ಆಹಾರದ ಧರ್ಮಕಾರಣ
ವರ್ತಮಾನದಲ್ಲಿ ಭಾರತ ದೇಶ ಬ್ರೆಝಿಲ್ ಮತ್ತು ಆಸ್ಟ್ರೇಲಿಯಗಳನ್ನೂ ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಗೋಮಾಂಸದ ರ್ತು ಮಾಡುತ್ತಿದೆ. ಭಾರತದಿಂದ ಪ್ರತಿವರ್ಷ ಸುಮಾರು ಒಂದು ಮಿಲಿಯನ್ ಟನ್ ಮಾಂಸ ರ್ತಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಒಂದಲ್ಲಾ ಒಂದು ರೂಪದಲ್ಲಿ ದನಗಳ ಕಟಾವಿಗೆ ನಿಷೇಧ ಮತ್ತು ಗೋಮಾಂಸ ಸೇವನೆಗೆ ಭಾಗಶಃ ಕಾನೂನು ತೊಡಕುಗಳಿರುವ ನಮ್ಮ ದೇಶದಲ್ಲಿ ನಮ್ಮ ಗೋವುಗಳ ಮಾಂಸವನ್ನು ಬೇರೆ ದೇಶಕ್ಕೆ ಸಾಗಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ.
ಈ ಬಾರಿ ಅಲಿಗಡದಲ್ಲಿ ನಾಗರಪಂಚಮಿ ಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವ್ಯಕ್ತಿಯೊಬ್ಬರ ಪಟಕ್ಕೆ ಹಾಲೆರೆದು, ತಾವು ನಂಬಿಕೊಂಡ ಈ ದೈವವೇ ತಮ್ಮನ್ನು ಹಾವಾಗಿ ಕಚ್ಚಿದೆಯೆಂದು ಆರೋಪಿಸಿ ಹಿಂದೂ ಸಭಾದವರು ನಾಗರಪಂಚಮಿ ಆಚರಿಸಿದರು. ಈ ಪಟದಲ್ಲಿದ್ದವರು ಸಾಮಾನ್ಯ ವ್ಯಕ್ತಿಯಲ್ಲ. ಅನೇಕರು ಪ್ರತ್ಯಕ್ಷವಾಗಿ ಆರಾಸುವ ನರೇಂದ್ರ ಮೋದಿಯವರು. ಹಾಗೆಯೇ, ಮೂರು ದಿನಗಳಲ್ಲಿ ಸಾರ್ವಜನಿಕ ಕ್ಷಮಾಪಣೆ ಕೇಳದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಗೋವರ್ಧನ ಪೀಠದ ಶಂಕರಾಚಾರ್ಯರು ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ, ಮೋದಿಯವರ ತವರು ರಾಜ್ಯ ಗುಜರಾತಿನಲ್ಲಿ ದಲಿತರು ಒಗ್ಗಟ್ಟಾಗಿ ನಿಮ್ಮ ದನಗಳ ಬಾಲಗಳನ್ನು ನೀವೇ ಇಟ್ಟುಕೊಳ್ಳಿ; ನಮಗೆ ನಮ್ಮ ಜಮೀನುಗಳನ್ನು ತಿರುಗಿ ಕೊಡಿ ಎಂದು ಘೋಷಿಸಿದ್ದಾರೆ.
ಒಟ್ಟಿನಲ್ಲಿ, ಆಹಾರದ ಧರ್ಮಕಾರಣ ವಿಚಿತ್ರವಾದ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ವಾಸ್ತವವಾಗಿ ಜಾನುವಾರುಗಳ ವಿಚಾರ ಹಿಂದೂ ಮತ್ತು ಮುಸ್ಲಿಂ ನೆಲೆಯಲ್ಲಿ ಚರ್ಚೆಯಾಗ ಬೇಕಾಗಿರುವ ವಿಷಯವಲ್ಲ. ಅದು ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಸಿದ ವಿಚಾರ. ಜಾನುವಾರುಗಳ ಒಡೆಯ ರೈತ. ಆತ/ಆಕೆ ಯಾವುದೇ ಧರ್ಮ ಅಥವಾ ಜಾತಿಗೆ ಸೇರಿರಬಹುದು. ಜಾನುವಾರುಗಳ ಬಗ್ಗೆ ಮಾತನಾಡಲು ನಿಜವಾಗಿ ಹಕ್ಕಿರುವುದು ರೈತರಿಗೆ ಮಾತ್ರ. ಇದನ್ನೇ ನಮ್ಮ ಸಂವಿಧಾನದ ಮಾರ್ಗದರ್ಶಿ ಸೂತ್ರಗಳಲ್ಲಿ ಒಂದಾದ 48ನೆ ಅನುಚ್ಛೇದದಲ್ಲಿ ಹೇಳಿರುವುದು. ಕೃಷಿ ಮತ್ತು ಪಶುಸಂಗೋಪನೆಯನ್ನು ಕ್ರಮಬದ್ಧ ವೈಜ್ಞಾನಿಕ ಪರಿಕರಗಳ ಸಹಾಯದೊಂದಿಗೆ ಸಂಯೋಜನೆ ಮಾಡಬೇಕಾದ ಕ್ರಮಗಳ ಒಂದು ಭಾಗವಾಗಿ ಜಾನುವಾರುಗಳ ತಳಿಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕಿದೆ ಮತ್ತು ಅದರ ಒಂದು ಭಾಗವಾಗಿಯೇ ಹಾಲು ಕೊಡುವ ಹಸು ಮತ್ತದರ ಕರುಗಳು (ಜೊತೆಗೆ ಕರಡು ಜಾನುವಾರುಗಳನ್ನು) ಕಡಿಯುವುದನ್ನು ನಿಷೇಸಲು ಪ್ರಭುತ್ವ ಮುಂದಾಗಬೇಕಿದೆ ಎಂಬ ಆಶಯವನ್ನು ಇಲ್ಲಿ ವ್ಯಕ್ತಪಡಿಸಲಾಗಿದೆ. ಸಂವಿಧಾನದಲ್ಲಿ ಪಶುಸಂಗೋಪನೆಯನ್ನು ಯಾವುದೇ ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಗಿಲ್ಲ. ಆದ್ದರಿಂದ, ಈ ವಿಚಾರವನ್ನು ಸಂವಿಧಾನಾತ್ಮಕ ದೃಷ್ಟಿಕೋನದಲ್ಲೇ ಚರ್ಚೆಗೊಳಪಡಿಸಬೇಕಿದೆ.
ಮೂಲ ಇತಿಹಾಸ
ಇತಿಹಾಸದುದ್ದಕ್ಕೂ ಗೋವಿನ ಹೆಸರಿನ ರಾಜಕಾರಣ ವಿಚಿತ್ರ ತಿರುವುಗಳನ್ನು ಪಡೆದಿದೆ. ಗೋಮಾಂಸದ ಕುರಿತು ಅನೇಕ ವಿಚಾರಗಳನ್ನು ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಆಕರಗಳನ್ನು ಆಧಾರಿಸಿ ತಾರ್ಕಿಕವಾಗಿ ಮೊಟ್ಟ ಮೊದಲ ಬಾರಿಗೆ ಬಿಡಿಸಿಟ್ಟರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್.
Untouchables: Who Were They and Why They Became Untouchables? ಎಂಬ ತಮ್ಮ ಪ್ರಸಿದ್ಧ ಪುಸ್ತಕದಲ್ಲಿ
ಹೀಗೆ ಹೇಳಿದ್ದಾರೆ:"The non-Brahmins have evidently undergone a revolution. From being beef-eaters to have become non-beef-eaters was indeed a revolution. But if the non-Brahmins underwent one revolution, the Brahmins had undergone two. They gave up beef-eating which was one revolution. To have given up meat-eating altogether and become vegetarians was another revolution.
That this was a revolution is beyond question. For as has been shown in the previous chapters there was a time when the Brahmins were the greatest beef-eaters. Although the non-Brahmins did eat beef they could not have had it every day. The cow was a costly animal and the non-Brahmins could ill afford to slaughter it just for food. ""
ಬೇರೆಯವರು ಯಾವಾಗಲೋ ಒಮ್ಮೆ ಗೋಮಾಂಸ ಸೇವಿಸುತ್ತಿದ್ದರೆ, ಬ್ರಾಹ್ಮಣರು ದಿನವೂ ಗೋಮಾಂಸ ಸೇವಿಸುತ್ತಿದ್ದರು. ಅಷ್ಟೇ ಅಲ್ಲ ಗೋಮಾಂಸ ಸೇವನೆಯನ್ನು ಪವಿತ್ರವೆಂದು ಪರಿಗಣಿಸಿದ್ದರು. ನಂತರದಲ್ಲಿ ಬೌದ್ಧ ಧಮ್ಮ ಬಂದ ನಂತರದಲ್ಲಿ ತಮ್ಮ ಶ್ರೇಷ್ಠತೆಯನ್ನು ಸಾಸಲು ಬ್ರಾಹ್ಮಣರು ಗೋಮಾಂಸವನ್ನು ಮಾತ್ರವಲ್ಲ ಸಂಪೂರ್ಣ ಮಾಂಸಾಹಾರವನ್ನೇ ತ್ಯಜಿಸಿ ಎರಡು ಕ್ರಾಂತಿಗಳನ್ನು ಒಟ್ಟಿಗೇ ಸಾಸಿದರು. ಶೂದ್ರರು ಕೇವಲ ಗೋಮಾಂಸವನ್ನು ತ್ಯಜಿಸಿದರೆ, ಬೌದ್ಧರು ಇತರ ಮೂಲನಿವಾಸಿಗಳು ತಮ್ಮ ಮೂಲ ಆಹಾರ ಪದ್ಧತಿಯನ್ನುಳಿಸಿಕೊಂಡು ಅಸ್ಪೃಶ್ಯರೆನಿಸಿಕೊಂಡರು. ಹೀಗೆ ಅಸ್ಪೃಶ್ಯತೆಗೂ ಗೋಮಾಂಸಕ್ಕೂ ಇರುವ ನಂಟನ್ನು ಬಾಬಾ ಸಾಹೇಬರು ಬಿಡಿಸಿಟ್ಟಿದ್ದಾರೆ. ಒಂದು ಕಾಲಕ್ಕೆ ಗೋಮಾಂಸವನ್ನು ಸೇವಿಸುತ್ತಿದ್ದ ಬ್ರಾಹ್ಮಣರು ಬುದ್ಧನ ಕಾಲದಲ್ಲಿ ಮಾಂಸಾಹಾರವನ್ನೇ ತ್ಯಜಿಸಿದರು ಮತ್ತು ಹೇಗೆ ಶೂದ್ರರು ಕೇವಲ ಗೋಮಾಂಸವನ್ನು ತ್ಯಜಿಸಿ ಬೇರೆ ಪ್ರಾಣಿಗಳ ಮಾಂಸವನ್ನು ಮಾತ್ರ ತ್ಯಜಿಸಿದರು ಎಂದು ಸವಿಸ್ತಾರವಾಗಿ ವಿವರಿಸಿದ್ದಾರೆ.
ಬೌದ್ಧ ಧಮ್ಮದ ಅವನತಿಯ ನಂತರದಲ್ಲಿ ಭಾರತದ ನೈಜ ಇತಿಹಾಸವೇ ಮರೆಯಾಗಿ ಹೋಯಿತು. ಅದರೊಂದಿಗೆ ಈ ಸತ್ಯಗಳೂ ಹೂತು ಹೋದವು. ಅನೇಕ ಶತಮಾನಗಳ ಕಾಲ ಹಿಂದೂಗಳು ತಮಗೆ ಗೋಮಾಂಸ ಹೇಗೆ ವರ್ಜ್ಯವಾಯಿತು ಎಂಬುದನ್ನು ಮರೆತು ಹೋದರು.
ಗೋವು ಮತ್ತು ಸ್ವರಾಜ್ಯ ಚಳವಳಿ
ಬ್ರಿಟಿಷರ ಕಾಲಕ್ಕೆ ಈ ವಿವಾದ ಮತ್ತೆ ತಲೆಯೆತ್ತಿತು. 1880 ರ ದಶಕದಲ್ಲಿ ಆರ್ಯಸಮಾಜದವರು ಗೋರಕ್ಷಣೆಯ ಅಜೆಂಡಾ ಕೈಗೆತ್ತಿಕೊಂಡರು. ಇದು ಭಾರತದಾದ್ಯಂತ ಹರಡಿತು. ನಿಜಕ್ಕೂ ನೋಡಿದರೆ, ಭಾರತದಲ್ಲಿ ಅಂದು ಸರಬರಾಜಾಗುತ್ತಿದ್ದ ದನದ ಮಾಂಸ ಅತ್ಯಂತ ಹೆಚ್ಚು ಬಳಕೆಯಾಗುತ್ತಿದ್ದು ಬ್ರಿಟಿಷ್ ಸೇನಾಪಡೆಯಲ್ಲಿ. ಆದರೆ, ಬ್ರಿಟಿಷರ ವಿರುದ್ಧ ಚಕಾರವೆತ್ತದೇ, ಈ ಚಳವಳಿಯನ್ನು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ತಿರುಗಿಸಲಾಯಿತು. ಇದನ್ನೇ ಬಯಸಿದ್ದ ಬ್ರಿಟಿಷರೂ ಧಾರ್ಮಿಕ ಉನ್ಮಾದಕ್ಕೆ ಕುಮ್ಮಕ್ಕು ಕೊಟ್ಟರು. 1887 ರಲ್ಲಿ ಉತ್ತರ ಪ್ರದೇಶದ ಶಹಾಜಹಾನ್ಪುರದಲ್ಲಿ ದನ ಕಡಿದ ದೂರಿನ ಮೇಲೆ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಾಯಿತು.
ಭಾರತ ದಂಡ ಸಂಹಿತೆಯ 295ನೆ ಕಲಂ ಪ್ರಕಾರ ಹಸು ಒಂದು ಪೂಜಾ ವಸ್ತು. ಪೂಜಾ ವಸ್ತುವನ್ನು ಘಾಸಿಗೊಳಿಸಿದ ಕಾರಣ ಹಸುವನ್ನು ಕೊಂದವರನ್ನು ಶಿಕ್ಷಿಸಬೇಕು ಎಂದು ಇದರಲ್ಲಿ ಕೋರಲಾಯಿತು. ಅಲಹಾಬಾದ್ ಉಚ್ಚ ನ್ಯಾಯಾಲಯದ ಐದು ಜನ ನ್ಯಾಯಾೀಶರ ಪೀಠ ದನಗಳನ್ನು ಪೂಜಾ ಸ್ಥಾನಕ್ಕೆ ಹೋಲಿಸುವುದು ಸಾಧ್ಯವಿಲ್ಲವೆಂದು ಹೇಳಿ ಈ ಕೇಸನ್ನು ವಜಾ ಮಾಡಿತು. ನಂತರದಲ್ಲಿ, ಸಂವಿಧಾನ ಸಭೆಯಲ್ಲಿ ಥಾಕುರ್ ದಾಸ್ ಭಾರ್ಗವ, ಸೇಠ್ ಗೋವಿಂದ ದಾಸ್ ಮತ್ತಿತರ ಸದಸ್ಯರು ದನಗಳನ್ನು ಕೊಲ್ಲುವುದನ್ನು ಸಂವಿಧಾನದಲ್ಲಿ ಸಂಪೂರ್ಣವಾಗಿ ನಿಷೇಸಬೇಕು ಎಂದು ಪ್ರಸ್ತಾವನೆಯಿಟ್ಟರು. ನಂತರದಲ್ಲಿ ಬಾಬಾ ಸಾಹೇಬರ ಮಧ್ಯಸ್ಥಿಕೆಯಿಂದಾಗಿ ಸಂಪೂರ್ಣ ನಿಷೇಧದ ಬದಲು ಗೋವಿನ ತಳಿ ಅಭಿವೃದ್ಧಿ ಮತ್ತು ರಕ್ಷಣೆಯನ್ನು ಕಡ್ಡಾಯವಲ್ಲದ ಮಾರ್ಗದರ್ಶಿ ಸೂತ್ರಗಳಲ್ಲಿ ಸೇರಿಸಲಾಯಿತು.
ದುರ್ದೈವವೆಂದರೆ, ನೂರಾರು ವರ್ಷಗಳಿಂದ, ಪಶುಗಳಲ್ಲೂ ಧರ್ಮಭೇದದ ರಾಜಕಾರಣವನ್ನು ಮಾಡಲಾಗುತ್ತಿದೆ. ಶತಮಾನಗಳಿಂದ ಊಟದ ತಟ್ಟೆಯಲ್ಲಿ ಧರ್ಮಕಾರಣವನ್ನು ಬೆರೆಸಲಾಗುತ್ತಿದೆ. ಹಾಗೆ ನೋಡಿದರೆ ನಮ್ಮ ದೇಶದ ಸ್ವರಾಜ್ಯ ಚಳುವಳಿಯ ಬೆನ್ನೆಲುಬಾಗಿದ್ದದ್ದೇ ಗೋವಿನ ವಿಚಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸುವ ಅನೇಕ ದಶಗಳ ಮೊದಲೇ, ಸ್ವರಾಜ್ಯ ಚಳವಳಿಯ ನೇತಾರರಾದ ಬಾಲ ಗಂಗಾಧರ ತಿಳಕ, ಲಾಲಾ ಲಾಜಪತ್ ರಾಯ್, ಪಂಡಿತ ಮದನ ಮೋಹನ ಮಾಳವೀಯ, ಪುರುಷೋತ್ತಮ ದಾಸ್ ಟಂಡನ್ ಮತ್ತು ರಾಜೇಂದ್ರ ಪ್ರಸಾದ್ ಮತ್ತಿತರರು ಭಾರತಕ್ಕೆ ಸ್ವರಾಜ್ಯ ಸಿಕ್ಕ ಮರುಕ್ಷಣವೇ ಗೋಹತ್ಯೆಯನ್ನು ನಿಷೇಸಲಾಗುತ್ತದೆ ಎಂದು ಅನೇಕ ಸಾರ್ವಜನಿಕ ಸಭೆೆಗಳಲ್ಲಿ ಘೋಷಿಸಿದ್ದರು. ಗಾಂಯವರು 1917ರಲ್ಲಿ ಮುಝರ್ ನಗರದಲ್ಲಿನ ತಮ್ಮ ಒಂದು ಭಾಷಣದಲ್ಲಿ ‘‘ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಒಂದು ದಿನಕ್ಕೆ 17,000 ಹಸುಗಳನ್ನು ಕೊಲ್ಲುತ್ತಿದ್ದಾರೆ’’ ಎಂದು ಹೇಳಿಕೆ ನೀಡಿ ದ್ದರು. ನಂತರದಲ್ಲಿ, ಡಿಸೆಂಬರ್ 1927ರಲ್ಲಿ ಗಾಂಯವರು ‘‘ಗೋ ರಕ್ಷಣೆಗಾಗಿ ನಾನು ಸ್ವರಾಜ್ಯವನ್ನೂ ತ್ಯಾಗ ಮಾಡಬಲ್ಲೆ. ನನಗೆ ಸ್ವರಾಜ್ಯಕ್ಕಿಂತ ಹಸುಗಳ ರಕ್ಷಣೆಯೇ ಮುಖ್ಯ’’ ಎಂದು ಹೇಳಿಕೆ ನೀಡಿದರು. ಆ ಹೊತ್ತಿಗೆ ಸುಮಾರು ಒಂದು ಲಕ್ಷ ದಷ್ಟಿದ್ದ ಬ್ರಿಟಿಷ್ ಸೈನಿಕರ ಆಹಾರಕ್ಕಾಗಿಯೇ ದನಗಳ ಕಟಾವು ನಡೆಯುತ್ತಿದ್ದರೂ, ಇದರ ನೇರ ಆಪಾದನೆಯನ್ನು ಮುಸಲ್ಮಾನರ ಮೇಲೆ ಹೊರಿಸಲಾಯಿತು. ಬಹುತೇಕ ಸ್ವರಾಜ್ಯ ಚಳವಳಿಯ ನೇತಾರರು ಈ ಸಮಸ್ಯೆಯನ್ನು ಒಂದು ಧಾರ್ಮಿಕ ಸಂಘರ್ಷದ ಹಿನ್ನೆಲೆಯಲ್ಲೇ ನೋಡುತ್ತಾ ಬಂದರು. ಹಾಗೆಯೇ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಒಗ್ಗಟ್ಟು ಸಾಸುವೆಡೆ ಗಮನಹರಿಸಲಿಲ್ಲ.
ಈ ಮಧ್ಯೆ 1925ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಗೋಹತ್ಯೆಯನ್ನು ಅತ್ಯುಗ್ರವಾಗಿ ವಿರೋಸುತ್ತಲೇ, ತನ್ನ ಗಣವೇಷದಲ್ಲಿ, ಚರ್ಮದ ಬೂಟು ಮತ್ತು ಬೆಲ್ಟ್ ಇತ್ಯಾದಿ ಸೇರಿಸಿ, ಚರ್ಮವಾದ್ಯಗಳ ಸಮೇತ ಪ್ರಭಾತೇರಿ ಮಾಡಿ ಗೋವುಗಳನ್ನು ಗೌರವಿಸಿತು. ಮುಸ್ಲಿಂ ಲೀಗ್ ಕೂಡ ಗೋವಿನ ಸಮಸ್ಯೆಯನ್ನು ಒಂದು ಧಾರ್ಮಿಕ ಸಂಘರ್ಷವಾಗಿ ಕೈಗೆತ್ತಿಕೊಂಡಿತು. ಪಾಕಿಸ್ತಾನ ನಿರ್ಮಾಣಕ್ಕೆ ಬೇಕಾದ ಸಮರ್ಥನೆಗಳನ್ನು ಹುಟ್ಟಿಸಲು ಗೋವನ್ನು ಮುಸ್ಲಿಂ ಲೀಗ್ ಬಳಸಿಕೊಂಡಿತು. ನಂತರದ ವರ್ಷಗಳಲ್ಲಿ ಗೋವಿನ ವಿವಾದಗಳಿಂದಾಗಿ ದೇಶದಲ್ಲಿ ನೂರಾರು ಕೋಮುಗಲಬೆಗಳಾದವು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳನ್ನು ಒಗ್ಗೂಡಿಸಲು ಬೇಕಾದ ಪರಿಕರಗಳನ್ನು ಬಳಸದೇ ಮೂಲದಲ್ಲೇ ಒಡಕು ಮೂಡಿಸುವ ಗೋಮಾಂಸದ ವಿಚಾರವನ್ನು ಸಾಕಷ್ಟು ಬಳಸಿಕೊಳ್ಳಲಾಯಿತು. ಇದರಿಂದ ಎಲ್ಲ ಮೂಲಭೂತವಾದಿಗಳಿಗೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಹಾಯವಾಯಿತು. ಗೋವನ್ನು ಸ್ವಾತಂತ್ರ್ಯಕ್ಕಿಂತಲೂ ಪ್ರಮುಖವೆಂದು ಪರಿಗಣಿಸಿದ ಧೋರಣೆಯಿಂದಲೇ ನಂತರದಲ್ಲಿ ದೇಶದ ವಿಭಜನೆಗೆ ದಾರಿ ಸುಗಮವಾಯಿತು. ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಲು, ದೇಶವನ್ನು ಒಡೆಯಲು, ಗೋವನ್ನು ರಾಜಕೀಯದ ಅಸವಾಗಿ ಪ್ರಯೋಗಿಸಲಾಯಿತು.
ಅಕ್ಕಿ ಮತ್ತು ನೆಂಟರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1940ರಲ್ಲಿ ಗೋಹತ್ಯೆ ನಿಷೇಧದ ಕುರಿತು ಒಂದು ವಿಶೇಷ ಸಮಿತಿಯನ್ನು ರಚಿಸಿತು. ಈ ಸಮಿತಿಯು ಒಂದು ಕಡೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರ್ಮಾನು ಹೊರಡಿಸಿದರೆ, ಇನ್ನೊಂದೆಡೆ ಇದೇ ಸಮಯದಲ್ಲಿ ರಚಿತವಾದ ಇನ್ನೊಂದು ಕಾಂಗ್ರೆಸ್ ಸಮಿತಿಯು ಗೋಹತ್ಯೆಯನ್ನು ಯಾವ ಕಾರಣಕ್ಕೂ ನಿಷೇಧ ಮಾಡಬಾರದು ಎಂದು ಶಿಾರಸು ನೀಡಿತು. ಈ ಸಮಿತಿ ಕೊಟ್ಟ ಕಾರಣವೆಂದರೆ, ಸತ್ತ ಪ್ರಾಣಿಗಳ ಚರ್ಮಕ್ಕಿಂತ, ವಧಾಗೃಹಗಳಲ್ಲಿ ಕೊಲ್ಲಲ್ಪಟ್ಟ ದನಗಳ ಚರ್ಮದಿಂದ ತಯಾರಿಸಿದ ಉತ್ಪನ್ನಗಳು ಅತ್ಯಂತ ವಿದೇಶಿ ವಿನಿಮಯ ನೀಡುತ್ತವೆ ಎಂಬುದಾಗಿತ್ತು, 1950 ರಲ್ಲಿ ‘ಸ್ವರಾಜ್ಯ’ ಭಾರತದ ಕಾಂಗ್ರೆಸ್ ಸರಕಾರವೇ ನೇಮಿಸಿದ ಒಂದು ಸಮಿತಿಯು ಇದೇ ರೀತಿಯ ಶಿಾರಸುಗಳನ್ನು ನೀಡಿತು. ಆದ್ದರಿಂದಲೇ, ಕೇಂದ್ರ ಸರಕಾರವು ಒಂದು ಆದೇಶವನ್ನು ಹೊರಡಿಸಿ ಸತ್ತ ದನಗಳ ಚರ್ಮಕ್ಕಿಂತ ವಧಾಗೃಹದಿಂದ ಸಿಗುವ ಚರ್ಮದಿಂದಲೇ ಅತ್ಯುತ್ತಮ ಚರ್ಮೋತ್ಪನ್ನಗಳು ನಿರ್ಮಾಣವಾಗಿ, ವಿದೇಶಿ ವಿನಿಮಯ ಹೆಚ್ಚುತ್ತದೆ ಎಂದು ಘೋಷಿಸಿತು. ಇದೇ ಇಬ್ಬಂದಿತನವನ್ನು ನಾವು ಈಗಿನ ಸರಕಾರಗಳ ಧೋರಣೆಯಲ್ಲಿಯೂ ಕಾಣಬಹುದು
ವರ್ತಮಾನದಲ್ಲಿ ಭಾರತ ದೇಶ ಬ್ರೆಝಿಲ್ ಮತ್ತು ಆಸ್ಟ್ರೇಲಿಯ ಗಳನ್ನೂ ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಗೋಮಾಂಸದ ರ್ತು ಮಾಡುತ್ತಿದೆ. ಭಾರತದಿಂದ ಪ್ರತಿವರ್ಷ ಸುಮಾರು ಒಂದು ಮಿಲಿಯನ್ ಟನ್ ಮಾಂಸ ರ್ತಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಒಂದಲ್ಲಾ ಒಂದು ರೂಪದಲ್ಲಿ ದನಗಳ ಕಟಾವಿಗೆ ನಿಷೇಧ ಮತ್ತು ಗೋಮಾಂಸ ಸೇವನೆಗೆ ಭಾಗಶಃ ಕಾನೂನು ತೊಡಕುಗಳಿರುವ ನಮ್ಮ ದೇಶದಲ್ಲಿ ನಮ್ಮ ಗೋವುಗಳ ಮಾಂಸವನ್ನು ಬೇರೆ ದೇಶಕ್ಕೆ ಸಾಗಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ.
ಗೋಮಾಂಸ, ಕಾನೂನು ಮತ್ತು ನ್ಯಾಯಾಲಯ
1950ರ ದಶಕದ ಮಧ್ಯದಲ್ಲಿ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸರಕಾರಗಳು ದನಗಳ ಕಟಾವನ್ನು ಸಂಪೂರ್ಣ ನಿಷೇಧ ಮಾಡಿ ಕಾನೂನನ್ನು ಜಾರಿಗೊಳಿಸಿದವು. ಈ ಕಾನೂನು ಗಳನ್ನು ಪ್ರಶ್ನೆಮಾಡಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟಿನ ಸಂವಿದಾನ ಪೀಠ 1958 ರಲ್ಲಿ ಮುಹಮ್ಮದ್ ಹನ್ೀ ಖುರೇಷಿ ಪ್ರಕರಣದಲ್ಲಿ (ಅಐ್ಕ 1958 ಖಇ 731) ಒಂದು ಮಹತ್ವದ ತೀರ್ಪನ್ನಿತ್ತಿತು. ಹಾಗೆಯೇ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಡ ಜನತೆ ಹಾಲು ತುಪ್ಪ, ಹಣ್ಣು - ಹಂಪಲು ಇತ್ಯಾದಿ ತಿನ್ನಲಾಗದ ಪರಿಸ್ಥಿತಿಯಿರುವಾಗ ಮತ್ತು ಬೇರೆ ಪ್ರಾಣಿಗಳ ಮಾಂಸಕ್ಕಿಂತ ಅರ್ಧ ಬೆಲೆಗೆ ದನದ ಮಾಂಸ ಲಭ್ಯವಿರುವಾಗ, ಅವುಗಳನ್ನು ಆಹಾರಕ್ಕಾಗಿ ಉಪಯೋಗಿಸದೇ ನಿರ್ಬಂಧ ಹೇರುವುದು ಅಸಾಧು ಎಂದಿತ್ತು. ಹಾಲು ಉತ್ಪಾದನೆ ಮತ್ತು ಕೃಷಿಯ ಅಭಿವೃದ್ಧಿಗೆ ಹಾಲು ಕೊಡುವ ಪಶುಗಳನ್ನು ಸಂರಕ್ಷಿಸುವುದು ಎಷ್ಟು ಮುಖ್ಯವೋ, ಅನುತ್ಪಾದಕ ಪಶುಗಳನ್ನು ಆಹಾರಕ್ಕಾಗಿ ಉಪಯೋಗಿಸುವುದೂ ಅಷ್ಟೇ ಮುಖ್ಯ ಎಂದ ಸುಪ್ರೀಂಕೋರ್ಟ್, ಸಂಪೂರ್ಣ ನಿಷೇಧ ಹೇರಿದ ಕಲಂಗಳನ್ನು ಅಸಂವಿಧಾನಾತ್ಮಕ ಎಂದು ಘೋಷಿಸಿತು. ಹಾಗೆಯೇ, ಓರ್ವ ವ್ಯಕ್ತಿಯ ಆಹಾರದ ಹಕ್ಕು ಸಂವಿಧಾನದ ಪರಿಚ್ಛೇದ 19ರ ಪ್ರಕಾರ ಮೂಲಭೂತ ಹಕ್ಕು ಎಂದು ಘೋಷಿಸಿತು. ಕರ್ನಾಟಕದಲ್ಲಿ 28 ಆಗಸ್ಟ್ 1964 ರಂದು ಗೋ ಹತ್ಯಾ ನಿಷೇಧ ಮತ್ತು ಜಾನುವಾರುಗಳ ಸಂರಕ್ಷಣಾ ಕಾಯ್ದೆ ಜಾರಿಯಾಯಿತು. ಇಂದಿಗೂ ಜಾರಿಯಲ್ಲಿರುವ ಈ ಕಾನೂನಿನ ಪ್ರಕಾರ ಹಸು, ಕರು ಮತ್ತು ಎಮ್ಮೆಯನ್ನು ಕೊಲ್ಲುವಂತಿಲ್ಲ. ಹಾಗೆಯೇ, ಸಕ್ಷಮ ಪ್ರಾಕಾರದಿಂದ ಪ್ರಮಾಣಪತ್ರ ಪಡೆಯದೇ ಎತ್ತು, ಕೋಣ ಅಥವಾ ಎಮ್ಮೆಯನ್ನು ಕೊಲ್ಲುವಂತಿಲ್ಲ. ಸಕ್ಷಮ ಪ್ರಾಕಾರವು ಪ್ರಮಾಣಪತ್ರ ನೀಡುವ ಮೊದಲು ಪ್ರಾಣಿಯು ಹನ್ನೆರಡು ವರ್ಷ ಮೇಲ್ಪಟ್ಟಿದೆ ಅಥವಾ ತಳಿವರ್ಧನೆಗೆ ಮತ್ತು ಗಾಯಗೊಂಡು ಅಥವಾ ಇನ್ಯಾವುದೇ ಕಾರಣದಿಂದಾಗಿ ಹಾಲು ನೀಡಲು ಶಾಶ್ವತವಾಗಿ ಸಮರ್ಥವಾಗಿಲ್ಲ ಎಂಬುದನ್ನು ದೃಢೀಕರಿಸಬೇಕು. ಈ ಕಾಯ್ದೆಯನ್ನು ಉಲ್ಲಂಸಿದರೆ ಆರು ತಿಂಗಳು ಜೈಲುವಾಸ ಮತ್ತು 1,000 ದಂಡವನ್ನು ವಿಸಬಹುದು.
2001ರಲ್ಲಿ ದನಗಳನ್ನು ಲಾರಿ ಮತ್ತು ಟೆಂಪೋಗಳಲ್ಲಿ ಸಾಗಿಸುವುದನ್ನು ನಿಷೇಸಬೇಕು ಎಂದು ಕೋರಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಯಿತು. ಈ ಮೊಕದ್ದಮೆಯನ್ನು ವಜಾಗೊಳಿಸಿದ ಮಾನ್ಯ ನ್ಯಾಯಾಲಯವು, ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ಹೇಳಿತು. 1995ರಲ್ಲಿ ಅಶುತೋಷ್ ಲಾಹಿರಿ ಪ್ರಕರಣದಲ್ಲಿ (ಅಐ್ಕ 1995 ಖಇ 464) ಬಕ್ರೀದ್ನಂದು ದನಗಳ ಕಟಾವು ಮಾಡುವುದು ಇಸ್ಲಾಂ ಧರ್ಮದ ಪ್ರಕಾರ ಕಡ್ಡಾಯವಲ್ಲ, ಕೇವಲ ಐಚ್ಛಿಕ ಎಂದು ಘೋಷಿಸಿತು. ಹಾಗಾಗಿ ಮುಸ್ಲಿಮರ ಹಬ್ಬಗಳಂದು ದನಗಳನ್ನು ಕಟಾವು ಮಾಡುವುದನ್ನು ನಿಷೇಸಿದರೆ ಅದು ಸಂವಿಧಾನಾತ್ಮಕ ಕ್ರಮ ಎಂದು ಘೋಷಿಸಲಾಯಿತು.
ಈ ಹಿಂದೆ 1958ರಲ್ಲಿ 5 ಜನ ನ್ಯಾಯಾೀಶರು ನೀಡಿದ ಈ ತೀರ್ಪನ್ನು ಮತ್ತೆ 7 ಜನ ನ್ಯಾಯಾೀಶರ ಒಂದು ಪೀಠದ ಮುಂದೆ ಮಿರ್ಜಾಪುರ್ ಕೋಠಿ ಜಮಾತ್ ಪ್ರಕರಣದಲ್ಲಿ 2005ರಲ್ಲಿ, ಮತ್ತೆ ಪರಿಶೀಲನೆಗೆ ಒಳಪಡಿಸಲಾಯಿತು. 2005ರಲ್ಲಿ ತೀರ್ಪಿತ್ತ ನ್ಯಾಯಾೀಶರ ಪೀಠ, ವಯಸ್ಸಾದ ರಾಸುಗಳನ್ನು ಅನುತ್ಪಾದಕ ಎಂದು ಹೇಳಲಾಗದು. ಈ ಪಶುಗಳ ಮೂತ್ರ, ಸೆಗಣಿಗಳನ್ನೂ ಕೃಷಿಯಲ್ಲಿ ಬಳಸಲು ಸಾಧ್ಯವಿದೆ. ಆದ್ದರಿಂದ ಅವುಗಳನ್ನು ಕಟಾವು ಮಾಡುವುದನ್ನು ನಿಷೇಸಿದ ಕಾನೂನುಗಳನ್ನು ಅಸಂವಿಧಾನಾತ್ಮಕ ಎಂದು ಹೇಳಲಾಗದು ಎಂದಿತು. ಈ ಹೊಸ ತೀರ್ಪಿನಲ್ಲಿ ತನ್ನ 1958 ರಲ್ಲಿ ಬಂದ ತೀರ್ಪನ್ನು ಪುನರ್ ವಿಮರ್ಶಿಸುತ್ತಾ ಅಂದಿನ ಆಹಾರ ಅಭಾವವಿದ್ದ ಕಾಲದಲ್ಲಿ ಆ ತೀರ್ಪು ಬಂದಿದ್ದು ಸರಿಯಿರಬಹುದು. ಆದರೆ ಇಂದು ಪ್ರೊಟೀನ್ ಯುಕ್ತ ಆಹಾರದ ಸಮಸ್ಯೆಯಿಲ್ಲ, ಬದಲಿಗೆ ಸಮಸ್ಯೆಯಿರುವುದು ಆಹಾರದ ಸರಬರಾಜಿನಲ್ಲಿ ಎಂದಿತು. 1958 ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ದನದ ಮಾಂಸ ದೊಡ್ಡ ಸಂಖ್ಯೆಯಲ್ಲಿರುವ ಬಡವರ ಆಹಾರ ಎನ್ನಲಾಗಿದ್ದನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟು ದನದ ಮಾಂಸದ ಪ್ರಮಾಣ ಮಾಂಸಾಹಾರದ ಶೇ.1.3ರಷ್ಟು ಮಾತ್ರವಿದೆ ಎಂದಿತು. ಹಾಗೆಯೇ, ಹಸುವನ್ನು ‘ಕೊಹಿನೂರ್ ವಜ್ರ’ಕ್ಕೆ ಹೋಲಿಸಿದ ನ್ಯಾಯಾಲಯವು, ದನಗಳ ಕಟಾವಿನ ಮೇಲೆ ಗುಜರಾತ್ ಸರಕಾರ ಹೇರಿದ್ದ ಸಂಪೂರ್ಣ ನಿಷೇಧವನ್ನು ಎತ್ತಿ ಹಿಡಿಯಿತು.