‘ಅಧ್ಯಯನ ಪೀಠ’ಗಳ ದುರ್ಗತಿ!
ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸರಕಾರ ಸ್ಥಾಪಿಸಿದ ಬಹುತೇಕ ಅಧ್ಯಯನ ಪೀಠಗಳು ಹಣದ ಕೊರತೆಯಿಂದ ಬಳಲುತ್ತಿವೆ.ವುಗಳ ನಿರ್ವಹಣೆಗೆ ಪೀಠದ ಹೆಸರಿನಲ್ಲಿ ಇಡುವ ಇಡುಗಂಟೇ (ಮೂಲನಿ) ಆಧಾರ. ಇದರಿಂದ ಬರುವ ಬಡ್ಡಿಯಲ್ಲಿ ಸಂಶೋಧನೆ, ಉಪನ್ಯಾಸ, ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣಗಳನ್ನು ನಡೆಸಬೇಕಾಗುತ್ತದೆ. ಪೀಠದ ನಿರ್ವಹಣೆಯ ಜವಾಬ್ದಾರಿಯನ್ನು ವಿವಿಯ ಪ್ರಾಧ್ಯಾಪಕರಿಗೆ ಹೆಚ್ಚುವರಿಯಾಗಿ ನೀಡಲಾಗುತ್ತದೆ ಅಥವಾ ನಿವೃತ್ತ ಪ್ರಾಧ್ಯಾಪಕರನ್ನು ಸಂದರ್ಶನ ಪ್ರಾಧ್ಯಾಪಕರೆಂದು ನೇಮಕ ಮಾಡಿಕೊಳ್ಳುವುದು ರೂಢಿ.ೆಲವು ಕಡೆ ಅಧ್ಯಯನ ಪೀಠಗಳಿದ್ದರೂ ಅದೇ ವಿಷಯದ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅಧ್ಯಯನ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರು, ಸಂಶೋಧನಾ ಸಹಾಯಕರು, ಕಚೇರಿ ಸಿಬ್ಬಂದಿ ಇರುತ್ತಾರೆ. ‘ಪೀಠಗಳು’ ಇರುವಾಗ ‘ಅಧ್ಯಯನ ಸಂಸ್ಥೆ’ ಅನಗತ್ಯ ಎಂಬ ಅಭಿಪ್ರಾಯವೂ ಇದೆ.
ಪೀಠ-ಸಂಸ್ಥೆ-ಪ್ರಾಕಾರ: ಮಂಗಳೂರು ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿಗಳಲ್ಲಿ ಕನಕ ಅಧ್ಯಯನ ಪೀಠಗಳಿದ್ದರೂ ಉಡುಪಿ ಮತ್ತು ಮಂಗಳೂರಿನಲ್ಲಿ ‘ಕನಕ ಅಧ್ಯಯನ ಸಂಸ್ಥೆ’ ಸ್ಥಾಪಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ‘ಕನಕದಾಸ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ’ ಇದೆ.ಾಗಿನೆಲೆಯಲ್ಲಿ ‘ಕಾಗಿನೆಲೆ ಅಭಿವೃದ್ಧಿ ಪ್ರಾಕಾರ’ ರಚನೆಯಾಗಿದೆ. ಬಸವಕಲ್ಯಾಣದಲ್ಲಿ ‘ಬಸವಕಲ್ಯಾಣ ಅಭಿವೃದ್ಧಿ ಪ್ರಾಕಾರ’ ಇದೆ. ಇವುಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ. ಜಾತಿ ರಾಜಕಾರಣ:ುಗಂಟಿನ ಪ್ರಮಾಣಕ್ಕೂ ಜಾತಿ ರಾಜಕಾರಣಕ್ಕೂ ಸಂಬಂಧ ಇದೆ. ಸರಕಾರ ಎಲ್ಲ ಪೀಠಗಳಿಗೂ ಸಮಾನ ಇಡುಗಂಟು ಇಟ್ಟಿಲ್ಲ. ಇಡುಗಂಟಿನ ಪ್ರಮಾಣಕ್ಕೂ ಸಾಮಾಜಿಕ ಸಮುದಾಯಗಳ ಸಂಖ್ಯೆ ಮತ್ತು ಒತ್ತಡಗಳಿಗೂ ಸಂಬಂಧವಿದೆ. ಮುಖ್ಯಮಂತ್ರಿಗಳ ಮರ್ಜಿಯೂ ಕೆಲಸ ಮಾಡುತ್ತದೆ. ಾತಿ-ಧರ್ಮಗಳನ್ನು ಮೀರಿ ಡಾ. ರಾಜ್‌ಕುಮಾರ್, ಲೋಹಿಯಾ ಮುಂತಾದ ಹೆಸರಿನ ಪೀಠಗಳು ಇವೆ. ಆದರೆ, ಹಣದ ಕೊರತೆಯಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಸರಕಾರ ಅಗತ್ಯ ಹಣಕಾಸಿನ ನೆರವು ನೀಡದೇ ಪೀಠ ಸ್ಥಾಪನೆ ಮಾಡುವ ಅಗತ್ಯವೇನು?
ಸೆಮಿನಾರ್ ನಡೆಸುವುದೇ ಕಷ್ಟ:ಹಂಪಿ ವಿವಿಯಲ್ಲಿ ಡಾ. ರಾಜ್‌ಕುಮಾರ್ ಅಧ್ಯಯನ ಪೀಠ 2006ರಲ್ಲಿ ಆರಂಭವಾಗಿದೆ. 15 ಲಕ್ಷ ಇಡುಗಂಟು ಇದೆ. ಇದರಲ್ಲಿ ಬರುವ ಬಡ್ಡಿ ಹಣದಲ್ಲಿ ಚಲನಚಿತ್ರ, ನಾಟಕ ಪ್ರದರ್ಶನ, ಉಪನ್ಯಾಸ, ರಾಜ್‌ಕುಮಾರ್ ಕುರಿತ ಕಾರ್ಯಕ್ರಮಗಳನ್ನು ನಡೆಸಬೇಕು. ಪುಸ್ತಕಗಳನ್ನು ಪ್ರಕಟಿಸಬೇಕು. ಆದರೆ, ಒಂದು ರಾಜ್ಯಮಟ್ಟದ ಕಾರ್ಯಕ್ರಮ ಮಾಡಿದರೆ ಆ ಹಣ ಮುಗಿಯುತ್ತದೆ. ವಿಷಯ ತಜ್ಞರನ್ನು ಕರೆಯಿಸಿ ಉಪನ್ಯಾಸ ಕಾರ್ಯಕ್ರಮ ನಡೆಸಿದರೆ ಪ್ರಯಾಣ ಭತ್ತೆ, ಗೌರವಧನ ಎಂದು ಎಂದು ರೂ. 5,6 ಸಾವಿರವಾದರೂ ಬೇಕಾಗುತ್ತದೆ. ಕಲಾಸಮಿತಿ ಸಭೆ ಮಾಡಿದರೆ ಕನಿಷ್ಠ ರೂ.10 ಸಾವಿರ ಖರ್ಚಾಗುತ್ತದೆ. ಹೀಗಾಗಿ ವರ್ಷದಲ್ಲಿ ಒಂದು ಸೆಮಿನಾರ್ ನಡೆಸುವುದೇ ಕಷ್ಟವಾಗಿದೆ. ಈ ನಡುವೆ ಪುಸ್ತಕ ಪ್ರಕಟಿಸುವ ಯೋಜನೆ ಕಾರ್ಯರೂಪಕ್ಕೆ ತರುವುದು ಸಾಧ್ಯವಾಗಿಲ್ಲ. ದೊಡ್ಡ ಮಟ್ಟದ ಸೆಮಿನಾರ್‌ಗಳನ್ನು ನಡೆಸದೆ ವಿವಿ ಮಟ್ಟದಲ್ಲಿಯೇ ಕಾರ್ಯಕ್ರಮಗಳನ್ನು ನಡೆಸುವಂತಾಗಿದೆ.
ಕಾರಂತ ಪೀಠಕ್ಕೆ ಕೇವಲ ರೂ. 5 ಲಕ್ಷ: ರಾಜ್ಯದಲ್ಲಿರುವ 50ಕ್ಕೂ ಹೆಚ್ಚು ಅಧ್ಯಯನ ಪೀಠಗಳ ಪೈಕಿ ಮಂಗಳೂರು ವಿವಿಯಲ್ಲಿರುವ ಶಿವರಾಮ ಕಾರಂತ ಅಧ್ಯಯನ ಪೀಠ ಅತ್ಯಂತ ಕಡಿಮೆ ಅಂದರೆ, ರೂ. 5ಲಕ್ಷ ಇಡುಗಂಟು ಹೊಂದಿದೆ.ವರಾಮ ಕಾರಂತ ಅಧ್ಯಯನ ಪೀಠ ಸ್ಥಾಪನೆಯ ಸಂದರ್ಭದಲ್ಲಿ ಪ್ರತಿ ವರ್ಷ ರೂ.5 ಲಕ್ಷ ನೀಡುವುದಾಗಿ ಸರಕಾರ ಹೇಳಿತ್ತು. ಆದರೆ, ಸ್ಥಾಪನೆಯ ಸಂದರ್ಭದಲ್ಲಿ ಹಣ ನೀಡಿದ್ದು ಬಿಟ್ಟರೆ ಒಂದು ಸಲ ಮಾತ್ರ ರೂ. 5 ಲಕ್ಷ ಕೊಟ್ಟಿದೆ. ಆ ನಂತರ ವಿವಿಯ ಹಣದಲ್ಲಿಯೇ ಪುಸ್ತಕ ಪ್ರಕಟಣೆ, ಉಪನ್ಯಾಸ, ಯಕ್ಷಗಾನ, ವಿಚಾರಸಂಕಿರಣ, ಮಕ್ಕಳಿಗೆ ಸ್ಪರ್ಧೆ ನಡೆಸುತ್ತಾ ಬರಲಾಗಿದೆ. ಸರಕಾರ ಹಣ ನೀಡುವುದಿಲ್ಲ ಎಂದು ಖಾತ್ರಿಯಾದ ನಂತರ ಉಳಿಕೆ ಹಣವನ್ನು ಠೇವಣಿ ಇಡಲಾಗಿದೆ. ಶಿವರಾಮ ಕಾರಂತರ ಹೆಸರಿನ ಪೀಠ ಮಂಗಳೂರಿನಲ್ಲಿ ಮಾತ್ರ ಇರುವುದು. ಇದಕ್ಕೆ ಸರಕಾರ ಹಣ ನೀಡದಿರುವುದು ವಿಷಾದಕರ. ಮಂಗಳೂರು ವಿವಿಯಲ್ಲಿ 2003ರಲ್ಲಿ ಕನಕ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಇದಕ್ಕೆ ಸರಕಾರ ರೂ.10 ಲಕ್ಷ ಇಡುಗಂಟು ಇಟ್ಟಿತ್ತು. ಅದರ ಬಡ್ಡಿಹಣದಲ್ಲಿ ಸೀಮಿತ ಕಾರ್ಯಕ್ರಮಗಳಷ್ಟೇ ನಡೆಸಲು ಸಾಧ್ಯವಾಗಿತ್ತು. 2008ರಲ್ಲಿ ಕನಕ ಅಧ್ಯಯನ ಕೇಂದ್ರ ಸ್ಥಾಪಿಸಿ ರೂ.1 ಕೋಟಿ ಇಡುಗಂಟು ನೀಡಿದೆ. ಹಾಗಾಗಿ ಸಂಶೋಧನಾ ಕೇಂದ್ರದ ಜೊತೆಗೆ ಪೀಠದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಎಲ್ಲ ಸವಾಲುಗಳ ನಡುವೆಯೂ ಉತ್ತಮ ಚಟುವಟಿಕೆಗಳನ್ನು ನಡೆಸುವುದು ಪೀಠಗಳ ಜವಾಬ್ದಾರಿ ವಹಿಸಿಕೊಂಡವರ ಮೇಲೂ ಅವಲಂಬಿತವಾಗಿರುತ್ತದೆ. ತ್ತೀಚೆಗೆ ಹೊಸ ಹೊಸ ಅಧ್ಯಯನ ಪೀಠಗಳು ಆರಂಭವಾಗುತ್ತಿವೆ.
ಆದರೆ ಈ ಪೀಠಗಳು ಸಮರ್ಪಕ ನಿರ್ವಹಣೆ ಕಾಣದ ಹೋದರೆ ಅವುಗಳಿದ್ದೂ ಪ್ರಯೋಜನವೇನು?.