ಮಿಫ್ಟ್ನಿಂದ ಉಚಿತ ಹೊಲಿಗೆ ತರಬೇತಿ
ಮಂಗಳೂರು, ಅ.16: ಕೈಮಗ್ಗ ಮತ್ತು ಜವಳಿ ಖಾತೆ, ರಾಜ್ಯ ಸರಕಾರದ ಹೊಸ ಜವಳಿ ನೀತಿ ಯೋಜನೆಯಡಿಯಲ್ಲಿ ಮಿಫ್ಟ್ ಕಾಲೇಜಿನ ನೇತೃತ್ವದಲ್ಲಿ ನಿರುದ್ಯೋಗ ಯುವಕ, ಯುವತಿಯರಿಗೆ ಉಚಿತ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದೆ.
45 ದಿನಗಳ ಈ ತರಬೇತಿಯ ಸಂದರ್ಭದಲ್ಲಿ ಸರಕಾರದ ವತಿಯಿಂದ 3,000 ರೂ. ಸ್ಟೈಫಂಡ್ ನೀಡಲಾಗುವುದು. 18ರಿಂದ 35 ವರ್ಷ ವಯಸ್ಸಿನ ಯುವಕ,ಯುವತಿಯರಿಗೆ ಮಾತ್ರ ಅವಕಾಶ ಇದೆ. ಜನನ ಪ್ರಮಾಣ ಪತ್ರ, ಗುರುತಿನ ಚೀಟಿ, ಬ್ಯಾಂಕ್ ಖಾತೆಯ ಝೆರಾಕ್ಸ್ ಪ್ರತಿ, ಎರಡು ಫೊಟೋಗಳೊಂದಿಗೆ ಅಕ್ಟೋಬರ್ 20ರೊಳಗೆ ಮಿಫ್ಟ್, ಕೆಎಂಸಿ ಆಸ್ಪತ್ರೆಯ ಎದುರು, ಅತ್ತಾವರ, ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8951097991ನ್ನು ಸಂಪರ್ಕಿಸಬಹುದು ಎಂದು ಮಿಫ್ಟ್ ಪ್ರಕಟನೆ ತಿಳಿಸಿದೆ.
Next Story