ಜಿನ್ನಾರ ಪಾಕ್ ಕಲ್ಪನೆಯನ್ನು ಪ್ರಶ್ನಿಸಿದ್ದ ಇಬ್ಬರು ಮೌಲಾನಾಗಳು
ಸ್ವಾತಂತ್ರ ಹೋರಾಟದ ಸಂರ್ದದಲ್ಲಿ ಮೌಲಾನಾ ಸಜ್ಜದ್ ಹಾಗೂ ಮೌಲವಿ ಮಂಗ್ಲೋರಿ ಅವರು ಸಮಗ್ರ ರಾಷ್ಟ್ರೀಯತೆಯ ಅಭಿಯಾನವನ್ನು ನಡೆಸುವ ಜೊತೆಗೆ ಮುಸ್ಲಿಂ ಲೀಗ್ ಹಾಗೂ ಮುಹಮ್ಮದ್ ಅಲಿ ಜಿನ್ನಾ ಅವರ ಪಾಕಿಸ್ತಾನದ ಬೇಡಿಕೆಯನ್ನು ಸೈದ್ಧಾಂತಿಕವಾಗಿ ಪ್ರಶ್ನಿಸುವ ಮೂಲಕ ಗಮನಸೆಳೆದಿದ್ದರು.
ಭಾರತಕ್ಕೆ ಸ್ವಾತಂತ್ರ ಲಭಿಸಿದ ಹಾಗೂ ದೇಶ ವಿಭಜನೆಯ 70ನೆ ವರ್ಷಾಚರಣೆಯ ಸಂದರ್ಭದಲ್ಲಿ, ಈ ಇಬ್ಬರು ಧೀಮಂತರನ್ನು ರಾಷ್ಟ್ರೀಯ ಪ್ರಜ್ಞೆಯ ಭೂಮಿಕೆಯಲ್ಲಿ ನಿಲ್ಲಿಸುವುದು ಸೂಕ್ತವಾಗಿದೆ. ಯಾಕೆಂದರೆ ಜಿನ್ನಾ ಅವರ ಪಾಕಿಸ್ತಾನದ ಕಲ್ಪನೆಗೆ ಮುಸ್ಲಿಮರು ವ್ಯಾಪಕವಾಗಿ ಮನಸೋತಿದ್ದಾರೆಂಬ ‘ಕಥೆ’ಯನ್ನು ಇದು ಪ್ರಶ್ನಿಸುತ್ತದೆ.
ಮೌಲಾನಾ ಸಜ್ಜದ್ ಎಂದೇ ಜನಪ್ರಿಯರಾಗಿರುವ ಮೌಲಾನಾ ಅಬ್ದುಲ್ ಮಹಾಸಿನ್ ಮುಹಮ್ಮದ್ ಸಜ್ಜದ್ ಹಾಗೂ ಮೌಲವಿ ತುಫೈಲ್ ಅಹ್ಮದ್ ಮಂಗ್ಲೋರಿ ಅವರನ್ನು ಪರಿಗಣಿಸದೆ ಹೋದಲ್ಲಿ, ಭಾರತದ ಸ್ವಾತಂತ್ರ ಹೋರಾಟದ ಕುರಿತ ನಿರೂಪಣೆಯು ಪರಿ ಪೂರ್ಣ ವೆನಿಸಲಾರದು. ಈ ಇಬ್ಬರು ಮೌಲಾನಾಗಳು ರಾಷ್ಟ್ರ ಮಟ್ಟಕ್ಕಿಂತಲೂ ಪ್ರಾದೇಶಿಕವಾಗಿ ಹೆಚ್ಚು ಗಮನಸೆಳೆದಿದ್ದಾರೆ. ಈ ಕಾರಣದಿಂದಾಗಿಯೇ ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಹೋರಾಟದ ದಾಖಲೆಗಳಲ್ಲಿ ಅವರ ಹೆಸರುಗಳು ಬಹುಮಟ್ಟಿಗೆ ಮಾಸಿಹೋಗಿವೆ.
ಆದಾಗ್ಯೂ, ಮೌಲಾನಾ ಸಜ್ಜದ್ ಹಾಗೂ ಮೌಲವಿ ಮಂಗ್ಲೋರಿ ಅವರು ಸಮಗ್ರ ರಾಷ್ಟ್ರೀಯತೆಯ ಅಭಿಯಾನವನ್ನು ನಡೆಸುವ ಜೊತೆಗೆ ಮುಸ್ಲಿಂ ಲೀಗ್ ಹಾಗೂ ಮುಹಮ್ಮದ್ ಅಲಿ ಜಿನ್ನಾ ಅವರ ಪಾಕಿಸ್ತಾನದ ಬೇಡಿಕೆಯನ್ನು ಸೈದ್ಧಾಂತಿಕವಾಗಿ ಪ್ರಶ್ನಿಸುವ ಮೂಲಕ ಗಮನಸೆಳೆದಿದ್ದರು.
ಭಾರತಕ್ಕೆ ಸ್ವಾತಂತ್ರ ಲಭಿಸಿದ ಹಾಗೂ ದೇಶ ವಿಭಜನೆಯ 70ನೆ ವರ್ಷಾಚರಣೆಯ ಸಂದರ್ಭದಲ್ಲಿ, ಈ ಇಬ್ಬರು ಧೀಮಂತರನ್ನು ರಾಷ್ಟ್ರೀಯ ಪ್ರಜ್ಞೆಯ ಭೂಮಿಕೆಯಲ್ಲಿ ನಿಲ್ಲಿಸುವುದು ಸೂಕ್ತವಾಗಿದೆ. ಯಾಕೆಂದರೆ ಜಿನ್ನಾ ಅವರ ಪಾಕಿಸ್ತಾನದ ಕಲ್ಪನೆಗೆ ಮುಸ್ಲಿಮರು ವ್ಯಾಪಕವಾಗಿ ಮನಸೋತಿದ್ದಾರೆಂಬ ‘ಕಥೆ’ಯನ್ನು ಇದು ಪ್ರಶ್ನಿಸುತ್ತದೆ. ನಿಶ್ಚಯವಾಗಿಯೂ, ಇತ್ತೀಚೆಗೆ ಪ್ರಕಟವಾದ ಕೆಲವು ಅಧ್ಯಯನ ಕೃತಿಗಳು ದೇಶವಿಭಜನೆಯ ಕಥಾನಕದಲ್ಲಿ ಮೌಲಾನಾ ಸಜ್ಜದ್ ಹಾಗೂ ವೌಲವಿ ಮಂಗ್ಲೋರಿ ಅವರ ಹೆಸರುಗಳನ್ನು ಸೇರ್ಪಡೆಗೊಳಿಸಲು ಆಗ್ರಹಿಸಿವೆ. ವೆಂಕಟ್ ಧೂಲಿಪಾಲಾ ಅವರ ‘ಕ್ರಿಯೇಟಿಂಗ್ ಎ ನ್ಯೂ ಮದೀನಾ’ ಹಾಗೂ ಮುಹಮ್ಮದ್ ಸಜ್ಜದ್ ಅವರ ‘ಕಂಟೆಸ್ಟಿಂಗ್ ಕೊಲೊನಿಯಲಿಸಂ ಆ್ಯಂಡ್ ಸಪರೇಟಿಸಂ’ ಅಂತಹ ಎರಡು ಮಹತ್ವದ ಕೃತಿಗಳಾಗಿವೆ.
ಮಂಗ್ಲೋರಿ ಅವರ ಸ್ವಂತ ಬರಹಗಳಲ್ಲದೆ ಈ ಕೃತಿಗಳಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಲೇಖನವು ಆಧರಿಸಿದೆ.
ಮೌಲಾನಾ ಸಜ್ಜದ್
ಇಂದಿಗೂ ಬಿಹಾರದಲ್ಲಿ ಅಪಾರವಾದ ಮನ್ನಣೆಯನ್ನು ಪಡೆದಿರುವ ಸಾಮಾಜಿಕ-ಧಾರ್ಮಿಕ ಸಂಸ್ಥೆಯಾದ ಪಾಟ್ನಾದ ಇಮಾರತೆ ಶರಿಯಾದ ಸ್ಥಾಪಕರಿವರು. 1940ರ ಮಾರ್ಚ್‌ನಲ್ಲಿ ಮುಸ್ಲಿಂ ಲೀಗ್ ಲಾಹೋರ್ ನಿರ್ಣಯವನ್ನು ಅಂಗೀಕರಿಸಿದ ಹದಿನೈದೇ ದಿನಗಳೊಳಗೆ ಅದನ್ನು ಮೌಲಾನಾ ಸಜ್ಜದ್ ಖಂಡಿಸಿದ್ದರು. ಹಿಂದುಗಳು ಹಾಗೂ ಮುಸ್ಲಿಮರಿಗೆ ಎರಡು ಪ್ರತ್ಯೇಕ ದೇಶಗಳೆಂದು ಲಾಹೋರ್ ನಿರ್ಣಯ ಪ್ರತಿಪಾದಿಸಿತ್ತು ಹಾಗೂ ಭಾರತವನ್ನು ಎರಡು ದೇಶಗಳಾಗಿ ವಿಭಜನೆ ಮಾಡಬೇಕೆಂದು ಅದು ಆಗ್ರಹಿಸಿತ್ತು.
‘ಇಮಾರತ್’ ಉರ್ದು ವಾರಪತ್ರಿಕೆ ನಕೀಬ್‌ಗೆ ಬರೆದ ಲೇಖನವೊಂದರಲ್ಲಿ ಸಜ್ಜದ್ ಅವರು ಲಾಹೋರ್ ನಿರ್ಣಯ ವನ್ನು ‘‘ಮೂರ್ಖರು ಹಾಗೂ ಹುಚ್ಚುಹಿಡಿದವರ ಪ್ರಲಾಪ’’ ಎಂದು ಬಣ್ಣಿಸಿದ್ದರು ಹಾಗೂ ಇಸ್ಲಾಂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟ ಮುಸ್ಲಿಂ ಲೀಗ್‌ನ ಚಿಂತನೆಗಳನ್ನು ಅವರು ಪ್ರಶ್ನಿಸಿದ್ದರು. ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರವಾಗಲು ಸಾಧ್ಯವಿಲ್ಲ. ಯಾಕೆಂದರೆ ಅದು ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮೇತರರನ್ನು ಹೊಂದಿದೆ. ನಿಜಕ್ಕೂ ಇಸ್ಲಾಮಿಕ್ ದೇಶವಾಗಬೇಕಿದ್ದಲ್ಲಿ ಪಾಕಿಸ್ತಾನವು ತನ್ನ ಎಲ್ಲಾ ಮುಸ್ಲಿಮೇತರರನ್ನು ಹೊರಕಳುಹಿಸಬೇಕು ಅಥವಾ ಅವರಿಗೆ ಆಡಳಿತದಲ್ಲಿ ಪಾತ್ರವನ್ನು ನಿರಾಕರಿಸಬೇಕು. ಈ ಎರಡೂ ಆಯ್ಕೆಗಳನ್ನು ಅವರು ಮುಂದಿಟ್ಟಿದ್ದರು. ಆದರೆ ಜಿನ್ನಾ ಅವನ್ನು ತಿರಸ್ಕರಿಸಿದ್ದರು.
ಸಜ್ಜದ್ ಅವರು ಲೀಗ್‌ನ ಒತ್ತೆಯಾಳು ಜನ ಸಿದ್ಧಾಂತವನ್ನು ತೀವ್ರವಾಗಿ ಟೀಕಿಸಿದ್ದರು. ದೇಶವಿಭಜನೆಯ ವೇಳೆ ಮುಸ್ಲಿಮರ ಮೇಲೆ ಹಿಂದುಗಳು ನಡೆಸಿದ ದಾಳಿಗೆ ಪ್ರತೀಕಾರವನ್ನು ವಿಭಜನೆಯ ಆನಂತರ ಪಾಕಿಸ್ತಾನದಲ್ಲಿ ಉಳಿದುಕೊಂಡ ಹಿಂದುಗಳ ಮೇಲೆ ತೀರಿಸಬೇಕೆಂದು ಲೀಗ್ ವಾದಿಸಿತ್ತು ಹಾಗೂ ಇದರಿಂದ ಭಾರತವು ತನ್ನಲ್ಲಿರುವ ಮುಸ್ಲಿಮರನ್ನು ದಮನಿಸಲು ಹಿಂಜರಿಯುವುದೆಂದು ಅದರ ವಾದವಾಗಿತ್ತು.
ಈ ಪ್ರತೀಕಾರದ ಹಿಂಸಾಚಾರದ ಚಿಂತನೆಯು ಸಜ್ಜದ್‌ಗೆ ಆಘಾತವನ್ನುಂಟು ಮಾಡಿತ್ತು. ಈ ನಿಲುವು ಶರಿಯಾಗೆ ಹಾಗೂ ಇಸ್ಲಾಂಗೆ ವಿರುದ್ಧವಾದುದಾಗಿದೆ ಹಾಗೂ ಅನ್‌ಇಸ್ಲಾಮಿಕ್ ಆಗಿದೆಯೆಂದು ಅವರು ಹೇಳಿದ್ದರು. ತಮ್ಮ ಸ್ವಧರ್ಮೀಯ ಸಹೋದರರು ಬೇರೆಡೆ ಹಿಂಸಾಚಾರಕ್ಕೊಳಗಾದರೆಂಬ ಕಾರಣಕ್ಕಾಗಿ ತನ್ನ ಮುಸ್ಲಿಮೇತರ ಪೌರರ ಮೇಲೆ ದಾಳಿ ನಡೆಸುವುದು ಮುಸ್ಲಿಂ ರಾಷ್ಟ್ರ ಸಿದ್ಧಾಂತಕ್ಕೆ ವಿರುದ್ಧವಾದುದೆಂದು ಅವರು ಹೇಳಿದ್ದರು.
ಜಿನ್ನಾ ಅವರ ‘ಸಂಖ್ಯೆ’ಗಳ ರಾಜಕೀಯವನ್ನು ಕೂಡಾ ಮೌಲಾನಾ ಲೇವಡಿ ಮಾಡಿದ್ದರು. ಮುಸ್ಲಿಂ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿರುವ 6 ಕೋಟಿ ಮುಸ್ಲಿಮರ ವಿಮೋಚನೆಗಾಗಿ (ಈಗಿನ ಪಾಕಿಸ್ತಾನದಲ್ಲಿರುವ ಪ್ರಾಂತಗಳು), ತಾವು ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿರುವ 2 ಕೋಟಿ ಮುಸ್ಲಿಮರು ತ್ಯಾಗ ಮಾಡಬೇಕೆಂದು ಜಿನ್ನಾ ಆಗಾಗ್ಗೆ ಕರೆ ನೀಡುತ್ತಿದ್ದರು.
ಜಿನ್ನಾ ಅವರ ಈ ಕರೆಯನ್ನು ಸಜ್ಜದ್ ಖಂಡಿಸಿದ್ದರು. ‘‘ಜಿನ್ನಾ ಹೇಳುವ 8 ಕೋಟಿ ಮುಸ್ಲಿಮರು ಕಾಂಗ್ರೆಸ್ ಜೊತೆ ಸೇರಿಕೊಂಡು ಬ್ರಿಟಿಶ್ ವಸಾಹತುಶಾಹಿಯನ್ನು ಕಿತ್ತೊಗೆಯುವುದು ಹೆಚ್ಚು ಶ್ಲಾಘನೀಯವಾದುದು’’ ಎಂದವರು ಹೇಳಿದ್ದಾರೆ. ಯಾಕೆಂದರೆ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪತನವು, 25 ಕೋಟಿ ಮುಸ್ಲಿಮರಿರುವ ಮುಸ್ಲಿಂ ವಸಾಹತುಗಳ ವಿಮೋಚನೆಗೆ ಕಾರಣವಾಗಲಿದೆಯೆಂದು ಮೌಲಾನಾ ಪ್ರತಿಪಾದಿಸಿದ್ದರು.
ಲೀಗ್‌ಗೆ ವೌಲಾನಾ ಅವರ ವಿರೋಧವು ಸುದ್ದಿಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. 1935ರ ಭಾರತ ಸರಕಾರದ ಕಾಯ್ದೆ ಅನ್ವಯ ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆಗಳು ಘೋಷಣೆಯಾದ ಸಂದರ್ಭದಲ್ಲಿ ಅವರು ಬಿಹಾರದಲ್ಲಿ ಮುಸ್ಲಿಂ ಸ್ವತಂತ್ರ ಪಕ್ಷ (ಎಂಐಪಿ)ವನ್ನು ಸ್ಥಾಪಿಸಿ, ಅದರ ಅಧ್ಯಕ್ಷರಾದರು ಮತ್ತು ಕಾಂಗ್ರೆಸ್ ಪಕ್ಷದ ಜೊತೆ ಚುನಾವಣಾ ಹೊಂದಾಣಿಕೆಯನ್ನು ಏರ್ಪಡಿಸಿಕೊಂಡರು.
1937ರಲ್ಲಿ ಪ್ರತ್ಯೇಕ ಮತದಾರ ವ್ಯವಸ್ಥೆಯಡಿ ಪ್ರಾಂತೀಯ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಅವರ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದಾಗ್ಯೂ 40 ಮುಸ್ಲಿಂ ಸ್ಥಾನಗಳ ಪೈಕಿ ಅದು 15ನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆನಂತರದ ಎರಡನೆ ಸ್ಥಾನ ಪಡೆಯಿತು.
ಆದಾಗ್ಯೂ, ಈ ಅನಿರೀಕ್ಷಿತ ಗೆಲುವಿನ ಬಳಿಕ, ಬಿಹಾರದ ಕಾಂಗ್ರೆಸ್ ನಾಯಕ ರಾಜೇಂದ್ರ ಪ್ರಸಾದ್ (ಸ್ವಾತಂತ್ರ ದೊರೆತ ಬಳಿಕ ಅವರು ದೇಶದ ಪ್ರಪ್ರಥಮ ರಾಷ್ಟ್ರಪತಿಯಾದರು) ಅವರು ಸಮ್ಮಿಶ್ರ ಸರಕಾರದ ಸಾಧ್ಯತೆಯನ್ನು ತಳ್ಳಿಹಾಕಿದರು. ಇದು ಮುಸ್ಲಿಂ ನಾಯಕರ ಮುನಿಸಿಗೆ ಕಾರಣವಾಯಿತು. ಯಾಕೆಂದರೆ ‘‘ಕಾಂಗ್ರೆಸ್ ಪಕ್ಷವು ಹಿಂದೂ ಮಹಾಸಭಾದ ಅಭ್ಯರ್ಥಿಗಳಿಗೆ ತನ್ನ ಟಿಕೆಟ್‌ಗಳನ್ನು ವಿತರಿಸಲು ಹಿಂದೇಟು ಹಾಕಿರಲಿಲ್ಲ ಹಾಗೂ ಸಮಾನ ಸೈದ್ಧಾಂತಿಕತೆಯನ್ನು ಹೊಂದಿದ್ದ ಮುಸ್ಲಿಂ ರಾಜಕೀಯ ಸಂಘಟನೆಗಳ ಜೊತೆ ಮೈತ್ರಿಕೂಟ ಸರಕಾರವನ್ನು ಸ್ಥಾಪಿಸುವ ಚಿಂತನೆಯನ್ನು ಸಂಪೂರ್ಣವಾಗಿ ವಿರೋಧಿಸಿತ್ತು’’ ಎಂದು ಮುಹಮ್ಮದ್ ಸಜ್ಜದ್ ಅವರು contesting colonialism and separatism (ವಸಾಹತುಶಾಹಿವಾದ ಹಾಗೂ ಪ್ರತ್ಯೇಕತಾವಾದವನ್ನು ಪ್ರಶ್ನಿಸುವುದು) ಲೇಖನದಲ್ಲಿ ಬರೆದಿದ್ದಾರೆ.
ತದನಂತರವೂ ಈ ಒಡಕು ಇನ್ನಷ್ಟು ವಿಸ್ತಾರಗೊಂಡಿತು. ಯಾಕೆಂದರೆ, ರಾಜ್ಯಪಾಲರು ತನ್ನ ವಿಶೇಷಾಧಿಕಾರವನ್ನು ಬಳಸಿಕೊಳ್ಳುವುದಿಲ್ಲವೆಂದು ಭರವಸೆ ನೀಡುವ ತನಕವೂ ತಾನು ಸರಕಾರವನ್ನು ರಚಿಸುವುದಿಲ್ಲವೆಂದು ಕಾಂಗ್ರೆಸ್ ಪಟ್ಟು ಹಿಡಿಯಿತು. ಆದರೆ ಇದನ್ನು ವಿರೋಧಿಸಿದ ಸಜ್ಜದ್, ಒಂದು ವೇಳೆ ಯಾವುದೇ ಸರಕಾರವು ರಚನೆಯಾಗದೆ ಹೋದಲ್ಲಿ, ಬಿಹಾರವು ರಾಜ್ಯಪಾಲರ ಆಳ್ವಿಕೆಗೊಳಗಾಗಲಿದೆಯೆಂದು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಸ್ವತಂತ್ರ ಪಕ್ಷ (ಎಂಐಪಿ)ವು ಮಧ್ಯಾಂತರ ಸರಕಾರವನ್ನು ಸ್ಥಾಪಿಸಲು ರಾಜ್ಯಪಾಲರು ನೀಡಿದ ಆಹ್ವಾನವನ್ನು ಒಪ್ಪಿಕೊಂಡಿತು. ಜನತೆಯ ಅಹವಾಲುಗಳಿಗೆ ಸ್ಪಂದಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂಬುದು ಅವರ ವಾದವಾಗಿತ್ತು. ಆದಾಗ್ಯೂ ತಮಗೆ ದ್ರೋಹವೆಸಗಲಾಗಿದೆಯೆಂದು ಹಿಂದೂ ನಾಯಕರು ಭಾವಿಸಿದರು.
ತನ್ನ ಸ್ಥಳೀಯ ನಾಯಕರ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಪಕ್ಷವು 1937ರ ಜುಲೈನಲ್ಲಿ ಸರಕಾರವನ್ನು ರಚಿಸಲು ನಿರ್ಧರಿಸಿತು ಮತ್ತು ಎಂಐಪಿ ಅಧಿಕಾರದಿಂದ ಹೊರಗುಳಿಯಿತು. ಆದರೆ, ಮುಂದಿನ ಎರಡು ವರ್ಷಗಳಲ್ಲಿ ಕೋಮುಹಿಂಸಾಚಾರದ ಘಟನೆಗಳಲ್ಲಿ ಭಾರೀ ಏರಿಕೆಯಾಯಿತು. ಲೀಗ್ ಈ ಸಂದರ್ಭವನ್ನು, ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಲು ಬಳಸಿಕೊಂಡಿತು. ಇದರಿಂದ ಆತಂಕಗೊಂಡ ಸಜ್ಜದ್ 1939ರ ನವೆಂಬರ್‌ನಲ್ಲಿ ಕಾಂಗ್ರೆಸಿಗೆ ಪತ್ರವೊಂದನ್ನು ಬರೆದಿದ್ದರು. ಆ ಪತ್ರದ ಸಾರಾಂಶವನ್ನು ಮುಹಮ್ಮದ್ ಸಜ್ಜದ್ ‘ಕಂಟೆಸ್ಟಿಂಗ್‌ಕೊಲೊನಿಯಲಿಸಂ’ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಎಂಐಪಿಯೊಂದಿಗೆ ಸೇರಿಕೊಂಡು ಮೈತ್ರಿಕೂಟ ಸರಕಾರವನ್ನು ರಚಿಸಲು ಕಾಂಗ್ರೆಸ್ ನಿರಾಕರಿಸಿರುವ ಬಗ್ಗೆ ಪತ್ರದಲ್ಲಿ ಬೆಟ್ಟು ಮಾಡಿರುವ ಅವರು ‘‘ಚುನಾವಣೆಯ ಆನಂತರ ಕಾಂಗ್ರೆಸ್ ಇಟ್ಟ ತಪ್ಪು ನಡೆ ಇದಾಗಿದ್ದು, ಮುಸ್ಲಿಮರನ್ನು ಕೆರಳಿಸಿದೆ’’ ಎಂದು ಬರೆದಿದ್ದರು. ಮುಸ್ಲಿಂ ಸ್ಥಾನಗಳಲ್ಲಿ ಎಂಐಪಿಯ ನೆರವನ್ನು ಪಡೆದುಕೊಂಡಿದ್ದರೂ, ಅದರೊಂದಿಗೆ ಅಧಿಕಾರ ಹಂಚಿಕೊಳ್ಳಲು ನಿರಾಕರಿಸಿದ ಕಾಂಗ್ರೆಸ್ ಪಕ್ಷವು ಅವಕಾಶವಾದಿಯೆಂದು ಅವರು ದೂರಿದ್ದರು.
ಕಾಂಗ್ರೆಸ್ ಸಂಪುಟವು ಮುಸ್ಲಿಮರನ್ನು ಸರಕಾರಿ ಹುದ್ದೆಗಳಲ್ಲ್ಲಿ ನೇಮಕಗೊಳಿಸಿಲ್ಲ, ಅಷ್ಟೇ ಏಕೆ ಅವರಿಗೆ ಗುಮಾಸ್ತ ಹುದ್ದೆಗಳನ್ನು ಕೂಡಾ ನೀಡಿಲ್ಲವೆಂದು ಅವರು ದೂರಿದ್ದರು ಮತ್ತು ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯಲು ಕಾರಣರಾದ ಹಿಂದೂ ಬಲಪಂಥೀಯ ಸಂಘಟನೆಗಳ ನಾಯಕರನ್ನು ಅವರು ತೀವ್ರವಾಗಿ ಖಂಡಿಸಿದ್ದರು.
‘‘ರಾಷ್ಟ್ರೀಯವಾದಿಗಳು ಹಾಗೂ ಕಾಂಗ್ರೆಸ್‌ವಾದಿ ಮುಸ್ಲಿಮರು ಮುಸ್ಲಿಂ ನಾಯಕರ ಪ್ರತಿಗಾಮಿ ಹಾಗೂ ಕೋಮುವಾದಿ ಚಳವಳಿಗಳನ್ನು ಬಹಿರಂಗವಾಗಿ ಖಂಡಿಸಿದರೆ, ಕಾಂಗ್ರೆಸ್ ಪಕ್ಷದ ಹಿಂದೂ ನಾಯಕರು ತಮ್ಮ ಸಹಧರ್ಮೀಯ ಕೋಮುವಾದಿ ನಾಯಕರನ್ನು ಖಂಡಿಸುವ ಗೋಜಿಗೆ ಹೋಗಲಿಲ್ಲ’’ ಎಂದು ಮೌಲಾನಾ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ‘‘ಸಾವರ್ಕರ್ ಹಾಗೂ ಬಿ.ಎಸ್. ಮುಂಜೆ ಅವರ ತಪ್ಪುದಾರಿಗೆಳೆಯುವಂತಹ ಹಾಗೂ ಪ್ರಚೋದನಾಕಾರಿ ಹೇಳಿಕೆಗಳನ್ನು ಗಾಂಧಿ, ನೆಹರೂ ಕೂಡಾ ಖಂಡಿಸಲಿಲ್ಲ’’ ಎಂದವರು ಹೇಳಿದ್ದರು.
1939ರಿಂದ ಮುಸ್ಲಿಂ ಲೀಗ್, ಬಿಹಾರದ ಮುಸ್ಲಿಮರ ಹತಾಶೆಯ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲಾರಂಭಿಸಿತು. ಕಾಂಗ್ರೆಸ್ ಜೊತೆ ಎಂಐಪಿಯ ಮೈತ್ರಿಯು ನಿಷ್ಪ್ರಯೋಜನಕಾರಿಯಾಗಿದ್ದು, ಮುಸ್ಲಿಮರಿಗೆ ಭದ್ರತೆಯಾಗಲಿ ಅಥವಾ ಉದ್ಯೋಗವನ್ನಾಗಲಿ ಒದಗಿಸಲು ಸಾಧ್ಯವಾಗಿಲ್ಲವೆಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಪತ್ರವು ವೌಲಾನಾ ಸಜ್ಜದ್‌ಗೆ ಕಾಂಗ್ರೆಸ್ ಜೊತೆ ಆಳವಾದ ಅಸಮಾಧಾನವಿರುವುದನ್ನು ತೋರ್ಪಡಿಸಿಕೊಟ್ಟಿರುವ ಜೊತೆಗೆ ಅವರ ರಾಷ್ಟ್ರೀಯವಾದಿ ನಿಲುವಿಗೆ ಹಾಗೂ ಬುದ್ಧಿಮತ್ತೆಗೆ ಸಾಕ್ಷಿಯಾಗಿದೆ.
ಮೌಲವಿ ತುಫೈಲ್ ಅಹ್ಮದ್ ಮಂಗ್ಲೋರಿ
ಇವರು ಸಾಂಪ್ರದಾಯಿಕವಾಗಿ ಸುಶಿಕ್ಷಿತರಾದ ಆಲಿಂ (ವಿದ್ವಾಂಸ) ಅಲ್ಲದಿದ್ದರೂ, ಅವರ ಧಾರ್ಮಿಕ ಬೋಧನೆಗಳ ಕುರಿತಾದ ವಾಕ್ಪಟುತ್ವಕ್ಕಾಗಿ ಅವರಿಗೆ ಮೌಲವಿಯ ಗೌರವವನ್ನು ನೀಡಲಾಗಿತ್ತು. ಪ್ರಾಂತೀಯ ಅಧಿಕಾರಿಯಾದ ಮಂಗ್ಲೋರಿ, ಲೀಗ್‌ನ ರಾಜಕೀಯವನ್ನು ಪ್ರಶ್ನಿಸಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದರು. ಅವರ ಲೇಖನಗಳ ಸಂಕಲನವು 1937ರಲ್ಲಿ ‘ಮುಸಲ್ಮಾನೋಂ ಕಾ ರೋಶನ್ ಮುಷ್ತಾಕ್ ಬಿಲ್’ (ಮುಸ್ಲಿಮರ ಉಜ್ವಲ ಭವಿಷ್ಯ) ಹೆಸರಿನಲ್ಲಿ ಪ್ರಕಟವಾಗಿತ್ತು. ಈ ಕೃತಿಯು ಮುಂದಿನ ಎಂಟು ವರ್ಷಗಳಲ್ಲಿ ಐದು ಬಾರಿ ಮರುಮುದ್ರಣಗೊಂಡಿತ್ತು.
ಜಾಮಿಯಾ ಮಿಲಿಯಾ ವಿವಿಯ ಮಾಜಿ ಉಪಕುಲಪತಿ ಅಲಿ ಅಶ್ರಫ್ ಈ ಕೃತಿಯ ಐದನೆ ಆವೃತ್ತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದರು. ‘ಟುವರ್ಡ್ಸ್ ಎ ಕಾಮನ್ ಡೆಸ್ಟಿನಿ: ಎ ನ್ಯಾಶನಲಿಸ್ಟ್ ಮ್ಯಾನಿಫೆಸ್ಟೊ’ ಹೆಸರಿನಲ್ಲಿ ಪ್ರಕಟವಾದ ಈ ಕೃತಿಯಲ್ಲಿ ಹಿಂದಿನ ಆವೃತ್ತಿಗಳಲ್ಲಿರದ ‘ಪಾಕಿಸ್ತಾನ್’ ಎಂಬ ನೂತನ ಅಧ್ಯಾಯವನ್ನು ಸೇರ್ಪಡೆಗೊಳಿಸಲಾಗಿತ್ತು.
ಈ ಪುಸ್ತಕದಲ್ಲಿ ಮಂಗ್ಲೋರಿ ಅವರು ಪಾಕಿಸ್ತಾನದ ಕಲ್ಪನೆಯ ಬಗ್ಗೆ ಸಜ್ಜದ್ ಮಾಡಿದ್ದ ಕೆಲವು ಟೀಕೆಗಳನ್ನು ಪರಿಷ್ಕರಿಸಿದ್ದರು. ಮುಸ್ಲಿಂ ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಹಿಂದೂಗಳು ಶೇ.40ರಿಂದ ಶೇ.43ರಷ್ಟಿದ್ದಾರೆಂಬುದನ್ನು ಅಂಕಿಅಂಶಗಳ ಮೂಲಕ ಸಾಬೀತುಪಡಿಸಿ, ಜನಸಂಖ್ಯಾ ಒತ್ತೆಯಾಳು ಸಿದ್ಧಾಂತವನ್ನು ಅವರು ತಳ್ಳಿಹಾಕಿದ್ದರು.
ತಾವು ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿನ ಮುಸ್ಲಿಮರು ಲೀಗ್‌ನ್ನು ಬೆಂಬಲಿಸುವಂತೆ ಮಾಡುವ ಉದ್ದೇಶದಿಂದ ಈ ಒತ್ತೆಯಾಳು ಸಿದ್ಧಾಂತವನ್ನು ಪ್ರಚಾರ ಪಡಿಸಲಾಗಿತ್ತೆಂದು ಮಂಗ್ಲೋರಿ ವಾದಿಸಿದ್ದರು.
ಮುಸ್ಲಿಮರ ರಕ್ಷಣೆಗೆ ಜಂಟಿ ಮತದಾರರ ವ್ಯವಸ್ಥೆಯನ್ನು ಮಂಗ್ಲೋರಿ ಪ್ರತಿಪಾದಿಸಿದ್ದುದು, ರಾಷ್ಟ್ರೀಯ ಪ್ರಣಾಳಿಕೆಯ ಅತ್ಯಂತ ಮಹತ್ವದ ಅಂಶವಾಗಿತ್ತು. ಈ ವ್ಯವಸ್ಥೆಯಡಿ, ರಾಜಕಾರಣಿಗಳು ತಾವು ಚುನಾವಣೆಗಳಲ್ಲಿ ಜಯಗಳಿಸಬೇಕಾದರೆ ಮುಸ್ಲಿಂ ಮತದಾರರ ವಿಶ್ವಾಸ ಕೂಡಾ ಗಳಿಸಬೇಕಾಗುತ್ತದೆ ಆ ಮೂಲಕ ಸಮಾನವಾದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.
ಪ್ರತ್ಯೇಕ ಮತದಾನ ವ್ಯವಸ್ಥೆಯಡಿ, ಹಿಂದೂ ಅಭ್ಯರ್ಥಿಯು, ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡುವುದಾಗಿ ವಾಗ್ದಾನ ಮಾಡಿದಲ್ಲಿ ಆತ ಅಧಿಕ ಮತಗಳನ್ನು ಗಳಿಸುತ್ತಾನೆ. ಅದೇ ರೀತಿ ಹಿಂದೂಗಳ ವಿರುದ್ಧ ಹೋರಾಡುವುದಾಗಿ ಘೋಷಿಸುವ ಮುಸ್ಲಿಂ ಅಭ್ಯರ್ಥಿಯು ಹೆಚ್ಚಿನ ಮತಗಳನ್ನು ಗಳಿಸುತ್ತಾನೆ. ಈ ಪರಿಸ್ಥಿತಿಯು ಎಷ್ಟೊಂದು ಹದಗೆಟ್ಟಿದೆಯೆಂದರೆ, ಚುನಾವಣೆಯ ಹಿಂದಿನ ದಿನಗಳಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಲ್ಲಿ, ಉಭಯ ಅಭ್ಯರ್ಥಿಗಳ ಕೆಲಸವನ್ನು ಇನ್ನಷ್ಟು ಸುಗಮಗೊಳಿಸುತ್ತದೆ.
ಈ ವ್ಯವಸ್ಥೆಯು ರಾಜಕಾರಣಿಗಳಿಗೆ ಪ್ರಯೋಜನಕಾರಿ ಹಾಗೂ ಸಾಮಾನ್ಯ ಜನರಿಗೆ ಹಾನಿಕರವಾಗಿದೆ. ಜನಸಾಮಾನ್ಯರಿಗೆ ಪ್ರತ್ಯೇಕ ಮತದಾರ ವ್ಯವಸ್ಥೆಯು ‘‘ತಲೆಗಳನ್ನು ವಿಭಜಿಸಿದಂತೆ’’ ಎಂದವರು ವಾದಿಸಿದ್ದರು. ಆದರೆ ಚುನಾವಣೆಯಲ್ಲಿ ಗೆದ್ದವರಿಗೆ, ಇದು ‘‘ಐಹಿಕವಾದ ಪ್ರಯೋಜನಗಳನ್ನು’’ ಒದಗಿಸುತ್ತದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಲೀಗ್ ಇದನ್ನು ಬಯಸಿತ್ತೆಂದು ಮಂಗ್ಲೋರಿ ಅಭಿಪ್ರಾಯಿಸಿದ್ದರು.
ಮುಸ್ಲಿಂ ರಾಜಕಾರಣಿಗಳು ಪ್ರಜೆಗಳಿಗೆ ಪ್ರತ್ಯೇಕ ಮತದಾರರ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದರೆಂದು ಮೌಲವಿ ಗಮನಸೆಳೆದಿದ್ದರು. ಆದರೆ ಪ್ರಾತಿನಿಧಿಕ ಸಂಸ್ಥೆಗಳನ್ನು ಪ್ರವೇಶಿಸಿದ ಬಳಿಕ, ಅದು ಅಸೆಂಬ್ಲಿ ಅಥವಾ ಸ್ಥಳೀಯಾಡಳಿತವಾಗಿರಲಿ, ಅವರು ಜಂಟಿ ಮತದಾನದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಉದಾಹರಣೆಗೆ, ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷನಾಗಬೇಕಾದರೆ, ಸ್ಪರ್ಧಿಸಿರುವ ಹಿಂದೂ ಅಭ್ಯರ್ಥಿಗಳು, ಮತಗಳಿಗಾಗಿ ಮುಸ್ಲಿಂ ಪ್ರತಿನಿಧಿಗಳನ್ನು ಒಲೈಸಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ವಿಜೇತ ಹಿಂದೂ ಅಭ್ಯರ್ಥಿಯು, ತನಗೆ ಮತ ನೀಡಿದ ಮುಸ್ಲಿಂ ಅಭ್ಯರ್ಥಿಗಳ ಬಂಧುಗಳಿಗೆ ಗುತ್ತಿಗೆಗಳನ್ನು ಹಾಗೂ ಉದ್ಯೋಗಗಳನ್ನು ಖಾತರಿಪಡಿಸುತ್ತಾರೆ.
ಈ ಜಂಟಿ ಮತದಾರ ವ್ಯವಸ್ಥೆಯು ಸಾಮಾನ್ಯ ಮುಸ್ಲಿಮರಿಗೂ ಪ್ರಯೋಜನಕಾರಿಯಾಗಿದೆ. ಆದರೆ ಆ ವ್ಯವಸ್ಥೆಗಾಗಿ ಆಗ್ರಹಿಸುವ ಬದಲಿಗೆ ಮುಸ್ಲಿಂಲೀಗ್ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಆಗ್ರಹಿಸಿತು. ‘‘ಭಾರತವನ್ನು ಹಿಂದೂಗಳು ಹಾಗೂ ಮುಸ್ಲಿಮರಿಗೆ ಎರಡು ಪ್ರತ್ಯೇಕ ದೇಶ ಗಳಾಗಿ ವಿಭಜಿಸಿದ್ದರಿಂದ ಸಂತ್ರಸ್ತರಾಗಿರುವ ಜನರ ಗೋಳಿಗೆ ಈಗ ಸಾಂತ್ವನ ಬೇಕಿದೆ’’ ಎಂದು ಮಂಗ್ಲೋರಿ ಹೇಳಿದ್ದರು.
1909ರಲ್ಲಿ ಪ್ರತ್ಯೇಕ ಮತದಾರ ವ್ಯವಸ್ಥೆಯನ್ನು ಸಾಂಸ್ಥೀಕರಣಗೊಳಿಸುವ ಮೊದಲು ಹಿಂದೂಗಳು ಹಾಗೂ ಮುಸ್ಲಿಮರು ಗಲಭೆಗಳನ್ನು ನಿಲ್ಲಿಸಲು ಜೊತೆಯಾಗಿ ಶ್ರಮಿಸಿದ್ದರು. ತದನಂತರ ಜನರು ತಮ್ಮ ಸಮುದಾಯದ ಬಾಂಧವರು ನಡೆಸಿದ ದರೋಡೆ ಹಾಗೂ ಕೊಲೆಕೃತ್ಯಗಳಿಗೆ ಸಹಕರಿಸತೊಡಗಿದರೆಂದು ಹೇಳಿರುವ ಮಂಗ್ಲೋರಿ ಇದಕ್ಕೆ ಉದಾಹರಣೆಯಾಗಿ 1914ರಲ್ಲಿ ಅಯೋಧ್ಯೆ ಹಾಗೂ ಮುಝಫ್ಫರ್‌ನಗರನಲ್ಲಿ ನಡೆದ ಭೀಕರ ಗಲಭೆಗಳನ್ನು ಉಲ್ಲೇಖಿಸಿದ್ದರು.
ಆದರೆ ಅವಿಭಜಿತ ಭಾರತದಲ್ಲಿ ಮಂಗ್ಲೋರಿಯ ಪರಾಮರ್ಶೆಗೆ ದೊರೆತ ಪ್ರತಿಕ್ರಿಯೆಯನ್ನು ಅಳೆಯುವುದು ಅಸಾಧ್ಯ. ಈ ಪುಸ್ತಕವು ಐದು ಬಾರಿ ಮುದ್ರಣಗೊಂಡಿತ್ತು. ಆದರೆ ಮುದ್ರಿತವಾದ ಪ್ರತಿಗಳ ಸಂಖ್ಯೆಯನ್ನು ತಿಳಿಯದೆ, ಅದರ ಪ್ರಭಾವವನ್ನು ಅಂದಾಜಿಸುವುದು ಕಷ್ಟಸಾಧ್ಯವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಸಜ್ಜದ್ ಮುಸ್ಲಿಂ ಸಮುದಾಯದಲ್ಲಿ ದೊಡ್ಡ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದರು. 1937ರ ಪ್ರಾಂತೀಯ ಅಸೆಂಬ್ಲಿ ಚುನಾವಣೆಯಲ್ಲಿ ಅವರ ಪಕ್ಷವು 15 ಸ್ಥಾನಗಳನ್ನು ಗೆದ್ದಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಇದರ ಜೊತೆಗೆ ಅವರ ಎಂಐಪಿ ಪಕ್ಷದ ಬೆಂಬಲದೊಂದಿಗೆ ಕಾಂಗ್ರೆಸ್ ಐದು ಮುಸ್ಲಿಂ ಸೀಟುಗಳನ್ನು ಗೆದ್ದಿತ್ತು. ಉಳಿದ ಮೂರು ಸ್ಥಾನಗಳನ್ನು ಅಹ್ರಾರ್ ಪಕ್ಷವು ಗೆದ್ದಿತ್ತು. ಹೀಗಾಗಿ ಬಿಹಾರದಲ್ಲಿ ರಾಷ್ಟ್ರೀಯವಾದಿ ಮುಸ್ಲಿಮರು ತಮ್ಮ ಸಮುದಾಯದ ಮೇಲೆ ಪ್ರಭಾವವನ್ನು ಬೀರುವಲ್ಲಿ ಸಫಲರಾಗಿದ್ದರು.
ಆದರೆ, ಕೇವಲ ಎರಡೇ ವರ್ಷಗಳಲ್ಲಿ ಸಜ್ಜದ್ ಅವರನ್ನು ಮುಸ್ಲಿಂ ಲೀಗ್ ಮೂಲೆಗುಂಪು ಮಾಡಿತು. ಬಿಹಾರದಲ್ಲಿ ಎಂಐಪಿ ಜೊತೆ ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್‌ನ ನಿರಾಕರಣೆ ಹಾಗೂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಿಹಾರ ಹಾಗೂ ಉತ್ತರಪ್ರದೇಶಗಳ ಕೋಮುಘಟನೆಗಳ ಹೆಚ್ಚಳವು, ಮುಸ್ಲಿಮರಲ್ಲಿ ತಮಗೆ ಎಂದೂ ಅಧಿಕಾರದ ಸಂರಚನೆಯನ್ನು ಪ್ರವೇಶಿಸಲು ಅಥವಾ ಭದ್ರತೆಯನ್ನು ಒದಗಿಸಲಾರದು ಎಂಬ ಭಾವನೆಯನ್ನು ಮೂಡಿಸಿತು. ಹೀಗಾಗಿ ಅವರು ಮುಸ್ಲಿಂ ಲೀಗ್‌ನ ಕಡೆಗೆ ವಾಲಿದರು.
ಮುಸ್ಲಿಮರನ್ನು ಲೀಗ್‌ನಿಂದ ದೂರವಿಡುವಲ್ಲಿ ಸಜ್ಜದ್ ಹಾಗೂ ಮಂಗ�