ಫೋರ್ಡ್ ಪ್ರಿಯರೇ, ಹೊಸ ಇಕೋಸ್ಪೋರ್ಟ್ ಹೇಗಿದೆ ನೋಡಿದ್ದೀರಾ?
ಇಕೋಸ್ಪೋರ್ಟ್ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಫೋರ್ಡ್ ಸಂಸ್ಥೆಯ ಅತೀ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದೆ. 2016 ಲಾಸ್ ಏಂಜಲೀಸ್ ಆಟೋ ಶೋದಲ್ಲಿ ಚೊಚ್ಚಲ ಪ್ರದರ್ಶನಕ್ಕೆ ಮೊದಲು ಇಕೋಸ್ಪೋರ್ಟ್ ತನ್ನ ಮೊದಲ ಮಾಡೆಲನ್ನು ಹೊರತಂದಿದೆ. ಮುಂಭಾಗದಲ್ಲಿ ಹೆಡ್‌ಲ್ಯಾಂಪ್‌ಗಳನ್ನು ಸ್ವಲ್ಪ ಮಟ್ಟಿಗೆ ಬೆಳೆಸಲಾಗಿದೆ. ಫಾಗ್ ಲ್ಯಾಂಪ್‌ಗಳು ಹೌಸಿಂಗ್‌ನಲ್ಲಿ ಬ್ಲಾಕೌಟ್ ಆಗಿಲ್ಲ. ಈಗಿನ ಫೋರ್ಡ್ ಇಕೋ ಸ್ಪೋರ್ಟ್‌ನ ಸ್ಪ್ಲಿಟ್ ಗ್ರಿಲ್ ಲುಕ್ ದೊಡ್ಡದಾದ, ಕ್ರೋಮ್ ಫಿನಿಶ್ ಇರುವ ಗ್ರಿಲ್‌ಗೆ ದಾರಿ ಮಾಡಿದೆ. ಜೊತೆಗೆ ಶಾರ್ಪ್ ಕ್ರೀಸ್‌ಗಳು ಬಾನೆಟ್ ಮೇಲಿವೆ. ಇದರಿಂದಾಗಿ ಇಕೋಸ್ಪೋರ್ಟ್‌ಗೆ ವಿಶಿಷ್ಟ ಭಂಗಿ ಬಂದಿದೆ. ಕಾರಿನ ಸೈಡ್ ಪ್ರೊಫೈಲ್ ಹಿಂದಿನ ಹಾಗೇ ಇದ್ದು, ವಿಂಡೋ ಲೈನ್ ಈಗ ಕ್ರೋಮ್ ಸ್ಟ್ರಿಪ್ ಹೊಂದಿದೆ. ವೀಲ್ ಡಿಸೈನ್ ಬದಲಾಗಿದೆ.
ದೊಡ್ಡ ಬದಲಾವಣೆ ಹೊರಾಂಗಣದಲ್ಲಿ ಕಾಣಬಹುದು. ರೇರ್ ಮೌಂಟೆಡ್ ಸ್ಪೇರ್ ವೀಲ್ ಇಲ್ಲ. ಈಗಿನ ತಲೆಮಾರಿನ ಮಾಡೆಲ್‌ನ ಅತೀ ಜನಪ್ರಿಯ ವಿನ್ಯಾಸವಾಗಿತ್ತು ಇದು. ಜನರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ. ಅದನ್ನು ಹೊರತುಪಡಿಸಿ ರಿಸ್ಟೈಲ್ ಮಾಡಿದ ಬಂಪರ್ ಇದೆ. ಕಾರಿನ ರೇರ್ ಎಂಡ್ ಮಾತ್ರ ಈಗಿನ ಇಕೋಸ್ಪೋರ್ಟ್‌ಗೆ ಬಹುವಾಗಿ ಹೋಲುತ್ತದೆ. 10 ಹೊರಾಂಗಣ ಬಣ್ಣಗಳ ಆಯ್ಕೆಯನ್ನು ಕೊಡಲಾಗಿದ್ದು, ಏಳು ಆಂಬಿಯಂಟ್ ಲೈಟಿಂಗ್ ಆಯ್ಕೆಗಳು ಮತ್ತು ನಾಲ್ಕು ಟ್ರಿಮ್ ಲೆವೆಲ್ ಆಫರಿಂಗ್‌ಗಳಾದ ಎಸ್, ಎಸ್‌ಇ, ಎಸ್‌ಇಎಸ್ ಮತ್ತು ಟಿಟಾನಿಯಂ ಇವೆ. ಎಲ್ಲಾ ಸರಣಿಗಳೂ ಸ್ವಿಂಗ್ ಗೇಟ್ ಸ್ಟೈಲ್ ಟೈಲ್‌ಗೇಟ್ ಹೊಂದಿವೆ.
ಇಕೋಸ್ಪೋರ್ಟ್ಸ್ ವಿನ್ಯಾಸದ ಕಡೆಗೆ ತಾಜಾ ಲುಕ್ ಕೊಡಲು ಆರಂಭಿಸಿದೆ. ಅದರಲ್ಲಿ ಒಳಾಂಗಣ ವಿನ್ಯಾಸ ಮುಖ್ಯವಾದುದು. ಡ್ಯಾಷ್‌ಬೋರ್ಡ್ ಉದ್ದಕ್ಕೂ ಸಿಲ್ವರ್ ಆಕ್ಸೆಂಟ್‌ಗಳು ಬ್ಲಾಕ್ಡ್ ಔಟ್ ಒಳಾಂಗಣಕ್ಕೆ ದಾರಿ ಮಾಡಿಕೊಟ್ಟಿದ್ದು, ಕಾಂಟ್ರಾಸ್ಟ್ ಸ್ಟಿಚಿಂಗ್ ಮತ್ತು ಕಾಪರ್ ಆಕ್ಸಂಟ್‌ಗಳು ಕ್ಯಾಬಿನ್ ಒಳಗೆ ಪ್ರೀಮಿಯಂ ಫೀಲ್ ಕೊಡುತ್ತವೆ. ಸ್ಟೀರಿಂಗ್‌ನಲ್ಲಿ ಬಹಳಷ್ಟು ಬಟನ್‌ಗಳಿವೆ. ಮುಖ್ಯ ಆಕರ್ಷಣೆ ಎಂದರೆ ಹೊಸ 8 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಂಡ್ರಾಯ್ಡಾ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಸಪೋರ್ಟ್ ಮಾಡುತ್ತದೆ. ಇದು ಫೋರ್ಡ್‌ನ ಸಿಂಕ್ 3 ಯು1 ಜೊತೆಗೆ ಬರುತ್ತದೆ.
ಕ್ಯಾಬಿನ್‌ನಲ್ಲಿ ಬಿ ಆಂಡ್ ಒ ಪ್ಲೇ ಆಡಿಯೋ ಸಿಸ್ಟಂ, ಇಕೋ ಸ್ಪೋರ್ಟ್ ಟಿಟಾನಿಯಂ ಮೇಲೆ ಸ್ಟಾಂಡರ್ಡ್ ಮತ್ತು 675 ವಾಟ್ ಸಿಸ್ಟಂ 10 ಸ್ಪೀಕರ್‌ಗಳ ಜೊತೆಗೆ ಬಂದಿದೆ. ಬಿ ಆಂಡ್ ಒ ಪ್ಲೇ ಬ್ರಾಂಡೆಡ್ ಟ್ವೀಟರ್ಸ್ ಮತ್ತು ವೂಫರ್ಸ್ ಫ್ರಂಟ್ ಡೋರ್‌ಗಳಲ್ಲಿ ಮತ್ತು ಸಬ್ ವೂಫರ್ ಹಿಂಬದಿಯಲ್ಲಿದೆ.
ಅಮೆರಿಕ-ಸ್ಪೆಕ್ ವೇರಿಯಂಟ್ 1.0 ಲೀಟರ್ ತ್ರೀ ಸಿಲಿಂಡರ್ ಟರ್ಬೋಚಾರ್ಜ್‌ಡ್ ಇಕೋ ಬೂಸ್ಟ್ ಇಂಜಿನ್‌ನಲ್ಲಿ ಲಭ್ಯವಿದೆ. 2.0 ಲೀಟರ್ ಫೋರ್ ಸಿಲಿಂಡರ್ ಇಂಜಿನ್ ಫೋರ್ ವೀಲ್ ಡ್ರೈವ್ ಜೊತೆಗೆ ಬರುತ್ತದೆ. ಎರಡೂ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ಗಳಲ್ಲಿದೆ.
ಈವರೆಗೆ ಯಾವಾಗ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತದೆ ಎನ್ನುವ ಬಗ್ಗೆ ಫೋರ್ಡ್ ಇಂಡಿಯಾದಿಂದ ಯಾವುದೇ ದೃಢೀಕರಣವಿಲ್ಲ. ಮುಂದಿನ ವರ್ಷ ಲಾಂಚ್ ಆಗುವ ನಿರೀಕ್ಷೆಯಿದೆ. ಅಪ್‌ಡೇಟ್ ಆಗಿರುವ ಇಕೋಸ್ಪೋರ್ಟ್ ಭಾರತೀಯ ವಿಭಾಗದಲ್ಲಿ ಮುಖ್ಯವಾಗಿ ಹೆಚ್ಚು ಆಕರ್ಷಕವಾಗಬಹುದು. ಏಕೆಂದರೆ ಕಾರಿನ ಸ್ಪರ್ಧಿಗಳಾಗಿ ಮಾರುತಿ ಸುಜುಕಿ ವಿಟಾರಾ ಬ್ರೆಜಾ ಈ ವಿಭಾಗದಲ್ಲಿ ದೊಡ್ಡ ಲಾಭ ಗಳಿಸಿದೆ. ಅದರ ಆನ್‌ಬೋರ್ಡ್ ಫೀಚರ್‌ಗಳು ಮತ್ತು ಅಪ್‌ಡೇಟೆಡ್ ಸುವ್ ಸೈಲ್ ವಿನ್ಯಾಸವೇ ಇದಕ್ಕೆ ಕಾರಣ.
ಹಿಂದಿಗಿಂತ ಹೆಚ್ಚು ಫೀಚರ್ ಇರುವ ಕಾರಣ ಫೋರ್ಡ್ ಇಕೋಸ್ಪೋರ್ಟ್ ಭಾರತದಲ್ಲಿ ಯಾವ ಬೆಲೆಯಲ್ಲಿ ಬಲಿದೆ ಎನ್ನುವುದು ಕುತೂಹಲಕರ.