ವಿದ್ಯಾರ್ಥಿನಿ ನಾಪತ್ತೆ
ಬೆಳ್ತಂಗಡಿ, ಅ.14: ಇಲ್ಲಿನ ಬಿಸಿಎಂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆ ದೂರು ದಾಖಲಾಗಿದೆ. ಸಕಲೇಶಪುರದ ಆರ್ಲೆ ಕೂಡಿಗೆ ಮನೆಯ ಪುರುಷೋತ್ತಮ ಎಂಬವರ ಪುತ್ರಿ ಸಂಗೀತಾ(19) ನಾಪತ್ತೆಯಾದ ವಿದ್ಯಾರ್ಥಿನಿ. ಅ.7ರಂದು ಈಕೆ ವಿದ್ಯಾರ್ಥಿನಿಲಯದಿಂದ ಮನೆಗೆ ಹೋಗುವುದಾಗಿ ಸಿಬ್ಬಂದಿಗೆ ತಿಳಿಸಿ ಹೋದಾಕೆ ಮನೆಗೆ ತೆರಳದೆ, ಹಾಸ್ಟೆಲ್ಗೂ ಮರಳದೆ ನಾಪತ್ತೆಯಾಗಿರುವುದಾಗಿ ಈಕೆಯ ತಾಯಿ ಲತಾ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
Next Story