ಹಾಜಿ ಎಂ.ಎಸ್. ಅಬುಬಕ್ಕರ್
ಮಂಗಳೂರು ತಾಲೂಕು ತೋಡಾರಿನ ಪ್ರತಿಷ್ಟಿತ ಪರಾಡಿ ಮನೆತನದ ಹಾಜಿ ಸೈಯದಾಲಿ ಅವರ ತೃತೀಯ ಪುತ್ರ ಹಾಜಿ ಎಂ.ಎಸ್. ಅಬುಬಕ್ಕರ್(55) ರವಿವಾರ ಬೆಳಗ್ಗೆ ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ.
ಅವರು ಪತ್ನಿ, ಮೂವರು ಹೆಣ್ಣು ಮಕ್ಕಳು, ಓರ್ವ ಮಗ, ಅಳಿಯ, ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶ್ರೀಯುತರು ತೋಡಾರಿನ ಶಂಸುಲ್ ಉಲೇಮಾ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಯಾಗಿದ್ದು, ಅಲ್ಲಿನ ಅರೆಬಿಕ್ ಕಾಲೇಜು ಸ್ಥಾಪನೆಯಲ್ಲಿ ಮುತುವರ್ಜಿ ವಹಿಸಿ ಸಹಕರಿಸಿದ್ದರು.
Next Story