ನಿಮ್ಮ ಕಚೇರಿಯ ಎಸಿಯಿಂದ ನಿಮ್ಮ ಆರೋಗ್ಯ ಹಾಳಾಗುತ್ತಿದೆ!
ಮುನ್ನೆಚ್ಚರಿಕಾ ಕ್ರಮಗಳು
ನಾವೀಗ ಕೆಲಸ ಮಾಡುವ ಸ್ಥಳಗಳು ಸದಾ ಚಳಿಯ ವಾತಾವರಣವನ್ನೇ ಹೊಂದಿರುತ್ತವೆ. ಹೊರಗಡೆ 40 ಡಿಗ್ರೀ ಬಿಸಿಲೇ ಇರಲಿ, ತೇವಾಂಶ, ಏನೇ ಇದ್ದರೂ ನಾವು ಏರ್ ಕಂಡೀಷನ್ಡ್ ಕಚೇರಿಗಳ ಒಳಗೆ ಕೆಲಸ ಮಾಡುತ್ತೇವೆ. ಬಿಸಿಯಾದ ಸ್ಟೋಲ್‌ಗಳನ್ನು ಕಚೇರಿಗಳ ಕಪ್‌ಬೋರ್ಡ್‌ಗಳಲ್ಲಿ ಇಟ್ಟುಕೊಂಡು, ಇಡೀದಿನದ ಅಗತ್ಯಕ್ಕೆ ಬಳಸಿಕೊಳ್ಳುತ್ತೇವೆ. ಬೆವರಿನಿಂದ ತೋಯುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಇದು ಅಗತ್ಯ ಎಂದು ಅನಿಸಿದರೂ ಈ ಅಸಹಜ ಚಳಿಗಾಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ತಪ್ಪಿಸುವುದು ಸಾಧ್ಯವಿಲ್ಲದೆ ಇದ್ದರೂ ದೇಹದ ಮೇಲೆ ಕಡಿಮೆ ಅಡ್ಡ ಪರಿಣಾಮ ಬೀರುವಂತೆ ಮಾಡಬಹುದು.
ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯ ಆಂತರಿಕ ವೈದ್ಯದ ಹಿರಿಯ ಕನ್ಸಲ್ಟಂಟ್ ಡಾ ರೊಮೆಲ್ ಟಿಕೂ ಮತ್ತು ನೋಯ್ಡೆದ ಫೋರ್ಟಿಸ್ ಆಸ್ಪತ್ರೆಯ ಆಂತರಿಕ ವೈದ್ಯದ ನಿರ್ದೇಶಕ ಅಜಯ್ ಅಗರ್‌ವಾಲ್ ಕಚೇರಿಯ ಏರ್ ಕಂಡೀಷನಿಂಗ್ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮಗಳ ಬಗ್ಗೆ ಮತ್ತು ಅದನ್ನು ಕಡಿಮೆ ಮಾಡುವ ಹಾದಿಗಳನ್ನು ತಿಳಿಸಿದ್ದಾರೆ.
ಚರ್ಮ ಮತ್ತು ಕಣ್ಣುಗಳು ಒಣಗುವುದು
ಏರ್ ಕಂಡೀಷನರ್‌ಗಳು ಗಾಳಿಯಲ್ಲಿರುವ ತೇವಾಂಶವನ್ನು ಎಳೆದುಕೊಂಡು ನಾವು ಒಣವಾಗಿರುವಂತೆ ಮಾಡುತ್ತದೆ. ಎಸಿಗಳು ಉತ್ತಮ ತೇವಾಂಶವನ್ನೂ ಒಳಗೆಳೆದುಕೊಳ್ಳುವ ಕಾರಣ ಚರ್ಮ ಒಣಗಿ ವಿಸ್ತರಿಸಿ ತುರಿಕೆ ಶುರುವಾಗುತ್ತದೆ. ಒಣಗುವುದರಿಂದ ಚರ್ಮ ಪದರ ಪದರವಾಗಬಹುದು. "ಎಸಿಗಳು ನಮ್ಮ ಕಣ್ಣನ್ನೂ ಒಣಗಿಸಿ ಕೆಂಪಾಗಿ ತುರಿಕೆ ಬರುವಂತೆ ಮಾಡುತ್ತವೆ. ಅದರಿಂದ ಕಣ್ಣು ಮಂಜಾಗಬಹುದು" ಎನ್ನುತ್ತಾರೆ ಡಾ. ಟಿಕೂ.
ನೀವೇನು ಮಾಡಬಹುದು?
ಚರ್ಮದಲ್ಲಿ ತೇವಾಂಶವುಳಿಸಲು ಉತ್ತಮ ಮಾಯಿಶ್ಚರೈಸರ್ ಹಚ್ಚಿಕೊಂಡು ಕಚೇರಿಗೆ ಹೋಗಿ. ಅದು ಚರ್ಮವನ್ನು ಒಣಗದಂತೆ ತಡೆಯುತ್ತದೆ. ಒಣ ಕಣ್ಣುಗಳನ್ನು ತಪ್ಪಿಸಲು ಐಡ್ರಾಪ್ ಬಳಸಿದರೆ ಅಹಿತಕರ ಸ್ಥಿತಿ ಕಡಿಮೆಯಾಗುತ್ತದೆ. ಚರ್ಮ ಮತ್ತು ಕಣ್ಣುಗಳು ಸಂವೇದನಾಶೀಲವಾಗಿವೆ ಎಂದು ಅನಿಸಿದಲ್ಲಿ ವೈದ್ಯರನ್ನು ಭೇಟಿಯಾಗಿ. ಆಗಾಗ್ಗೆ ನೀರು ಹಿಡಿದು ದೇಹವನ್ನು ತೇವಾಂಶಭರಿತವಾಗಿಸಬೇಕು.
ಸ್ನಾಯು ಸಂಕುಚಿತತೆ, ತಲೆನೋವು ಮತ್ತು ಬೆನ್ನು ನೋವು
ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ಯುವಕರು ಬೆನ್ನು ನೋವು, ಸ್ನಾಯು ಸೆಳೆತ ಮತ್ತು ಸತತ ತಲೆನೋವುಗಳೆಂದು ಆಸ್ಪತ್ರೆಗೆ ಬರುತ್ತಾರೆ ಎನ್ನುತ್ತಾರೆ ಡಾ ಅಗರ್‌ವಾಲ್. ಎಸಿಯಿಂದ ಸಂಧಿಗಳು ಮತ್ತು ಸ್ನಾಯುಗಳಲ್ಲಿ ನೋವು ಬಂದು ನಿಧಾನವಾಗಿ ರುಮ್ಯಾಟಿಕ್ ನೋವಾಗಿ ಬದಲಾಗುತ್ತದೆ. ಇದು ಆರ್ಥರೈಟಿಸ್ ಆಗಿಯೂ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಏನು ಮಾಡಬಹುದು?
ಎಸಿಯ ಉಷ್ಣತೆ 20 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ಇರದಂತೆ ಗಮನಿಸಿ. 25 ಡಿಗ್ರಿಯಿಂದ 27ರ ನಡುವೆ ಇಡಿ. ದೀರ್ಘ ಕಾಲ ಎಸಿಯಲ್ಲಿ ಇರಬೇಡಿ. ಎಂಟು ಗಂಟೆಗಳ ಪಾಳಿಯಲ್ಲಿ ಎರಡು ಸಲವಾದರೂ ಹೊರ ಹೋಗಿ ಬನ್ನಿ.
ನಿರಂತರ ಸುಸ್ತು
ಕೆಲವೊಮ್ಮೆಸುಸ್ತಾದ ಅನುಭವವೂ ಎಸಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯ. ಡಾ ಅಗರ್‌ವಾಲ್ ಪ್ರಕಾರ ಆಕಸ್ಮಿಕವಾಗಿ ಉಷ್ಣತೆಯಲ್ಲಿ ಆಗುವ ಬದಲಾವಣೆಯೇ ಸುಸ್ತಿಗೆ ಮುಖ್ಯ ಕಾರಣ. ತಾಜಾ ಹವೆ ಇಲ್ಲದಿರುವುದೂ ಇದಕ್ಕೆ ಕಾರಣವಾಗಬಹುದು.
ಏನು ಮಾಡಬಹುದು?
ಗಾಳಿ ಬರುವ ಸ್ಥಳದಲ್ಲಿ ನಿಂತು ತಾಜಾತನ ಪಡೆಯಿರಿ. ದೀರ್ಘ ಕಾಲ ಒಳಗೇ ಇರಬೇಡಿ. ಸಾಮಾನ್ಯ ಕೆಲಸದ ಅವಧಿಯಲ್ಲಿ ಕನಿಷ್ಠ ಎರಡು ಬಾರಿ ಹೊರಹೋಗಿಬನ್ನಿ. ಕಡಿಮೆ ಉಷ್ಣತೆ ಇರುವ ಜಾಗಕ್ಕೆ ಪ್ರವೇಶಿಸುವಾಗ ಶೀತ ಗಾಳಿಯಿಂದ ತಪ್ಪಿಸಲು ಶಾಲು ಅಥವಾ ಇನ್ನೇನಾದರೂ ಹೊದ್ದುಕೊಳ್ಳಿ.
ಉಸಿರಾಟ ಕಷ್ಟವಾಗುವುದು
ಎಸಿ ಮತ್ತು ಅದರ ಕೊಳವೆಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದಾಗ ಅವುಗಳಲ್ಲಿ ಫಂಗಸ್, ಬ್ಯಾಕ್ಟೀರಿಯ ಮೊದಲಾದುವು ತುಂಬಿಕೊಳ್ಳುತ್ತವೆ. ಎಸಿ ಮೂಲಕ ಬ್ಯಾಕ್ಟೀರಿಯ ಹೊರ ಹೋದಾಗ ಅದರಿಂದ ಉಸಿರಾಟದ ಸಮಸ್ಯೆಯಾದ ಕೆಮ್ಮು, ಏದುಸಿರು ಮತ್ತು ಉಸಿರಾಡಲು ಕಷ್ಟವಾಗುವುದು ಆಗುತ್ತದೆ. ಹೆಚ್ಚು ಅಪಾಯಕಾರಿಯೆಂದರೆ ಇಂತಹ ಸೋಂಕು ಗಾಳಿಯು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೇ ಹರಡುವುದು ಎನ್ನುತ್ತಾರೆ ಡಾ ಅಜಯ್.
ಏನು ಮಾಡಬಹುದು?
ನಿಮ್ಮ ಕಚೇರಿಯಲ್ಲಿರುವ ಏರ್ ಕಂಡೀಷನ್ಡ್ ಫಿಲ್ಟರ್‌ಗಳು ಮತ್ತು ಕೊಳವೆಗಳು ಸದಾ ಸ್ವಚ್ಛವಾಗಿರುವಂತೆ ಗಮನಿಸಿ.
ಏರ್ ಕಂಡೀಷನ್ಡ್‌ಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆಯೇ?
ಎಸಿಯ ಉಷ್ಣತೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ತಂಪಾಗಿರುವ ಅನುಭವ ಹೊಂದಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯಲ್ಲಿರುವ ಕಡಿಮೆ ಮಟ್ಟದ ತಟಸ್ಥ ಚಯಾಪಚಯ ದರ. ದೇಹದ ಗಾತ್ರ ಮತ್ತು ಕೊಬ್ಬಿನಿಂದ ಸ್ನಾಯು ಅನುಪಾತವು ದೇಹವನ್ನು ಬಿಸಿಯಾಗಿಡಲು ನೆರವಾಗುತ್ತದೆ. ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಸಣ್ಣ ಗಾತ್ರದವರಾಗಿರುವ ಕಾರಣ ಹೆಚ್ಚು ಶೀತದ ಅನುಭವವಾಗುತ್ತದೆ. ಮಹಿಳೆಯರಿಗೆ ಈಗಿನ ಎಸಿಗಳ ಉಷ್ಣತೆಗಿಂತ ನಾಲ್ಕು ಡಿಗ್ರಿಗಳಷ್ಟು ಬಿಸಿಯಾಗಿರಬೇಕು ಎಂದು ಅಧ್ಯಯನಗಳು ಹೇಳಿವೆ.
ಕೃಪೆ: timesofindia.indiatimes.com