varthabharthi


magazine

ಜಾತಿ ಎನ್ನುವುದು ವರ್ಗ ಕ್ಕಿಂತಲೂ ಹೆಚ್ಚು ಗಮನ ಹರಿಸಬೇಕಾದ ಸಂಗತಿ

ವಾರ್ತಾ ಭಾರತಿ : 12 Oct, 2016
ಸಂದರ್ಶನ: ಚೇತನಾ ತೀರ್ಥಹಳ್ಳಿ

ಸಂಘ ಪರಿವಾರ ಈ ಬಂಡವಾಳಷಾಹಿಗಳನ್ನು ಬೆಂಬಲಿಸುತ್ತ, ಆರ್ಥಿಕವಾಗಿಯೂ ಹಿಂದುಳಿದ ದಲಿತ ಮತ್ತಿತರ ತಳಸಮುದಾಯ ಗಳನ್ನು ಅದೇ ಸ್ಥಿತಿಯಲ್ಲಿಡುವ ಸಂಚು ಹಿಂದಿನಿಂದಲೂ ನಡೆಸುತ್ತ ಬಂದಿದೆ. ಮತ್ತು ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಾವು ಅದರ ಈ ಹುನ್ನಾರವನ್ನು ಬಯಲು ಮಾಡುತ್ತೇವೆ. ನಾವು ಆರ್ಥಿಕ ಸ್ವಾವಲಂಬನೆಗಾಗಿ ನಮ್ಮ ಹಕ್ಕಿನ ಭೂಮಿಯನ್ನು ಕೇಳುವಾಗ ಅವರು ತೋರುವ ಪ್ರತಿಕ್ರಿಯೆಯೇ ಅವರ ಸಂಚನ್ನು ಅನಾವರಣಗೊಳಿಸುತ್ತದೆ. ದಲಿತ ಸಮುದಾಯವನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುವ ಕೆಲಸ ಈಗಾಗಲೇ ಶುರುವಾಗಿದೆ. ನಮ್ಮ ಸಮುದಾಯ ಒಮ್ಮೆ ಎಚ್ಚೆತ್ತು ಹೋರಾಟಕ್ಕೆ ಇಳಿದರೆ, ನಂತರ ಯಾವ ಶಕ್ತಿಗಳೂ ನಮ್ಮನ್ನು ತಡೆಯಲಾರವು.

ದಲಿತರು ಯಾವ ರೀತಿಯಲ್ಲೂ ಸತ್ತ ದನವನ್ನು ವಿಲೇವಾರಿ ಮಾಡಬಾರದು ಎಂದು ಚಳವಳಿ ನಡೆಸುತ್ತಿದ್ದೀರಿ. ಇಂತಹ ಹೀನ ವೃತ್ತಿಯಿಂದ ದಲಿತರು ಹಿಂದೆ ಸರಿಯಬೇಕು ನಿಜ. ಆದರೆ ತಕ್ಷಣಕ್ಕೆ ಅವರು ಆರಿಸಿಕೊಳ್ಳಬಹುದಾದ ಪರ್ಯಾಯ ಉದ್ಯೋಗ ಯಾವುದು ? ಇದರಿಂದಲೇ ಈ ವರೆಗೆ ಬದುಕು ಕಟ್ಟಿಕೊಂಡವರಿಗೆ ಹೊಸ ಉದ್ಯೋಗ ಕೊಡಲು ಸಮಾಜ ಸಿದ್ಧವಿದೆಯೇ?
ಜಿಗ್ನೇಶ್ ಮೆವಾನಿ: ದಲಿತರು ಕೇವಲ ಜಾನುವಾರಗಳ ಕಳೇಬರ ಎತ್ತಲಿಕ್ಕಷ್ಟೆ ಸೀಮಿತವಾಗಿಲ್ಲ. ಅದು ಅವರ ದುಡಿಮೆಯ ಒಂದು ಭಾಗವಷ್ಟೆ. ದಲಿತರಲ್ಲಿ ಬೇರೆ ಕೆಲಸಗಳನ್ನು ಮಾಡುವ ಕೌಶಲ್ಯವೂ ಇದೆ, ಸಾಮರ್ಥ್ಯವೂ ಇದೆ. ಅವರು ಹೊಲಗದ್ದೆಗಳಲ್ಲಿ ದುಡಿಯುತ್ತಾರೆ. ಕೂಲಿ ಕೆಲಸ ಮಾಡುತ್ತಾರೆ. ಹೆಣಗಳನ್ನು ಎತ್ತುವ ಕೆಲಸ ದಲಿತ ಸಮುದಾಯದ ಮೇಲೆ ಹೇರಲಾಗಿರುವ ಕೆಲಸ. ಬೇರೆ ಯಾವ ಸಮುದಾಯವೂ ಮಾಡುವುದಿಲ್ಲವೆಂದು ದಲಿತರ ಮೇಲೆ ಹೇರಿದ್ದ ಕೆಲಸ ಅದು. ದುಡಿಮೆ ಬಲ್ಲವರು ಹೇಗಾದರೂ ಬದುಕು ಮಾಡುತ್ತಾರೆ. ಆದರೆ ಈ ದುಡಿಮೆ, ಈ ಬದುಕು ಘನತೆಯುಳ್ಳದ್ದಾಗಿರಬೇಕು, ಅದಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋದು ನಮ್ಮ ಬೇಡಿಕೆ. ಆದ್ದರಿಂದಲೇ ಭೂಮಿ ಹಂಚಿಕೆ ಮಾಡಿ ಹಾಗೂ ಇತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸಿಕೊಡಿ ಎಂದು ನಾವು ಕೇಳ್ತಿರೋದು.

 ಆರೆಸ್ಸೆಸ್, ಸಂಘ ಪರಿವಾರ ಸಂಘಟನೆಗಳೂ ತಮ್ಮ ಕಾರ್ಯ ಯೋಜನೆ ಸಾಸಲು ದೇಶಾದ್ಯಂತ ದಲಿತ ಯುವಕರನ್ನೇ ಬಳಸಿಕೊಳ್ಳುತ್ತಿದೆ. ಅವರನ್ನು ಹೇಗೆ ಹೊರ ತರುತ್ತೀರಿ?
ಜಿಗ್ನೇಶ್ ಮೆವಾನಿ: ಜಾಗತೀಕರಣದ ನಿಜಬಣ್ಣ ಬಯಲಾಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ. ಬಲಪಂಥೀಯರು, ್ಯಾಶಿಸ್ಟ್ ಶಕ್ತಿಗಳು ಯಾವತ್ತಿಗೂ ಬಂಡವಾಳಶಾಹಿಗಳನ್ನೆ ಬೆಂಬಲಿಸುತ್ತ ಬಂದಿದ್ದಾರೆ. ಬಡವರು ಮತ್ತಷ್ಟು ಬಡವರಾಗಿರುವುದು ಮತ್ತು ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿರುವುದು ಈವರೆಗೆ ನಾವು ನೋಡಿರುವಂತೆ ಜಾಗತೀಕರಣದ ಲಿತಾಂಶ. ಸಂಘ ಪರಿವಾರ ಈ ಬಂಡವಾಳಷಾಹಿಗಳನ್ನು ಬೆಂಬಲಿಸುತ್ತ, ಆರ್ಥಿಕವಾಗಿಯೂ ಹಿಂದುಳಿದ ದಲಿತ ಮತ್ತಿತರ ತಳಸಮುದಾಯಗಳನ್ನು ಅದೇ ಸ್ಥಿತಿಯಲ್ಲಿಡುವ ಸಂಚು ಹಿಂದಿನಿಂದಲೂ ನಡೆಸುತ್ತ ಬಂದಿದೆ. ಮತ್ತು ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಾವು ಅದರ ಈ ಹುನ್ನಾರವನ್ನು ಬಯಲು ಮಾಡುತ್ತೇವೆ. ನಾವು ಆರ್ಥಿಕ ಸ್ವಾವಲಂಬನೆಗಾಗಿ ನಮ್ಮ ಹಕ್ಕಿನ ಭೂಮಿಯನ್ನು ಕೇಳುವಾಗ ಅವರು ತೋರುವ ಪ್ರತಿಕ್ರಿಯೆಯೇ ಅವರ ಸಂಚನ್ನು ಅನಾವರಣಗೊಳಿಸುತ್ತದೆ. ದಲಿತ ಸಮುದಾಯವನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸುವ ಕೆಲಸ ಈಗಾಗಲೇ ಶುರುವಾಗಿದೆ. ನಮ್ಮ ಸಮುದಾಯ ಒಮ್ಮೆ ಎಚ್ಚೆತ್ತು ಹೋರಾಟಕ್ಕೆ ಇಳಿದರೆ, ನಂತರ ಯಾವ ಶಕ್ತಿಗಳೂ ನಮ್ಮನ್ನು ತಡೆಯಲರಾವು.

 ಎಡ ಪಕ್ಷಗಳಿಂದ ದಲಿತ ಹೋರಾಟಗಳು ದಾರಿ ತಪ್ಪಿದವು ಎಂಬ ಆರೋಪದ ಬಗ್ಗೆ ನಿಮ್ಮ ಅನಿಸಿಕೆ ?
 ಜಿಗ್ನೇಶ್ ಮೆವಾನಿ: ಎಡಪಕ್ಷಗಳ ಕೆಲವು ಆದ್ಯತೆಗಳ ಬಗ್ಗೆ ನಮಗೆ ವಿರೋಧವಿದೆ. ಹಾಗೆಂದ ಮಾತ್ರಕ್ಕೆ ಅವು ದಲಿತ ಹೋರಾಟಗಳ ಹಾದಿ ತಪ್ಪಿಸುತ್ತಿದೆ ಎಂದು ಹೇಳಲಾಗದು. ಅವರು ವರ್ಗ ಹೋರಾಟವನ್ನು ಮಹತ್ವದ್ದೆಂದು ಭಾವಿಸುತ್ತಾರೆ. ಭಾರತೀಯ ಸಂದರ್ಭದಲ್ಲಿ ಜಾತಿ ಎನ್ನುವುದು ವರ್ಗಕ್ಕಿಂತಲೂ ಹೆಚ್ಚು ಗಮನ ಹರಿಸಬೇಕಾದ ಸಂಗತಿ ಎಂದು ನಾವು ಬಾವಿಸುತ್ತೇವೆ. ಇತ್ತೀಚೆಗೆ ಎಡಪಕ್ಷಗಳು ‘ನೀಲ್ ಸಲಾಮ್ ಲಾಲ್ ಸಲಾಮ್’ ಘೋಷಣೆಯೊಂದಿಗೆ ತಮ್ಮ ಹೋರಾಟದಲ್ಲಿ ದಲಿತರ ಸಮಸ್ಯೆಗಳಿಗೂ ಸಮಾನ ಮಹತ್ವ ನೀಡಲು ಆರಂಭಿಸಿವೆ. ಪರಸ್ಪರ ವಿಶ್ ಮಾಡುವಾಗ ‘ಜೈ ಭೀಮ್ ಕಾಮ್ರೇಡ್’ ಅನ್ನುವ ಸಂಬೋಧನೆ ಬಳಕೆಯಾಗುತ್ತಿದೆ. ನಾವು ಇದನ್ನು ಸ್ವಾಗತಿಸಬೇಕು. ಈ ಮೊದಲು ಅವರು ಇದನ್ನು ಮಾಡುತ್ತಿರಲಿಲ್ಲ ಎನ್ನುವ ಆಕ್ಷೇಪವೇ ಐಕ್ಯ ಹೋರಾಟಕ್ಕೆ ತೊಡಕಾಗಬಾರದು. ಅವರು ಹಿಂದೆ ಮಾಡಿರಲಿಲ್ಲ ಅಂದರೆ ಮುಂದೆ ಯಾವತ್ತಿಗೂ ಅದನ್ನು ಮಾಡಲೇಬಾರದು ಎಂದರ್ಥವಲ್ಲ. ಕೆಲವು ದಲಿತ ಸಂಘಟನೆಗಳು ಎಡಪಂಥೀಯರ ವಿರುದ್ಧ ಕಟುವಾಗಿ ಮಾತನಾಡುತ್ತ ಅಂತರ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಎಡಪಂಥೀಯರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಮಾಣಿಕ ಚಿಂತನೆಯ ಹೋರಾಟಗಾರರಿದ್ದಾರೆ. ಅವರು ದಲಿತ ಸಂಘರ್ಷವನ್ನು ಯಾವ ಒಳ ಉದ್ದೇಶವೂ ಇಲ್ಲದೆ ತಮ್ಮ ಸಂಘರ್ಷದ ಭಾಗವಾಗಿಸಿಕೊಳ್ಳುತ್ತ್ತಿದ್ದಾರೆ. ಎಡ ಪಂಥೀಯ ಹೋರಾಟಗಾರರಲ್ಲಿ ನನ್ನದೊಂದು ವಿನಂತಿಯಿದೆ. ಸದ್ಯಕ್ಕೆ ಐಕ್ಯ ಹೋರಾಟದಲ್ಲಿ ಒಳಗೊಳ್ಳದೆ ಅಂತರ ಕಾಯ್ದುಕೊಂಡಿರುವ ದಲಿತರಿಂದಾಗಿ ಅವರು ಹಿಂದೆ ಸರಿಯುವುದು ಬೇಡ. ಕಾಲದೊಂದಿಗೆ ಬದಲಾವಣೆ ಉಂಟಾಗಿ ಎಲ್ಲರೂ ಒಳಗೊಂಡು ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುವ ದಿನಗಳು ಬಂದೇಬರುತ್ತವೆ. ಹಾಗೆಯೇ ನನ್ನ ದಲಿತ ಸಹೋದರರಲ್ಲಿಯೂ ವಿನಂತಿಯಿದೆ. ನಾವು ಸಾಧ್ಯವಾದಷ್ಟೂ ಪ್ರಗತಿಪರ ಸಂಘಟನೆಗಳೊಡನೆ, ವ್ಯಕ್ತಿಗಳೊಡನೆ ಸೇರಿಕೊಳ್ಳೋಣ. ನಮ್ಮ ಹೋರಾಟಕ್ಕೆ ಇದು ಮತ್ತಷ್ಟು ಬಲ ನೀಡುವುದು ಖಚಿತ.

  ದಲಿತರು ರಾಜಕೀಯವಾಗಿ ಪ್ರತ್ಯೇಕವಾಗಿ ಸಂಘಟಿತ ರಾಗಬೇಕು ಎನ್ನೋದರ ಕುರಿತಂತೆ ನಿಮ್ಮ ಅನಿಸಿಕೆ? ಬಿಎಸ್ಪಿ ದಲಿತ ಆಶಯಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಅನ್ನಿಸುತ್ತದೆಯೇ?

ಜಿಗ್ನೇಶ್ ಮೆವಾನಿ: ದಲಿತರಿಗೆ ಪ್ರತ್ಯೇಕ ರಾಜಕೀಯ ಗುರುತು ಬೇಕು ಅನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅದಕ್ಕಿಂತ ಮುಂಚೆ ಆಗಬೇಕಾದ್ದು ಬಹಳವಿದೆ. ಮೊದಲು ದಲಿತರು ಸಂಘಟಿತರಾಗಬೇಕು. ಆರ್ಥಿಕ ಸ್ವಾವಲಂಬನೆ ಸಾಸಿಕೊಳ್ಳಬೇಕು. ಇಡಿಯ ಸಮುದಾಯ ಸುಶಿಕ್ಷಿತವಾಗಬೇಕು. ಅದಕ್ಕಾಗಿಯೇ ಈ ಭೂಹೋರಾಟ. ಈ ಮೂಲಭೂತ ಸಂಗತಿಗಳಿಗೇ ನಾವು ಬಹಳಷ್ಟು ಹೋರಾಟ ನಡೆಸಬೇಕಿದೆ. ಇದು ಸಾಧ್ಯವಾಗದ ಹೊರತು ನೇರವಾಗಿ ರಾಜಕೀಯಕ್ಕೆ ಇಳಿದರೆ, ಅದರ ಲಾಭ ಕೆಲವು ವ್ಯಕ್ತಿಗಳಿಗೆ ಆಗುತ್ತದೆಯೇ ಹೊರತು, ಇಡಿಯ ಸಮುದಾಯಕ್ಕಲ್ಲ. ಸಾಮುದಾಯಿಕವಾಗಿ ಚಿಂತಿಸಬಲ್ಲ ನಾಯಕ ನಮ್ಮಿಳಗಿಂದ ಹೊರಹೊಮ್ಮಿದ ನಂತರವಷ್ಟೆ ಅದರ ಬಗ್ಗೆ ಯೋಚನೆ. ಸದ್ಯಕ್ಕೆ ನಮ್ಮ ಗಮನವೆಲ್ಲ ಹೋರಾಟದತ್ತ. ಬಿಎಸ್ಪಿ ಕುರಿತು? ಅಥವಾ ಯಾವುದೇ ರಾಜಕೀಯ ಪಕ್ಷದ ಕುರಿತು ನಾನು ಮಾತನಾಡಲು ಬಯಸುವುದಿಲ್ಲ. ್ಯಾಶಿಸ್ಟರ ಹೊರತಾಗಿ ನಮ್ಮ ಹೋರಾಟಕ್ಕೆ ಎಲ್ಲರ ಬೆಂಬಲವೂ ಬೇಕು.

 ಬಿಜೆಪಿ ಸರಕಾರದೊಳಗೆ ಇರುವ ದಲಿತ ಮುಖಂಡರು ದಲಿತರ ಹಿತಾಸಕ್ತಿಗೆ ಪೂರಕವಾಗಿಲ್ಲವೇ?
 ಜಿಗ್ನೇಶ್ ಮೆವಾನಿ: ಬಿಜೆಪಿ ಜೊತೆ ಯಾವುದೇ ಸಂಬಂಧ ಹೊಂದಿರುವ ದಲಿತ ಮುಖಂಡರು ನಮ್ಮ ಹೋರಾಟದ ಭಾಗವಾಗಿಲ್ಲ. ಅವರನ್ನು ನಾವು ಒಳಗೊಳಿಸಿಕೊಳ್ಳುವುದೂ ಇಲ್ಲ. ನಮ್ಮ ಹೋರಾಟ ಸ್ಪಷ್ಟವಾಗಿ ್ಯಾಶಿಸ್ಟ್ ಶಕ್ತಿಗಳ ವಿರುದ್ಧ. ಆ ಶಕ್ತಿಯೊಂದಿಗೆ ಕೈಜೋಡಿಸಿರುವ ದಲಿತ ಮುಖಂಡರಿಂದ ನಮಗೆ ಯಾವ ಸಹಾಯವೂ ಇಲ್ಲ.

ಮೀಸಲಾತಿಯಲ್ಲಿ ಬದಲಾವಣೆಗಳು ಆಗಬೇಕು ಮುಖ್ಯವಾಗಿ ಒಳ ಮೀಸಲಾತಿ ಜಾರಿಗೆ ಬರಬೇಕು ಎನ್ನುವ ಕೂಗಿನ ಕುರಿತು ನಿಮ್ಮ ಅನಿಸಿಕೆ ಏನು ?
 ಜಿಗ್ನೇಶ್ ಮೆವಾನಿ: ಮೀಸಲಾತಿ ಖಂಡಿತ ಬೇಕು. ಮೊದಲು ಜಾತಿಪದ್ಧತಿ ನಿರ್ಮೂಲ ವಾಗಬೇಕು. ಅದು ನಮ್ಮ ಹೋರಾಟದ ಮೊದಲ ಆದ್ಯತೆ. ಈವರೆಗೆ ನಡೆಸಲಾದ ದಬ್ಬಾಳಿಕೆಯಿಂದ ನಮ್ಮ ಸಮುದಾಯ ಸಾಕಷ್ಟು ಹಿಂದುಳಿದಿದೆ. ಈ ಅನ್ಯಾಯ ಸರಿದೂಗಿಸಿ ಸಮಾನತೆ ತರಲು ಮೀಸಲಾತಿ, ಒಳ ಮೀಸಲಾತಿಗಳೂ ಅಗತ್ಯವಾಗಿ ಬೇಕೇಬೇಕು.

 ದಲಿತರಲ್ಲಿ ಹೊಸ ತಲೆಮಾರುಗಳನ್ನು ಸಂಘಟಿಸುವ ಕುರಿತಂತೆ ನಿಮ್ಮ ಯೋಜನೆಗಳು ಏನು ?
ಜಿಗ್ನೇಶ್ ಮೆವಾನಿ: ಹೊಸ ತಲೆಮಾರುಗಳು ಹೊಸರೀತಿಯಲ್ಲಿ ಸಂಘಟಿತವಾಗುತ್ತಿವೆ. ನಮ್ಮ ಸಮುದಾಯಕ್ಕೆ ಏನು ಬೇಕು ಎನ್ನುವುದು ನಮಗೆ ಸ್ಪಷ್ಟವಾಗಿ ತಿಳಿದಿದೆ. ಅದು ಈಡೇರದ ಹೊರತು ನಾವು ಮತ್ತೇನನ್ನೂ ಒಪ್ಪಲಾರೆವು. ದಲಿತರು ಮತ್ತು ದಲಿತಪರ ಮನಸ್ಸುಗಳು ದೇಶಾದ್ಯಂತ ಜಾಗೃತವಾಗಿ ಚಟುವಟಿಕೆಗಳನ್ನು ನಡೆಸುತ್ತಿವೆ. ಸಂಘಟನೆ ತಾನಾಗಿಯೇ ಘಟಿಸುತ್ತಿದೆ.

ದಲಿತರು ಆತ್ಮಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಇರುವ ದೊಡ್ಡ ತೊಡಕು ಯಾವುದು?
 ಜಿಗ್ನೇಶ್ ಮೆವಾನಿ: ಆರ್ಥಿಕವಾಗಿ ಹಿಂದುಳಿದಿರುವುದು. ಮತ್ತು ಇದಕ್ಕೆ ಕಾರಣ ಉದ್ಯೋಗಾವಕಾಶಗಳ ಕೊರತೆ ಹಾಗೂ ಶಿಕ್ಷಣದ ಕೊರತೆ. ಇನ್ಯಾವ ಸಮುದಾಯವೂ ಮಾಡದೆ ಇರುವ ಕೆಲಸವನ್ನು ದಲಿತ ಸಮುದಾಯದ ತಲೆಗೆ ಕಟ್ಟಿ, ಅದನ್ನು ಅಷ್ಟಕ್ಕೇ ಸೀಮಿತಗೊಳಿಸುವ ಯತ್ನ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ನಾವು ಇದನ್ನು ತಿರಸ್ಕರಿಸಿದರಷ್ಟೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)