ನೀವು ಅಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರಾ ?
ಹಾಗಾದರೆ ನೀವು ಬಹಳ ಒಳ್ಳೆಯವರು !
ಲಂಡನ್: ನಂಬಿದರೆ ನಂಬಿ; ಬಿಟ್ಟರೆ ಬಿಡಿ. ಅಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚು ಪ್ರಾಮಾಣಿಕರು, ಎಲ್ಲದನ್ನೂ ಒಪ್ಪಿಕೊಳ್ಳುವಂಥವರು ಹಾಗೂ ಮುಕ್ತ ವ್ಯಕ್ತಿತ್ವದವರು. ಆದರೆ ಆಪಲ್ ಐಫೋನ್ ಬಳಕೆದಾರರಿಂದ ಹೆಚ್ಚು ಅಂತರ್ಮುಖಿಗಳು- ಹೀಗೆಂದು ಕುತೂಹಲಕಾರಿ ಅಧ್ಯಯನವೊಂದು ಬಹಿರಂಗಪಡಿಸಿದೆ.
ಐ-ಫೋನ್ ಬಳಕೆದಾರರು ಸಾಮಾನ್ಯವಾಗಿ ಅಂಡ್ರಾಯ್ಡ್ ಬಳಕೆದಾರರಿಗಿಂತ ಹೆಚ್ಚು ಮೇಲ್ಮಟ್ಟದ ಅಂತಸ್ತು ಹೊಂದಿದವರು ಎಂಬ ಭಾವನೆ ಬೆಳೆಸಿಕೊಂಡಿರುವುದು ಇದಕ್ಕೆ ಕಾರಣ. ಲಿಂಕ್ಲೋನ್ ವಿಶ್ವವಿದ್ಯಾನಿಲಯದ ತಂಡವೊಂದು ಈ ಅಧ್ಯಯನ ನಡೆಸಿದ್ದು, ಇದರಲ್ಲಿ ವ್ಯಕ್ತವಾಗಿರುವ ಇನ್ನೊಂದು ಅಂಶವೆಂದರೆ, ಮಹಿಳೆಯರು ಹೆಚ್ಚಾಗಿ ಅಂಡ್ರಾಯ್ಡ್ ಫೋನ್ ಬದಲಾಗಿ ಐ-ಫೋನ್ ಬಳಕೆಗೆ ಮುಂದಾಗುತ್ತಾರೆ.
ಈ ಅಧ್ಯಯನ ವಿವಿಧ ಬಗೆಯ ಸ್ಮಾರ್ಟ್‌ಫೋನ್ ಬಳಕೆದಾರರ ನಡುವಿನ ವ್ಯಕ್ತಿತ್ವದ ಭಿನ್ನತೆಯ ಒಳನೋಟಗಳನ್ನು ಬಹಿರಂಗಪಡಿಸಿದೆ. ಸ್ಮಾರ್ಟ್‌ಫೋನ್ ಆಯ್ಕೆ, ಸ್ಮಾರ್ಟ್‌ಫೋನ್ ಹೊಂದಿದ ವ್ಯಕ್ತಿಯ ವ್ಯಕ್ತಿತ್ವದ ಮೂಲಭೂತ ಅಂಶ. ಇದು ಬಳಕೆದಾರರ ಬಗ್ಗೆ ಬಹಳಷ್ಟು ಅಂಶಗಳನ್ನು ತಿಳಿಸುತ್ತದೆ ಎಂದು ವಿವಿ ಮನಃಶಾಸ್ತ್ರ ವಿಭಾಗದ ಹೇಥರ್ ಷಾವ್ ಹೇಳುತ್ತಾರೆ.
ಅಂಡ್ರಾಯ್ಡ್ ಬಳಕೆದಾರರಲ್ಲಿ ಹೆಚ್ಚಿನ ಪ್ರಮಾಣದ ಪ್ರಾಮಾಣಿಕತೆ ಹಾಗೂ ನಮ್ರತೆ ಕಂಡುಬಂದಿದೆ ಎಂದು ಅಧ್ಯಯನ ತೋರಿಸಿಕೊಟ್ಟಿದೆ.