ಸಂತ್ರಸ್ತ ಮಸ್ಲಿಮರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ರಾಷ್ಟ್ರಮಟ್ಟದ ಪತ್ರಿಕೆಗಳ ಸುಳ್ಳು ವರದಿಗಳು
ಬಿಜ್ನೋರ್ ಹತ್ಯಾಕಾಂಡ
catchnews.com ವಿಶೇಷ ವರದಿ
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಶುಕ್ರವಾರ ಮುಸ್ಲಿಂ ಹಾಗೂ ಜಾಟ್ ಸಮುದಾಯದ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡಿದ್ದರು. ಈ ಹಿಂಸಾಕೃತ್ಯದ ಜತೆಗೆ, ತೀರಾ ಕಳವಳಕಾರಿ ಅಂಶವೆಂದರೆ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳು ಮತ್ತು ಬಲಪಂಥೀಯ ವೆಬ್‌ಸೈಟ್‌ಗಳು ಈ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚುರಪಡಿಸಿದ್ದು.
ವಾಸ್ತವವಾಗಿ ನಡೆದದ್ದೇನು?
ಈ ಬಗ್ಗೆ ಕ್ಯಾಚ್‌ನ್ಯೂಸ್ ಪೊಲೀಸರ ಜತೆಗೆ ಮಾತನಾಡಿದಾಗ ಪೊಲೀಸ್ ಅಧಿಕಾರಿಗಳು ಹೇಳಿದ್ದಿಷ್ಟು:
► ಜಾಟ್ ಸಮುದಾಯದ ಯುವಕನೊಬ್ಬ ಮುಸ್ಲಿಂ ಹುಡುಗಿಗೆ ಕಿರುಕುಳ ನೀಡಿದ್ದ. ಜಾಟ್ ಸಮುದಾಯದ ಮುಖಂಡರು ಗುಂಡು ಹಾರಿಸಿ ಮೂವರನ್ನು ಹತ್ಯೆ ಮಾಡಿದ್ದು, ಘರ್ಷಣೆಗೆ ಕಾರಣವಾಯಿತು. ಹನ್ನೆರಡು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ- ಬಿಜ್ನೋರ್ ಎಸ್ಪಿ ಉಮೇಶ್ ಕುಮಾರ್ ಶ್ರೀವಾಸ್ತವ.
►ಇದನ್ನು ಬಹುತೇಕ ಮಂದಿ ಸ್ಥಳೀಯರು ಮತ್ತು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಕೂಡಾ ಒಪ್ಪುತ್ತಾರೆ.
► ಶುಕ್ರವಾರ ರಾತ್ರಿ ಬಿಜ್ನೋರ್ ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಹೀಗೆ ಹೇಳುತ್ತದೆ: "ಪೆಡಾ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಯುವತಿಯನ್ನು ಚುಡಾಯಿಸಲಾಗಿದೆ. ಇದು ಯುವತಿಯ ಸಹೋದರ ಮತ್ತು ಚುಡಾವಣೆ ಮಾಡಿದ ವ್ಯಕ್ತಿಗಳ ನಡುವಿನ ಘರ್ಷಣೆಗೆ ಕಾರಣ"
►ಪೊಲೀಸ್ ಅಧಿಕಾರಿಗಳ ಪ್ರಕಾರ, ಯುವತಿಯ ಕುಟುಂಬದವರು ಪ್ರತಿಭಟನೆ ಸಲ್ಲಿಸಿದ ಬಳಿಕ, ಜಾಟ್ ಸಮುದಾಯದವರು ಮನೆಗಳ ಮೇಲೆ ಹತ್ತಿ ಗುಂಡು ಹಾರಿಸಿ ಮೂವರನ್ನು ಕೊಂದರು. ಮೃತಪಟ್ಟವರು ಸಂತ್ರಸ್ತ ಯುವತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದವರು.
ಉತ್ತರ ಪ್ರದೇಶದ ಪ್ರಮುಖ ದೈನಿಕ "ದೈನಿಕ್ ಜಾಗರಣ್" ವಿಭಿನ್ನ ಚಿತ್ರಣ ನೀಡಿದ್ದು, ಮುಸ್ಲಿಂ ಯುವಕನೊಬ್ಬ ಜಾಟ್ ಯುವತಿಯನ್ನು ಚುಡಾಯಿಸಿದ್ದಾಗಿ ವರದಿ ಮಾಡಿದೆ.
"Girls from the Kachhpura and Naya villages in Bijnor take buses from the Peda village to go to school. People from the village claim that men belonging to the minority community have been harassing schoolgirls for some days now. On Friday morning, an incident of eve-teasing led to an altercation. This blew out of control leading to stone pelting and firing,"
ಆ ಬಳಿಕ ಜಾಗರಣ್ ಇದನ್ನು ತಿದ್ದಿಕೊಂಡು ಸರಿಯಾದ ಸುದ್ದಿ ನೀಡಿತು.
ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ಸುದ್ದಿಯೂ ಇಷ್ಟೇ ತಪ್ಪುದಾರಿಗೆ ಎಳೆಯುವಂಥದ್ದು.
"According to the police, some girls from Nayagaon told people in their village that boys from Peda harassed them when they went to board a bus for school in Bijnor. A group of male residents from the village then escorted the girls and beat up a boy named Talib after he was reportedly found harassing one of the girls.
Talib, however, called more people from his village who attacked the Nayagaon inhabitants. The injured boys managed to escape to their village where they narrated the incident. Following this, a group from Nayagaon and a neighbouring village reached Peda armed with guns and wooden staffs and attacked the villagers. Both the sides exchanged fire and pelted stones at each other."
ಹಲವು ಕಾರಣಕ್ಕೆ ಈ ವರದಿಗಳು ತಪ್ಪುದಾರಿಗೆ ಎಳೆಯುವಂಥವು. ಮೊಟ್ಟಮೊದಲನೆಯದಾಗಿ ಬಿಜ್ನೋರ್ ಎಸ್ಪಿ ಅಧಿಕೃತವಾಗಿ ನೀಡಿದ ಹೇಳಿಕೆಯಲ್ಲಿ, ಜಾಟ್ ಸಮುದಾಯದ ಯುವಕನೊಬ್ಬ ಮುಸ್ಲಿಂ ಹುಡುಗಿಯನ್ನು ಚುಡಾಯಿಸಿದ್ದ ಎಂದು ಸ್ಪಷ್ಟಪಡಿಸಿದ್ದರು. ಹಾಗಿದ್ದ ಮೇಲೆ ತಾಲಿಬ್ ಎಂಬ ಮುಸ್ಲಿಂ ವ್ಯಕ್ತಿ ಎಲ್ಲಿಂದ ಬಂದ?
ಎರಡನೆಯದಾಗಿ, ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಜಾವೆದ್ ಅಹ್ಮದ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮುಸ್ಲಿಮರು ಹತ್ಯೆಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ಮುಸ್ಲಿಮರು ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದು ಎರಡೂ ಕಡೆಯವರು ಪರಸ್ಪರ ಗುಂಡಿನ ದಾಳಿ ನಡೆಸಿದರು ಎಂಬ ವರದಿಗೆ ವ್ಯತಿರಿಕ್ತವಾದದ್ದು. ಡಿಜಿಪಿ ಹೇಳಿದಂತೆ ಅಪ್ರಚೋದಿತವಾಗಿ ಜಾಟ್ ಸಮುದಾಯದವರು ದಾಳಿ ನಡೆಸಿದ್ದು ನಿಜವಾದರೆ, ತಾಲಿಬ್ ಹಾಗೂ ಆತನ ಮುಸ್ಲಿಂ ಬೆಂಬಲಿಗರು ಜಾಟ್ ಸಮುದಾಯದವರ ಮೇಲೆ ದಾಳಿ ಮಾಡಿದರು ಎನ್ನುವುದು ಶುದ್ಧ ಸುಳ್ಳು.
ಉಳಿದಿದ್ದನ್ನು ಹಿಂದೂ ಬಲಪಂಥೀಯರು ಮಾಡಿದರು
ದೈನಿಕ್ ಜಾಗರಣ್ ವರದಿಯನ್ನು ಉಪ್ಪು- ಖಾರ ಸೇರಿಸಿ ಹಿಂದೂ ಬಲಪಂಥೀಯ ವೆಬ್‌ಸೈಟ್‌ಗಳು ಪ್ರಕಟಿಸಿದವು.
hindupost.in ಇಡೀ ಘಟನೆಯನ್ನು ಸಂಪೂರ್ಣವಾಗಿ ತಿರುಚಿ, ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕ ಚುಡಾಯಿಸಿದ್ದನ್ನು ವಿರೋಧಿಸಿ ಹುಡುಗಿ ಕಡೆಯವರು ಅಪರಾಧಿಗಳ ಮೇಲೆ ಪ್ರತಿದಾಳಿ ನಡೆಸಿದರು ಎಂದು ಬಿಂಬಿಸಿತು.
"A molestation bid on Hindu girl students has spiraled into communal violence leaving 4 people dead and several injured today in Paida village, Bijnore district, Western UP.
According to a report in Dainik Jagran, the violence broke out after Hindu girls on the way to school were harassed by Muslim youth. Angry family members of the girls confronted the offenders and soon firing and stone pelting broke out....4 Muslims from the village have died in the clash. A crowd has blocked the Najibabad road, and started targeting Hindu homes, burning one hut and bike. In front of the police force, they were heard chanting 'khoon ka badla khoon se lengey" (we will avenge blood with blood)"
ಈ ವರದಿ ಸಂಪೂರ್ಣ ತಪ್ಪುದಾರಿಗೆ ಎಳೆಯುವಂಥದ್ದು ಮಾತ್ರವಲ್ಲದೇ ಉದ್ವಿಗ್ನತೆಯನ್ನು ಸೃಷ್ಟಿಸುವ ಕುಚೋದ್ಯದ ಕೆಲಸ.
ಮುಸ್ಲಿಂ ಹಾಗೂ ಕ್ರೈಸ್ತರ ವಿರುದ್ಧದ ಬರಹಗಳಿಗೆ ಹೆಸರಾದ ಇನ್ನೊಂದು ಬಲಪಂಥೀಯ ವೆಬ್‌ಸೈಟ್, hinduexistence.org, ಕೂಡಾ ಇಂಥದ್ದೇ ವರದಿ ಪ್ರಕಟಿಸಿತು.
ಇತರ ಕೆಲ ಬಲಪಂಥೀಯರು ಅಮರ್ ಉಜಾಲಾ ವರದಿಯನ್ನು ಟ್ವೀಟ್ ಮಾಡಿದರು. ಇದು ಮುಸ್ಲಿಂ ವಿರೋಧಿಯಾಗಿದ್ದರೂ, ಯಾವ ಸಮುದಾಯದ ಹೆಸರನ್ನೂ ಉಲ್ಲೇಖಿಸದೇ, ಸಮತೋಲನ ತರುವ ಪ್ರಯತ್ನ ಮಾಡಿತ್ತು.
ಕೃಪೆ:catchnews.com