ಯು.ಎ.ಬಾವ
ಮಂಗಳೂರು, ಅ.16: ಕಂಕನಾಡಿಯ ವೆಲೆನ್ಸಿಯಾ ನಿವಾಸಿ ಯು.ಎ.ಬಾವ (78) ಇಂದು ನಿಧನರಾದರು.
ಮೃತರು ಮೂವರು ಪುತ್ರರು ಹಾಗೂ ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ. ನಗರದ ಕಚ್ಚಿ ಮಸೀದಿ ರಸ್ತೆಯಲ್ಲಿ ಹಣ್ಣಿನ ವ್ಯಾಪಾರಿ ಮಾಡಿಕೊಂಡಿದ್ದ ಅವರು, ಕೆಲವು ತಿಂಗಳುಗಳಿಂದ ಅಸೌಖ್ಯದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಮೂಲತಃ ಉಳ್ಳಾಲ ನಿವಾಸಿಯಾಗಿರುವ ಅವರು ವೆಲೆನ್ಸಿಯಾದ ಸೀಕೊ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಸುಮಾರು 11:30ಕ್ಕೆ ತಮ್ಮ ಸ್ವಗೃಹದಲ್ಲಿ ಅವರು ನಿಧನರಾದರು.
ಸೋಮವಾರ ಮಯ್ಯಿತ್ ನಮಾಝ್
ಯು.ಎ.ಬಾವ ಅವರ ಓರ್ವ ಪುತ್ರ ಅಶ್ರಫ್ ಎಂಬವರು ಮಸ್ಕತ್ನಲ್ಲಿದ್ದು, ಸೋಮವಾರ ಬೆಳಗ್ಗೆ ಆಗಮಿಸಲಿದ್ದಾರೆ. ಸೋಮವಾರ ಬೆಳಗ್ಗೆ 8 ಗಂಟೆಯ ಬಳಿಕ ಮಯ್ಯಿತ್ ನಮಾಝ್ ನೆರವೇರಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
Next Story