ಇಂಟೆಲಿಜೆನ್ಸ್ ಬ್ಯುರೋ ( ಬೇಹು ಇಲಾಖೆ) ದಲ್ಲಿ ಉದ್ಯೋಗಾವಕಾಶಗಳು
ಉದ್ಯೋಗ ಮಾಹಿತಿ
ಹೊಸದಿಲ್ಲಿ, ಸೆ.7 : ಕೇಂದ್ರ ಸರಕಾರದ ಇಂಟೆಲಿಜೆನ್ಸ್ ಬ್ಯುರೋ ( ಬೇಹು ಇಲಾಖೆ) 320 ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್ - II ( ಟೆಕ್ನಿಕಲ್ ) ಹುದ್ದೆಗಳ ಭರ್ತಿಗೆ ದೇಶದೆಲ್ಲೆಡೆಯಿಂದ ಅರ್ಜಿ ಆಹ್ವಾನಿಸಿದೆ. ಇದಕ್ಕೆ ಸೆಪ್ಟೆಂಬರ್ 24, 2016 ರೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 24 ರಂದು 18 ರಿಂದ 27 ವರ್ಷದೊಳಗೆ ವಯಸ್ಸಾಗಿರಬೇಕು. ಕನಿಷ್ಠ ವಿದ್ಯಾರ್ಹತೆ ಗಣಿತ / ಭೌತಶಾಸ್ತ್ರ , ಇಂಡಸ್ಟ್ರಿಯಲ್ ಟ್ರೈನಿಂಗ್ ಕೋರ್ಸ್, ರೇಡಿಯೋ ಟೆಕ್ನಿಷಿಯನ್ / ಇಲೆಕ್ಟ್ರಾನಿಕ್ಸ್ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯಗಳೊಂದಿಗೆ 12 ನೇ ತರಗತಿ ಪಾಸಾಗಿರಬೇಕು.
ಆಸಕ್ತರು http://www.mha.nic.in ವೆಬ್ ಸೈಟ್ ನಲ್ಲಿ ಸಂಪೂರ್ಣ ವಿವರ ನೋಡಬಹುದು.
Next Story