ಎಡಕುಮೇರಿ ಬಳಿ ಹಳಿತಪ್ಪಿದ ಗೂಡ್ಸ್ ರೈಲು
ಮಂಗಳೂರು, ಅ.12: ಹಾಸನ ಜಿಲ್ಲೆಯ ಎಡಕುಮೇರಿ ಶಿರಿಬಾಗಿಲು ಬಳಿ ಗೂಡ್ಸ್ ರೈಲು ಪೂರ್ವಾಹ್ನ 11:15ರ ಸುಮಾರಿಗೆ ಹಳಿ ತಪ್ಪಿದೆ.
ಗೂಡ್ಸ್ ರೈಲಿನ ಐದನೆ ವ್ಯಾಗನ್ ಹಳಿತಪ್ಪಿದ್ದು, ಕಾರ್ಯಾಚರಣೆಯ ಮೂಲಕ ಗೂಡ್ಸ್ ರೈಲನ್ನು ಮತ್ತೆ ಹಳಿಗೆ ಸೇರಿಸಲಾಯಿತು. ಹಳಿ ದುರಸ್ತಿ ಕಾರ್ಯ ಮುಂದುವರಿದಿದೆ. ದುರಸ್ತಿ ತಂಡ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ತೆರಳಿತ್ತು.
ಗೂಡ್ಸ್ ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಯಶವಂತಪುರ - ಕಾರವಾರ ನಡುವೆ ಸಂಚರಿಸುತ್ತಿದ್ದ ರೈಲಿನ ಪ್ರಯಾಣ ವಿಳಂಬವಾಗಿದೆ ಎಂದು ತಿಳಿದುಬಂದಿದೆ.
Next Story