ಮುಹಮ್ಮದ್ ಉಮರ್ ಫಾರೂಕ್
ಬೆಂಗಳೂರು, ಅ.9: ಮುಹಮ್ಮದ್ ಉಮರ್ ಫಾರೂಕ್(78) ಬೆಂಗಳೂರು ಇವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ 6:30ಕ್ಕೆ ಮಾರಪ್ಪ ಗಾರ್ಡನ್ ತಮ್ಮ ಮನೆಯಲ್ಲಿ ನಿಧನರಾದರು.
ಮೃತರು ಮೇಲ್ ನರ್ಸ್ ಆಗಿ ಸೌದಿ ಅರಬಿಯಾದಲ್ಲಿ ಪ್ರಖ್ಯಾತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಸಾಹಿತ್ಯಾಸಕ್ತರಾಗಿದ್ದ ಇವರು ಕೋರಮಂಗಲದ ಸೊಸೈಟಿ ಫಾರ್ ಕಂಟೆಂಫೋರರಿ ಸ್ಟಡೀಸ್ನ ಸಕ್ರಿಯ ಸದಸ್ಯರಾಗಿದ್ದರು.
ಖ್ಯಾತ ಸಾಹಿತಿ ಹಾಗೂ ಕುರ್ಆನ್ನ್ನು ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿ ಮಂಡಳಿಯ ಸದಸ್ಯರಲ್ಲಿ ಓರ್ವರಾಗಿದ್ದ ‘ಮೈಕಾಲ’ ಕೃತಿಯ ಖ್ಯಾತಿಯ ಮರ್ಹೂಮ್ ಅಹ್ಮದ್ ನೂರಿಯವರ ಅಳಿಯರಾಗಿದ್ದ ಉಮರ್ ಫಾರೂಕ್, ಬ್ಯಾರಿ ಸಮುದಾಯದ ಶೈಕ್ಷಣಿಕ ಹಾಗೂ ಬೌದ್ಧಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಶ್ರಮಿಸಿದ್ದರು. ಈ ನಿಟ್ಟಿನಲ್ಲಿ ಒಂದು ವಲಯವನ್ನು ಹುಟ್ಟು ಹಾಕಲು ಬಹಳಷ್ಟು ಶ್ರಮಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನ ಅಗಲಿದ್ದಾರೆ.
Next Story