ಮಂಗಳೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ
ಮಂಗಳೂರು, ನ.9: ನ.10ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂ ಡಲಾಗಿದೆ ಎಂದು ಮಂಗಳೂರು ವಿವಿ ಪ್ರಕಟನೆ ತಿಳಿಸಿದೆ.
ನ.10ರಂದು ನಡೆಯಬೇಕಿದ್ದ ಬಿಬಿಎಂ ಕ್ರೆಡಿಟ್ ಬೇಸ್ಡ್ ಪರೀಕ್ಷೆಯನ್ನು ನ.18ಕ್ಕೆ, ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್ಗಳ ಪ್ರಥಮ ಸೆಮಿಸ್ಟರ್ ನ.21, 5ನೆ ಸೆಮಿಸ್ಟರ್ ನ.18 ಮತ್ತು ವಾರ್ಷಿಕ ಪದ್ಧತಿ ನ.22ರಂದು ನಡೆಯಲಿದೆ.
ಬಿಎಸ್ಡಬ್ಲೂ ಪ್ರಥಮ ಸೆಮಿಸ್ಟರ್ ನ.15, ಬಿಎಸ್ಸಿ (ಎಫ್ಎನ್ಡಿ) ಪ್ರಥಮ ಸೆಮಿಸ್ಟರ್ ನ.21, ಬಿಎ (ಸೆಕ್ಯುರಿಟಿ ಆ್ಯಂಡ್ ಡಿಟೆಕ್ಟಿವ್ ಸಯನ್ಸ್) ನ.12, ಬಿಎಚ್ಎಂ (ಕ್ರೆಡಿಟ್ ಬೇಸ್ಡ್) ನ.14, ಬಿಎಚ್ಎಂ (ನಾನ್ ಕ್ರೆಡಿಟ್ ಬೇಸ್ಡ್) ನ.16, ಬಿಎಸ್ಸಿ (ಎಚ್ಎಸ್) (ಕ್ರೆಡಿಟ್ ಬೇಸ್ಡ್) ನ.14, ಬಿಎಸ್ಸಿ ಎಫ್ಡಿ/ ಜಿಡಿ ಮತ್ತು ಬಿಎಸ್ಸಿ ಐಡಿ ಆ್ಯಂಡ್ ಡಿ ಪರೀಕ್ಷೆಗಳು ನ.14ರಂದು ನಡೆಯಲಿವೆ.
ಬಿಸಿಎ (ಕ್ರೆಡಿಟ್ ಆ್ಯಂಡ್ ನಾನ್ ಕ್ರೆಡಿಟ್ ಬೇಸ್ಡ್) ನ.12 ರಂದು, ಬಿಎ (ಎಚ್ಆರ್ಡಿ) ನ.14, ಎಲ್ಎಲ್ಬಿ ನ.16 ಹಾಗೂ ನ.21ರಂದು ನಡೆಯಬೇಕಿದ್ದ ಬಿಎ ಜರ್ನಲಿಸಮ್ ಪರೀಕ್ಷೆಯನ್ನು ನ.23ಕ್ಕೆ ಮುಂದೂಡಲಾಗಿದೆ. ಉಳಿದಂತೆ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿವಿಯ ಪರೀಕ್ಷಾಂಗ ಕುಲಸಚಿವರ ಪ್ರಕಟನೆ ತಿಳಿಸಿದೆ.