ಅಂಕಿ ಅಂಶಗಳು ತಪ್ಪಾಗಿವೆಯೇ?
ಭಾರತದಲ್ಲಿ ಶಿಶು ಮರಣ ಪ್ರಮಾಣ
ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಶಿಶು ಮರಣ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 1991ರಲ್ಲಿ ಜನಿಸಿದ ಪ್ರತಿ 1 ಸಾವಿರ ಶಿಶುಗಳ ಪೈಕಿ 80 ಕಂದಮ್ಮ ಗಳು ಸಾವಿಗೀಡಾಗಿದ್ದರೆ, ಕಳೆದ ವರ್ಷ ಪ್ರತಿ 1 ಸಾವಿರ ಶಿಶುಗಳಿಗೆ 40 ಹಸುಳೆಗಳು ಮೃತಪಟ್ಟಿವೆ. ಆದರೆ ದೇಶದ ಅಂಕಿಅಂಶ ಸಂಸ್ಥೆಗಳು ಹಲವು ವರ್ಷಗಳಿಂದ ಕಲೆಹಾಕಿರುವ ಅಕೃತ ದತ್ತಾಂಶ ಹಾಗೂ ಜಾಗತಿಕ ಆರೋಗ್ಯ ಸಂಸ್ಥೆಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ವಿಶ್ಲೇಷಣೆಗಳು ಭಾರತದಲ್ಲಿ ಸಾವಿಗೀಡಾಗುತ್ತಿರುವ ಶಿಶುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡಲು ವಿಲವಾಗಿವೆ.
ಜನಿಸುವಾಗಲೇ ಸಾವನ್ನಪ್ಪಿದ ಶಿಶುಗಳ ಕುರಿತಾದ ಅಂಕಿಅಂಶಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ. ಆಗಸ್ಟ್ 16ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯು ಬಿಡುಗಡೆಗೊಳಿಸಿದ ಪ್ರಕಟಣೆಯೊಂದು, ಗರ್ಭಾವಸ್ಥೆಯ 28 ವಾರಗಳ ಬಳಿಕ ಅಥವಾ ಪ್ರಸವದ ವೇಳೆ ಬದುಕಿರುವ ಯಾವುದೇ ಲಕ್ಷಣಗಳನ್ನು ಪ್ರದರ್ಶಿಸದ ಶಿಶು (ಠಿಜ್ಝ್ಝಿ ಚಿಜ್ಟಿಠಿ)ಗಳ ಪ್ರಮಾಣವನ್ನು ಕಡಿಮೆಗೊಳಿಸಲು ಭಾರತದಂತಹ ದೇಶಗಳು ಪ್ರಯತ್ನಿಸಬೇಕೆಂದು ಆಗ್ರಹಿಸಿತ್ತು. ಇದರಿಂದಾಗಿ ಹೆರಿಗೆ ಹಾಗೂ ಬಾಣಂತನದ ಸಂದರ್ಭದಲ್ಲಿ ಸಾಯುವ ಶಿಶುಗಳ ಪ್ರಮಾಣದಲ್ಲಿ ಇಳಿಕೆ ಮಾಡಲು ಸಾಧ್ಯವಾಗಬಹುದೆಂಬ ಆಶಾವಾದವನ್ನು ಅದು ವ್ಯಕ್ತಪಡಿಸಿತ್ತು.
ಪ್ರತಿ ವರ್ಷವೂ ವಿಶ್ವದಾದ್ಯಂತ 3.03 ಲಕ್ಷ ಮಹಿಳೆಯರು ಗರ್ಭಿಣಿಯರಾಗಿರುವಾಗ ಅಥವಾ ಹೆರಿಗೆಯ ವೇಳೆ ಸಾವಿಗೀಡಾಗುತ್ತಾರೆ. ಹಾಗೂ 2.70 ಲಕ್ಷ ಶಿಶುಗಳು ಹುಟ್ಟಿದ ಮೊದಲ 28 ದಿನಗಳಲ್ಲಿ ಸಾವನ್ನಪ್ಪುತ್ತವೆ. ಲ್ಯಾನ್ಸೆಟ್ ನಿಯತಕಾಲಿಕ ನಡೆಸಿದ ಅಧ್ಯಯನವೊಂದು 1995 ಹಾಗೂ 2009ರ ನಡುವೆ ಪ್ರತಿ ವರ್ಷವೂ 20.60 ಲಕ್ಷ ಶಿಶುಗಳು, ಹುಟ್ಟುವಾಗಲೇ ಮೃತಪಟ್ಟಿದ್ದವು ಎಂದು ಹೇಳಿದೆ. ಮರಣವನ್ನಪ್ಪಿದ ಒಟ್ಟು ನವಜಾತ ಶಿಶುಗಳ ಪೈಕಿ ಅರ್ಧಾಂಶದಷ್ಟು ಮರಣ ಅಥವಾ ಜನನ ಪತ್ರವನ್ನು ಪಡೆದಿರುವುದಿಲ್ಲ. ಹೀಗಾಗಿ ಅವುಗಳ ಜನನವು ನೋಂದಣಿಗೊಂಡಿರುವುದಿಲ್ಲ, ಇಲ್ಲವೇ ವರದಿಯಾಗುವುದಿಲ್ಲ ಅಥವಾ ಆರೋಗ್ಯ ಆಡಳಿತ ವ್ಯವಸ್ಥೆಯಿಂದ ತನಿಖೆಯಾಗಿರುವುದಿಲ್ಲ.
‘‘ಗರ್ಭಾವಸ್ಥೆಯ 28 ವಾರಗಳ ಬಳಿಕ ಶಿಶುವಿಗೆ ಗರ್ಭದಿಂದ ಹೊರಗೆ ಬದುಕಲು ಸಾಧ್ಯವಿದೆಯೆಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಉಪ ಆಯುಕ್ತ ಡಾ. ಅಜಯ್ ಖೇರಾ ವಿವರಿಸುತ್ತಾರೆ. ಅನೇಕ ಸಲ ಆಗತಾನೆ ಹೆರಿಗೆಯಾದ ಶಿಶುವನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗುವುದಿಲ್ಲ.ಆಗ ಅದನ್ನು ಅವರು ನವಜಾತ ಶಿಶು ಮರಣವೆಂದು ದಾಖಲಿಸಿಬಿಡುತ್ತಾರೆ. ಆದರೆ ವಾಸ್ತವವಾಗಿ ಇಂತಹ ಶಿಶುಗಳ ಮರಣವನ್ನು, ಪ್ರಸವಕಾಲದ ಸಾವೆಂದು ದಾಖಲಿಸಬೇಕೇ ಹೊರತು ನವಜಾತ ಶಿಶು ಮರಣವೆಂದಲ್ಲ.
ಹುಟ್ಟುವಾಗಲೇ ಸಾವನ್ನಪ್ಪಿದ್ದ ಶಿಶುಗಳ ಪ್ರಮಾಣದ ಅಂಕಿಸಂಖ್ಯೆಗಳ ಅಲಭ್ಯತೆಯು ನವಜಾತ ಶಿಶುಗಳ ಸಾವಿನ ಪ್ರಮಾಣದ ಬಗ್ಗೆ ತಪ್ಪು ಅಂಕಿಅಂಶಗಳು ಲಭ್ಯವಾಗುತ್ತಿವೆ.
ಪ್ರಸವದ ವೇಳೆ ಜೀವಂತವಾಗಿ ಜನಿಸಿದ ಶಿಶುಗಳು ಹಾಗೂ ಮರಣವನ್ನಪ್ಪಿದ ಶಿಶುಗಳ ಕುರಿತ ಅಂಕಿಅಂಶಗಳನ್ನು ದಾಖಲಿಸಲು ಭಾರತವು ಈವರೆಗೆ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿತ್ತು.
ಈ ದತ್ತಾಂಶಗಳ ದಾಖಲೀಕರಣದಲ್ಲಿ ಉಂಟಾಗುವ ಅಸಮಂಜಸತೆಗಳನ್ನು ನೀಗಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಪ್ರಸವಕಾಲದಲ್ಲಿ ಶಿಶುಗಳ ಮರಣ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸುವಂತೆ ಸದಸ್ಯ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದೆ. ಈ ರೀತಿಯ ವರ್ಗೀಕರಣದಿಂದ ಭಾರತದಲ್ಲಿ ದಾಖಲಾಗುವ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಖಂಡಿತವಾಗಿಯೂ ಹೆಚ್ಚಳ ಕಂಡುಬರಲಿದೆ.
‘‘ಜನಿಸಿದಾಗಲೇ ಸಾವನ್ನಪ್ಪಿರುವ ಶಿಶುಗಳ ಪ್ರಮಾಣವು, ನವಜಾತ ಶಿಶುಗಳ ಸಾವಿನ ಸಂಖ್ಯೆಗೆ ಸರಿಸಮವಾಗಿದೆಯೆಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಉಪ ಆಯುಕ್ತ ಡಾ. ಅಜಯ್‌ಖೇರಾ ಹೇಳುತ್ತಾರೆ. 2013ರ ಮಾದರಿ ನೋಂದಣಿ ವ್ಯವಸ್ಥೆ ದತ್ತಾಂಶದ ಪ್ರಕಾರ ಪ್ರಸ್ತುತ ಶಿಶು ಮರಣ ಪ್ರಮಾಣ (ಒಂದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಶಿಶುಗಳ ಸಾವು)ವು ಪ್ರತಿ ಸಾವಿರ ಜನನಗಳಿಗೆ 40 ಆಗಿದೆ. ಆದರೆ ಈ ಕುರಿತ 2014ರ ಸಾಲಿನ ವರದಿ ಇನ್ನಷ್ಟೇ ಬರಬೇಕಾಗಿದೆ.
ಶಿಶುಮರಣದ ವಿರುದ್ಧದ ಆಂದೋಲನದ ಕಾರ್ಯಕರ್ತರು ಕಳೆದ ಕೆಲವು ಸಮಯದಿಂದ ಈ ರೀತಿಯ ವರ್ಗೀಕರಣವನ್ನು ಆಗ್ರಹಿಸುತ್ತಿದ್ದಾರೆ.
‘‘ಪ್ರಸ್ತುತ ಶಿಶುಮರಣ ದರವು, ಕೇವಲ ಜೀವಂತವಾಗಿ ಹುಟ್ಟಿದ ಮಕ್ಕಳ ಸಾವಿನ ಪ್ರಕರಣಗಳನ್ನು ಆಧರಿಸಿದೆ. ಆದರೆ ಅದು ಸಾವನ್ನಪ್ಪಿದ ಸ್ಥಿತಿಯಲ್ಲೇ ಜನಿಸಿದ ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ’’ ಎಂದು ಛತ್ತೀಸ್‌ಗಡದ ಬಿಲಾಸ್‌ಪುರ್‌ನಲ್ಲಿರುವ ‘ಜನ್ ಸ್ವಾಸ್ಥ ಸಹಯೋಗ್’ನ ಸಹಸಂಸ್ಥಾಪಕ ಡಾ.ಯೋಗೇಶ್ ಜೈನ್ ಹೇಳುತ್ತಾರೆ. ‘‘ಗರ್ಭಿಣಿಯರಾಗಿರುವಾಗ ಹಾಗೂ ಹೆರಿಗೆಯ ಸಂದರ್ಭದಲ್ಲಿ ಗುಣಮಟ್ಟದ ಆರೋಗ್ಯ ಪಾಲನೆಯನ್ನು ಒದಗಿಸುವ ಮೂಲಕ ಬಹುತೇಕ ಪ್ರಸವಕಾಲದ ಜನನಗಳು ಹಾಗೂ ನವಜಾತ ಶಿಶು ಸಾವಿನ ಪ್ರಮಾಣವನ್ನು ತಪ್ಪಿಸಲು ಸಾಧ್ಯವಿದೆ’’ ಎಂದು ಅವರು ಹೇಳುತ್ತಾರೆ.
‘‘ಎಲ್ಲಾ ರೀತಿಯ ಜನನ ಹಾಗೂ ಸಾವಿನ ಪ್ರಮಾಣಗಳ ನಿಖರ ಗಣತಿಯನ್ನು ನಾವು ಖಾತರಿಪಡಿಸಬೇಕಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಜನನ ಆರೋಗ್ಯ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಇಯಾನ್ ಆ್ಯಸ್ಕೂ ತಿಳಿಸುತ್ತಾರೆ. ‘‘ಗರ್ಭಿಣಿಯರ ಹಾಗೂ ಶಿಶುಗಳ ಸಾವಿನ ಕಾರಣಗಳನ್ನು ಪರಾಮರ್ಶಿಸುವ ಮೂಲಕ ವಿವಿಧ ದೇಶಗಳಿಗೆ ತಮ್ಮ ಆರೋಗ್ಯ ಪಾಲನೆಯ ಗುಣಮಟ್ಟವನ್ನು ಸುಧಾರಿಸಲು ಹಾಗೂ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ ಮತ್ತು ಲಕ್ಷಾಂತರ ಕುಟುಂಬಳಿಗೆ ತಮ್ಮ ಶಿಶುಗಳು ಹಾಗೂ ತಾಯಂದಿರ ಸಾವಿನ ನೋವನ್ನು ಅನುಭವಿಸುವುದನ್ನು ತಡೆಯಲಿದೆ’’ ಎಂದು ಅವರು ಹೇಳುತ್ತಾರೆ.
ಇಯಾನ್ ಆ್ಯಸ್ಕೂ ಅವರ ಸಲಹೆಯನ್ನು ಖೇರ್ ಕೂಡಾ ಒಪ್ಪಿಕೊಳ್ಳುತ್ತಾರೆ. ‘‘ಪ್ರತಿ ಸಾವಿರ ಜನನಗಳಿಗೆ 80ರಷ್ಟಿದ್ದು ಶಿಶು ಮರಣ ಪ್ರಮಾಣವನ್ನು ಪ್ರಸ್ತುತ ನಾವು 33ಕ್ಕೆ ಇಳಿಸಲು ಸಲರಾಗಿದ್ದೇವೆ’’ ಎಂದು ಅವರು ಹೇಳುತ್ತಾರೆ. ಶಿಶುಮರಣ ದರದ ವರ್ಗೀಕರಣದಿಂದ ಆರೋಗ್ಯ ಪಾಲನೆ ಕಾರ್ಯಕ್ರಮ ಉತ್ತಮಗೊಳ್ಳ್ಳಲಿದೆಯೆಂದು ಅವರು ಅಭಿಪ್ರಾಯಿಸುತ್ತಾರೆ.