ಸಮಾನತೆ, ಸ್ವಾತಂತ್ರ, ಬಂಧುತ್ವಗಳ ಅವನತಿ ಉಲ್ಬಣಗೊಳ್ಳುತ್ತಿರುವ ಬ್ರಾಹ್ಮಣ್ಯ- ಪ್ಯೂಡಲಿಸಂ
ಭಾಗ 2
ಆರೆಸ್ಸೆಸ್ ಮತ್ತು ದಲಿತರು
ಆದರೆ ಆರೆಸ್ಸೆಸ್ ಶ್ರೇಣೀಕೃತ ಜಾತಿಪದ್ಧತಿಯನ್ನು ಚಾತುರ್ವರ್ಣ ವ್ಯವಸ್ಥೆಯನ್ನು ಉಳಿಸಿಕೊಂಡು ದಲಿತರನ್ನು ತನ್ನ ಬಿಜೆಪಿಗೆ ವೋಟ್ ಮಾಡಲು ನಡೆಸಿದ ಎಲ್ಲಾ ಕುತಂತ್ರಗಳು ಉಲ್ಟಾ ಹೊಡೆಯುತ್ತಿವೆ. ಇದು ಬಿಜೆಪಿಯ ರಾಜಕೀಯ ಮಹತ್ವಾಕಾಂಕ್ಷೆಗೆ ಮುಳುವಾಗುತ್ತಿದೆ. ಈ ರೀತಿಯ ಪ್ರಯತ್ನಗಳನ್ನು ಆರೆಸ್ಸೆಸ್ 90ರ ದಶಕದಲ್ಲಿ ಆರಂಭಿಸಿತ್ತು. ಪತ್ರಕರ್ತ ಎಂ.ಕೆ.ವೇಣು ಅವರು 1996ರಲ್ಲಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ನ ಸ್ಥಾಪಕ, ಕವಿ ನಾಮದೇವ್ ಢಸಾಳ್ ಆರೆಸ್ಸೆಸ್ ಮುಖ್ಯಸ್ಥ ಕೆ.ಸುದರ್ಶನ್ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿದ್ದರು.ಇದನ್ನು ರಾಷ್ಟ್ರೀಯ ಮತ್ತು ಸಾಮಾಜಿಕ ಐಕ್ಯತೆ ಎಂದು ಬಣ್ಣಿಸಲಾಗಿತ್ತು. ಈ ಘಟನೆ ಆ ಕಾಲದಲ್ಲಿ ಅನೇಕ ಲಿಬರಲ್ ಲೇಖಕ, ಚಿಂತಕರಿಗೆ ಒಂದು ಶಾಕ್ ನೀಡಿತ್ತು. 1972ರಲ್ಲಿ ದಲಿತ ಪ್ಯಾಂಥರ್ಸ್ ಈ ಬ್ರಾಹ್ಮಣ್ಯದ ವಿರುದ್ಧ ಕ್ರಾಂತಿಕಾರಿ ಯುದ್ಧವನ್ನೇ ಸಾರಿತ್ತು. ಆದರೆ ಅದೇ ವೇದಿಕೆಯಲ್ಲಿ ಢಸಾಳ್ ಅವರು ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಸಾಮಾಜಿಕ ಸಂರಾಷ್ಟ್ರ ಮಂಚ್‌ನ್ನು ಮತ್ತಷ್ಟು ಬಲಪಡಿಸಬೇಕೆಂದು ಹೇಳಿದರು. ಮುಂದುವರಿದು ‘‘ಜಾತಿಯನ್ನು ನಿರ್ಮೂ ಲನೆ ಮಾಡಲು ದಲಿತರು ಮತ್ತು ಮೇಲ್ಜಾತಿ ಹಿಂದೂಗಳು ಒಟ್ಟಾಗಿ ಹೋರಾಡಿ ಆದಿ ಶಂಕರ ಅವರ ಪರಂಪರೆಯನ್ನು ಮುಂದುವರಿಸಬೇಕು’’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಆರೆಸ್ಸೆಸ್ ಮುಖ್ಯಸ್ಥರು ಸಹ ನಮ್ಮ ಲಕ್ಷಾಂತರ ಕಾರ್ಯಕರ್ತರು ದಲಿತರನ್ನು ತಲುಪುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟರು.ಇದನ್ನು ರಾಜಕೀಯ ಮತ್ತು ಬೌದ್ಧಿಕ ವಲಯದಲ್ಲಿನ ಬಹುಪಾಲು ದಲಿತ ನಾಯಕತ್ವವು ಮಾನ್ಯ ಮಾಡಲಿಲ್ಲ ಎಂದು ಬರೆಯುತ್ತಾರೆ.
ರಮೇಶ್ ಕಾಂಬ್ಲೆ ಅವರು ಹೇಳುವಂತೆ ಹಿಂದು ರಾಷ್ಟ್ರದ ಯೋಜನೆಗೆ ದಲಿತರು ಒಡ್ಡಬಹುದಾದ ಪ್ರತಿಭಟನೆಯನ್ನು ತಟಸ್ಥಗೊಳಿಸುವ ಮತ್ತೊಂದು ಅಗತ್ಯವೂ ಹಿಂದುತ್ವಕ್ಕಿತ್ತು. ಏಕೆಂದರೆ ಹಿಂದುತ್ವದ ಸಿದ್ಧಾಂತಗಳು ಮತ್ತು ದಲಿತ ಬದುಕು ಮತ್ತು ಚಿಂತನೆಗಳ ನಡುವಿನ ಅಗಾಧವಾದ ವಿರೋಧಾಭಾಸಗಳು, ವೈರುಧ್ಯಗಳನ್ನು ಮೀರಿ ಅವಕಾಶವಾದಿ ರಾಜಕಾರಣ ಮಾಡಲು ಸಹ ಇಂದು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಆ ರೀತಿ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ appropriate ಮಾಡಿಕೊಳ್ಳಲು ಹೋಗಿ ಮುಗ್ಗರಿಸುತ್ತಿದೆ. ತನ್ನ ಹಿಂದೂ ರಾಷ್ಟ್ರೀಯತೆಯ ಹಿತಾಸಕ್ತಿಗಾಗಿ ಹೊಂದಾಣಿಕೆಯ ರಾಜಕಾರಣ ಮಾಡಿಕೊಳ್ಳಲು ಬಿಜೆಪಿಗೆ ತಾನೇ ಪೋಷಿಸಿದ ತನ್ನ ಹಿಂದುತ್ವದ ಪೆನಟಿಕ್ ಬ್ರಿಗೇಡ್ ಅನ್ನು ನಿಗ್ರಹಿಸಲು ಸಾಧ್ಯವೇ ಇಲ್ಲದ ಕಾರಣಕ್ಕಾಗಿ ದಲಿತ ಸಮುದಾಯದೊಂದಿಗೆ ಯಾವುದೇ ಬಗೆಯ ಅನುಕೂಲ ಸಿಂಧು ಮೈತ್ರಿಯ ಸಾಧ್ಯತೆಯೂ ಕ್ಷೀಣಗೊಂಡಿದೆ.
ಆರಂಭದ ಐವತ್ತು, ಅರವತ್ತರ ದಶಕಗಳಲ್ಲಿ ಆರೆಸ್ಸೆಸ್ ಸಂಘಟನೆಯು ಜಾತಿ, ಹಿಂದೂಗಳನ್ನು ತೀವ್ರವಾಗಿ ಟೀಕಿಸಿದ್ದ ಅಂಬೇಡ್ಕರ್ ಅವರ ಎಲ್ಲಾ ಚಿಂತನೆಗಳನ್ನು ವಿರೋಸಿತ್ತು. ಅಂಬೇಡ್ಕರ್ ಅವರ ಜಾತಿವಿರೋ ಸಂಘಟನೆಯ ವಿರುದ್ಧ ಒಳಗೇ ಕುದಿಯುತ್ತಿತ್ತು. ಆದರೆ ಎಂಬತ್ತರ ದಶಕದವರೆಗೂ ಬ್ರಾಹ್ಮಣ, ಬನಿಯಾ ಸಂಘಟನೆಯಾಗಿದ್ದ ಆರೆಸ್ಸೆಸ್‌ನ ರಾಜಕೀಯ ಪಕ್ಷಗಳಾದ ಜನಸಂಘ ಮತ್ತು ನಂತರ ಬಿಜೆಪಿ ರಾಜಕೀಯವಾಗಿ ಸೀಟುಗಳನ್ನು ಗಳಿಸುವಲ್ಲಿ ವಿಲಗೊಳ್ಳತೊಡಗಿದವು. ತೊಂಬತ್ತರ ದಶಕದಲ್ಲಿ ರಾಮಜನ್ಮಭೂಮಿ ಚಳವಳಿಯ ನಂತರ ಆರೆಸ್ಸೆಸ್‌ಗೆ ದಲಿತ ಸಮುದಾಯದ ಜನಸಂಖ್ಯೆಯ ವೋಟ್ ಬ್ಯಾಂಕ್ ಮಹತ್ವ ಅರಿವಾಗತೊಡಗಿತು. ದಲಿತರ ಬೆಂಬಲವಿಲ್ಲದೆ ಬಹುಮತ ಗಳಿಸುವುದು ಕಷ್ಟವೆಂದು ಅರಿತ ಆರೆಸ್ಸೆಸ್ ಕ್ರಮೇಣ ಅಂಬೇಡ್ಕರ್ ಅವರನ್ನು ತನ್ನ ಹಿಂದುತ್ವದ ಜಠರದೊಳಗೆ appropriate ಮಾಡಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸಿತು. ಇದಕ್ಕಾಗಿ ಅತ್ಯಂತ ನೀಚ ಮಾರ್ಗವನ್ನು ತುಳಿಯಲೂ ಹೇಸಲಿಲ್ಲ. 2015ರ ಎಪ್ರಿಲ್ ತಿಂಗಳ ‘ಆರ್ಗನೈಸರ್’ ಸಂಚಿಕೆಯನ್ನು ಅಂಬೇಡ್ಕರ್ ವಿಶೇಷಾಂಕವನ್ನಾಗಿ ರೂಪಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಮಾತ್ರ ತಾರತಮ್ಯವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಿರುವ ಆರೆಸ್ಸೆಸ್‌ಗೆ ‘‘ದಲಿತ ಸಮುದಾಯದಿಂದ ಆರಿಸಿ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥರನ್ನಾಗಿ ನೇಮಿಸಿ’’ ಎನ್ನುವ ಪ್ರಶ್ನೆಗೆ ಅದು ಬಾಯಿ ಬಿಚ್ಚುವುದಿಲ್ಲ. ತಾರತಮ್ಯ ಬೇಡವೆನ್ನುತ್ತದೆ ಆದರೆ ಸಾಮಾಜಿಕ ಮೀಸಲಾತಿ ರದ್ದುಗೊಳ್ಳಬೇಕೆನ್ನುತ್ತದೆ, ಸಾಮಾಜಿಕ ಪರಿವರ್ತನೆಯನ್ನು ವಿರೋಸುತ್ತದೆ, ಮಾಂಸಾಹಾರವನ್ನು ವಿರೋಸುತ್ತದೆ.
1984ರಲ್ಲಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಗಳಿಸಿದ್ದ ಬಿಜೆಪಿ ನಂತರದ ದಶಕಗಳಲ್ಲಿ ದಲಿತರನ್ನು ಮುಸ್ಲಿಮರ ವಿರುದ್ಧ ಕಾಲಾಳುಗಳಾಗಿ, ಬಾಣಗಳಾಗಿ ಬಳಸಿಕೊಂಡ ಸಂಘ ಪರಿವಾರ 1999ರಲ್ಲಿ ಕೇಂದ್ರದಲ್ಲಿ ಅಕಾರವನ್ನು ಗಳಿಸಿತು. ಅಂಬೇಡ್ಕರ್ ಅವರ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಲೇಖನದಲ್ಲಿ ಅಂಬೇಡ್ಕರ್ ಅವರ ತೀಕ್ಷ್ಣವಾದ ರಾಜಕೀಯ ವಿಮರ್ಶೆಯನ್ನು ತಿರುಚಿ ಅಂಬೇಡ್ಕರ್ ಅವರೂ ಸಹ ಮುಸ್ಲಿಮ್ ವಿರೋಯಾಗಿದ್ದರು ಎಂದು ಪ್ರಚಾರ ಮಾಡತೊಡಗಿತು. ಇದೆಲ್ಲವೂ ಇಂದು ಇತಿಹಾಸದಲ್ಲಿ ಕೊಚ್ಚಿ ಹೋಗಿದೆ. ಹೊಳೆಯಲ್ಲಿ ಸಾಕಷ್ಟು ನೀರು ಹರಿದಿದೆ ಮತ್ತು ಅಮಾಯಕರ ರಕ್ತವೂ ಸಹ. ಅ್ಘಾನಿಸ್ತಾನದ ತುದಿಯಿಂದ ಮ್ಯಾನ್ಮಾರ್ ದೇಶದವರೆಗೆ ಒಳಗೊಂಡಂತೆ ಒಂದು ಅಖಂಡ ಹಿಂದೂ ರಾಷ್ಟ್ರವನ್ನು ಕಟ್ಟಬೇಕೆಂದು ದಶಕಗಳಿಂದ ಪ್ರಚಾರ ಮಾಡುತ್ತಿದ್ದ ಆರೆಸ್ಸೆಸ್‌ನ ಬೌದ್ಧಿಕ ದಿವಾಳಿತನ ಇಂದು ಸಂಪೂರ್ಣವಾಗಿ ಬಯಲಾಗಿದೆ. ಏಕೆಂದರೆ ಇದನ್ನು ಕಟ್ಟಲು ಹೊರಟರೂ ಸಹ ವ್ಯಾಪಕವಾಗಿ ಹರಡಿಕೊಂಡ ವಿಭಿನ್ನವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಒಳಗೊಳ್ಳಬೇಕೆನ್ನುವ ಕನಿಷ್ಠ ಜ್ಞಾನವೂ ಇಲ್ಲದ ಆರೆಸ್ಸೆಸ್‌ಗೆ ಇದರ ಸ್ಥಾಪಕರಾದ ಚಿತ್ಪಾವನ ಬ್ರಾಹ್ಮಣರಾದ ಡಾ.ಕೆ.ಬಿ.ಹೆಡ್ಗೇವಾರ್, ಬಿ.ಎಸ್.ಮೂಂಜೆ, ಎಲ್.ವಿ.ಪರಾಂಜಪೆ, ಬಿ.ಪಿ.ಥಾಲ್ಕರ್, ಸಾವರ್ಕರ್ ಅವರ ಬ್ರಾಹ್ಮಣತ್ವದ ಚಿಂತನೆ ಮತ್ತು ಅದರ ಮನಸ್ಥಿತಿ ಎಂಬತ್ತು ವರ್ಷಗಳ ನಂತರವೂ ಸ್ವಲ್ಪವೂ ಬದಲಾಗಿಲ್ಲ. ಆದರೆ ಇಂದು ತನ್ನ ಶ್ರೇಣೀಕೃತ ಜಾತಿ ಪದ್ಧತಿಯನ್ನು ಉಳಿಸಿಕೊಂಡೇ ಗುಜರಾತ್ ಮಾದರಿಯಲ್ಲಿ ದಲಿತರನ್ನು ಕಾಲಾಳುಗಳಂತೆ ಬಳಸಿಕೊಂಡು ದೇಶಾದ್ಯಂತ ತನ್ನ ಬ್ರಾಹ್ಮಣ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಹೊರಟಿದ್ದ ಈ ಸಂಗಳಿಗೆ, ಕೇವಲ ಹಿಂದೂ ರಾಷ್ಟ್ರದ ಮೂಲಕ ಅದನ್ನು ಸಾಸುತ್ತೇವೆ ಎನ್ನುವ ಅಹಂಕಾರ ಮತ್ತು ಮತೀಯವಾದಕ್ಕೆ ಅದೇ ಗುಜರಾತ್‌ನ ಪ್ರಜ್ಞಾವಂತ ದಲಿತ ಸಮುದಾಯವು ತನ್ನ ಪ್ರಬಲವಾದ ಪ್ರತಿರೋಧದ ಮೂಲಕ ಪೆಟ್ಟನ್ನು ನೀಡಿರುವುದಂತೂ ನಿಜ.
11 ಜುಲೈ 2016ರಂದು ಗುಜರಾತ್‌ನ ಉನಾ ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಹಲ್ಲೆಯ ನಂತರ ಅಲ್ಲಿ ಹುಟ್ಟಿಕೊಳ್ಳುತ್ತಿರುವ ತಳ ಸಮುದಾಯಗಳ ಹಕ್ಕು ಮತ್ತು ಪ್ರಾತಿನಿಧ್ಯಕ್ಕಾಗಿ ಜನಸಂಘರ್ಷವು ಇಂದು ದಲಿತ-ಮುಸ್ಲಿಮ್ ಒಕ್ಕೂಟವನ್ನು ರೂಪಿಸುತ್ತಿದೆ. 2002ರ ಗುಜರಾತ್‌ನಲ್ಲಿ ತಳಸಮುದಾಯಗಳನ್ನು ಬಾಣಗಳಾಗಿ ಬಳಸಿಕೊಂಡು ನಡೆಸಿದ ಮುಸ್ಲಿಮ್ ಹತ್ಯಾಕಾಂಡದ ನಂತರದ ದಶಕದಲ್ಲಿ ಅಲ್ಲಿ ಒಂದು ನಾಜೂಕಿನ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಅನೇಕ ಪಲ್ಲಟಗಳಾಗಿವೆ. ಅಂದು ಆ ಅಮಾನವೀಯ ಹತ್ಯಾಕಾಂಡಕ್ಕೆ ಸಾಕ್ಷಿಯಾದ ಅಲ್ಲಿನ ಮೂಸಭಾಯಿ ಈಗ ಹೇಳುವುದೇನೆಂದರೆ ‘‘ಸತ್ತ ಗೋವುಗಳಿಗಾಗಿ ಮುಸ್ಲಿಮ್‌ರ ಮೇಲೆ ಹಲ್ಲೆಯಾಗುತ್ತಿತ್ತು ಮತ್ತು ಜೀವಂತ ಗೋವಿನ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆ ಆಗುತ್ತಿದೆ, ಆದರೆ ದಲಿತರು ಮತ್ತು ಮುಸ್ಲಿಮ್ ಸಮುದಾಯಗಳೆರೆಡೂ ಅಂಚಿನಲ್ಲಿರುವ ಸದಾ ಭಯದ ನೆರಳಲ್ಲಿ ಬದುಕಬೇಕಾದ ದುಸ್ಥಿತಿಯಲ್ಲಿವೆ’’ ಎಂದು ಹೇಳುತ್ತಾರೆ. 2014ರಲ್ಲಿ ಮೂಸಭಾಯಿ ಸುಮಾರು 10,000 ಸಾಯಿ ಕರ್ಮಚಾರಿಗಳ ಸಮ್ಮೇಳನ ಮತ್ತು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಉನಾದಲ್ಲಿ ದಲಿತರ ಮೇಲೆ ಹಲ್ಲೆಯ ನಂತರ ಸುಮಾರು 47 ಮುಸ್ಲಿಮರನ್ನೊಳಗೊಂಡ ತಂಡವೊಂದು ಈ ಹಲ್ಲೆಯನ್ನು ವಿರೋಸಿ ಅಹ್ಮದಾಬಾದ್ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಇಂದು ಗುಜರಾತ್‌ನಲ್ಲಿ ದಲಿತ ಅಸ್ಮಿತೆ ಯಾತ್ರೆಯನ್ನು ಮುನ್ನಡೆಸುತ್ತಿರುವ ಹೊಸ ತಲೆಮಾರಿನ ನಾಯಕ ದಲಿತ ಸಮುದಾಯದ ಜಿಗ್ನೇಶ ಮುಸಾನಿ, ‘‘ದಲಿತರು ಮತ್ತು ಮುಸ್ಲಿಮರು ಇಬ್ಬರೂ ಭಾಯಿ ಭಾಯಿ. ನನಗೆ ಇಬ್ಬರು ಸಹೋದರಿಯರಿದ್ದರೆ ಒಬ್ಬರನ್ನು ಮುಸ್ಲಿಮ್ ಯುವಕನಿಗೆ ಮತ್ತೊಬ್ಬರನ್ನು ವಾಲ್ಮೀಕಿ ಯುವಕನೊಂದಿಗೆ ಮದುವೆ ಮಾಡಿಸುತ್ತಿದ್ದೆ’’ ಎಂದು ಅರ್ಥಪೂರ್ಣವಾಗಿ ಹೇಳುತ್ತಾರೆ. ಕಳೆದ 30 ವರ್ಷಗಳಿಂದ ಅಹ್ಮದಾಬಾದ್ ಬಿಜೆಪಿ ಘಟಕದಲ್ಲಿ ಕಾರ್ಯಕರ್ತನಾಗಿದ್ದ ಪ್ರವೀಣ್ ನಕುಮ್ ಉನಾ ಹಲ್ಲೆಯ ನಂತರ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಇಂದು ದಲಿತ ಅಸ್ಮಿತೆ ಯಾತ್ರೆದಲ್ಲಿ ಭಾಗಿಯಾಗಿದ್ದಾರೆ. ‘‘ಬಿಜೆಪಿಯಲ್ಲಿ ಅಸ್ಪಶ್ಯತೆ ಆಚರಣೆ ಉಸಿರುಗಟ್ಟಿಸುವಷ್ಟು ಪ್ರಬಲವಾಗಿದೆ, ಆದರೆ ಇದರಿಂದ ಹೊರಬರಲು ನಾನು ಇಷ್ಟು ವರ್ಷ ತೆಗೆದುಕೊಂಡಿದ್ದೇಕೆ?’’ ಎಂದು ಸ್ವತಃ 51 ವರ್ಷದ ನಕುಮ್ ಆಶ್ವರ್ಯ ವ್ಯಕ್ತಪಡಿಸುತ್ತಾರೆ.
ಆಧುನಿಕತೆಯ ಗಂಧವೂ ಇಲ್ಲದಂತೆ ವರ್ತಿಸುತ್ತಿರುವ ಸಂಗಳಿಗೆ ಇಂದು ದಲಿತ ಸಮುದಾಯದ ದಂಗೆ ಒಂದು ಕುಲುಮೆಯಂತೆ ಬೇಯುತ್ತಾ ಅವರ ಬ್ರಾಹ್ಮಣ್ಯ-್ಯೂಡಲಿಸಂನ ಯಜಮಾನಿಕೆಯನ್ನು ಸುಟ್ಟು ಹಾಕುವಷ್ಟು ಪ್ರಖರವಾಗಿದೆ.