ಕೊಡಗಿನಲ್ಲಿ ಟಿಪ್ಪು ಹಿಂದೂಗಳನ್ನುಮತಾಂತರ ಮಾಡಿಲ್ಲ: ಚಲನಚಿತ್ರನಿರ್ದೇಶಕ ಎಂ.ಎಸ್.ಸತ್ಯು
ಬೆಂಗಳೂರು, ನ.6: ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಹಿಂದೂಗಳನ್ನು ಮತಾಂತರ ಮಾಡಿದನು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಇಂದಿಗೂ ಅಲ್ಲಿ ಕೊಡವ ಮುಸ್ಲಿಮರು ಎಲ್ಲಿಯೂ ಕಾಣಸಿಗುವುದಿಲ್ಲ. ಅಲ್ಲಿ ಇರುವುದು ಕೇರಳ ಮುಸ್ಲಿಮರಾಗಿದ್ದಾರೆ. ಟಿಪ್ಪು ಸುಲ್ತಾನ್ ಮುಸ್ಲಿಮ್ ಎನ್ನುವ ಕಾರಣಕ್ಕೆ ಆತನನ್ನು ವಿರೋಸುವುದು ಸರಿಯಲ್ಲ ಎಂದು ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಆಕ್ಷೇಪಿಸಿದ್ದಾರೆ.
ರವಿವಾರ ನಗರದ ಸಚಿವಾಲಯ ಕ್ಲಬ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರು ಮೂಲತಃ ಭಾರತಿಯರಲ್ಲ ಹಾಗೂ ಹಿಂದೂ ಗಳಲ್ಲ ಎಂಬುದಕ್ಕೆ ಗೆಜೆಟ್ನಲ್ಲಿ ಹಲವು ಸಾಕ್ಷಗಳಿವೆ ಎಂದು ಅವರು ಪ್ರತಿಪಾ ದಿಸಿದ್ದಾರೆ.
ಯೂರೋಷ್ಯಾದಿಂದ ಬಂದ ಒಂದು ಸಮುದಾಯ ಕೊಡಗಿನಲ್ಲಿ ನೆಲೆಸಿದ್ದಾರೆ. ಅಲ್ಲಿಯೆ ಅಭಿವೃದ್ಧಿಗೊಂಡು ಕಾಲಾನಂತರದಲ್ಲಿ ಹಿಂದೂಧರ್ಮಕ್ಕೆ ಮತಾಂತರ ಗೊಂಡು, ಓಂಕಾರೇಶ್ವರ ದೇವಸ್ಥಾನವನ್ನು ಕಟ್ಟಿ ಪೂಜಿಸತೊಡಗಿದರು. ಇವರು ಆಡಳಿತ ನಿರ್ವಹಣೆಗಾಗಿ ಬನವಾಸಿಯಿಂದ ಒಂದು ಪಂಗಡವನ್ನು ಕರೆತಂದು ನಿಯೋಜಿಸಿ ಕೊಂಡರು ಎಂದು ತಿಳಿಸಿದರು.
ಕೊಡುಗನ್ನು ಚಿಕ್ಕವೀರ ರಾಜೇಂದ್ರ ಹದಿನಾಲ್ಕು ವರ್ಷಗಳು ಆಡಳಿತ ಮಾಡುತ್ತಾನೆ. ಬ್ರಿಟಿಷರು ಆತನನ್ನು ಸೋಲಿಸುತ್ತಾರೆ. ನಂತರ ಆತ ಇಂಗ್ಲೆಂಡ್ಗೆ ಹೋಗಿ ಅಲ್ಲಿಯೇ ಸಾವನ್ನಪ್ಪುತ್ತಾನೆ. ಚಿಕ್ಕವೀರ ರಾಜೇಂದ್ರನಿಗೆ ಪುಟ್ಟಮ್ಮ ಗೌರಮ್ಮ ಎಂಬ ಮಕ್ಕಳಿರುತ್ತಾರೆ. ಆಕೆ ಬ್ರಿಟಿಷ್ ಅಕಾರಿಯನ್ನು ಮದುವೆಯಾಗುತ್ತಾಳೆ. ಇದು ಕೊಡಗಿನ ವಾಸ್ತವ ಇತಿಹಾಸವೆಂದು ಅವರು ಹೇಳಿದರು.
ಯೂರೋಷ್ಯಾದಿಂದ ಬಂದ ಒಂದು ಸಮುದಾಯದವರು ಕೊಡಗಿನಲ್ಲಿ ನೆಲೆಸಿದ್ದಾರೆ. ಅಲ್ಲಿಯೆ ಅಭಿವೃದ್ಧಿಗೊಂಡು ಕಾಲಾನಂತರದಲ್ಲಿ ಹಿಂದೂಧರ್ಮಕ್ಕೆ ಮತಾಂತರಗೊಂಡು, ಓಂಕಾರೇಶ್ವರ ದೇವಸ್ಥಾನವನ್ನು ಕಟ್ಟಿ ಪೂಜಿಸತೊಡಗಿದರು. ಇವರು ಆಡಳಿತ ನಿರ್ವಹಣೆಗಾಗಿ ಬನವಾಸಿಯಿಂದ ಒಂದು ಪಂಗಡವನ್ನು ಕರೆತಂದು ನಿಯೋಜಿಸಿಕೊಂಡರು.