ಅಬ್ದುಲ್ ಅಝೀಝ್ ಹಾಜಿ ಅಲಂಕಾರ್
ಮಂಗಳೂರು,ಅ.21: ಉದ್ಯಮಿ ಅಬ್ದುಲ್ ಅಝೀಝ್ ಹಾಜಿ ಅಲಂಕಾರ್ (52) ಅವರು ಅ.20 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ಜಮಿಯತ್ತುಲ್ ಫಲಾಹ್ನ ಪುತ್ತೂರು ವಿಭಾಗದ ಉಪಾಧ್ಯಕ್ಷ, ವೌಂಟನ್ವ್ಯೆ ಸ್ಕೂಲ್ ನ ಜತೆ ಕಾರ್ಯದರ್ಶಿ , ಮೆಡಿಕಲ್ ಸರ್ವಿಸ್ ಅಸೋಸಿಯೇಶನ್ ಪುತ್ತೂರು ಇದರ ಕಾರ್ಯಕರ್ತರಾಗಿದ್ದರು. ಕಾರಜಾಲು ಕಿಲ್ರಿಯ ಮಸ್ಜಿದ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅವರು ಅಲಂಕಾರಿನ ದಿ. ಮೊಹಮ್ಮದ್ ಹಾಜಿ ಅವರ ಎರಡನೆ ಪುತ್ರರಾಗಿದ್ದು ಪುತ್ತೂರು ಕೂರ್ನಡ್ಕ ನಿವಾಸಿಯಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story