‘ಹಿಂದುತ್ವ’ಕ್ಕೆ ಸುಪ್ರೀಂ ಕೋರ್ಟಿನ ವ್ಯಾಖ್ಯೆ
ನ್ಯಾ. ಜೆ. ಎಸ್. ವರ್ಮಾ ಅವರ 11.12.1995ರ ತೀರ್ಪಿನಲ್ಲಿ ಹಿಂದುತ್ವದ ಬಗ್ಗೆ ನೀಡಿರುವ ವ್ಯಾಖ್ಯಾನ
ಭಾಗ- 2
ಭಾರತೀಯ ಮನಸ್ಸು ಶತಶತಮಾನಗಳಿಂದ ಯಾವತ್ತೂ ಸತತವಾಗಿ ದೇವರ ಸ್ವರೂಪ ಮತ್ತು ಬದುಕಿನ ಅಂತ್ಯದಲ್ಲಿ ಆತ್ಮ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ, ಜೀವಾತ್ಮ ಮತ್ತು ಪರಮಾತ್ಮದ ಬಗ್ಗೆ ಯೋಚಿಸುತ್ತಾ ಬಂದಿದೆ. ಡಾ ರಾಧಾಕೃಷ್ಣನ್ ಅವರ ಪ್ರಕಾರ ‘‘ನಾವು ಈ ವೈವಿಧ್ಯಮಯ ಅಭಿಪ್ರಾಯಗಳ ಸಾರವನ್ನು ಗ್ರಹಿಸಿದರೆ, ಭಾರತೀಯ ಯೋಚನೆಗಳ ಮೂಲ ಸ್ಫೂರ್ತಿ ಸಾಮಾನ್ಯವಾಗಿ ಇರುವುದು ಬದುಕು ಮತ್ತು ನಿಸರ್ಗವನ್ನು ಗ್ರಹಿಸುವ ಮತ್ತು ಅವೆರಡೂ ಒಂದೇ ಎಂಬ ವಿಶೇಷ ಲಕ್ಷಣದಲ್ಲಿ. ಇದು ಮೇಲುನೋಟಕ್ಕೆ ಸರಳವೆನ್ನಿಸಿದರೂ, ಸಜೀವವಾಗಿ ಹಲವು ವಿಧಗಳಲ್ಲಿ ವ್ಯಕ್ತವಾಗುತ್ತದೆ, ಪರಸ್ಪರ ತೀರಾ ವೈರುಧ್ಯಗಳೊಂದಿಗೂ ಅದು ವ್ಯಕ್ತಗೊಳ್ಳಬಲ್ಲುದು’’. (..)
‘..... ಸಹಜವಾಗಿಯೇ, ಹಿಂದೂ ಧರ್ಮವು ಬಹಳ ಆರಂಭದಿಂದಲೇ ಸತ್ಯ ಎಂಬುದು ಹಲವು ಮುಖಗಳನ್ನು ಮತ್ತು ಹಲವು ನೋಟಗಳಲ್ಲಿ ಹಲವು ಅಂಶಗಳನ್ನು ಅದು ಹೊಂದಿದೆ, ಅದನ್ನು ಯಾರೂ ಪರಿಪೂರ್ಣವಾಗಿ ವಿವರಿಸುವುದು ಕಷ್ಟ ಎಂದು ಅರಿತಿತ್ತು. ಈ ಜ್ಞಾನದ ಕಾರಣದಿಂದಾಗಿ ಸಹಜವಾಗಿಯೇ ಹಿಂದೂಧರ್ಮದಲ್ಲಿ ಸಹನೆ, ಅರ್ಥೈಸಿಕೊಳ್ಳುವ ಮನಸ್ಸು ಮತ್ತು ಎದುರಾಳಿಯ ದೃಷ್ಟಿಕೋನವನ್ನು ಕೇಳಿತಿಳಿದುಕೊಳ್ಳುವ ಸ್ಫೂರ್ತಿ ಇತ್ತು. ಹಾಗಾಗಿಯೇ ಭಾರತದಲ್ಲಿ ಪ್ರಮುಖ ತಾತ್ವಿಕತೆಗಳ ಕುರಿತಾಗಿ ಹೊರಹೊಮ್ಮಿರುವ ಹಲವು ದೃಷ್ಟಿಕೋನಗಳನ್ನು ಒಂದೇ ಮರದ ಹಲವು ಕವಲುಗಳು ಎಂಬುದಾಗಿ ಪರಿಭಾವಿಸಲಾಗುತ್ತದೆ. ಅಡ್ಡಹಾದಿಗಳು ಮತ್ತು ಕಾಣದ ತಿರುವುಗಳು ಸತ್ಯದ ಅರಿವಿನ ಮುಖ್ಯರಸ್ತೆಯಲ್ಲಿ ಹೇಗೋ ಸೇರಿಕೊಂಡುಬಿಡುತ್ತಿದ್ದವು.’’ ಹಿಂದೂ ತಾತ್ವಿಕತೆಯನ್ನು ಸ್ಥೂಲವಾಗಿ ನೋಡಿದಾಗ, ಅಲ್ಲಿ ಯಾವುದೇ ಸಿದ್ಧಾಂತವನ್ನು ನಂಬಿಕೆಗೆ ವಿರುದ್ಧವಾದುದೆಂದು ದೂರ ಇರಿಸುವುದಾಗಲೀ ಅಥವಾ ತಿರಸ್ಕರಿಸುವುದಾಗಲೀ ಸಾಧ್ಯವಿಲ್ಲ ಎಂಬುದು ಅರಿವಾಗುತ್ತದೆ.
***
ಹಿಂದೂ ಧರ್ಮವನ್ನು ಮತ್ತು ತತ್ವಶಾಸ್ತ್ರವನ್ನು ಗಮನಿಸಿದಾಗ, ಅಲ್ಲಿ ಕಾಲಕಾಲಕ್ಕೆ ಸನ್ಯಾಸಿಗಳು ಮತ್ತು ಧರ್ಮ ಸುಧಾರಕರು ಹಿಂದೂ ಯೋಚನೆಗಳು ಮತ್ತು ಆಚರಣೆಗಳಲ್ಲಿದ್ದ ಭ್ರಷ್ಟ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಲು ಪ್ರಯತ್ನಿಸಿದ್ದು ಕಂಡು ಬರುತ್ತದೆ ಮತ್ತು ಅದು ಹಿಂದೂಗಳಲ್ಲಿ ವಿಭಿನ್ನ ಧರ್ಮ ಪಂಥಗಳನ್ನು ಸೃಷ್ಟಿಸಿತು. ಬುದ್ಧನಿಂದ ಬೌದ್ಧ ಧರ್ಮ, ಮಹಾವೀರನಿಂದ ಜೈನಧರ್ಮ, ಬಸವಣ್ಣನಿಂದ ಲಿಂಗಾಯತ ಧರ್ಮ, ಜ್ಞಾನೇಶ್ವರ ಮತ್ತು ತುಕಾರಾಮರಿಂದ ವಾರಕಾರಿ ಪಂಥ, ಗುರುನಾನಕರಿಂದ ಸಿಖ್ ಧರ್ಮ, ದಯಾನಂದರಿಂದ ಆರ್ಯಸಮಾಜ, ಚೈತನ್ಯರಿಂದ ಭಕ್ತಿಪಂಥ; ಮತ್ತು ರಾಮಕೃಷ್ಣರು ಹಾಗೂ ವಿವೇಕಾನಂದರ ಬೋಧನೆಗಳ ಮೂಲಕ ಹಿಂದೂಧರ್ಮ ಅತ್ಯಂತ ಆಕರ್ಷಕ, ಪ್ರಗತಿಪರ ಮತ್ತು ಚಲನಶೀಲ ರೂಪ ಪಡೆಯಿತು. ನಾವು ಈ ಸಂತರು ಮತ್ತು ಸುಧಾರಕರ ಬೋಧನೆಗಳನ್ನು ಅಧ್ಯಯನ ಮಾಡಿ ದರೆ, ಅವರ ದೃಷ್ಟಿಕೋನಗಳಲ್ಲಿರುವ ಸವಿಸ್ತಾರವಾದ ಹರಹು ನಮ್ಮ ಅರಿವಿಗೆ ಬರುತ್ತದೆ; ಆದರೆ ಮೂಲದಲ್ಲಿ ಈ ಎಲ್ಲ ವೈವಿಧ್ಯತೆಗಳನ್ನು ಜೋಡಿಸುವ ಒಂದು ತೆಳ್ಳಗಿನ, ವಿವರಿಸಲಾಗದ ಬಂಧವೂ ಇದ್ದು, ಆ ಬಂಧವೇ ಈ ಎಲ್ಲ ವೈವಿಧ್ಯಗಳನ್ನು ಹಿಂದೂ ಧರ್ಮದ ಸ್ಥೂಲವೂ ಮತ್ತು ಪ್ರಗತಿಪರವೂ ಆದ ಕಟ್ಟಿನೊಳಗಿರಿಸುತ್ತದೆ. ***
.... ಹಿಂದೂ ಧರ್ಮದ ಈ ಸ್ಥೂಲ ಸ್ವರೂಪವನ್ನು ಟಾಯ್ನಬೀ ಸ್ಪಷ್ಟವಾಗಿ ವಿವರಿಸುವುದು ಗಮನಾರ್ಹವಾಗಿದೆ. ಟಾಯ್ನಬೀಯ ಪ್ರಕಾರ: ‘‘ಸಾಮಾಜಿಕ ಆಚರಣೆಗಳ ತಳಹದಿಯಿಂದ ಬೌದ್ಧಿಕ ತಳಹದಿಗೆ ನಾವು ಹಾದು ಬರುವಾಗ, ಹಿಂದೂಯಿಸಂ ಕೂಡ ದಕ್ಷಿಣ ಪಶ್ಚಿಮ ಏಷ್ಯಾದ ಗುಂಪುಗಳ ಧರ್ಮ ಮತ್ತು ಸಿದ್ಧಾಂತ ಗಳೊಂದಿಗೆ ಹೋಲಿಕೆಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹಿಂದೂಯಿಸಂ ಪಾಶ್ಚಿಮಾತ್ಯ ಜಗತ್ತಿನ ಕ್ರಿಸ್ತಪೂರ್ವ, ಇಸ್ಲಾಂಪೂರ್ವ ಧರ್ಮಗಳಂತಹದೇ ಹೊರನೋಟವನ್ನೂ ಹೊಂದಿದೆ. ಅವುಗಳಂತೆಯೇ ಸತ್ಯಕ್ಕೆ ಮತ್ತು ಮೋಕ್ಷಕ್ಕೆ ಒಂದಕ್ಕಿಂತ ಹೆಚ್ಚು ಹಾದಿಗಳಿವೆ ಎಂಬುದನ್ನೂ ಹಿಂದೂಯಿಸಂ ಒಪ್ಪುತ್ತದೆ. ಈ ವಿಭಿನ್ನ ಹಾದಿಗಳು ಪರಸ್ಪರ ತಾಳೆಯಾಗುವುದು ಮಾತ್ರವಲ್ಲದೆ ಪರಸ್ಪರ ಪೂರಕವಾಗಿಯೂ ಇವೆ’’ ("The present-Day Experiment in Western Civilisation" by Toynbee, pp. 48-49).
ನಮ್ಮ ಸಂವಿಧಾನ ನಿರ್ಮಾಪಕರಿಗೆ ಈ ಹಿಂದೂ ಧರ್ಮದ ವಿಸ್ತಾರವಾದ ಮತ್ತು ಸಮಗ್ರವಾದ ಗುಣಲಕ್ಷಣಗಳ ಸಂಪೂರ್ಣ ಅರಿವಿತ್ತು; ಹಾಗಾಗಿ ಧರ್ಮದ ಆಚರಣೆಯನ್ನು ಮೂಲಭೂತ ಹಕ್ಕನ್ನಾಗಿ ಖಚಿತಪಡಿಸುವುದರ ಜೊತೆಗೆ ಆರ್ಟಿಕಲ್ 25ಕ್ಕೆ ವಿವರಣೆ ನಿಯಮ (2)ರ ಉಪನಿಯಮ (b ) ಯಲ್ಲಿ ಬಹಳ ಸ್ಪಷ್ಟವಾಗಿ ‘‘ಹಿಂದೂಗಳು ಎಂದರೆ ಅದರಲ್ಲಿ ಸಿಖ್ಖರು, ಜೈನರು, ಅಥವಾ ಬೌದ್ಧರು ಸೇರಿರುತ್ತಾರೆ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನೂ ಇದೇ ರೀತಿಯಲ್ಲಿ ಪರಿಭಾವಿಸಬೇಕು.’’ ಎಂದಿದೆ (emphasis supplied) (ಪುಟಗಳು 259-266)
Commr. of Wealth Tax, Madras & Ors. vs. Late R. Sridharan by L. Rs., (1976) Supp. SCR 478, Shastri Yagnapurushdasji & Ors. v. Muldas Bhundardas Vaishya & Anr. (A.I.R. 1966 S.C. 1119) ಮುಂದೆ, ಸಂವಿಧಾನ ಪೀಠವೊಂದರ ತೀರ್ಪಿನಲ್ಲಿ ‘ಹಿಂದೂಯಿಸಂ’ ಎಂಬುದನ್ನು ಅದೇರೀತಿಯಾಗಿ ಅರ್ಥಮಾಡಿಕೊಳ್ಳಲಾಗಿದ್ದು, ಹೀಗೆ ಹೇಳಲಾಗಿದೆ; ‘‘....ಹಿಂದೂಯಿಸಂ ತನ್ನಲ್ಲಿ ಹಲವು ನಂಬಿಕೆಗಳನ್ನು, ವಿಧಿಗಳನ್ನು, ಆಚರಣೆಗಳನ್ನು ಮತ್ತು ಆರಾಧನೆಗಳನ್ನು ಒಳಗೊಂಡಿರುವುದರಿಂದ ‘ಹಿಂದೂ’ ಎಂಬ ಶಬ್ದವನ್ನು ನಿಖರವಾಗಿ ವ್ಯಾಖ್ಯಾನಿಸುವುದು ಕಷ್ಟ ಎಂಬುದು ಸಾಮಾನ್ಯ ತಿಳುವಳಿಕೆ. ‘ಹಿಂದೂ‘ ಶಬ್ದ ಹೇಗೆ ಹುಟ್ಟಿತೆಂಬ ಬಗ್ಗೆ ಚಾರಿತ್ರಿಕ ಮತ್ತು ವ್ಯತ್ಪತ್ತಿ ಶಾಸ್ತ್ರಕ್ಕನುಗುಣವಾಗಿ ಮುಖ್ಯನ್ಯಾಯಮೂರ್ತಿಗಳಾದ ಗಜೇಂದ್ರಗಢ್ಕರ್ Shastri Yagnapurushdasji & Ors. v. Muldas Bhundardas Vaishya & Anr. (A.I.R. 1966 S.C. 1119) ಪ್ರಕರಣದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ.
ವೆಬ್ ಸ್ಟರ್ನ ಮೂರನೆ ಅಂತಾರಾಷ್ಟ್ರೀಯ ಇಂಗ್ಲಿಷ್ ಡಿಕ್ಷನರಿ ವಿಸ್ತ್ರತ ಆವ್ರತ್ತಿಯಲ್ಲಿ, ಹಿಂದೂಯಿಸಂನ್ನು ಈ ರೀತಿ ಯಾಗಿ ವ್ಯಾಖ್ಯಾನಿಸಲಾಗಿದೆ: ‘‘ಭಾರತೀಯ ಉಪಖಂಡಕ್ಕೆ ಸೀಮಿತವಾ ಗಿರುವ ಸಂಕೀರ್ಣವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ವಿಕಸಿಸಿಕೊಂಡಿರುವ ಮತ್ತು ಜಾತಿ ವ್ಯವಸ್ಥೆಯಿಂದ ಗುರುತಾಗಿರುವ, ಎಲ್ಲ ರೂಪ ಮತ್ತು ಸಿದ್ಧಾಂತಗಳನ್ನು ಏಕರೂಪಿ ಆತ್ಮ ಎಂದು ನಂಬಿರುವ, ಸತ್ಯ, ಮೋಕ್ಷ ಮತ್ತು ಕರ್ಮಯೋಗಗಳಲ್ಲಿ ನಂಬಿಕೆ ಇರಿಸಿರುವ, ಜನ್ಮ ಮತ್ತು ಪುನರ್ಜನ್ಮಗಳ ಸರಣಿಯಿಂದ ಬಿಡುಗಡೆ ಪಡೆಯಲು ಜ್ಞಾನದ ಹಾದಿ ಮತ್ತು ಭಕ್ತಿಯ ಹಾದಿಯನ್ನು ಅನುಸರಿಸುವ; ಜೀವನ ವಿಧಾನ ಮತ್ತು ಯೋಚನಾ ರೂಪವೇ ಹಿಂದೂ.’’
ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ (15ನೆ ಆವೃತ್ತಿ)ಯಲ್ಲಿ, ‘ಹಿಂದೂಯಿಸಂ’ನ್ನು ಹೀಗೆ ಅರ್ಥೈಸಲಾಗಿದೆ ‘ಹಿಂದೂ ನಾಗರಿಕತೆ (ಮೂಲತಃ ಇಂಡಸ್ ನದಿ ತಟದ ವಾಸಿಗಳು). ಅದು ಇಂಡಿಯನ್ ನಾಗರಿಕತೆ 2000 ವರ್ಷಗಳ ಇತಿಹಾಸ ಹೊಂದಿರುವುದನ್ನು ಗುರುತಿಸುತ್ತದೆ, ಅಲ್ಲಿಂದ ಅದು ಕ್ರಮೇಣ ಕ್ರಿಸ್ತಪೂರ್ವ 2ನೆ ಮಿಲೆನ್ನಿಯಂನ ಅಂತ್ಯದಲ್ಲಿ ಭಾರತದಲ್ಲಿ ನೆಲೆಸಿದ ಇಂಡೋಯುರೋಪಿಯನ್ ಜನಸಮುದಾಯಗಳ ಧರ್ಮವಾಗಿದ್ದ ವೇದಗಳಿಂದ ವಿಕಸನಗೊಂಡಿದೆ. ಅದು ಬಹಳ ವೈವಿಧ್ಯಮಯವಾದ ಬಹುತ್ವವನ್ನು ಏಕಸೂತ್ರದಲ್ಲಿ ಬಂಧಿಸುವುದರಿಂದ, ಹಿಂದೂಯಿಸಂ ಎಂಬುದು ಬಹಳ ಸಂಕೀರ್ಣವಾದ ಸಾತತ್ಯ ಸಹಿತ ಪೂರ್ಣತೆಯಿಂದ ಕೂಡಿದ್ದು, ಅದು ಇಡಿಯ ಬದುಕನ್ನು ಆವರಿಸುವುದರಿಂದ, ಅದರಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಮತ್ತು ಕಲಾತ್ಮಕ ಅಂಶಗಳಿವೆ. ಧರ್ಮವಾಗಿ ಹಿಂದೂಯಿಸಂ ಒಂದು ಸಂಪೂರ್ಣವಾಗಿ ವೈವಿಧ್ಯಮಯವಾದ ನಂಬಿಕೆಗಳು, ಪಂಥಗಳು ಮತ್ತು ಜೀವನ ವಿಧಾನಗಳ ಬಹುಬಣಗಳನ್ನು ಹೊಂದಿರುವ ಒಂದು ಗುಂಪು.... ತಾತ್ವಿಕವಾಗಿ, ಹಿಂದೂಯಿಸಂ ಎಲ್ಲ ವಿಧದ ನಂಬಿಕೆಗಳು ಮತ್ತು ಆರಾಧನೆಗಳನ್ನು, ಅವುಗಳಲ್ಲಿ ಆಯ್ಕೆ ಅಥವಾ ತೆಗೆದುಹಾಕುವಿಕೆ ಇಲ್ಲದೆ ಒಳಗೊಂಡಿರುತ್ತದೆ. ಹಿಂದೂ ತನ್ನ ದೇವರನ್ನು, ಅದು ಯಾವುದೇ ರೂಪವಾಗಿರಬಹುದು, ಎಲ್ಲ ರೂಪಗಳಲ್ಲಿ ಗೌರವಿಸಬಹುದು ಮತ್ತು ಅವರು ನಂಬಿಕೆಯಿಂದ ಸಹನಶೀಲರು, ಇತರರನ್ನೂ ಸಹನಶೀಲರಾಗಿ ಇರಿಸುತ್ತಾರೆ, ಇತರರನ್ನು ಅಂದರೆ ಹಿಂದೂಗಳು ಮತ್ತು ಹಿಂದೂಯೇತರರು ಅವರು ಯಾವುದೇ ಜನಾಂಗ, ಆರಾಧನಾ ವಿಧಾನಗಳನ್ನು ಪಾಲಿಸುತ್ತಾರೋ ಅದನ್ನು ಅವರಿಗೇ ಬಿಡುತ್ತಾರೆ. ಒಬ್ಬ ಹಿಂದೂ ತಾನು ಹಿಂದೂ ಆಗಿದ್ದುಕೊಂಡೇ ಹಿಂದೂಯೇತರ ಧರ್ಮವನ್ನು ಅಪ್ಪಿಕೊಳ್ಳಬಹುದು ಮತ್ತು ಅವರು ಸತ್ಯಸುಳ್ಳುಗಳನ್ನು ಅನುಭವಜನ್ಯವಾಗಿ ವಿವೇಚಿಸಬಲ್ಲವರಾಗಿರುವುದರಿಂದ ಮತ್ತು ಬೇರೆ ವಿಧದ ಆರಾಧನೆಗಳನ್ನು, ವಿಲಕ್ಷಣವಾದ ದೇವರುಗಳನ್ನು ಗೌರವಿಸಬಲ್ಲವರಾದ್ದರಿಂದ ಮತ್ತು ವೈವಿಧ್ಯಮಯ ನಂಬಿಕೆಗಳನ್ನು ತಪ್ಪು ಅಥವಾ ಆಕ್ಷೇಪಾರ್ಹ ಅನ್ನುವ ಬದಲು ಅಪೂರ್ಣವಾಗಿರ ಬಹುದೆಂದು ನಂಬುವುದರಿಂದ, ಅವರು ಉನ್ನತ ದೈವೀ ಶಕ್ತಿಗಳು ಮನುಷ್ಯ ಕುಲದ ಹಾಗೂ ಲೋಕಕಲ್ಯಾಣಕ್ಕಾಗಿ ಪರಸ್ಪರ ಪೂರಕವಾಗಿ ವರ್ತಿಸುತ್ತವೆ ಎಂದು ನಂಬುತ್ತಾರೆ. ಕೆಲವು ಧಾರ್ಮಿಕ ಯೋಚನೆಗಳು ಅಂತಿಮವಾಗಿ ಪರಸ್ಪರ ಒಪ್ಪಿಗೆಯಾಗುವ ಸ್ಥಿತಿಯಲ್ಲಿರುವುದಿಲ್ಲ ಎಂದು ಪರಿಗಣಿತವಾಗುತ್ತವೆ. ಧರ್ಮವು ಮೂಲದಲ್ಲಿ ದೇವರ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಅಥವಾ ಒಂದು ಇಲ್ಲವೇ ಹಲವು ದೇವರು ಎಂಬ ನಂಬಿಕೆಯನ್ನು ಆಧರಿಸಿರುವುದಿಲ್ಲ. ಧಾರ್ಮಿಕ ಸತ್ಯವು ಎಲ್ಲ ಶಾಬ್ದಿಕ ವ್ಯಾಖ್ಯಾನ ಗಳನ್ನು ಮೀರಿ ನಿಲ್ಲುವುದರಿಂದ, ಅದನ್ನೇ ಅಂತಿಮ ಎಂದು ಗ್ರಹಿಸಲಾಗುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದು ಒಂದು ನಾಗರಿಕತೆಯೂ ಹೌದು ಮತ್ತು ಹಲವು ಧರ್ಮಬಣಗಳ ಗುಂಪೂ ಹೌದಾಗಿದ್ದು, ಅದಕ್ಕೆ ಆರಂಭವಾಗಲೀ, ಸ್ಥಾಪಕರಾಗಲೀ, ಕೇಂದ್ರ ಅಧಿಕಾರಿಯಾಗಲೀ, ಅಧಿಕಾರ ಸ್ಥರಗಳಾಗಲೀ ಅಥವಾ ಸಂಘಟನೆ ಯಾಗಲೀ ಇಲ್ಲ. ಹಿಂದೂಯಿಸಂನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸುವ ಯಾವುದೇ ಪ್ರಯತ್ನವೂ ಈತನಕ ಸಮಾಧಾನಕರವಾಗಿಲ್ಲ, ಯಾಕೆಂದರೆ ಹಿಂದೂಯಿಸಂ ಬಗ್ಗೆ ಕೆಲಸಮಾಡಿರುವ ಅತ್ಯುತ್ತಮ ವಿದ್ವಾಂಸರೂ, ಹಿಂದೂಗಳೂ ಸೇರಿದಂತೆ, ಪೂರ್ಣವೊಂದರ ವಿಭಿನ್ನ ಮಗ್ಗುಲುಗಳ ಬಗ್ಗೆ ಮಾತ್ರ ಚರ್ಚಿಸಿದ್ದಾರೆ.’’
ತನ್ನ ಪ್ರಸಿದ್ಧ ಪುಸ್ತಕ ‘ಗೀತಾರಹಸ್ಯ’ ದಲ್ಲಿ ಬಿ.ಜಿ.ತಿಲಕರು ಹಿಂದೂಧರ್ಮಕ್ಕೆ ಈ ಕೆಳಗಿನ ವಿವರಣೆಯನ್ನು ನೀಡಿದ್ದಾರೆ.: ‘‘ವೇದಗಳನ್ನು ಗೌರವದಿಂದ ಒಪ್ಪಿಕೊಳ್ಳುವುದು; ಮೋಕ್ಷಕ್ಕೆ ಸಾಧನಗಳು ಮತ್ತು ಹಾದಿಗಳು ವೈವಿಧ್ಯಮಯ ಎಂಬ ವಾಸ್ತವವನ್ನು ಗುರುತಿಸುವುದು; ಆರಾಧಿಸಬೇಕಾದ ದೇವರುಗಳ ಸಂಖ್ಯೆ ದೊಡ್ಡದಿದೆ ಎಂಬ ಸತ್ಯವನ್ನು ಅರಿತುಕೊಳ್ಳುವುದು, ಇದು ಖಂಡಿತವಾಗಿಯೂ ಹಿಂದೂಧರ್ಮದ ವಿಶಿಷ್ಟ ಗುರುತು.’’ Bhagwan Koer v., J.C. Bose & Ors., (1904 ILR 31 Cal. 11)ತನ್ನ ಪ್ರಸಿದ್ಧ ಪುಸ್ತಕ ‘ಗೀತಾರಹಸ್ಯ’ ದಲ್ಲಿ ಬಿ.ಜಿ.ತಿಲಕರು ಹಿಂದೂಧರ್ಮಕ್ಕೆ ಈ ಕೆಳಗಿನ ವಿವರಣೆಯನ್ನು ನೀಡಿದ್ದಾರೆ.: ‘‘ವೇದಗಳನ್ನು ಗೌರವದಿಂದ ಒಪ್ಪಿಕೊಳ್ಳುವುದು; ಮೋಕ್ಷಕ್ಕೆ ಸಾಧನಗಳು ಮತ್ತು ಹಾದಿಗಳು ವೈವಿಧ್ಯಮಯ ಎಂಬ ವಾಸ್ತವವನ್ನು ಗುರುತಿಸುವುದು; ಆರಾಧಿಸಬೇಕಾದ ದೇವರುಗಳ ಸಂಖ್ಯೆ ದೊಡ್ಡದಿದೆ ಎಂಬ ಸತ್ಯವನ್ನು ಅರಿತುಕೊಳ್ಳುವುದು, ಇದು ಖಂಡಿತವಾಗಿಯೂ ಹಿಂದೂಧರ್ಮದ ವಿಶಿಷ್ಟ ಗುರುತು.’’ , ಪ್ರಕರಣದಲ್ಲಿ ಹಿಂದೂ ಧರ್ಮವನ್ನು ಹಿಗ್ಗಬಹುದಾದ ಮತ್ತು ವೈವಿಧ್ಯಮಯ ಅಂಶಗಳನ್ನು ಒಳಗೊಳ್ಳಬಹುದಾದ ಧರ್ಮ ಎಂದು ಹೇಳಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಅಧ್ಯಯನವು ಬಹುತ್ವ ಮತ್ತು ಸಹನಶೀಲತೆಗಳ ಮೂರ್ತರೂಪವಾಗಿದ್ದು, ಆರಾಧನೆಯಲ್ಲಿ ಖಾಸಗಿತನಕ್ಕೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ.....
‘‘ಧರ್ಮದ ಹರಹು ಇಷ್ಟು ಅಗಾಧವಾಗಿರು ವಾಗ, ಅದು ತನ್ನ ವ್ಯಾಪ್ತಿಯೊಳಗೆ ಹಿಂದೂ ಧರ್ಮ ಎಂಬ ಬಹಳ ತಿಳಿ ಸಮಾನತೆಯ ನಂಬಿಕೆಯೆಂಬ ತಳಹದಿಯನ್ನು ಬಿಟ್ಟರೆ ಸಂಪೂರ್ಣವಾಗಿ ವಿಭಿನ್ನ ದ್ರಷ್ಟಿಕೋನಗಳವರನ್ನು ಹೊಂದಿರುವುದು ಅಚ್ಚರಿಯೇನಲ್ಲ.’’ (emphasis supplied) (481-482 ಪುಟಗಳಲ್ಲಿ)
ಈ ಸಾಂವಿಧಾನಿಕ ಪೀಠಗಳ ತೀರ್ಮಾನಗಳು, ಸವಿವರ ಚರ್ಚೆಯ ಬಳಿಕ, ಸೂಚಿಸುವುದೆಂದರೆ ’ಹಿಂದೂ’, ’ಹಿಂದುತ್ವ’ ಮತ್ತು ‘ಹಿಂದೂಯಿಸಂ’ ಶಬ್ದಗಳಿಗೆ ಯಾವುದೇ ಖಚಿತವಾದ ಅರ್ಥವನ್ನು ನೀಡುವುದು ಕಷ್ಟ; ಮತ್ತು ಅಸಂಗತವಾದ ಯಾವುದೇ ಅರ್ಥವೂ ಅದನ್ನು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗಳಿಂದ ಹೊರತಾದ ಕೇವಲ ಧರ್ಮಕ್ಕೆ ಮಿತಿಗೊಳಿಸಲು ಸಾಧ್ಯವಾಗುವುದಿಲ್ಲ. ‘ಹಿಂದುತ್ವ’ ಎಂಬ ಶಬ್ದವು ಈ ಉಪಖಂಡದ ಜನರ ಜೀವನವಿಧಾನಕ್ಕೆ ಹೆಚ್ಚು ಸಂಬಂಧಿತವಾದುದಾಗಿದೆ ಎಂದೂ ಅದು ಸೂಚಿಸಿದೆ. ಈ ತೀರ್ಪುಗಳ ಹಿನ್ನೆಲೆಯಲ್ಲಿ, ಮೇಲ್ನೋಟಕ್ಕೆ ‘ಹಿಂದುತ್ವ’ ಅಥವಾ ‘ಹಿಂದೂಯಿಸಂ’ ಎಂಬ ಶಬ್ದವನ್ನು ಅದರ ಅಸಂಗತ ನೆಲೆಯಲ್ಲಿ ಸಂಕುಚಿತವಾದ ಹಿಂದೂ ಧಾರ್ಮಿಕ ಮೂಲಭೂತವಾದಕ್ಕೆ ಸಮೀಕರಿಸುವುದನ್ನು, ಅಥವಾ ಜನಪ್ರಾತಿನಿಧ್ಯ ಕಾಯದೆಯ ಸೆಕ್ಷನ್ 123ರ ಅಡಿ ಉಪವಿಧಿ (3) ಮತ್ತು/ಅಥವಾ (3ABharucha, J. in Dr. M. Ismail Faruqui and Ors. etc. etc. Vs. Union of India & Ors. etc., 1994 (6) SCC 360, "Indian Muslims - The Need For A Positive Outlook" )ಯಲ್ಲಿ ಹೇಳಲಾಗಿರುವ ನಿಷೇಧಗಳ ಜೊತೆ ಪರಿಗಣಿಸುವುದನ್ನು ಒಪ್ಪಲು ಕಷ್ಟವಾಗುತ್ತದೆ. (ಅಯೋಧ್ಯಾ ಪ್ರಕರಣ) ರಲ್ಲಿ ನ್ಯಾಯಮೂರ್ತಿ ಜೆ. ಬರೂಚಾ ಅವರು ತಮ್ಮ ಹಾಗೂ ನ್ಯಾ.ಜೆ. ಅಹ್ಮದಿ (ಅವರ ಅವಧಿಯಲ್ಲಿ) ಅವರ ಪ್ರತ್ಯೇಕ ಅಭಿಪ್ರಾಯಗಳಲ್ಲಿ ಹೀಗೆನ್ನುತ್ತಾರೆ.: ‘‘....ಹಿಂದೂಯಿಸಂ ಎಂಬುದು ಒಂದು ಸಹನಶೀಲ ನಂಬಿಕೆ. ಅದು ಇಸ್ಲಾಂ, ಕ್ರೈಸ್ತ, ಜೊರಾಸ್ಟ್ರಿಯನ್, ಜುದಾಯಿಸಂ, ಬುದ್ಧಿಸಂ, ಜೈನಿಸಂ ಮತ್ತು ಸಿಖ್ಖಿಸಂಗಳನ್ನು ಈ ನೆಲದಲ್ಲಿ ನೆಲೆಗೊಳ್ಳಲು ಅವಕಾಶ ಮಾಡಿಕೊಟ್ಟಿದೆ....’’ ( ಪುಟ 442 ) ‘‘ಸಾಮಾನ್ಯವಾಗಿ, ಹಿಂದುತ್ವವನ್ನು ಜೀವನ ವಿಧಾನ ಅಥವಾ ಒಂದು ಮನೋಸ್ಥಿತಿ ಎಂದು ಅರ್ಥೈಸಿಕೊಳ್ಳಬೇಕೇ ಹೊರತು ಧಾರ್ಮಿಕ ಹಿಂದೂ ಮೂಲಭೂತವಾದ ಜೊತೆ ಸಮೀಕರಿಸಿ ನೋಡಬಾರದು’’ ಎಂದು ಮೌಲಾನ ವಹಿಯುದ್ದೀನ್ ಖಾನ್ (1994) ತಮ್ಮ ಪುಸ್ತಕ "Indian Muslims - The Need For A Positive Outlook" ದಲ್ಲಿ ಹೇಳಿದ್ದಾರೆ.
‘‘ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸುವ ವೇಳೆ ತಂತ್ರವಾಗಿ, ಸ್ವಲ್ಪಬೇರೆ ಶಬ್ದಗಳಲ್ಲಿ ಹೇಳಲಾಗಿದೆಯಾದರೂ, ಹೇಳಿದ್ದು ಹಿಂದುತ್ವ ಅಥವಾ ಭಾರತೀಕರಣದ ಬಗ್ಗೆ. ಈ ತಂತ್ರದ ಗುರಿ, ಸಾರರೂಪದಲ್ಲಿ ಹೇಳಬೇಕೆಂದರೆ, ದೇಶದಲ್ಲಿ ಸಹಜೀವನ ನಡೆಸುತ್ತಿರುವ ವಿಭಿನ್ನ ಸಂಸ್ಕೃತಿಗಳ ಭಿನ್ನತೆಗಳನ್ನು ತೆಗೆದುಹಾಕಿ ಒಂದು ಸಮಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದು. ಕೋಮುಸೌಹಾರ್ದ ಮತ್ತು ರಾಷ್ಟ್ರೀಯ ಐಕ್ಯತೆಗಳಿಗೆ ಇದೇ ಹಾದಿ ಅನ್ನಿಸಿದೆ. ಇದು ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತರುತ್ತದೆಂದು ಯೋಚಿಸಲಾಗಿತ್ತು.’’ (ಪುಟ 19)
‘ಹಿಂದುತ್ವ’ವನ್ನು ‘ಭಾರತೀಕರಣಕ್ಕೆ ಸಮಾನಾಂತರವಾದ ಶಬ್ದವನ್ನಾಗಿ ಬಳಸಲಾಗಿತ್ತೆಂದು ಈ ಅಭಿಪ್ರಾಯ ಸೂಚಿಸುತ್ತದೆ. ಅಂದರೆ, ದೇಶದಲ್ಲಿ ಸಹಜೀವನ ನಡೆಸುತ್ತಿರುವ ವಿಭಿನ್ನ ಸಂಸ್ಕೃತಿಗಳ ಭಿನ್ನತೆಗಳನ್ನು ತೆಗೆದುಹಾಕಿ ಒಂದು ಸಮಸಂಸ್ಕೃತಿಯನ್ನು ಅಭಿವ್ರದ್ಧಿಪಡಿಸುವುದು.
Kultar Singh vs. Mukhtiar Singh, 1964 (7) SCR 790 , ಪ್ರಕರಣದಲ್ಲಿ ಸಂವಿಧಾನಪೀಠವು ಸೆಕ್ಷನ್ 123ರ ಅಡಿ ಉಪವಿಧಿ (3) ರ ಅರ್ಥವನ್ನು ಈ ತಿದ್ದುಪಡಿಗೆ ಮೊದಲು ಹೀಗೆ ಅರ್ಥೈಸಿದೆ. ಅಲ್ಲಿ ಪ್ರಶ್ನೆ ಇದ್ದದ್ದು ಒಂದು ಪೋಸ್ಟರಿನಲ್ಲಿ ಅಭ್ಯರ್ಥಿಗೆ ಧರ್ಮದ ಆಧಾರದಲ್ಲಿ ಮತವನ್ನು ಕೇಳಲಾಗಿತ್ತೇ ಎಂದು; ಮತ್ತು ಪೋಸ್ಟರಿನಲ್ಲಿದ್ದ ‘ಪಂಥ’ ಎಂಬ ಶಬ್ದ ಆ ನಿಟ್ಟಿನಲ್ಲಿ ಗಮನಾರ್ಹವಾಗಿತ್ತೇ ಎಂಬುದು. ಅದಕ್ಕೆ ಹೀಗೆ ತೀರ್ಪು ನೀಡಲಾಗಿತ್ತು: ‘‘ಒಬ್ಬ ಅಭ್ಯರ್ಥಿ ತನ್ನ ಎದುರು ಪಕ್ಷದ ಅಭ್ಯರ್ಥಿ ತನ್ನದೇ ಧರ್ಮದವರಾಗಿದ್ದರೂ ಕೂಡ ತನ್ನ ಧರ್ಮದ ಆಧಾರದ ಮೇಲೆ ಮತ ಯಾಚಿಸಿ ಸೆಕ್ಷನ್123(3) ಅಡಿ ಭ್ರಷ್ಟ ಆಚರಣೆ ಮಾಡಬಹುದೆಂಬುದು ಸತ್ಯ. ಉದಾಹರಣೆಗೆ, ಒಬ್ಬ ಸಿಖ್ ಅಭ್ಯರ್ಥಿ ತನಗೆ ಓಟು ನೀಡಿ ಎಂದು ಅಪೀಲು ಮಾಡುವಾಗ, ಅವರ ಹೆಸರಿನಲ್ಲೇ ಅವರು ಸಿಖ್ ಎಂಬುದು ಇರುವುದರಿಂದ, ಅವರು ಸಿಖ್ಖಿಸಂ ನಂಬಿಕೆಗಳನ್ನು ಹೊಂದಿರದಿದ್ದರೂ, ನಾಸ್ತಿಕರಾಗಿದ್ದರೂ, ಸಿಖ್ ಧರ್ಮದ ವ್ಯಾಪ್ತಿಯ ಹೊರಗಿದ್ದರೆ, ಅದು ಸೆಕ್ಷನ್123(3) ಅಡಿ ಭ್ರಷ್ಟ ಆಚರಣೆ ಅನ್ನಿಸುತ್ತದೆ, ಹಾಗಾಗಿ ನಾವು ಸೆಕ್ಷನ್123(3) ಇಲ್ಲಿ ಲಾಗೂ ಆಗುವುದಿಲ್ಲ ಎಂದು ಹೇಳುವಂತಿಲ್ಲ ಯಾಕೆಂದರೆ ಇಲ್ಲಿ ಅಪೀಲುದಾರರು ಮತ್ತು ಪ್ರತಿವಾದಿಗಳಿಬ್ಬರೂ ಸಿಖ್ಖರು.
ಭ್ರಷ್ಟ ಆಚರಣೆಯ ಬಗ್ಗೆ ಸೆಕ್ಷನ್123(3) ಅಡಿ ಹೇಳಲಾಗಿ ರುವುದು ದೇಶದ ಜಾತ್ಯತೀತ ಪ್ರಜಾಸತ್ತೆಗೆ ಪೂರಕವಾದಂತಹ ಆರೋಗ್ಯಕರ ಮತ್ತು ಗೌರವದಾಯಿ ಅಂಶವಾಗಿದೆ.
ನಮ್ಮ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಲು ನಮ್ಮ ಸಂಸತ್ತಿನ ಮತ್ತು ಬೇರೆ ಶಾಸಕಾಂಗಗಳ ಚುನಾವಣೆಗಳು ಧರ್ಮ, ಜನಾಂಗ, ಜಾತಿ, ಸಮುದಾಯ, ಅಥವಾ ಭಾಷೆಯಂತಹ ಅನಾರೋಗ್ಯಕರ ಪ್ರಭಾವದಿಂದ ಮುಕ್ತವಾಗಿರಬೇಕಾದದ್ದು ಬಹಳ ಮುಖ್ಯ. ಇಂತಹ ಅಂಶಗಳಿಗೆ ಚುನಾವಣಾ ಪ್ರಚಾರಗಳಲ್ಲಿ ಅವಕಾಶ ಕೊಟ್ಟರೆ, ಅವು ಪ್ರಜಾಸತ್ತಾತ್ಮಕ ಬದುಕಿನ ಜಾತ್ಯತೀತ ವಾತಾವರಣವನ್ನು ಹಾಳುಗೆಡಹುತ್ತವೆ, ಹಾಗಾಗಿ ಸೆಕ್ಷನ್123(3) ಈ ಅನಪೇಕ್ಷಿತ ಬೆಳವಣಿಗೆಗಳನ್ನು ತಡೆಯುವ ಶಕ್ತಿ ಹೊಂದಿದೆ. ಈ ಅಂಶಗಳ ಹೆಸರಿನಲ್ಲಿ ಯಾವುದೇ ಅಭ್ಯರ್ಥಿ ತನ್ನ ಅಭ್ಯರ್ಥನಕ್ಕೆ ಮತಯಾಚಿಸಿದರೆ ಅದು ಭ್ರಷ್ಟ ಆಚರಣೆಯಾಗುತ್ತದೆ ಮತ್ತು ಆ ಅಭ್ಯರ್ಥಿಯ ಆಯ್ಕೆ ತಿರಸ್ಕೃತವಾಗಬೇಕಾಗುತ್ತದೆ.
ನಮ್ಮ ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಯಶಸ್ವಿಯಾಗಲು ನಮ್ಮ ಸಂಸತ್ತಿನ ಮತ್ತು ಬೇರೆ ಶಾಸಕಾಂಗಗಳ ಚುನಾವಣೆಗಳು ಧರ್ಮ, ಜನಾಂಗ, ಜಾತಿ, ಸಮುದಾಯ, ಅಥವಾ ಭಾಷೆಯಂತಹ ಅನಾರೋಗ್ಯಕರ ಪ್ರಭಾವದಿಂದ ಮುಕ್ತವಾಗಿರಬೇಕಾದದ್ದು ಬಹಳ ಮುಖ್ಯ. ಇಂತಹ ಅಂಶಗಳಿಗೆ ಚುನಾವಣಾ ಪ್ರಚಾರಗಳಲ್ಲಿ ಅವಕಾಶ ಕೊಟ್ಟರೆ, ಅವು ಪ್ರಜಾಸತ್ತಾತ್ಮಕ ಬದುಕಿನ ಜಾತ್ಯತೀತ ವಾತಾವರಣವನ್ನು ಹಾಳುಗೆಡವುತ್ತವೆ.