ಶೌಚ ಗುಂಡಿ ಸ್ವಚ್ಛ; ಪೌರ ಕಾರ್ಮಿಕರಿಬ್ಬರ ಸಾವು ಪ್ರಕರಣ
ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹಬೆಂಗಳೂರು, ಅ,31: ಶೌಚ ಗುಂಡಿ ಸ್ವಚ್ಛಗೊಳಿಸಲು ತೆರಳಿದ್ದ ಪೌರ ಕಾರ್ಮಿಕ ವೆಂಕಟರಾಮನ್ (24)ಮತ್ತು ಮಂಜುನಾಥ್(32) ವಿಷಾನಿಲ ಸೇವಿಸಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಅಪಾರ್ಟ್‌ಮೆಂಟ್ ಮಾಲಕನ ವಿರುದ್ಧ ‘ದಲಿತ ದೌರ್ಜನ್ಯ ತಡೆ ಕಾಯ್ದೆ’ಯಡಿ ಮೊಕದ್ದಮೆ ದಾಖಲಿಸಬೇಕೆಂದು ಪಿಯುಸಿಎಲ್ ಆಗ್ರಹಿಸಿದೆ.
ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪೌರ ಕಾರ್ಮಿಕರ ಸಾವು ಪ್ರಕರಣ ಖಂಡಿಸಿ ಧರಣಿ ನಡೆಸಿದ ಪಿಯುಸಿಎಲ್, ಸಾವನ್ನಪ್ಪಿದ ದಲಿತರಿಬ್ಬರ ಕುಟುಂಬಗಳಿಗೆ ಕನಿಷ್ಠ 18 ಲಕ್ಷ ರೂ.ಪರಿಹಾರ ನೀಡಬೇಕು. ಶೌಚ ಗುಂಡಿ ಸ್ವಚ್ಛತೆಗೆ ಮಾನವರನ್ನು ಬಳಸಬಾರದೆಂಬ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದೆ.ರಂದು ಇಲ್ಲಿನ ಯಶವಂತಪುರದ ಶಾಂತಿ ನಿವಾಸ ಅಪಾರ್ಟ್‌ಮೆಂಟ್‌ನ ಶೌಚ ಗುಂಡಿ ಸ್ವಚ್ಛತೆಗೆ ತೆರಳಿದ್ದ ವೆಂಕಟರಾಮನ್ ಮತ್ತು ಮಂಜುನಾಥ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದರು. ಆದರೆ, ಪೊಲೀಸರು ಗುತ್ತಿಗೆದಾರನ ವಿರುದ್ಧ ‘ನಿರ್ಲಕ್ಷತೆ’ ಕೇಸು ದಾಖಲಿಸಿ ಕೈ ತೊಳೆದುಕೊಂಡಿ ದ್ದಾರೆಂದು ಪಿಯುಸಿಎಲ್ ಆರೋಪಿಸಿದೆ.ದ್ದೇಶ ಪೂರ್ವಕವಾಗಿಯೇ ದಲಿತರಿಬ್ಬರ ಹತ್ಯೆ ಮಾಡಲಾಗಿದ್ದು, ಶಾಂತಿ ನಿವಾಸ ಅಪಾರ್ಟ್‌ಮೆಂಟ್ ಮಾಲಕನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಿ, ಕೂಡಲೇ ಅವರನ್ನು ಬಂಧಿಸಬೇಕು. ಅಲ್ಲದೆ, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಗಿದೆ.
ಧರಣಿ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಮಾಜ ಕಲ್ಯಾಣ ಇಲಾಖೆಗೆ 5 ಲಕ್ಷ ರೂ.ಚೆಕ್ ಹಸ್ತಾಂತರಿಸಿದ್ದಾರೆ. ಆದರೆ, ಮೃತರ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಆದುದರಿಂದ ಸುಪ್ರೀಂ ಕೋರ್ಟ್ ಆದೇಶದನ್ವಯ 10 ಲಕ್ಷ ರೂ. ಮತ್ತು ದೌರ್ಜನ್ಯ ತಡೆ ಕಾಯ್ದೆಯಡಿ 8 ಲಕ್ಷ ರೂ.ಸೇರಿದಂತೆ ತಲಾ ಒಟ್ಟು 18 ಲಕ್ಷ ರೂ. ಪರಿಹಾರವನ್ನು ಮೃತರ ಕುಟುಂಬಕ್ಕೆ ಕೂಡಲೇ ವಿತರಿಸಬೇ ಕೆಂದು ಪಿಯುಸಿಎಲ್ ಮನವಿ ಮಾಡಿದೆ.
ಶೌಚ ಗುಂಡಿ ಸ್ವಚ್ಛತೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಪಿಯುಸಿಎಲ್ ಪ್ರಕಟನೆಯಲ್ಲಿ ಕೋರಿದೆ.