ಹೊಸ ನೋಟು ಪಡೆದು ನಸುನಕ್ಕಜನತೆ
ಹೊಸ ನೋಟಿಗಾಗಿ ಜನಜಾತ್ರೆ
ಬೆಂಗಳೂರು, ನ.10: ಅನೂರ್ಜಿತಗೊಂಡಿರುವ 500ರೂ., 1000 ರೂ. ಮುಖಬೆಲೆಯ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನತೆ ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ಗಂಟೆಗಟ್ಟಲೆ ನಿಂತ ದೃಶ್ಯಗಳು ರಾಜ್ಯಾದ್ಯಂತ ಸಾಮಾನ್ಯವಾಗಿತ್ತು.
ಇಂದು ಬೆಳಗ್ಗೆ 7ಗಂಟೆ ವೇಳೆಗಾಗಲೆ ಬೆಂಗಳೂರು ನಗರದ ಮೈಸೂರು ಬ್ಯಾಂಕ್, ಕೆನರಾ ಬ್ಯಾಂಕ್, ಎಚ್‌ಡಿಎ್ಸಿ, ಇಂಡಿಯನ್ ಬ್ಯಾಂಕ್ ಸೇರಿದಂತೆ ರಾಜ್ಯದ ವಿವಿಧ ಬ್ಯಾಂಕ್‌ಗಳ ಮುಂದೆ ಜನತೆ ಸಾಲುಗಟ್ಟಿ ನಿಂತಿದ್ದರು. ಸಾಲಿನಲ್ಲಿ ನಿಂತಿದ್ದ ಜನತೆ
ಯನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹರಸಾಹಸ
ಪಟ್ಟರು. ಸಾಲಿನಲ್ಲಿ ಮೂರು-ನಾಲ್ಕು ಗಂಟೆನಿಂತು 500ರೂ., 1000 ರೂ.ನೋಟಿನ ಬದಲಾಗಿ 2000 ರೂ. ಹಾಗೂ 500 ರೂ. ಹೊಸ ನೋಟನ್ನು ಪಡೆದವರು ಸಾಧನೆ ಮಾಡಿದ ರೀತಿಯಲ್ಲಿ ಸಂತೋಷ ವ್ಯಕ್ತಪಡಿಸುತ್ತಿದ್ದರು.
ಸಿಬ್ಬಂದಿಯೊಂದಿಗೆ ಜಗಳ: ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕುಗಳು ತಮ್ಮ ಕೆಲಸದ ಸಮಯವನ್ನು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಕಾರ್ಯ ನಿರ್ವಹಿಸಿದವು. ಆದರೆ, ಕೆಲವು ಬ್ಯಾಂಕ್‌ಗಳು ಪ್ರಾರಂಭವಾಗಿ ಎರಡು ಗಂಟೆಯಲ್ಲೇ ಹೊಸ ನೋಟುಗಳು ಖಾಲಿಯಾದವು. ದರಿಂದ ಸಹನೆಯ ಕಟ್ಟೆಯೊಡೆದ ಜನತೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು, ಬೇರೆ ಬ್ಯಾಂಕ್‌ಗಳತ್ತ ಓಡಿದರು. ಅಲ್ಲಿಯೂ ಹೊಸ ನೋಟುಗಳು ಖಾಲಿಯಾಗಿರುವ ಸುದ್ದಿ ತಿಳಿದು, ಪ್ರಧಾನಿ ಮೋದಿಯ ಕ್ರಮ ಕುರಿತು ಶಪಿಸತೊಡಗಿದರು. ೊಂದಲದ ಗೂಡು: ಕೆಲವು ಬ್ಯಾಂಕ್‌ಗಳಲ್ಲಿ ದಿನಕ್ಕೆ 4ಸಾವಿರ ರೂ.ವರೆಗೂ ಬದಲಿಸಿಕೊಳ್ಳಲು ಅವಕಾಶವಿದ್ದರೆ, ಇತರ ಬ್ಯಾಂಕ್‌ಗಳಲ್ಲಿ ಕೇವಲ 2ಸಾವಿರ ರೂ.ವರೆಗೆ ಮಾತ್ರ ಬದಲಿಸಿಕೊಳ್ಳಬಹುದಾಗಿತ್ತು. ದಿನನಿತ್ಯದ ವ್ಯಾಪಾರ-ವಹಿವಾಟು ಮಾಡುವವರು ಸರಿಯಾದ ಮೊತ್ತದ ಹಣ ಸಿಗದೆ ಪರದಾಡುತ್ತಿದ್ದ ದೃಶ್ಯಗಳು ಕಂಡುಬಂತು.ುರುತಿನ ಚೀಟಿ ಕಡ್ಡಾಯ: ಯಾವುದೇ ಬ್ಯಾಂಕ್‌ನಲ್ಲಿ ನೋಟನ್ನು ವಿನಿಮಯ ಮಾಡಿಕೊಳ್ಳಬೇಕಿದ್ದರೂ ಪಾನ್‌ಕಾರ್ಡ್, ಆಧಾರ್ ಕಾರ್ಡ್, ಓಟರ್ ಐಡಿ, ಇವುಗಳಲ್ಲಿ ಯಾವುದಾದರು ಒಂದರ ಝೆರಾಕ್ಸ್ ಪ್ರತಿಯನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ, ಾರ್ಮ್ ಭರ್ತಿ ಮಾಡುವುದು ಕಡ್ಡಾಯವಾಗಿತ್ತು. ್ರಾಹಕರು ತಮ್ಮ ಉಳಿತಾಯ ಖಾತೆಗಳಿಗೆ ಹಣ ಪಾವತಿಸುವುದಕ್ಕೆ ಯಾವುದೇ ರೀತಿಯ ನಿರ್ಬಂಧವಿರಲಿಲ್ಲ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ಕೇವಲ 10ಸಾವಿರ ರೂ. ಮಾತ್ರ ಹಣ ಪಡೆದುಕೊಳ್ಳಲು ಅವಕಾಶವಿದೆ. ನ.24ರ ನಂತರ 10ಸಾವಿರ ರೂ.ಗಿಂತ ಹೆಚ್ಚು ಹಣವನ್ನು ಪಡೆಯಬಹುದಾಗಿದೆ. ಚೆಕ್, ಡಿಡಿ, ಆನ್‌ಲೈನ್ ಮೂಲಕ ಹಣಕಾಸು ವ್ಯವಹಾರಗಳಿಗೆ ಯಾವುದೇ ನಿರ್ಬಂಧ ಇಲ್ಲವಾಗಿದೆ.
ಹಳೆಯ ನೋಟುಗಳ ಚಲಾವಣೆಗೆ ಇನ್ನೆರಡು ದಿನಗಳ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರ ಕೂಡ ಹಳೆಯ ನೋಟುಗಳನ್ನು ಸರಕಾರಿ ಆಸ್ಪತ್ರೆ, ಔಷಅಂಗಡಿ, ರೈಲು, ಬಸ್, ವಿಮಾನ ನಿಲ್ದಾಣಗಳು, ಗ್ರಾಹಕರ ಸಹಕಾರ ಸಂಘ, ಹಾಲಿನ ಬೂತ್, ಚಿತಾಗಾರ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಚಲಾವಣೆಯಲ್ಲಿರುತ್ತವೆ.