ಹಾಜಿ ಎ.ಎನ್. ಇಬ್ರಾಹೀಂ
ಮಂಗಳೂರು, ಅ.12: ದೇರಳಕಟ್ಟೆ ಸಮೀಪದ ನಾಟೆಕಲ್ ನಿವಾಸಿ ಎ.ಎನ್. ಇಬ್ರಾಹೀಂ ಹಾಜಿ ಗರಡಿ ಇಂದು ಬೆಳಗ್ಗೆ 10:15ಕ್ಕೆ ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು.
ಇವರಿಗೆ 80 ವರ್ಷ ವಯಸ್ಸಾಗಿತ್ತು. ಮೂಲತಃ ಅಡ್ಡೂರು ನಿವಾಸಿಯಾಗಿದ್ದ ಇವರು ಪ್ರಸ್ತುತ ನಾಟೆಕಲ್ನಲ್ಲಿ ವಾಸವಾಗಿದ್ದರು. 30 ವರ್ಷಗಳ ಕಾಲ ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎ.ಎನ್.ಇಬ್ರಾಹೀಂ ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಮೃತರು ಐವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story