ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜುಗಳ ಗ್ರೂಪ್ ಎ,ಬಿ, ಮತ್ತು ಸಿ ವೃಂದಗಳ 717 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
ಬೆಂಗಳೂರು, ನ.6: ಕರ್ನಾಟಕ ಲೋಕಸೇವಾ ಆಯೋಗವು ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜುಗಳ ಗ್ರೂಪ್ ಎ,ಬಿ, ಮತ್ತು ಸಿ ವೃಂದಗಳ 717 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಡಿ. 2 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಡಿ.3 ಕಡೆಯ ದಿನಾಂಕವಾಗಿದೆ.
ಪ್ರಾಂಶುಪಾಲರು 26, ಕನ್ನಡ ಉಪನ್ಯಾಸಕರು 26, ಇಂಗ್ಲೀಷ್ ಉಪನ್ಯಾಸಕರು 26, ಭೌತಶಾಸ್ತ್ರ ಉಪನ್ಯಾಸಕರು 26, ರಸಾಯನಶಾಸ್ತ್ರ ಉಪನ್ಯಾಸಕರು 26, ಗಣಿತ ಉಪನ್ಯಾಸಕರು 26, ಜೀವಶಾಸ್ತ್ರ ಉಪನ್ಯಾಸಕರು 26, ಗಣಕವಿಜ್ಞಾನ ಉಪನ್ಯಾಸಕರು 26, ನಿಲಯ ಪಾಲಕರು 26, ದ್ವಿತೀಯ ದರ್ಜೆ ಸಹಾಯಕರು 23, ಪದವೀಧರ ಚಿತ್ರಕಲಾ ಶಿಕ್ಷಕರಿಗೆ 230, ಡಿಪ್ಲೊಮಾ ಚಿತ್ರಕಲಾ ಶಿಕ್ಷಕರಿಗೆ 230 ಹುದ್ದೆಗಳಿವೆ.
717 ಹುದ್ದೆಗಳಲ್ಲಿ 120 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಭಾಗದವರಿಗೆ ಮೀಸಲಿಡಲಾಗಿದೆ. ಡಿ.26ರಿಂದ 28ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story