varthabharthi


magazine

ಪರಿ ಗ್ರಾಮೀಣ ಭಾರತದ ಜೀವಂತ ಪತ್ರಿಕೆ ಉಸಿರಾಡುವ ಮಾಹಿತಿಕೋಶ

ವಾರ್ತಾ ಭಾರತಿ : 12 Oct, 2016
ಪಿ.ಸಾಯಿನಾಥ್ ಕನ್ನಡಕ್ಕೆ: ಪ್ರಸಾದ್ ನಾಯ್ಕೆ

ಪಿ.ಸಾಯಿನಾಥ್ ಮಾಧ್ಯಮ ಲೋಕದ ಭಿನ್ನ ಪಯಣಿಗ. ಮಾಧ್ಯಮ ರಂಗದೊಳಗೆ ಕಡು ಬಡವರ ನಿಟ್ಟುಸಿರನ್ನು ಬೆಸುಗೆ ಹಾಕಿದವರು. ಪತ್ರಿಕೋದ್ಯಮಕ್ಕೆ ಇವರು ಕೊಟ್ಟ ಹೊಸ ನೋಟದ ಕಾರಣಕ್ಕಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದವರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಧ್ಯಯನ ಮಾಡಿ ದಲಿತರ, ರೈತರ ಸಂಕಷ್ಟದ ದಿನಗಳನ್ನು ಬೆಳಕಿಗೆ ತಂದವರು. 

ಯಾವುದೇ ಒಂದು ಯೋಜನೆಯ ಯಶಸ್ಸನ್ನು ಅದು ಮುಗಿಯುವ ಮೊದಲೇ ನಿರ್ಧಾರ ಮಾಡಲು ಸಾಧ್ಯವೇ? ಸಾಧ್ಯವಿದೆ. ಆದರೆ ಅದು ಜಗತ್ತಿನ ಅತ್ಯಂತ ವೈವಿಧ್ಯಮಯವಾದ ಹಾಗೂ ಸಂಕೀರ್ಣವಾದ ಗ್ರಾಮೀಣ ಪ್ರದೇಶದ ಜೀವಂತ ಮಾಹಿತಿ ಕೋಶದ ರೀತಿಯ ಯೋಜನೆಯಾಗಿದ್ದರೆ ಮಾತ್ರ. ಗ್ರಾಮೀಣ ಭಾರತವಿದೆಯಲ್ಲಾ ಅದು ಈ ಭೂ ಗ್ರಹದ ಮೇಲಿರುವ ಅತ್ಯಂತ ವೈವಿಧ್ಯಮಯ ಭಾಗ. 83 ಕೋಟಿ ಜನಸಂಖ್ಯೆಯ ಪ್ರದೇಶ. 700ಕ್ಕೂ ಹೆಚ್ಚು ಭಾಷೆಗಳನ್ನು ಜೀವಂತವಾಗಿಟ್ಟಿರುವ ವಿಭಿನ್ನ ಪ್ರದೇಶ ಇದು. ಅದರಲ್ಲೂ ಕೆಲವು ಭಾಷೆಗಳಂತೂ ಸಾವಿರಾರು ವರ್ಷಗಳಷ್ಟು ಹಳೆಯದು. ಜನರ ಭಾಷೆಗಳ ಸಮೀಕ್ಷೆ ನಡೆಸುವ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆ್ ಇಂಡಿಯಾ (ಪಿ.ಎಲ್.ಎಸ್.ಐ) ಪ್ರಕಾರ ಇಡೀ ಭಾರತದಲ್ಲಿ 780 ಭಾಷೆಗಳನ್ನು ಆಡುತ್ತಾರೆ, 86 ಲಿಪಿಯನ್ನು ಹೊಂದಿದ್ದಾರೆ. ಆದರೆ 7ನೆಯ ತರಗತಿಯವರೆಗೆ ಮಕ್ಕಳು ಶಾಲೆಯಲ್ಲಿ ಕಲಿಯಲು ಅವಕಾಶವಿರುವ ಭಾಷೆಗಳ ಸಂಖ್ಯೆ ತೀರಾ ಕಡಿಮೆ. ಈ ಮಕ್ಕಳು ಕಲಿಯಲು ಅವಕಾಶವಿರುವುದು ಈ 780 ಭಾಷೆಯ ಪೈಕಿ ಕೇವಲ ಶೇ.4 ಮಾತ್ರ. ಭಾರತೀಯ ಸಂವಿಧಾನದ ಎಂಟನೆ ಪರಿಚ್ಛೇದದ ಪ್ರಕಾರ ಸಂವಿಧಾನದ ಈ ವಿಯಲ್ಲಿ ಪಟ್ಟಿಮಾಡಿದ ಇಪ್ಪತ್ತೆರಡು ಭಾಷೆಗಳ ಪ್ರಚಾರ ಮತ್ತು ಉನ್ನತಿಗಾಗಿ ಸರಕಾರ ಬದ್ಧವಾಗಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಈ 22 ಭಾಷೆಗಳ ಪಟ್ಟಿಯಾಚೆಗೆ ಬರುವ ಹಲವು ಭಾಷೆಗಳೂ ಕೆಲ ರಾಜ್ಯಗಳಲ್ಲಿ ಅಕೃತ ಭಾಷೆಗಳಾಗಿ ಬಳಸಲ್ಪಡುತ್ತಿವೆ. ಉದಾಹರಣೆಗೆ ಹಿಮಾಚಲ ಪ್ರದೇಶದ ಖಾಸಿ ಮತ್ತು ಗಾರೋ ಭಾಷೆಗಳು. ಈ ಭಾಷೆಗಳ ಪೈಕಿ 6 ಭಾಷೆಗಳನ್ನು 5 ಕೋಟಿಗೂ ಹೆಚ್ಚು ಜನರು ದಿನನಿತ್ಯವೂ ಸಂವಹನ ಮಾಧ್ಯಮವಾಗಿ ಬಳಸುತ್ತಿದ್ದಾರೆ. ಇದಲ್ಲದೆ ಇನ್ನೂ ಮೂರು ಭಾಷೆಗಳು 8 ಕೋಟಿಗೂ ಹೆಚ್ಚು ಮಂದಿ ಬಳಸುತ್ತಿದ್ದಾರೆ.

ಒಂದು ಭಾಷೆಯಂತೂ ಬರೋಬ್ಬರಿ 50 ಕೋಟಿ ಮಂದಿ ಬಳಸುತ್ತಿದ್ದಾರೆ. ಇದಲ್ಲದೆ 4 ಸಾವಿರ ಮತ್ತು ಅದಕ್ಕಿಂತಲೂ ಕಮ್ಮಿ ಜನರಿಂದ ಬಳಸಲ್ಪಡುವ ವಿಭಿನ್ನವಾದ ಬುಡಕಟ್ಟಿನ ಭಾಷೆಗಳು ದೇಶದ ಮೂಲೆಮೂಲೆಗಳಲ್ಲಿ ಸಾಕಷ್ಟಿವೆ. ಭಾಷಾ ವರದಿಗಳ ಪ್ರಕಾರ ಕಳೆದ ಐವತ್ತು ವರ್ಷಗಳಲ್ಲಿ ಏನಿಲ್ಲೆಂದರೂ 220 ಭಾಷೆಗಳು ನಾಶವಾಗಿವೆ. ತ್ರಿಪುರಾದಲ್ಲಿರುವ ‘ಸೈಮರ್’ ಇದಕ್ಕೊಂದು ಉತ್ತಮ ಉದಾಹರಣೆ. ಸದ್ಯಕ್ಕೆ ಈ ಭಾಷೆಯನ್ನು ಬಲ್ಲವರ ಸಂಖ್ಯೆ ಬರೀ ಏಳು ಮಂದಿ ಮಾತ್ರ. ಭಾರತದ ಹಲವು ಭಾಷೆಗಳನ್ನು ಮಾತನಾಡುವ ಜನರಲ್ಲಿ ಸಿಂಹಪಾಲಿರುವುದು ಗ್ರಾಮೀಣ ಭಾರತದ ಜನತೆಗೆ. ಇಂತಹ ವೈವಿಧ್ಯತೆ ಭಾಷೆಯಲ್ಲಿ ಮಾತ್ರವಲ್ಲ, ಗ್ರಾಮೀಣ ಭಾರತದ ವೃತ್ತಿ, ಸಂಸ್ಕೃತಿ, ಕಲೆ, ಸಾಹಿತ್ಯ, ಇತಿಹಾಸ ಮತ್ತು ಜೀವನಶೈಲಿಯಲ್ಲೂ ನಾವು ಧಾರಾಳವಾಗಿ ಕಾಣಬಹುದು. ವಿಪರ್ಯಾಸವೆಂದರೆ ಬದಲಾವಣೆಗೆ ಈ ಗ್ರಾಮಗಳು ಒಡ್ಡಿಕೊಳ್ಳಬೇಕಾಗಿ ಬಂದಂತೆಲ್ಲಾ ಈ ನೆಲದ ಅವಿಭಾಜ್ಯ ಅಂಗದಂತಿದ್ದ ವೈವಿಧ್ಯತೆ ಸದ್ದಿಲ್ಲದೆ ಮಾಯವಾಗುತ್ತಿವೆ. ಬಟ್ಟೆ ನೇಯುವ ಕುಸುರಿ ಶೈಲಿ ಮತ್ತು ಇವುಗಳನ್ನು ಕಲಿಸುವ ಸಂಸ್ಥೆಗಳ ಪ್ರಮಾಣ ಇತರ ದೇಶಗಳನ್ನು ಪರಿಗಣಿಸಿದರೆ ಭಾರತದಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಿದ್ದೂ ನೇಕಾರ ವೃತ್ತಿಯು ಭವಿಷ್ಯವಿಲ್ಲದಂತಾಗಿದ್ದು ಅವರ ಬದುಕು ಡೋಲಾಯಮಾನವಾಗಿವೆ. ದಿನ ಉರುಳಿದಂತೆ ಕಲಾತ್ಮಕ ಕುಸುರಿ ಶೈಲಿ ಮತ್ತು ಇದರಲ್ಲಿ ತೊಡಗಿಸಿಕೊಂಡ ಸಮುದಾಯ ಅವಸಾನದ ಅಂಚಿಗೆ ತಳ್ಳಲ್ಪಡುತ್ತಿವೆ. ಮುಂದೊಂದು ದಿನ ಈ ವಿಶಿಷ್ಟವಾದ ಕಲೆಯೇ ಮಾಯವಾದರೂ ಅಚ್ಚರಿಯಿಲ್ಲ. ಹೀಗೆ ಕೊನೆಯುಸಿರೆಳೆಯುತ್ತಿರುವ ವಿಶಿಷ್ಟ ಕಲೆಗಳಲ್ಲಿ ಪಾರಂಪರಿಕ ಕಥೆಗಳನ್ನು ಹೇಳುವವರು ಮತ್ತು ಜಾನಪದ ಹಾಡುಗಳನ್ನು ಹಾಡುವವರೂ ಸೇರಿಕೊಂಡಿದ್ದಾರೆ.

ಈ ಇಲ್ಲವಾಗುತ್ತಿರುವ ಬೆಳವಣಿಗೆ ಕೆಲವು ಕಸುಬುಗಳಲ್ಲೂ ಕಾಣಬರುವುದು ಸಹಜ. ಏಕೆಂದರೆ ಈ ಕಸುಬು ಕೆಲವೇ ದೇಶಗಳಲ್ಲಿ ಕಾಣಸಿಗುವಂಥವುಗಳು. ಉದಾಹರಣೆಗೆ ದಿನಕ್ಕೆ ಐವತ್ತಕ್ಕೂ ಹೆಚ್ಚಿನ ತಾಳೆ ಮರಗಳನ್ನು ಮೂರಕ್ಕೂ ಹೆಚ್ಚು ಬಾರಿ ಹತ್ತಿ ಇಳಿಯುವ ಜನ. ತಾಳೆ ಮರಗಳ ತುತ್ತತುದಿಗೆ ಸರಸರನೆ ಹತ್ತಿ ಹೊರಸೂಸುವ ದ್ರವವನ್ನು ತೆಗೆದು ಹೆಂಡವನ್ನು ತಯಾರಿಸುವ ಜನರ ವೃತ್ತಿ ಈ ಬಗೆಯದ್ದು. ಈ ವೃತ್ತಿಯ ಪ್ರಮುಖ ಸೀಸನ್ ನಲ್ಲಂತೂ ಒಬ್ಬ ಕೆಲಸಗಾರ ಎಷ್ಟು ಬಾರಿ ಹತ್ತಿ ಇಳಿಯುತ್ತಾನೆ ಎಂದರೆ ನಿಮಗೆ ಖಂಡಿತಾ ಆಶ್ಚರ್ಯವಾಗುತ್ತದೆ. ಇದನ್ನು ಸರಿಯಾಗಿ ಲೆಕ್ಕ ಹಾಕಿದರೆ ಆತ ಒಂದು ದಿನಕ್ಕೆ ಅಮೆರಿಕದ ನ್ಯೂಯಾರ್ಕ್ ನ ಅತಿ ದೊಡ್ಡ ಕಟ್ಟಡ ‘ಎಂಪೈರ್ ಸ್ಟೇಟ್’ ಅನ್ನೇ ಹತ್ತಿ ಇಳಿದಿರುತ್ತಾನೆ. ಇಂತಹ ಹಲವಾರು ವೃತ್ತಿ ಇಂದು ಅವಸಾನದ ಅಂಚಿನಲ್ಲಿವೆ. ಈ ಕಾರಣಗಳಿಂದಾಗಿ ಕುಂಬಾರರು, ಲೋಹದ ಕೆಲಸಗಳನ್ನು ಮಾಡುವವರು ಮತ್ತು ಲಕ್ಷಾಂತರ ನುರಿತ ಕುಶಲಕರ್ಮಿಗಳಿಗೆ ಜೀವನೋಪಾಯಕ್ಕೇ ದಾರಿಯೇ ಇಲ್ಲದಂತಾಗಿ ತಮ್ಮ ಬೇರನ್ನು ಕಿತ್ತುಕೊಂಡು ನಗರಗಳೆಡೆಗೆ ಮುಖ ಮಾಡಿ ನಿಲ್ಲುವಂತಾಗಿದೆ. ನಮ್ಮನ್ನು ಉತ್ತೇಜಿಸುವ ಮಾತು ಬಿಡಿ, ನಮಗೆ ಒಂದಿಷ್ಟು ತಿಳುವಳಿಕೆ ನೀಡುವ ಕಾರಣಕ್ಕಾಗಿಯಾದರೂ ದೃಶ್ಯ ಅಥವಾ ಶ್ರವ್ಯ ಯಾವುದೋ ಒಂದು ವ್ಯವಸ್ಥಿತ ದಾಖಲೆಯನ್ನು ಮಾಡದೆ ಹೋದಲ್ಲಿ ಗ್ರಾಮೀಣ ಭಾರತವನ್ನು ವೈವಿಧ್ಯಮಯವಾಗಿರಿಸಿರುವ ಈ ಹಲವು ಅಂಶಗಳು ಮುಂದಿನ 20-30 ವರ್ಷಗಳಲ್ಲಿ ಇಲ್ಲವಾಗಿ ಹೋಗಿಬಿಡುತ್ತದೆ. ಈ ಗ್ರಾಮೀಣ ಭಾರತದ ಒಳಗಿನ ಈ ದನಿ ಹಾಗೂ ಜಗತ್ತಿನ ಬಗ್ಗೆ ಮುಂದಿನ ಪೀಳಿಗೆಗೆ ಒಂದಿಷ್ಟು ಅಥವಾ ಅದೂ ಗೊತ್ತಾಗದಂತೆ ಆಗಿಬಿಡುತ್ತದೆ. ಈಗಲೂ ಅಷ್ಟೇ ಆ ಬಹು ವೈವಿಧ್ಯ ಜಗತ್ತಿನಿಂದ ಕೊಂಡಿ ಕಳಚಿಕೊಳ್ಳುತ್ತಿರುವವರನ್ನು ಕಾಣಬಹುದು

‘ಪರಿ’ಯ ಪ್ರಾಮುಖ್ಯತೆ:

ಗ್ರಾಮೀಣ ಭಾರತದಲ್ಲಿ ಸಾವಿನ ಅಂಚಿಗೆ ತೆರಳಿ ನಾಶವಾಗಲೇಬೇಕಾದ ಬಹಳಷ್ಟು ಸಂಗತಿಗಳಿವೆ. ಕಾರಣವೆಂದರೆ ಅವುಗಳಲ್ಲಿ ಹಲವು ವಿಚಾರಗಳು ನಿರಂಕುಶ, ದಬ್ಬಾಳಿಕೆಯ ಮತ್ತು ಕ್ರೌರ್ಯವನ್ನು ಒಳಗೊಂಡವುಗಳು. ಅಸ್ಪೃಶ್ಯತೆ, ಊಳಿಗಮಾನ್ಯ ಪದ್ಧತಿ, ಜೀತ, ಜಾತಿ ಪದ್ಧತಿ, ಲಿಂಗ ದಬ್ಬಾಳಿಕೆ-ಶೋಷಣೆಗಳು, ಭೂಕಬಳಿಕೆ ಮತ್ತು ಇಂಥದ್ದೇ ಇನ್ನೂ ಹಲವಾರು ಸಾಮಾಜಿಕ ಶಾಪಗಳು. ಬದಲಾವಣೆಯ ಗಾಳಿಯು ಬೀಸತೊಡಗಿದಂತೆ ವೈವಿಧ್ಯತೆಯ ಅಂಶಗಳು ಇನ್ನೂ ಸಮೃದ್ಧವಾಗದೆ ಅನಾಗರಿಕತೆಯು ಹೆಚ್ಚಿದ್ದು ಇಲ್ಲಿಯ ದುರದೃಷ್ಟ. ಈ ಅಂಶಗಳನ್ನು ನಾವಿಲ್ಲಿ ನೋಡಲಿದ್ದೇವೆ. ಈ ಮೂಲಕ ಪ್ರಸ್ತುತ ಮತ್ತು ಸಮಕಾಲೀನ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುವುದರ ಜೊತೆಗೇ ಸಂಬಂ ವಿಷಯಗಳ ಬಗ್ಗೆ ಹೊರಬಂದ ಎಲ್ಲಾ ಬಗೆಯ ಮಾಹಿತಿಗಳನ್ನು ಲೇಖನಗಳ, ವರದಿಗಳ, ದೃಶ್ಯಾವಳಿಗಳ ಮತ್ತು ಧ್ವನಿಮುದ್ರಿಕೆಗಳ ರೂಪದಲ್ಲಿ ಕಲೆಹಾಕಿ ಒಂದು ಉತ್ಕೃಷ್ಟವಾದ ಡೇಟಾಬೇಸ್ ಸೌಲಭ್ಯವನ್ನು ಕೂಡ ತಯಾರು ಮಾಡಲಾಗುತ್ತಿದೆ. ಈ ಎಲ್ಲಾ ಮಾಹಿತಿಗಳು ಪರಿಯ ‘ಕ್ರಿಯೇಟಿವ್ ಕಾಮನ್ಸ್’ ಹಕ್ಕುಗಳಡಿಯಲ್ಲಿ ಬರುತ್ತಿದ್ದು ಅಂತರ್ಜಾಲ ತಾಣವು ಆಸಕ್ತರ ಬಳಕೆಗಾಗಿ ಮುಕ್ತವಾಗಿದೆ.

ಪರಿಯ ಈ ಅಭೂತಪೂರ್ವ ಸಾಹಸಕ್ಕೆ ಯಾರು ಬೇಕಾದರೂ ತಮ್ಮ ಕೊಡುಗೆಯನ್ನು ನೀಡಬಹುದು ಎಂಬುದು ವಿಶೇಷ. ಬರಹ, ಛಾಯಾಚಿತ್ರಗಳು, ಧ್ವನಿಮುದ್ರಣಗಳು... ಹೀಗೆ ಯಾವ ರೂಪದಲ್ಲಿರುವ ಮಾಹಿತಿಯಾದರೂ ಸರಿಯೇ, ‘‘ಸಾಮಾನ್ಯ ಜನತೆಯ ನಿತ್ಯದ ಬದುಕು’’ ಎಂಬ ಪರಿಯ ಆಶಯ ಮತ್ತು ಧ್ಯೇಯಕ್ಕೊಳಗಾಗುವ ಕೊಡುಗೆಗಳಾದರೆ ಪರಿಯು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಕಳೆದ ಇಪ್ಪತ್ತು ವರ್ಷಗಳ ಸುಮಾರಿನಲ್ಲಿ ಸಾಂಪ್ರದಾಯಿಕ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯಗಳ ಬಳಕೆಗಳ ಪ್ರಮಾಣಗಳು ಭಾರತದಲ್ಲಿ ಗಣನೀಯವಾಗಿ ಇಳಿಕೆಯಾಗಿವೆ. ಹಿಂದೆಲ್ಲಾ ವಸ್ತು ಸಂಗ್ರಹಾಲಯಗಳಲ್ಲಿ ಕಾಣಬರುವ ಕಲೆಗಳು ನಿತ್ಯದ ಜೀವನದಲ್ಲೂ ಕಾಣಬರುತ್ತಿದ್ದುದರಿಂದ ಈ ಸಂಗ್ರಹಾಲಯಗಳ ಆವಶ್ಯಕತೆಯಿಲ್ಲವೆಂದು ಹೇಳಬಹುದಾಗಿತ್ತು. ಪಾರಂಪರಿಕ ಚಿತ್ರಶಾಲೆಗಳು ಮತ್ತು ಶಿಲ್ಪಕಲಾ ಕುಟೀರಗಳು ಬೀದಿಬೀದಿಗಳಲ್ಲಿರುತ್ತಿದ್ದುದರಿಂದ ಸಂಗ್ರಹಾಲಯಗಳಿಗೆ ಭೇಟಿ ಕೊಟ್ಟು ಅವುಗಳನ್ನು ನೋಡಬೇಕಾದ ಆವಶ್ಯಕತೆಗಳೇನೂ ಆ ದಿನಗಳಲ್ಲಿರಲಿಲ್ಲ. ಆದರೆ ಈಗಿನ ಬೀದಿಗಳಲ್ಲಿ ಇವುಗಳು ಸಂಪೂರ್ಣವಾಗಿ ಕಾಣೆಯಾಗಿವೆ.

ಗ್ರಂಥಾಲಯಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಭೇಟಿಕೊಡುವ ತರುಣ-ತರುಣಿಯರು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿಯಾಗಿದ್ದಾರೆ. ಹೀಗಿರುವಾಗ ಭಾರತದ ಮುಂದಿನ ಪೀಳಿಗೆಗಳು ದಿನಗಳೆದಂತೆ ಹೆಚ್ಚುಹೆಚ್ಚಾಗಿ ಉಪಯೋಗಿಸಬಹುದೆಂಬ ಹೆಚ್ಚಿನ ನಿರೀಕ್ಷೆಯುಳ್ಳ ಏಕೈಕ ಮಾಹಿತಿಕೋಶವೆಂದರೆ ಅಂತರ್ಜಾಲ. ಇನ್ನು ಬ್ರಾಡ್ -ಬ್ಯಾಂಡ್ ಗಳು ನಿಧಾನವಾಗಿಯಾದರೂ ದೇಶದೆಲ್ಲೆಡೆ ಬೆಳೆಯುತ್ತಿವೆ. ಜನಸಾಮಾನ್ಯರ ಜೀವನಶೈಲಿಗಳನ್ನು ಆರ್ಕೆವ್‌ಗಳ ಮಾದರಿಯಲ್ಲಿ ಸಂಗ್ರಹಿಸಿ, ಮಾಹಿತಿಗಳನ್ನು ಕಲೆಹಾಕಿ, ಎಂದೆಂದಿಗೂ ಮುಂದುವರಿಯುತ್ತಲೇ ಇರುವ ನಿಯತಕಾಲಿಕೆಯನ್ನಾಗಿ ಮಾಡಬೇಕಾದರೆ ಅದಕ್ಕೆ ಅಂತರ್ಜಾಲಕ್ಕಿಂತ ಪ್ರಶಸ್ತವಾದ ಜಾಗ ಇನ್ನೊಂದಿಲ್ಲ. ಹಲವು ದೇಶಗಳು, ಆದರೆ ಒಂದೇ ಅಂತರ್ಜಾಲ ತಾಣ. ಬಹುಶಃ ಹಿಂದೆಂದೂ ಕಾಣದಿರುವಷ್ಟು ಭಾಷೆಗಳನ್ನು ಮತ್ತು ದನಿಗಳನ್ನು ತನ್ನೊಡಲಿನಲ್ಲಿಟ್ಟು ಕಂಗೊಳಿಸುವ ಅಂತರ್ಜಾಲ ತಾಣವು ಇದಾಗಲಿದೆ. ಅಂದರೆ ಇದೊಂದು ಅಭೂತಪೂರ್ವ ಮಟ್ಟ ಮತ್ತು ವ್ಯಾಪ್ತಿಯನ್ನು ಹೊಂದಿದ, ಮಾಧ್ಯಮಗಳ ಅಸಂಖ್ಯಾತ ರೂಪಗಳನ್ನು ಆಡಿಯೊ, ವೀಡಿಯೊ ಮತ್ತು ಅಕ್ಷರರೂಪದಲ್ಲಿ ಹೊಂದಿರುವ ಒಂದು ಜಗತ್ತು. ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮೀಣ ಭಾರತದ ನಿವಾಸಿಗಳಿಂದಲೇ ಅವರ ಕಥೆಗಳನ್ನು, ಅವರ ಚಟುವಟಿಕೆಗಳನ್ನು ಮತ್ತು ಅವರ ಅನುಭವಗಳನ್ನು ಅವರ ಮಾತುಗಳಲ್ಲೇ ಹೇಳಿಸಿ ದಾಖಲಿಸುವ ಪ್ರಯತ್ನವು ಇಲ್ಲಿದೆ.

ಚಹಾ ಬೆಳೆಯುವ ಜಾಗಗಳಲ್ಲಿರುವ ಚಹಾ ಎಲೆಗಳನ್ನು ಕೀಳುವವರಿಂದ ಹಿಡಿದು ಸಮುದ್ರದಲ್ಲಿ ತಮ್ಮ ಜೀವನವನ್ನು ಕಂಡುಕೊಂಡಿರುವ ಮೀನುಗಾರರವರೆಗೆ, ಭತ್ತದ ಗದ್ದೆಗಳಲ್ಲಿ ರಾಗವಾಗಿ ಹಾಡುಗಳನ್ನು ಹಾಡುತ್ತಾ ನಾಟಿಮಾಡುವ ಮಹಿಳೆಯರಿಂದ ಹಿಡಿದು ಸಾಂಪ್ರದಾಯಿಕ ಕಥೆಗಳನ್ನು ಹೇಳುವವರವರೆಗೆ. ಹಾಗೆಯೇ ದೈತ್ಯ ಹಡಗುಗಳನ್ನು ಕ್ರೇನುಗಳ ಸಹಾಯವಿಲ್ಲದೆ ಸಾಂಪ್ರದಾಯಿಕ ವಿಧಾನಗಳಿಂದ ದಡಸೇರಿಸುವ ಖಾಲಸಿ ಸಮುದಾಯದ ಬಗ್ಗೆ. ಹೀಗೆ ಹಲವು ಬಗೆಯ ಜನರು ತಮ್ಮದೇ ಕಥೆಗಳನ್ನು, ವೃತ್ತಿಗಳನ್ನು ಮತ್ತು ಒಟ್ಟಾರೆಯಾಗಿ ಜೀವನವನ್ನು ಶಬ್ದಗಳಲ್ಲಿ ಬಿಚ್ಚಿಡುತ್ತಾ ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ವೈವಿಧ್ಯಮಯ ಜಗತ್ತಿನಿಂದ ದೂರವಾದ ನಮ್ಮೆಲ್ಲರಿಗೆ ಪರಿಚಯಿಸುವ ಒಂದು ಅಭೂತಪೂರ್ವ ಪ್ರಯತ್ನ. ಪರಿಯು ಈಗಾಗಲೇ ವೀಡಿಯೊ ದೃಶ್ಯಾವಳಿಗಳು, ಛಾಯಾಚಿತ್ರಗಳು, ಧ್ವನಿಮುದ್ರಿಕೆಗಳು ಮತ್ತು ಅಕ್ಷರರೂಪದಲ್ಲಿರುವ ವರದಿಗಳನ್ನು ಕಲೆಹಾಕಿ ತನ್ನ ತಾಣದಲ್ಲಿ ಹಂಚಿಕೊಳ್ಳುತ್ತಿದೆ. ಇಲ್ಲಿ ಈಗಾಗಲೇ ಸಾಕಷ್ಟು ಮಾಹಿತಿ ಇದೆ.

ಅಷ್ಟೇ ಅಲ್ಲದೆ ಇನ್ನೂ ಬೇಕಾದಷ್ಟು ಹರಿದು ಬರುತ್ತಲೂ ಇವೆ. ಹೀಗೆ ಹರಿದು ಬರುತ್ತಿರುವ ಮಾಹಿತಿಗಳ ಗುಚ್ಛಗಳನ್ನು ಒಂದೆಡೆ ಕಲೆ ಹಾಕಿ, ವ್ಯವಸ್ಥಿತವಾಗಿ ವಿಂಗಡಿಸಿ, ಪ್ರಸ್ತುತಪಡಿಸುವುದೆಂದರೆ ಖಂಡಿತವಾಗಿಯೂ ಪ್ರಯಾಸದ ಕೆಲಸವೇ ಸರಿ. ಪರಿಯ ಸಂಗ್ರಹದಲ್ಲಿರುವ ವೀಡಿಯೊ ದೃಶ್ಯಾವಳಿಗಳು ಭಾರತದ ಬಡಜನತೆಯ ಮತ್ತು ಇತರ ಜನಸಾಮಾನ್ಯರ ಜೀವನವನ್ನು ಮತ್ತು ಅವರ ಕಥೆಗಳನ್ನು ದಾಖಲಿಸಿಡುತ್ತಿವೆ. ಉದಾಹರಣೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯೊಬ್ಬಳು ತನ್ನ ಚಟುವಟಿಕೆಗಳ ಬಗ್ಗೆ, ಕೃಷಿವಿಧಾನಗಳ ಬಗ್ಗೆ, ಜೀವನದ ಬಗ್ಗೆ, ತನ್ನ ಕುಟುಂಬದ ಬಗ್ಗೆ, ಅಡುಗೆಮನೆಯ ಬಗ್ಗೆ... ಹೀಗೆ ಆಕೆಗೆ ಮುಖ್ಯ ಎಂದೆನಿಸಿದ ವಿಚಾರವೆಲ್ಲದರ ಬಗ್ಗೆ ಹಂಚಿಕೊಂಡ ಮಾತುಗಳನ್ನು ಈ ವೀಡಿಯೊ ದೃಶ್ಯಾವಳಿಗಳಲ್ಲಿ ನೋಡಬಹುದು. ಹೀಗಾಗಿ ಈ ನಿರ್ದಿಷ್ಟ ವೀಡಿಯೋದ ಮೊದಲ ಕ್ರೆಡಿಟ್ ಹೋಗುವುದು ಈ ಕೃಷಿಕ ಮಹಿಳೆಗೆ. ನಂತರದ ಕ್ರೆಡಿಟ್ ಹೋಗುವುದು ಅವಳ ಹಳ್ಳಿಗೆ ಮತ್ತು ಸಮಾಜಕ್ಕೆ. ಕೊನೆಯದಾಗಿ ಚಿತ್ರೀಕರಿಸಿದ ನಿರ್ದೇಶಕನೆಂಬ ವಿದ್ಯಾರ್ಥಿಗೆ ಅಥವಾ ಆಸಕ್ತನಿಗೆ. ಈ ವೀಡಿಯೊ ತುಣುಕುಗಳ ಮಾಲಕತ್ವದ ವಿಷಯಗಳಲ್ಲಿ ಪರಿಯು ಬದ್ಧವಾಗಿದೆ. ಈ ದೃಷ್ಟಾಂತದಲ್ಲಿ ಈ ಮಾಲಕತ್ವವು ಕಡ್ಡಾಯವಾಗಿ ಕೃಷಿಕ ಮಹಿಳೆಗೆ ಸೇರಿದ್ದು. ಅಲ್ಲದೆ ಈ ಚಿತ್ರೀಕರಿಸಿದ ವೀಡಿಯೊ ದೃಶ್ಯಾವಳಿಗಳನ್ನು ಮುಂದೆ ನೋಡಬಯಸುವ ಮತ್ತು ಅಂತರ್ಜಾಲ ತಾಣಕ್ಕೆ ಈ ಮೂಲಕ ಅಥವಾ ಇನ್ನಿತರ ವಿಧಾನಗಳಲ್ಲಿ ತನ್ನ ಕೊಡುಗೆಯನ್ನು ಕೊಡಲಿಚ್ಛಿಸುವ ಗ್ರಾಮೀಣ ಭಾರತದ ಜನತೆಗೂ ಪರಿಯು ಅವಕಾಶವನ್ನು ಕೊಡುತ್ತಿದೆ ಮತ್ತು ಈ ನಿಟ್ಟಿನಲ್ಲಿ ಇನ್ನೂ ಹಲವು ಮಾರ್ಗಸೂಚಿಗಳನ್ನು ತಯಾರಿಸುತ್ತಿದೆ. ಅಂತೆಯೇ ಪರಿಯ ‘ಸಂಪನ್ಮೂಲ’ ವಿಭಾಗವು ಗ್ರಾಮೀಣ ಭಾರತದ ವಿಚಾರವನ್ನೊಳಗೊಂಡ ವರದಿಗಳನ್ನು ಮತ್ತು ಲೇಖನಗಳನ್ನು ಲಿಂಕ್‌ಗಳ ರೂಪದಲ್ಲಷ್ಟೇ ಅಲ್ಲದೆ ವಿಸ್ತೃತವಾಗಿ ಅಕ್ಷರ ರೂಪದಲ್ಲಿ ಮುಂದಿರಿಸುವ ಮಹತ್ವದ ಹೆಜ್ಜೆಯನ್ನೂ ಇಟ್ಟಿದೆ.

ಈ ಮೂಲಕ ಈಗಾಗಲೇ ಪ್ರಕಟಿತ ವರದಿಗಳು ಮತ್ತು ಪರಿಯ ಅಂತರ್ಜಾಲ ತಾಣಕ್ಕೆಂದೇ ಸಿದ್ಧಪಡಿಸಲಾದ ಸಾವಿರಾರು ವರದಿಗಳು ಮುನ್ನೆಲೆಗೆ ಬರಲಿವೆ. ಸದ್ಯಕ್ಕೆ ತ್ವರಿತಗತಿಯಲ್ಲಿ ತಯಾರಾಗುತ್ತಿರುವ ‘ಆಡಿಯೋ’ ವಿಭಾಗವು ಸಾವಿರಾರು ಸಂಭಾಷಣೆಗಳನ್ನು, ಹಾಡುಗಳನ್ನು, ಕವಿಗೋಷ್ಠಿಗಳನ್ನು, ಸಂದರ್ಶನಗಳನ್ನು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲೂ ತನ್ನಲ್ಲಿ ಒಳಗೊಳ್ಳಲಿದೆ. ಪರಿಯ ಅಂತರ್ಜಾಲ ತಾಣಕ್ಕೆಂದೇ ತಯಾರಿಸಲಾದ ಸಾಕ್ಷ್ಯಚಿತ್ರಗಳಿಗೆ ಹಲವು ಭಾಷೆಗಳಲ್ಲಿ ಸಬ್-ಟೈಟಲ್ ಗಳನ್ನು ಕೊಡುವ ಪ್ರಯತ್ನವೂ ನಡೆದಿದೆ.

ಚಟುವಟಿಕೆಗಳಿಗೊಂದು ಇಣುಕುನೋಟ:

ಈ ವಿಭಾಗವು ಗ್ರಾಮೀಣ ಭಾರತದ ಕಾರ್ಮಿಕ ವರ್ಗದ ಜೀವನದ ಕಡೆಗೆ ಬೆಳಕು ಚೆಲ್ಲುವಂಥದ್ದು. ಸ್ವಂತ ಜಮೀನಿನ ಭಾಗ್ಯವಿಲ್ಲದೆ ಹಲವು ವರ್ಷಗಳಿಂದ ಕೃಷಿಭೂಮಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು, ರೈತರು, ಬಡಗಿಗಳು, ಕಮ್ಮಾರರು... ಹೀಗೆ ಹಲವರು ಇಲ್ಲಿ ಬಂದುಹೋಗುತ್ತಾರೆ. ದಿನಕೂಲಿಗಾಗಿ ಇನ್ನೂರು ಕಿಲೋಗಳಷ್ಟು ತೂಕದ ಕಲ್ಲಿದ್ದಲ ರಾಶಿಯನ್ನು ತನ್ನ ಬೈಸಿಕಲ್ಲಿನ ಮೇಲೆ ಹೇರಿ ದಿನವೂ ನಲವತ್ತಕ್ಕೂ ಹೆಚ್ಚು ಕಿಲೋಮೀಟರುಗಳಷ್ಟು ದೂರವನ್ನು ಈ ಕಲ್ಲಿದ್ದಲ ರಾಶಿಯನ್ನು ಹೊತ್ತ ಬೈಸಿಕಲ್ಲನ್ನು ಎಳೆದುಕೊಂಡೇ ಕ್ರಮಿಸುವ ಶ್ರಮಿಕರಿಂದ ಹಿಡಿದು, ರಾಕ್ಷಸಗಾತ್ರದ ಕೊಳಚೆ ರಾಶಿಗಳಿಂದ ಕಲ್ಲಿದ್ದಲನ್ನು ಹೆಕ್ಕಿ ತೆಗೆಯುವ ಮಹಿಳೆಯರ ಅಪಾಯಕಾರಿ ವೃತ್ತಿಗಳ ಬಗೆಗಿನ ಮಾಹಿತಿಗಳು ಅವರಿಂದಲೇ ಖುದ್ದಾಗಿ ಇಲ್ಲಿ ನಿರೂಪಿಸಲ್ಪಟ್ಟಿವೆ.

ತನ್ನ ಸ್ವಂತ ಹಳ್ಳಿಯನ್ನೊಳಗೊಂಡಂತೆ ಯಾವುದೇ ಹಳ್ಳಿಗಳಲ್ಲಿ ಶಾಶ್ವತವಾಗಿ ನೆಲೆಸದೆ, ಆರು ತಿಂಗಳುಗಳಿಗಿಂತ ಹೆಚ್ಚಿನ ಕಾಲವನ್ನು ಯಾವ ಪ್ರದೇಶದಲ್ಲೂ ಕಳೆಯದೆ, ಕೆಲಸಕ್ಕಾಗಿ ವರ್ಷವಿಡೀ ಸಾವಿರಾರು ಮೈಲುಗಳಷ್ಟು ದೂರವನ್ನು ಕ್ರಮಿಸುವ ಕಾರ್ಮಿಕರ ಕಥೆಗಳು, ಅನುಭವಗಳು ಇಲ್ಲಿವೆ. ಇವುಗಳಲ್ಲದೆ ಗ್ರಾಮೀಣ ಭಾರತದ ಜನರು ಹಲವು ವರ್ಷಗಳಿಂದ ಉಪಯೋಗಿಸುತ್ತಾ ಬಂದಿರುವ ಆದರೆ ಕಾಲದೊಂದಿಗೆ ಮರೆಯಾಗುತ್ತಿರುವ ಯಂತ್ರೋಪಕರಣಗಳ ಬಗ್ಗೆಯೂ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.

ಭಾಷೆಗಳು:

ಸಾಧ್ಯವಾದಷ್ಟು ಮಟ್ಟಿಗೆ ಗ್ರಾಮೀಣ ಭಾರತದ ಮೂಲೆಮೂಲೆಗಳಲ್ಲಿ ಮೌಖಿಕವಾಗಿ ಅಥವಾ ಲಿಖಿತವಾಗಿ (ಆಡುಭಾಷೆಯಲ್ಲಿ ಮತ್ತು ಲಿಪಿಗಳೊಂದಿಗೆ) ಬಳಕೆಯಲ್ಲಿರುವ ಹಲವು ಭಾಷೆಗಳನ್ನು, ಈ ಪ್ರದೇಶದಲ್ಲಿ ನೆಲೆಯಾಗಿರುವ ಜನಸಮೂಹದಿಂದಲೇ ದಾಖಲಿಸಿ, ಸಂರಕ್ಷಿಸಿಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆಡಿಯೋ ಧ್ವನಿಮುದ್ರಿಕೆಗಳು, ವೀಡಿಯೊ ದೃಶ್ಯಾವಳಿಗಳು, ಟಾಕಿಂಗ್ ಆಲ್ಬಂಗಳಂತಿರುವ ಮಿನಿ ಸಾಕ್ಷ್ಯಚಿತ್ರಗಳ ಜೊತೆಗೇ ಮತ್ತು ಸಂಬಂ ವಿವರಗಳನ್ನು ವಿಸ್ತೃತವಾಗಿ ಅಕ್ಷರರೂಪದಲ್ಲಿ ದಾಖಲಿಸುವ ಚಟುವಟಿಕೆಗಳನ್ನೂ ಪರಿಯು ಶ್ರದ್ಧೆಯಿಂದ ಮಾಡುತ್ತಿದೆ.

ಪೋಟೋ ವಿಭಾಗ:

ಪರಿಯ ಈ ವಿಭಾಗವು ಗ್ರಾಮೀಣ ಭಾರತದ ಎಲ್ಲಾ ಅಂಶಗಳನ್ನು ಛಾಯಾಚಿತ್ರಗಳ ಮೂಲಕ ಪ್ರಸ್ತುತಪಡಿಸುವ ಗುರಿಯನ್ನಿಟ್ಟುಕೊಂಡಿದೆ. ಬರೋಬ್ಬರಿ ಎಂಟು ಸಾವಿರದಷ್ಟು ಕಪ್ಪುಬಿಳುಪು ಛಾಯಾಚಿತ್ರಗಳನ್ನು ಒಂದೆಡೆ ಕಲೆಹಾಕಿಯೇ ಪೋಟೋ ಆರ್ಕೆವ್ ಅನ್ನು ಆರಂಭಿಸಲಾಗಿದೆ. ಈ ಚಿತ್ರಗಳು ಗ್ರಾಮೀಣ ಭಾರತವನ್ನು, ಇಲ್ಲಿಯ ಜನರನ್ನು, ಇವರ ಚಟುವಟಿಕೆಗಳನ್ನು, ಮನೆಗಳನ್ನು, ಕುಟುಂಬಗಳನ್ನು, ಪರಿಸರವನ್ನು ಹೀಗೆ ಬಹುತೇಕ ಗ್ರಾಮೀಣ ಭಾರತದ ಜೀವನದ ಎಲ್ಲಾ ಅಂಶಗಳನ್ನೂ ಒಳಗೊಂಡು ಶ್ರೀಮಂತವಾಗಿದೆ. ಈಗಾಗಲೇ ಈ ಸಂಗ್ರಹದಿಂದ ಕೆಲವನ್ನು ಪರಿಯ ಅಂತರ್ಜಾಲ ತಾಣದಲ್ಲಿ ಬಳಸಿಕೊಳ್ಳಲಾಗಿದೆ. ಹಳೆಯ ಆರ್ಕೆವ್ ಗಳನ್ನು ಸೇರಿದಂತೆ ಹಲವು ಮೂಲಗಳಿಂದ ಸಂಗ್ರಹಿಸಲಾದ ಬಹಳಷ್ಟು ಚಿತ್ರಗಳು ಹಳೆಯ ಕಪ್ಪುಬಿಳುಪು ಶೈಲಿಯ ಚಿತ್ರಗಳಾದ್ದರಿಂದ ಅವುಗಳನ್ನು ಡಿಜಿಟೈಸ್ ಮಾಡುವ ಪ್ರಕ್ರಿಯೆಗಳು ಸದ್ಯಕ್ಕೆ ನಡೆಯುತ್ತಿವೆ. ಹೀಗೆ ಡಿಜಿಟೈಸ್ ಆದ ಚಿತ್ರಗಳನ್ನು ಕ್ರಮೇಣ ಅಂತರ್ಜಾಲ ತಾಣದಲ್ಲಿ ಪ್ರಸ್ತುತಪಡಿಸುವ ಯೋಜನೆಗಳನ್ನೂ ಹಾಕಿಕೊಳ್ಳಲಾಗಿದೆ. ಇವುಗಳನ್ನು ಹೊರತುಪಡಿಸಿ ಸಾವಿರಾರು ಡಿಜಿಟಲ್ ಛಾಯಾಚಿತ್ರಗಳು ಈಗಾಗಲೇ ಪರಿಯ ಸಂಗ್ರಹದಲ್ಲಿ ಸೇರಿಕೊಂಡಿವೆ (ಇತಿಹಾಸದಲ್ಲೇ ಕಂಡುಕೇಳರಿಯದಷ್ಟು ರೈತರ ಆತ್ಮಹತ್ಯೆಗಳು ನಡೆದ ಅವಯಲ್ಲಿ ಕ್ಯಾಮರಾಗಳಲ್ಲಿ ಸೆರೆಯಾದ ಕೆಲಚಿತ್ರಗಳು ಮತ್ತು ದಾಖಲಿತ ಅಂಕಿಅಂಶಗಳೂ ಈ ದಾಖಲೆಗಳಲ್ಲಿವೆ). ‘‘ಟಾಕಿಂಗ್ ಆಲ್ಬಂ’’ ಅನ್ನೋ ಇನ್ನೊಂದು ವಿಶಿಷ್ಟವಾದ ೆಟೋ ಆರ್ಕೆವ್ ನಲ್ಲಿ ನಿಗದಿತ ವಿಷಯಕ್ಕೆ ಸಂಬಂಧಪಟ್ಟ ಛಾಯಾಚಿತ್ರಗಳ ಜೊತೆಗೇ, ಆಯಾ ಚಿತ್ರಗಳನ್ನು ಸಂಕ್ಷಿಪ್ತವಾಗಿ ಶೀರ್ಷಿಕೆಗಳೊಂದಿಗೆ ವಿವರಿಸುವ ಆಡಿಯೊ ಸೌಲಭ್ಯಗಳನ್ನೂ ಕಲ್ಪಿಸಿ ಪ್ರದರ್ಶನಗಳಿಗೆ ಆಧುನಿಕತೆಯ ರಂಗನ್ನು ಹಚ್ಚಿದೆ.


ತಲುಪುವ ಮಾರ್ಗ:
 
ಈ ವಿಭಾಗವು ವೈವಿಧ್ಯಮಯ ಭಾರತವನ್ನು ತಲುಪಲು ಬಳಸಲಾಗುವ ಸಾರಿಗೆ ವ್ಯವಸ್ಥೆಗೆ ಮೀಸಲು. ತಿರಸ್ಕರಿಸಲ್ಪಟ್ಟ ಅಥವಾ ಮೂಲೆಗುಂಪಾದ ವಾಹನಗಳಿಂದ ತೆಗೆದ ಬಿಡಿಭಾಗಗಳಿಂದ ರಚಿತವಾದ, ಐದು ಎಚ್.ಪಿ ಮೋಟರುಗಳಿಂದ ಚಲಾಯಿಸಲ್ಪಡುವ, ಹಲವು ಬಾರಿ ಒಂದೇ ವಾಹನವಾಗಿದ್ದರೂ ಬಗೆಬಗೆಯ ಗಾತ್ರದ ಚಕ್ರಗಳನ್ನು ಹೊಂದಿರುವ ಮತ್ತು ಸಾಮಾನ್ಯವಾಗಿ ‘‘ಜುಗಾಡ್’’ ಎಂಬ (ಹಾಸ್ಯಮಯ) ಹೆಸರಿನಲ್ಲಿ ಜನಪ್ರಿಯವಾದ ಸ್ಥಳೀಯವಾಗಿ ನಿರ್ಮಿತ ವಾಹನಗಳ ಬಗ್ಗೆಯೂ ಇಲ್ಲಿ ಸ್ವಾರಸ್ಯಕರವಾದ ಮಾಹಿತಿಗಳಿವೆ. ಇವುಗಳಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಎತ್ತಿನಗಾಡಿಗಳು, ಕುದುರೆಗಾಡಿಗಳು, ಕತ್ತೆಗಳು, ಒಂಟೆಗಳು, ಬಂಡಿಗಳು ಇತ್ಯಾದಿಗಳ ಬಗ್ಗೆಯೂ ಈ ವಿಭಾಗದಲ್ಲಿ ವಿಪುಲವಾದ ಅಧ್ಯಯನ ಮತ್ತು ಸಂಗ್ರಹಯೋಗ್ಯ ವಸ್ತುಗಳಿವೆ.

ನಾವುಗಳು:

ಇದು ಸಮುದಾಯಗಳ ಮತ್ತು ಸಂಸ್ಕೃತಿಗಳ ಬಗ್ಗೆ. ಹಲವು ಸಮುದಾಯಗಳ ಮತ್ತು ಸಮಾಜಗಳ ಕಥೆಗಳು, ಸಂಸ್ಕೃತಿ, ಗುಂಪುಗಳು ಹೀಗೆ ಹಲವು ಅಂಶಗಳು ಈ ಅಂಗಳದಲ್ಲಿ ಸಮ್ಮಿಲಿತಗೊಂಡಿವೆ. ಕಥೆಗಳು, ಕವಿತೆಗಳು, ಜಾನಪದ ಕಲೆ, ರಂಗಭೂಮಿ, ಬೀದಿನಾಟಕಗಳು, ಇತಿಹಾಸಗಳೂ ಈ ವಿಭಾಗದಲ್ಲಿ ಸೇರಿಕೊಂಡಿವೆ.

ಕಾರ್ಯ:

ಇದು ಕಲೆ ಮತ್ತು ಕರಕುಶಲ ಕಲೆಗಳ ಮಂಟಪ. ಜೊತೆಗೇ ಕುಶಲಕರ್ಮಿಗಳು, ಪರಂಪರೆಗಳು, ಕೌಶಲಗಳು, ಹಿನ್ನೆಲೆಗಳು, ಉತ್ಪಾದನೆಗಳು ಈ ವಿಂಗಡಣೆಯಡಿಯಲ್ಲಿ ಬಂದುಹೋಗಿವೆ.

ಸ್ವಾತಂತ್ರ್ಯದ ಕಾಲಾಳುಗಳು:

ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದ ಕೊನೆಯ ಕೊಂಡಿಗಳಂತೆ ಬದುಕುಳಿದ ಹಲವರು ಈಗ ತೊಂಬತ್ತರ ಅಂಚಿನಲ್ಲಿರುವವರು. ಇವರುಗಳು ಹಲವು ವರ್ಷಗಳವರೆಗೆ ಜೈಲುಗಳಲ್ಲಿದ್ದು, ಹೋರಾಟವನ್ನು ಮಾಡಿ, ಆಂಗ್ಲರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರಗೊಳಿಸಿ ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡುವಲ್ಲಿ ಅವಿರತ ಶ್ರಮಿಸಿದವರು. ಇನ್ನೊಂದು ದಶಕದ ಬಳಿಕ ಈ ವರ್ಗದಿಂದ ಯಾರೊಬ್ಬರೂ ತಮ್ಮ ಗಾಥೆಗಳನ್ನು ಹೇಳುವ ಅವಕಾಶಗಳು ಸಹಜವಾಗಿಯೇ ಇಲ್ಲ.

ಕೃಷಿ ಬಿಕ್ಕಟ್ಟು:

ಭಾರತವು ತನ್ನ ಇತಿಹಾಸದಲ್ಲಿ ಕಂಡ ಮತ್ತು ವರ್ತಮಾನದಲ್ಲಿ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟುಗಳ ಬಗ್ಗೆ ಕಾಲಾನುಕ್ರಮದಲ್ಲಿ ಪ್ರಸ್ತುತಪಡಿಸಲಾಗಿರುವ ಆಡಿಯೋ, ವೀಡಿಯೋ, ಛಾಯಾಚಿತ್ರಗಳು ಮತ್ತು ಅಕ್ಷರ ರೂಪದಲ್ಲಿರುವ ದಾಖಲೆಗಳಿವು. ಆತ್ಮಹತ್ಯೆಗಳ ಆಚೆಗಿರುವ ಕರಾಳ ಸತ್ಯಗಳನ್ನೂ ಬೆತ್ತಲು ಮಾಡುವ ಮಾಹಿತಿಗಳನ್ನೊಳಗೊಂಡ ಕ್ಯಾಟಲಾಗುಗಳೂ ಈ ವಿಭಾಗದಲ್ಲಿವೆ.

ಮುಸಾಫಿರ್ (ಅಲೆಮಾರಿ):


ದೇಶದ ಗ್ರಾಮೀಣ ಭಾಗಗಳ ಮೂಲೆಮೂಲೆಗಳಲ್ಲಿ ಸಂಚರಿಸುತ್ತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಲೇಖಕರ ಮತ್ತು ಆಸಕ್ತರ ಅಡ್ಡೆಯೇ ‘ಮುಸಾಫಿರ್’. ಒಂದೊಂದೇ ಇಟ್ಟಿಗೆಯನ್ನಿಡುತ್ತಾ ಕಟ್ಟಲಾಗುತ್ತಿರುವ ಪರಿಯೆಂಬ ಕನಸಿನ ಸೌಧಕ್ಕೆ ಶೀಘ್ರದಲ್ಲೇ ಜಾನುವಾರುಗಳು ಮತ್ತು ವನ್ಯಜೀವಿಗಳ ಬಗ್ಗೆ ಮಾಹಿತಿಗಳನ್ನೊಳಗೊಂಡ ಹೊಸ ವಿಭಾಗವೊಂದನ್ನು ಸೇರ್ಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಅಂತರ್ಜಾಲ ತಾಣಕ್ಕೆ ಕೊಡುಗೆಗಳನ್ನು ನೀಡುತ್ತಿರುವ ವ್ಯಕ್ತಿಗಳನ್ನು ಮತ್ತು ಗುಂಪುಗಳನ್ನು ದೃಢಗೊಳಿಸುವ ಮತ್ತು ವಿಸ್ತರಿಸುವ ಯೋಜನೆಗಳ ಜೊತೆಗೇ ಸಲ್ಲಿಸಿದ ಮಾಹಿತಿಗಳ ಗುಚ್ಛಗಳನ್ನು ಗುಟಮಟ್ಟಗಳ ಕಾಯ್ದುಕೊಳ್ಳುವಿಕೆಗಾಗಿ ನಡೆಸಲಾಗುವ ಪರಿಶೀಲನೆಗಳು ಮತ್ತು ಸಂಪಾದಕೀಯ ವಿಭಾಗಗಳೂ ಇನ್ನಷ್ಟು ಸುಧಾರಿತ ಮಟ್ಟದಲ್ಲಿ ಬರಲಿವೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅನುಭವಿ ವ್ಯಕ್ತಿಗಳ ಸಹಕಾರವು ನಿಜಕ್ಕೂ ಅಗತ್ಯ ಮತ್ತು ಅತ್ಯಮೂಲ್ಯವಾದದ್ದು. ಇವರುಗಳಲ್ಲಿ ಬಹಳಷ್ಟು ಮಂದಿ ಪತ್ರಕರ್ತರು, ಬರಹಗಾರರು ಮತ್ತು ಲೇಖಕರು. ಹಾಗೆಂದು ಎಲ್ಲರೂ ಅಲ್ಲ. ಅಸಲಿಗೆ ಯಾವುದೇ ಭಾರತೀಯ ವ್ಯಕ್ತಿಯೊಬ್ಬ ತನಗೆ ಅನುಕೂಲವೆನಿಸಿದ ಮಾಧ್ಯಮದ ರೂಪದಲ್ಲಿ ಪರಿಗಾಗಿ ಕೊಡುಗೆಯನ್ನು ನೀಡಬಲ್ಲ. ಅದು ಬರಹವಾಗಿರಬಹುದು, ಅಥವಾ ಸೆಲ್ ೆನಿನಿಂದ ಚಿತ್ರೀಕರಿಸಿದ ವೀಡಿಯೊ ದೃಶ್ಯಾವಳಿಯಾಗಿರಬಹುದು. ವೀಡಿಯೋಗಳ ಗುಣಮಟ್ಟವು ತಕ್ಕಮಟ್ಟಿಗಾದರೂ ನೋಡಲು ಯೋಗ್ಯವಾಗಿರಬೇಕು ಮತ್ತು ಚಿತ್ರೀಕರಿಸಿದ ವೀಡಿಯೊಗಳ ವಿಷಯಗಳು ಅಂತರ್ಜಾಲ ತಾಣದ ಕಾಯ್ದೆಗಳಿಗನುಗುಣವಾಗಿರಬೇಕು ಎಂಬುದಷ್ಟೇ ಮುಖ್ಯ. ಬರಹದ ರೂಪದಲ್ಲಿ ಈ ಪ್ರಾಜೆಕ್ಟುಗಳ ಭಾಗವಾಗ ಬಯಸುವವರು ಬರಹ ಪ್ರವೀಣರಾಗಿರಬೇಕೆಂದೇನೂ ಇಲ್ಲ. ಲೇಖಕರೇ ಅಥವಾ ವೃತ್ತಿಯಲ್ಲಿ ಪತ್ರಕರ್ತರೇ ಆಗಿರಬೇಕೆಂಬ ಕಡ್ಡಾಯವೂ ಇಲ್ಲ. ಹಲವು ಮಂದಿ ತಮ್ಮದೇ ಆದ ಕಾರ್ಯಕ್ಷೇತ್ರದಲ್ಲಿ ವಿಶೇಷವಾದ ಪರಿಣತಿಯನ್ನು ಪಡೆದಿರುತ್ತಾರೆ. ಟೆಕ್ಕಿಗಳು, ಸಂಶೋಧಕರು, ವಿನ್ಯಾಸಕರು, ಅನುವಾದಕರು, ಸಂಕಲನ/ವೀಡಿಯೊ ಸಂಕಲನಕಾರರು, ಸ್ವಯಂಸೇವಕರು ಹೀಗೆ ಹತ್ತುಹಲವು ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಹೀಗೆ ಇತರೆ ಕ್ಷೇತ್ರಗಳಲ್ಲಿ ನುರಿತ, ಅನುಭವಿ ವ್ಯಕ್ತಿಗಳೂ ಆಯಾ ಪರಿಣತಿಯುಳ್ಳ ಕ್ಷೇತ್ರಗಳಿಗನುಗುಣವಾಗಿ ಪರಿಗಾಗಿ ತಮ್ಮ ಕೊಡುಗೆಯನ್ನು ನೀಡುವುದರಲ್ಲಿ ಸ್ವಾಗತವಿದೆ. ಅಸಲಿಗೆ ಪರಿಗೆ ವಿವಿಧ ರೂಪಗಳಲ್ಲಿ ಹರಿದು ಬರುತ್ತಿರುವ ಮಾಹಿತಿಗಳ ಸಿಂಹಪಾಲು ಗ್ರಾಮೀಣ ಪ್ರದೇಶದಿಂದಲೇ ಹೊರತು ಮಾಧ್ಯಮ ಕ್ಷೇತ್ರದ ಹಿರಿತಲೆಗಳಿಂದಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಹಲವು ವ್ಯಕ್ತಿಗಳು ತಮ್ಮ ಕಥೆಯನ್ನು ಸ್ವತಃ ಚಿತ್ರೀಕರಿಸಿ, ಹಲವು ಮಾಹಿತಿಗಳನ್ನು ವೀಡಿಯೊ ರೂಪದಲ್ಲಿ ಪರಿಯೊಂದಿಗೆ ಹಂಚಿಕೊಂಡಿದ್ದಾರೆ. ಪರಿಗೆ ಸಲ್ಲಿಸಿದ ಮಾಹಿತಿಗಳು ಗ್ರಾಮೀಣ ಭಾರತದ ವಿಷಯಕ್ಕೆ ಸಂಬಂಧಪಟ್ಟಿದ್ದೇ ಆದರೆ ಖಂಡಿತವಾಗಿಯೂ ಇವುಗಳು ಪ್ರಕಟವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾರ್ವಜನಿಕರ ಬಳಕೆಗಾಗಿ ಪರಿಯ ಅಂತರ್ಜಾಲ ತಾಣವು ಮುಕ್ತ ಮತ್ತು ಉಚಿತವಾಗಿದೆ. ‘ದಿ ಕೌಂಟರ್ ಮೀಡಿಯಾ ಟ್ರಸ್ಟ್’ ಎಂಬ ಸಂಸ್ಥೆಯು ತಾಣವನ್ನು ಮುನ್ನಡೆಸುತ್ತಿದೆ. ದಿ ಕೌಂಟರ್ ಮೀಡಿಯಾ ನೆಟ್ ವರ್ಕ್ ಆರ್ಥಿಕ ಸಹಕಾರದೊಂದಿಗೆ ಈ ಟ್ರಸ್ಟ್ ಬೆಳೆಯುತ್ತಿದೆ. ಈ ಆರ್ಥಿಕ ಸಹಕಾರದ ಮುಖ್ಯ ಮೂಲಗಳೆಂದರೆ ಸದಸ್ಯತ್ವ ಶುಲ್ಕಗಳು, ಸ್ವಯಂಸೇವಕರ ಸೇವೆಗಳು, ದಾನಿಗಳ ಕೊಡುಗೆಗಳು ಮತ್ತು ವೈಯಕ್ತಿಕವಾಗಿ ನೀಡಲಾಗುವಂತಹ ಧನಸಹಾಯಗಳು. ಸ್ವಯಂಸೇವಕರಂತೆ ಪರಿಗಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಮತ್ತು ಈ ಬಹುದೊಡ್ಡ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವರದಿಗಾರರು, ಲೇಖಕರು, ಬರಹಗಾರರು, ವೃತ್ತಿಪರ ಚಿತ್ರನಿರ್ಮಾಪಕರು, ಸಂಕಲನಕಾರರು, ಛಾಯಾಚಿತ್ರಗಾರರು, ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವವರು ಮತ್ತು ಟೆಲಿವಿಷನ್-ಆನ್ ಲೈನ್-ಮುದ್ರಣ ವಿಭಾಗದ ಪತ್ರಕರ್ತರೇ ನಿಸ್ಸಂದೇಹವಾಗಿ ಪರಿಯ ಅತ್ಯಮೂಲ್ಯ ಆಸ್ತಿಗಳು. ಇವರುಗಳಲ್ಲದೆ ಹಲವು ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಸ್‌ಟಾವೇರ್ ಕ್ಷೇತ್ರದಲ್ಲಿರುವ ಟೆಕ್ಕಿಗಳು ಮತ್ತು ಇತರೆ ಕ್ಷೇತ್ರಗಳಲ್ಲಿರುವ ವೃತ್ತಿಪರರು ತಮ್ಮ ಅಮೂಲ್ಯವಾದ ಸಮಯವನ್ನು ಮತ್ತು ಕೌಶಲ್ಯಗಳನ್ನು ಯಾವುದೇ ಪ್ರತಿಲದ ಅಪೇಕ್ಷೆಯಿಲ್ಲದೆ ಪರಿಗಾಗಿ ಧಾರೆಯೆರೆದಿದ್ದಾರೆ. ಇವರೆಲ್ಲರ ಶ್ರಮ ಮತ್ತು ಕೊಡುಗೆಗಳ ಲವಾಗಿ ಪರಿಯ ಅಂತರ್ಜಾಲ ತಾಣವು ಚೊಕ್ಕವಾಗಿ ಮತ್ತು ಆಕರ್ಷಕವಾಗಿ ಮೂಡಿಬಂದಿದೆ. ಸಹಜವಾಗಿಯೇ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಹೆಚ್ಚಿನ ಆರ್ಥಿಕ ಸಹಕಾರವು ಅಗತ್ಯವಾಗಿರುವುದರಿಂದ ಸಂಸ್ಥೆಯು ಕ್ರೌಡ್ ಸೋರ್ಸಿಂಗ್ ವಿಧಾನದಲ್ಲಿ ಜನತೆಯ ಬಳಿಗೇ ಹೋಗುವ ಹೆಜ್ಜೆಯನ್ನಿಡಲಿದೆ. ಗ್ರಾಮೀಣ ಭಾರತವೆಂಬ ಅಗಾಧಲೋಕದ ಕೆಲ ದೃಶ್ಯಗಳನ್ನಷ್ಟೇ ಪರಿಯಲ್ಲಿ ಪ್ರಸ್ತುತಪಡಿಸಬಹುದೇ ಹೊರತು ಈ ವೈವಿಧ್ಯಮಯ ಲೋಕವನ್ನು ಪೂರ್ಣವಾಗಿ ಒಂದೇ ್ರೇಮ್‌ನಲ್ಲಿ ತೆರೆದಿಡುವುದು ಅಸಾಧ್ಯವೇ ಸರಿ. ಪರಿಯ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ, ಗ್ರಾಮೀಣ ಭಾರತವೆಂಬ ಅದ್ಭುತ ಜಗತ್ತನ್ನು ತೆರೆದಿಡುವ ಮತ್ತು ಈ ವಿಶಿಷ್ಟ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರವು ಎಂದಿನಂತೆ ಸಾರ್ವಜನಿಕರಿಂದಲೇ ಬಂದು ಯಶಸ್ಸಿನತ್ತ ನಡೆಯಬೇಕಾಗಿದೆ.

(ಕ್ರೇಝಿ ಫ್ರಾಗ್ ಮೀಡಿಯಾ ಫೀಚರ್ಸ್) 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)