತೀಯ ಕ್ರಿಕೆಟ್ ತಂಡವು ಪಾಕ್ ಪ್ರವಾಸ ಕೈಗೊಂಡಿತ್ತು. ಹದಿನೇಳು ವರ್ಷಗಳ ಬಳಿಕ (1965 ಹಾಗೂ 1971ರ ಉಭಯ ಸಮರಗಳ ನಡುವಿನ ಅವ) ಉಭಯ ದೇಶಗಳು ಪರಸ್ಪರ ಆಡಿದ್ದುದು ಅದೇ ಮೊದಲ ಸಲವಾಗಿತ್ತು. ನಮ್ಮ ದೇಶದ ಕ್ರಿಕೆಟಿಗರನ್ನು ಹೊತ್ತ ವಿಮಾನವು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ತಂಡವು ಒಬ್ಬ ಆಟಗಾರನನ್ನು ಹೊರತು ಪಡಿಸಿ ನೇರವಾಗಿ ತಾವು ಉಳಿದುಕೊಳ್ಳಲಿದ್ದ ಹೊಟೇಲ್‌ಗೆ ತೆರಳಿತ್ತು. ಹೌದು. ಗವಾಸ್ಕರ್‌ಮಾತ್ರ ಮೊದಲಿಗೆ ಹನೀಫ್ ಮುಹಮ್ಮದ್ ಅವರನ್ನು ಭೇಟಿಯಾಗಲು ಬಯಸಿದ್ದರು.
ತಾನು ‘ಒರಿಜಿನಲ್ ಲಿಟ್ಲ್ ಮಾಸ್ಟರ್’ ಅವರನ್ನು ಭೇಟಿ ಯಾಗಲು ಬಯಸಿರುವುದಾಗಿ ಗವಾಸ್ಕರ್‌ತನ್ನನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ತಿಳಿಸಿದ್ದರು. ಹನೀಫ್ ಆಡುವುದನ್ನು ತಾನು ನೋಡಿಲ್ಲವಾದರೂ, ಆತನ ಬ್ಯಾಟಿಂಗ್‌ಶೈಲಿಯು ಪ್ರತಿಯೊಬ್ಬ ಪಾಕಿಸ್ತಾನಿಯನ ಮೇಲೂ ಗಾಢವಾದ ಪ್ರಭಾವವನ್ನು ಬೀರಿದೆ. ಹಿಂದಿನ ತಲೆಮಾರಿನ ಭಾರತೀಯರು ಸಹ ಹನೀಫ್ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಅವರಲ್ಲಿ ಗವಾಸ್ಕರ್‌ಅವರ ಗುರು, ಮಾಜಿ ಬಾಂಬೆ ಕ್ರಿಕೆಟಿಗ ವಾಸು ಪರಾಂಜಪೆ ಅವರೂ ಇದ್ದರು. ಬಾಲಕ ಗವಾಸ್ಕರ್‌ಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ಹೀಗೆ ಹೇಳಿದ್ದರು. ‘‘ಹನೀಫ್ ಮುಹಮ್ಮದ್ ಅವರು ಬಾರ್ಬೊನ್ ಸ್ಟೇಡಿಯಂನಲ್ಲಿ ರಕ್ಷಣಾತ್ಮಕ ಆಟ ಆಡುವಾಗ, ಅವರ ಬ್ಯಾಟ್‌ನ ಮಧ್ಯಕ್ಕೆ ಬಡಿಯುವ ಬಾಲ್‌ನ ಸದ್ದು ಚರ್ಚ್‌ಗೇಟ್ ರೈಲ್ವೆ ಸ್ಟೇಷನ್‌ವರೆಗೂ ಕೇಳಿಸು ತ್ತಿತ್ತು’’.
ಹನೀಫ್ ಮುಹಮ್ಮದ್ ಅವರಿಗೆ ಭಾರತದೊಂದಿಗೆ ಗಾಢವಾದ ಹಾಗೂ ಅನಿರ್ವಚನೀಯವಾದ ನಂಟಿತ್ತು. ಜನಾಗಢ (ಆಗ ಅರಸೊತ್ತಿಗೆಯ ರಾಜ್ಯವಾಗಿದ್ದ ಅದು ಈಗ ಗುಜರಾತ್‌ನಲ್ಲಿದೆ)ದಲ್ಲಿ ಜನಿಸಿದ ಅವರು ಜವೊಮಲ್ ನವೊಮಲ್ ಅವರಿಂದ ಕ್ರಿಕೆಟ್ ತರಬೇತಿ ಪಡೆದರು. ದೇಶ ವಿಭಜನೆ ಆಗಬಾರದಿತ್ತೆಂದು ಅವರು ತನ್ನ ವೃದ್ಧಾಪ್ಯದ ದಿನಗಳಲ್ಲಿ ನೋವು ವ್ಯಕ್ತಪಡಿಸುತ್ತಿದ್ದರು. ಅವರು ಪಾಕಿಸ್ತಾನ ತಂಡದ ಸದಸ್ಯನಾಗಿ ಭಾರತಕ್ಕೆ ಎರಡು ಟೆಸ್ಟ್ ಪ್ರವಾಸ ಕೈಗೊಂಡಿದ್ದರು. ಮೊದಲ ಪ್ರವಾಸ ಆರಂಭವಾದಾಗ 16 ವರ್ಷ ವಯಸ್ಸಿನವರಾಗಿದ್ದ ಅವರು ತನ್ನ ಟೆಸ್ಟ್ ಸರಣಿ ಆಡುತ್ತಿದ್ದಾಗ 17ನೆ ವರ್ಷಕ್ಕೆ ಕಾಲಿಟ್ಟಿದ್ದರು. ಹನ್ೀ ಮುಹಮ್ಮದ್ ಅವರ ಬ್ಯಾಟಿಂಗ್ ಕೌಶಲ್ಯವು ಜವಾಹರಲಾಲ್ ನೆಹರೂ ಅವರನ್ನೂ ಸೆಳೆದಿತ್ತು. ಹೊಸದಿಲ್ಲಿಯಲ್ಲಿ ಅವರು ಖುದ್ದಾಗಿ ಹನೀಫ್ರನ್ನು ಕರೆಯಿಸಿಕೊಂಡು ಮಾತನಾಡಿದ್ದರು. ಅವರಲ್ಲದೆ, ಅಸಂಖ್ಯಾತ ಭಾರತೀಯರನ್ನು ಕೂಡಾ ಹನೀಫ್ ಅವರ ಬ್ಯಾಟಿಂಗ್ ಮೋಡಿ ಮಾಡಿತ್ತು. ಪಾಕ್ ಕ್ರಿಕೆಟ್ ತಂಡವು ಟೆಸ್ಟ್ ಪ್ರವಾಸಕ್ಕಾಗಿ ದೇಶದ ವಿವಿಧೆಡೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನೂರಾರು ಭಾರತೀಯರು, ರೈಲು ನಿಲ್ದಾಣಗಳಲ್ಲಿ ‘ಅದ್ಭುತ ಬಾಲಕ’ ಹನೀಫ್ನ ದರ್ಶನಕ್ಕಾಗಿ ಮುಗಿಬೀಳುತ್ತಿದ್ದರು. ಭಾರತೀಯರಲ್ಲೂ ಹನೀಫ್ ಬಗ್ಗೆ ಇರುವ ಆದರಾಭಿಮಾನಗಳನ್ನು ಕಂಡು ಚಕಿತರಾದ ಪಾಕ್‌ನ ಸಹ ಆಟಗಾರರು ಆತನಿಗೆ, ಆಗಿನ ಕಾಲದ ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್ ದಿಲೀಪ್ ಕುಮಾರ್‌ನಿಂದ ಸೂರ್ತಿ ಪಡೆದು ದಿಲೀಪ್ ಎಂದೇ ಕರೆಯುತ್ತಿದ್ದರು.
ಹನೀಫ್ ಅವರ ಮುಂದಿನ ಭಾರತ ಪ್ರವಾಸದ ವೇಳೆ ಹನೀಫ್ ಬಗ್ಗೆ ಕ್ರಿಕೆಟ್ ಪ್ರೇಮಿಗಳ ಅಭಿಮಾನ ಮುಗಿಲುಮುಟ್ಟಿತ್ತು. ಆಗ ವ್ಯಂಗ್ಯಚಿತ್ರಕಾರರಾಗಿದ್ದ ಬಾಳಾಠಾಕ್ರೆ (ಕೆಲವು ವರ್ಷಗಳ ಆನಂತರ ಶಿವಸೇನೆ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು) ಅವರು ಹನೀಫ್ ಅವರ ಬ್ಯಾಟಿಂಗ್ ಕೌಶಲ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಮುಂಬರುವ ಕ್ರಿಕೆಟ್ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅವರೊಂದು ದೊಡ್ಡ ತಡೆಗೋಡೆಯಾಗಲಿದ್ದಾರೆಂದು ಅವರು ಎಚ್ಚರಿಕೆ ಕೂಡಾ ನೀಡಿದ್ದರು. ‘‘ಅವರಲ್ಲಿ ಅತ್ಯಂತ ಅಪರೂಪವಾದಂತಹ ಪ್ರತಿರೋಧ ಶಕ್ತಿಯಿದೆ. ಹಿರಿಯ ಬ್ಯಾಟ್ಸ್‌ಮನ್‌ಗಳ ಹಾಗೆ ಹನೀಫ್, ತನ್ನ ಆಟದ ಬಗ್ಗೆ ತಾನೇ ಪರಾಮರ್ಶೆ ನಡೆಸುತ್ತಾರೆ ಹಾಗೂ ಕ್ರೀಡಾಂಗಣದಲ್ಲಿ ಯಾವುದೇ ಸನ್ನಿವೇಶದ ಮೇಲೆ ಹಿಡಿತ ಸಾಸುವ ಸಾಮರ್ಥ್ಯ ಹೊಂದಿದ್ದಾರೆಂದು ಠಾಕ್ರೆ ಹೊಗಳಿದ್ದರು. ಬಾಂಬೆ ಟೆಸ್ಟ್ ಸರಣಿಯಲ್ಲಿ ಹನೀಫ್ ಅವರು ಅಭೂತಪೂರ್ವ ಶತಕ ಬಾರಿಸಿದ್ದನ್ನು ವಾಸು ಪರಾಂಜಪೆ ಹಾಗೂ ಬಾಳಾ ಠಾಕ್ರೆ ಇತರ ಪ್ರೇಕ್ಷಕರೊಂದಿಗೆ ವೀಕ್ಷಿಸಿದರು. ಈ ಟೆಸ್ಟ್‌ನಲ್ಲಿ ಹನೀಫ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ಕಂಡ ಕ್ರಿಕೆಟ್ ಅಭಿಮಾನಿಯೊಬ್ಬರು ಕರಾಚಿಯ ಪ್ರಮುಖ ದಿನಪತ್ರಿಕೆ ಡಾನ್‌ಗೆ ಬರೆದ ಪತ್ರ ವೊಂದರಲ್ಲಿ ಈ ಪಾಕ್ ಆಟಗಾರನು ಭಾರತೀಯರ ಕಣ್ಮಣಿಯಾಗಿ ಬಿಟ್ಟಿದ್ದಾರೆಂದು ಪ್ರಶಂಸಿಸಿದ್ದರು. ಹನೀಫ್ ಅವರ ಬ್ಯಾಟಿಂಗನ್ನು ವೀಕ್ಷಿಸಲು ಭಾರತೀಯರು ಎಷ್ಟು ಉತ್ಸುಕರಾಗಿದ್ದರೆಂದರೆ ಟೆಸ್ಟ್‌ನ 50 ರೂ. ಮುಖಬೆಲೆಯ ಟಿಕೆಟ್, ಕಾಳಸಂತೆಯಲ್ಲಿ 500 ರೂ.ಗೆ ಮಾರಾಟವಾಗುತ್ತಿದೆಯೆಂದು ಆತ ತಿಳಿಸಿದ್ದರು.
ಹನೀಫ್ ಮುಹಮ್ಮದ್ ಅವರ ರಕ್ಷಣಾತ್ಮಕ ಬ್ಯಾಟಿಂಗ್ ಕೌಶಲ್ಯವು ಐತಿಹಾಸಿಕವಾದುದಾಗಿತ್ತು. ಆ ಬಗ್ಗೆ ಆಗ ಹಲವಾರು ದಂತಕತೆಗಳು ಹುಟ್ಟಿಕೊಂಡಿದ್ದವು. ಬಾರ್ಬಡೊಸ್‌ನ ಬ್ರಿಜ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್ ತಂಡದೆದುರು ಅವರ ಅದ್ಭುತ ಬ್ಯಾಟಿಂಗ್ ಇದಕ್ಕೊಂದು ನಿದರ್ಶನವಾಗಿದೆ. ಮೊದಲು ಬ್ಯಾಟ್ ಮಾಡಿದ ಬಾರ್ಬಡೊಸ್ ತಂಡವು 579 ರನ್‌ಗಳನ್ನು ಕಲೆಹಾಕಿತು (ಕೊನ್ರಾಡ್ ಹಂಟ್ ಹಾಗೂ ಎವರ್ಟನ್ ವೀಕ್ಸ್ ಶತಕ ಬಾರಿಸಿದ್ದರು). ಆನಂತರ ಆಡಿದ ಪಾಕ್ ತಂಡವು ಕೇವಲ 106 ರನ್‌ಗಳಿಗೆ ಆಲೌಟಾಯಿತು. ಎರಡನೆ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಒಟ್ಟು 400 ರನ್‌ಗಳನ್ನು ಹಿಂದಿಕ್ಕಬೇಕಾದ ಬೆಟ್ಟದಷ್ಟು ದೊಡ್ಡ ಸವಾಲು ಪಾಕ್ ತಂಡದ ಮುಂದಿತ್ತು. ಆದರೆ ಆರಂಭಿಕ ಜೊತೆಯಾಟವಾಡಿದ ಹನೀಫ್ ಹಾಗೂ ಇಮ್ತಿಯಾಝ್, ಉತ್ಸಾಹದಾಯಕವಾದ ಪ್ರದರ್ಶನ ನೀಡಿದರು. ಇಮ್ತಿಯಾಝ್ (ಅವರೊಬ್ಬ ವಿಕೆಟ್‌ಕೀಪರ್) ಹಾಗೂ ಹನೀಫ್ ಅವರ ಭರ್ಜರಿ ಜೊತೆಯಾಟವು ಪ್ರೇಕ್ಷಕರ ಮನ ಸೂರೆಗೊಂಡಿತು. ಟಿಕೆಟ್ ಪಡೆದು ಕ್ರೀಡಾಂಗಣದಲ್ಲಿ ಕುಳಿತ ಪ್ರೇಕ್ಷಕ ರಲ್ಲದೆ, ಕೆಲವು ಪಡ್ಡೆಹುಡುಗರು ಕ್ರೀಡಾಂಗಣದ ಹೊರಭಾಗ ದಲ್ಲಿರುವ ತಾಳೆಮರಗಳನ್ನು ಏರಿ, ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಇವರಿಬ್ಬರ ಜೊತೆಯಾಟವು ಮೂರನೆ ದಿನವೂ ಎಗ್ಗಿಲ್ಲದೆ ಸಾಗಿತು. ಹನೀಫ್ ಅವರ ಭರ್ಜರಿ ಹೊಡೆತಗಳನ್ನು ವೀಕ್ಷಿಸಲು ಮರವೇರಿ ಕುಳಿತಿದ್ದ ಹದಿಹರೆಯದ ಬಾಲಕನೊಬ್ಬ ಸೂರ್ಯನ ಪ್ರಖರ ಬಿಸಿಲಿನ ತಾಪಕ್ಕೆ ಬಸವಳಿದು ನೆಲಕ್ಕೆ ಬಿದ್ದು ಬಿಟ್ಟಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಆತ, ಕಣ್ಣುಬಿಟ್ಟ ಕೂಡಲೇ ಕೇಳಿ ದ್ದೇನು ಗೊತ್ತೇ ? ಹನೀಫ್ ಇನ್ನೂ ಆಡುತ್ತಿದ್ದಾರೆಯೇ ...? ಎಂದು.
ಈ ಟೆಸ್ಟ್‌ನಲ್ಲಿ ಹನೀಫ್ ಅವರು ಇಮ್ತಿಯಾಝ್ ಅಲಿಮುದ್ದೀನ್, ಸಯೀದ್ ಅಹ್ಮದ್ ಹಾಗೂ ತನ್ನ ಸ್ವಂತ ಸಹೋದರ ವಝೀರ್ ಜೊತೆ ಶತಕದ ಜೊತೆಯಾಟವಾಡಿದರು. ಈ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ೀರೋದಾತ್ತವಾದ ಪ್ರದರ್ಶನವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿತಾದರೂ, ಅದು ಡ್ರಾದಲ್ಲಿ ಅಂತ್ಯಗೊಂಡಿತು. ದಾಖಲೆ ಪುಸ್ತಕಗಳ ಪ್ರಕಾರ ಪಂದ್ಯದಲ್ಲಿ ಹನೀಫ್ ಅವರು 16 ತಾಸು, 10 ನಿಮಿಷಗಳ ಅಥವಾ ಒಟ್ಟು 970 ನಿಮಿಷಗಳ ಕಾಲ ಆಡಿದ್ದರು.
ಅದ್ಭುತವಾದ ರಕ್ಷಣಾತ್ಮಕ ಆಟಗಾರನೆಂದು ಗುರುತಿಸಲ್ಪಟ್ಟ ಹನೀಫ್ ಅವರು ವೇಗದ ಬೌಲರ್ ್ರೆಡ್ಡಿ ಟ್ರೂಮ್ಯಾನ್ ಎಸೆದ ಬಾಲೊಂದನ್ನು ದಿಟ್ಟವಾಗಿ ಎದುರಿಸುವ ವೀಡಿಯೋ ತುಣುಕೊಂದು ಮಾತ್ರ ಯೂಟ್ಯೂಬ್‌ನಲ್ಲಿ ಈಗ ಲಭ್ಯವಿದೆ. ಅವರ ಸ್ವೀಪಿಂಗ್ ಹಾಗೂ ಸ್ಕ್ವಾರ್ ಡೈವಿಂಗ್ ಪ್ರದರ್ಶನದ ಕೆಲವು ಮಸುಕು ಚಿತ್ರಗಳು ಕೂಡಾ ಅಂತರ್ಜಾಲದಲ್ಲಿ ಸಿಗುತ್ತವೆ. ವಾಸ್ತವವಾಗಿ ಹನೀಫ್ ಓರ್ವ ರಕ್ಷಣಾತ್ಮಕ ಆಟಗಾರನೆಂದೇ ಹೆಸರಾಗಿದ್ದರೂ, ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನದಲ್ಲಿ ಯಾವತ್ತೂ ಹಿಂದೆ ಬಿದ್ದಿರಲಿಲ್ಲ. ಆದರೆ ತಂಡವು ಸಂಕಷ್ಟದ ಸನ್ನಿವೇಶಗಳಲ್ಲಿ ಸಿಲುಕಿದ ಸಂದರ್ಭಗಳಲ್ಲಿ ಹನೀಫ್ ಅವರು ಅನಿವಾರ್ಯವಾಗಿ ರಕ್ಷಣಾತ್ಮಕ ಆಟಕ್ಕೆ ಮೊರೆಹೋಗಬೇಕಾಗುತ್ತಿತ್ತು.
ಚಾಪೆಲ್, ಗ್ರೇಸ್, ಹ್ಯಾಡ್ಲೀಸ್,ಅಮರನಾಥ್ ಹಾಗೂ ವಾಗ್ಸ್ ಅವರಂತೆ ಹನೀಫ್ ಅವರೂ ಜಗತ್ತಿನ ಶ್ರೇಷ್ಠ ಕ್ರಿಕೆಟ್ ಕುಟುಂಬಗಳ ಸಾಲಿಗೆ ಸೇರುತ್ತಾರೆ. ಅವರ ಸಹೋದರರಾದ ವಝೀರ್, ಮುಷ್ತಾಕ್ ಹಾಗೂ ಸಾದಿಕ್ ಅವರು ಉತ್ಕೃಷ್ಟ ಗುಣಮಟ್ಟದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಅವರ ಐದನೆ ಸಹೋದರ ರಾಯಿಸ್ ಕೂಡಾ ಒಂದೊಮ್ಮೆ ಟೆಸ್ಟ್ ಪಂದ್ಯದಲ್ಲಿ 12ನೆ ಆಟಗಾರನಾಗಿದ್ದರು. ಹನೀಫ್ ಅವರ ಪುತ್ರ ಶುಹೈಬ್ ಪಾಕಿಸ್ತಾನ ತಂಡಕ್ಕಾಗಿ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ವಾಸ್ತವವಾಗಿ ಅವರು ಅದಕ್ಕಿಂತಲೂ ಹೆಚ್ಚು ಪಂದ್ಯಗಳನ್ನು ಆಡಬೇಕಿತ್ತು. ಕೆಲವು ಸಂದರ್ಭಗಳಲ್ಲಿ ತನ್ನ ತಂದೆಗಿಂತ ಹೆಚ್ಚು ನಿರಾತಂಕವಾಗಿ ಆಡುವ ಶುಹೈಬ್ ನಿಪುಣ ಬ್ಯಾಟ್ಸ್‌ಮನ್ ಆಗಿದ್ದರು. ಫೀಲ್ಡಿಂಗ್‌ನಲ್ಲಿ ಅಸಾಧಾರಣವಾದ ಕೌಶಲ್ಯವನ್ನು ಅವರು ಮೆರೆಯುತ್ತಿದ್ದರು. ಆದರೆ 1980ರ ದಶಕದಲ್ಲಿ ಪಾಕ್ ಕ್ರಿಕೆಟ್ ತಂಡದಲ್ಲಿ ಗುಂಪುಗಾರಿಕೆ ಹಾಗೂ ರಾಜಕೀಯ ತೀವ್ರಗೊಂಡಾಗ ಶುಹೈಬ್ ಬದಿಗೆ ಸರಿಸಲ್ಪಟ್ಟರು.
1971ರ ವೇಳೆಗೆ ಹನೀಫ್ ಕ್ರಿಕೆಟ್ ರಂಗದಿಂದ ನಿವೃತ್ತರಾಗಿದ್ದರು. ಆದರೆ ಅವರ ಸಹೋದರರಾದ ಮುಷ್ತಾಕ್ ಹಾಗೂ ಸಾದಿಕ್ ಆಡುತ್ತಿದ್ದರು. 1978ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಬ್ಬರೂ ಸಹೋದರರು ಜೊತೆಯಾಗಿ ಆಡಿದ್ದರು. ಹನೀಫ್ ಪುತ್ರ ಶುಹೈಬ್ ಅವರ ಬ್ಯಾಟಿಂಗ್ ನೈಪುಣ್ಯತೆಯು ವಿಶ್ವದ ಹಿರಿಯ ಕ್ರಿಕೆಟಿಗರ ಪ್ರಶಂಸೆಗೂ ಪಾತ್ರವಾಗಿತ್ತು. 1992ರಲ್ಲಿ ಪಾಕ್ ತಂಡದ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ, ಶುಹೈಬ್‌ರನ್ನು ನಾಲ್ಕು ಟೆಸ್ಟ್ ಪಂದ್ಯಗಳಿಂದಲೂ ಹೊರಗಿಡಲಾಗಿತ್ತು. ಐದನೆ ಪಂದ್ಯಕ್ಕೆ ತಡವಾಗಿ ಸೇರ್ಪಡೆಗೊಂಡ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಅರ್ಧ ಶತಕ ತಲುಪಿದಾಗ, ಆಗ ಟೆಸ್ಟ್ ಪಂದ್ಯದ ವಿಶೇಷ ತಜ್ಞರಾಗಿದ್ದ, ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡ್ ಆಟಗಾರ ಟ್ರೆವೊರ್ ಬೈಲಿ (ಇವರು ಹನೀಫ್ ಎದುರು ಆಡಿದ್ದರು) ಅವರು ಶುಹೈಬ್ ಬ್ಯಾಟಿಂಗ್ ಕಸುವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಅವರನ್ನು ಯಾಕೆ ಹೊರಗಿಡಲಾ ಯಿತೆಂದು ಬೈಲಿ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಅತ್ಯಂತ ಹೆಮ್ಮೆಪಟ್ಟವರೆಂದರೆ ದೂರದ ಕರಾಚಿ ಯಲ್ಲಿ ಪ್ರತಿಬಾಲ್‌ನಿಂದ ಬಾಲ್‌ಗೆ ಪಂದ್ಯದ ವೀಕ್ಷಕ ವಿವರಣೆಯನ್ನು ಕೇಳುತ್ತಿದ್ದ ಹಿರಿಯ ವಯಸ್ಸಿನ ಮಹಿಳೆಯೊಬ್ಬರು. ಹನೀಫ್ ಹಾಗೂ ಅವರ ನಾಲ್ವರು ಸಹೋದರರು ತಾಯಿ ಹಾಗೂ ಶುಹೈಬ್‌ಗೆ ಅಜ್ಜಿಯಾ ಗಿರುವ ಅಮೀರಾಬಿ ತನ್ನ ಕುಟುಂಬದ ಗಂಡುಮಕ್ಕಳು ಕ್ರಿಕೆಟ್ ರಂಗದಲ್ಲಿ ಮಿಂಚಲು ಸೂರ್ತಿ ತುಂಬಿದ್ದರು.
ನಾನು ಯಾವತ್ತೂ ಹನೀಫ್ ಅವರ ಬ್ಯಾಟಿಂಗನ್ನು ನೋಡಿದ್ದಿಲ್ಲ. ಆದರೆ 2005ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಭಾರತ-ಪಾಕಿಸ್ತಾನ ಟೆಸ್ಟ್ ಪಂದ್ಯದ ವೀಕ್ಷಣೆಗೆ ಆಗಮಿಸಿದ್ದ ಅವರನ್ನು ತೀರಾ ಹತ್ತಿರ ದಿಂದ ಕಾಣುವ ಅವಕಾಶ ಒದಗಿತ್ತು. ಪಂದ್ಯದ ವೇಳೆ ಒಂದು ದಿನ ಬೆಳಗ್ಗೆ ನನಗೆ ಕ್ರೀಡಾಂಗಣದಲ್ಲಿರುವ ಪ್ರೆಸಿಡೆಂಟ್ಸ್ ಬಾಕ್ಸ್‌ಗೆ ಬರುವಂತೆ ಕರೆ ಬಂತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ 30 ವರ್ಷಗಳಿಂದ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಿದ್ದ ನನಗೆ ಪ್ರಥಮ ಬಾರಿಗೆ ಈ ಸಂರಕ್ಷಿತ ಆವರಣಕ್ಕೆ ಪ್ರವೇಶಿಸುವ ಅವಕಾಶ ದೊರೆತಿತ್ತು (ನನ್ನ ಕೃತಿಯೊಂದನ್ನು ಓದಿದ ಸಾಹಿತ್ಯಾಸಕ್ತ ಅಕಾರಿಯೊಬ್ಬರು ನೀಡಿದ ಅನಿರೀಕ್ಷಿತ ಆಹ್ವಾನದಿಂದಾಗಿ ಇದು ಸಾಧ್ಯವಾಯಿತು). ಅಲ್ಲಿ ಸುಮಾರು ಒಂದು ತಾಸು ಕುಳಿತಿದ್ದ ನಾನು ಮೊದಲ ಎರಡು ವಿಕೆಟ್‌ಗಳು ಉರುಳಿದ ಬಳಿಕ ಯೂನುಸ್‌ಖಾನ್ ಹಾಗೂ ಇಂಝಮಮುಲ್ ಹಕ್ ಅವರ ಆಕರ್ಷಕ ಜೊತೆಯಾಟವನ್ನು ವೀಕ್ಷಿಸುತ್ತಿದ್ದೆ. ನಾನು ಕುಳಿತಿದ್ದ ಸಾಲಿನ ಬಲ ಬದಿಯಲ್ಲಿದ್ದ ಕೆಲವು ಖಾಲಿ ಆಸನಗಳ ಆಚೆಗೆ ಈ ಪಾಕಿಸ್ತಾನದ ಈ ಮಹಾನ್ ಕ್ರಿಕೆಟಿಗ, ಪಂದ್ಯವನ್ನು ತನ್ಮಯತೆಯಿಂದ ವೀಕ್ಷಿಸುತ್ತಿದ್ದರು. ಅವರು ತನ್ನ ಕೂದಲಿಗೆ ಹೆನ್ನಾದ ಜೊತೆಗೆ ಕಪ್ಪು ಬಣ್ಣದಿಂದ ಡೈ ಮಾಡಿರುವುದನ್ನು ಗಮನಿಸಿದೆ. ಹಳದಿ ಬಣ್ಣದ ಪ್ಲಾಸ್ಟಿಕ್ ಪೊಟ್ಟಣದಿಂದ ಹುರಿದ ಬಟಾಣಿಯನ್ನು ನಿಧಾನವಾಗಿ ತಿನ್ನುತ್ತಿರುವುದನ್ನು ಕಂಡೆ. ಒಂದು ವೇಳೆ ನಾನು ಎಳೆಯ ವಯಸ್ಸಿನ ಯುವಕನಾಗಿದ್ದಲ್ಲಿ, ಅವರ ಬಳಿಗೆ ನೇರವಾಗಿ ತೆರಳಿ ಅವರನ್ನು ಮಾತನಾಡಿಸುತ್ತಿದ್ದೆ. ಆದರೆ ನನಗೆ ಅವರನ್ನು ಅವರ ಚಿಂತನೆಗಳು ಹಾಗೂ ಕ್ರಿಕೆಟ್‌ನ ನಡುವೆಯೇ ಇರಲು ಬಿಡುವುದು ಸೂಕ್ತವೆಂದು ನನಗನಿಸಿತು. ಆದರೆ, ಹನ್ೀ ಈ ಚೊಚ್ಚಲ ಬೆಂಗಳೂರು ಭೇಟಿಯ ವೇಳೆ ಅವರು ತನ್ನಂತೆಯೇ ಸರಳ ಹಾಗೂ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರನ್ನಾದರೂ ಭೇಟಿಯಾಗಿರಬಹುದೆಂದು ನಾನು ಆಶಿಸುತ್ತೇನೆ.