ನೀವು ವಾಟ್ಸ್ ಆ್ಯಪ್ ಎಕ್ಸ್‌ಪರ್ಟ್ ಆಗಲು ಇಲ್ಲಿವೆ ಹತ್ತು ಸರಳ ಸಲಹೆಗಳು
2009ರಿಂದ ವಾಟ್ಸ್ ಆ್ಯಪ್ ಜನರ ಜೀವನಾಡಿಯಾಗಿದೆ. ಸ್ಮಾರ್ಟ್ ಫೋನ್ ಬಳಸುವವರೆಲ್ಲ ಈ ಜನಪ್ರಿಯ ಚಾಟ್ ಆ್ಯಪ್ ಬಳಸಿಯೇ ಇರುತ್ತಾರೆ. ಇದಕ್ಕೆ 1 ಬಿಲಿಯ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ಬಹಳಷ್ಟು ಮಂದಿ ವಾಟ್ಸ್ ಆ್ಯಪ್ ಬಳಸುತ್ತಿದ್ದರೂ ಹೊಸ ಫೀಚರ್‌ಗಳ ಬಗ್ಗೆ ಜನರು ಹೆಚ್ಚು ತಿಳಿದಿರುವುದಿಲ್ಲ. ಇತ್ತೀಚೆಗೆ ಪ್ರತೀ ಎರಡು ವಾರಕ್ಕೆ ಹೊಸ ಫೀಚರ್ ಬರುತ್ತಿದೆ. ಇಲ್ಲಿ ಈ ಬಗ್ಗೆ 10 ವಿವರ ನಿಡಿದ್ದೇವೆ.
1. ಗ್ರೂಪ್ ಚಾಟಲ್ಲಿ ಜನರನ್ನು ಟ್ಯಾಗ್ ಮಾಡುವುದು. @ ಟ್ಯಾಗ್ ಟೈಪ್ ಮಾಡಿ ವ್ಯಕ್ತಿಯ ಹೆಸರು ಆರಿಸಿಕೊಂಡು ಸಂದೇಶ ಹಾಕಬಹುದು. ಹಾಗೆ ಮಾಡಿದರೆ ಅವರಿಗೆ ನೊಟಿಫಿಕೇಶನ್ ಸಿಗುತ್ತದೆ.
2. ಆ್ಯಪಲ್ ಫೋನ್ ಬಳಸುವವರಿಗೆ ಹಲವಾರು ಅಪ್‌ಡೇಟ್‌ಗಳನ್ನು ತಂದಿದೆ. ಸಿರಿ ಬಳಸಿ ಸಂದೇಶ ಅಥವಾ ಕರೆ ಕೊಡಬಹುದು. ಫೋನ್ ಕಾಲ್ ಪಡೆಯುವಾಗ ತಕ್ಷಣವೇ ಪೂರ್ಣ ಕಾಲಿಂಗ್ ಸ್ಕ್ರೀನ್ ಜೊತೆಗೆ ಉತ್ತರಿಸಬಹುದು. ಉತ್ತರಿಸಲು ಅಕ್ಸೆಪ್ಟ್ ಬಳಸಿ ಮತ್ತು ಸ್ಲೈಡರ್ ಉಜ್ಜಿ. ಹೊಸ ವಿಜೆಟ್‌ನಲ್ಲಿ ನೀವು ಇತ್ತೀಚೆಗಿನ ಚಾಟ್ ಮತ್ತು ಓದದ ಸಂದೇಶ ನೋಡಬಹುದು. ವಾಟ್ಸ್ ಆ್ಯಪ್ ಮೂಲಕ ನೇರವಾಗಿ ಕರೆ ಮಾಡುವ ಮತ್ತು ಸಂದೇಶ ಕಳುಹಿಸುವ ಅವಕಾಶವೂ ಇದೆ. ಐಫೋನ್ ಬಳಸುವವರು ಒಂದೇ ಬಾರಿಗೆ ಹಲವು ಚಾಟ್ಸ್‌ಗೆ ಸಂದೇಶ ಕಳುಹಿಸಬಹುದು.
3.ಉದ್ದನೆಯ ಸಂದೇಶ ಬರೆಯಲು ಇಷ್ಟವಿಲ್ಲದಿದ್ದರೆ ಮೈಕ್ ಹಿಡಿದು ಸಂದೇಶವನ್ನು ಹೇಳಿದರೆ ಕೀಪ್ಯಾಡ್ ಬರೆದುಕೊಳ್ಳುತ್ತದೆ.
4. ಗ್ರೂಪ್ ಚಾಟಲ್ಲಿ ನಿಮ್ಮ ಸಂದೇಶ ಯಾರು ಓದಿದ್ದಾರೆ ಎಂದು ತಿಳಿದುಕೊಳ್ಳಲು ಸಂದೇಶದ ಮೇಲೆ ಒತ್ತಿದರೆ ಮಾಹಿತಿ ಆಯ್ಕೆ ಬರುತ್ತದೆ.
5. ನಿರ್ದಿಷ್ಟ ಸಂದೇಶಕ್ಕೆ ಉತ್ತರಿಸಲು ಆ ಸಂದೇಶದ ಮೇಲೆ ಒತ್ತಿ ರಿಪ್ಲೈ ಬಟನ್ ಒತ್ತಿ. ನಂತರ ನಿಮ್ಮ ಸಂದೇಶ ಟೈಪ್ ಮಾಡಿ. ಇದು ಮೂಲ ಸಂದೇಶದ ಜೊತೆಗೆ ನಿಮ್ಮ ಉತ್ತರವನ್ನೂ ಪೋಸ್ಟ್ ಮಾಡುತ್ತದೆ.
6. ಪ್ರಮುಖ ಕಾಂಟಾಕ್ಟ್‌ಗಳಿಗೆ ಶಾರ್ಟ್‌ಕಟ್ ಮಾಡಿ ಹೋಂ ಸ್ಕ್ರೀನಲ್ಲಿ ಇಡಬಹುದು. ಚಾಟ್ ವಿಂಡೋ, ಸೆಟ್ಟಿಂಗ್, ಮೋರ್ ಗೆ ಹೋಗಿ ಆಡ್ ಶಾರ್ಟ್‌ಕಟ್ ಒತ್ತಿದರೆ ಆಯಿತು.
7. ಸಂದೇಶಕ್ಕೆ ವಿನ್ಯಾಸ ಬೇಕೆಂದರೆ ಬೋಲ್ಡ್ ಮಾಡಲು ಸಂದೇಶದ ಆಚೀಚೆ * ಚಿಹ್ನೆ, ಇಟಾಲಿಕ್‌ಗೆ ಸಂದೇಶದ ಆಚೀಚೆ _ ಮತ್ತು ಹೊಡೆದು ಹಾಕಲು ಸಂದೇಶದ ಆಚೀಚೆ ~ ಚಿಹ್ನೆ ಹಾಕಿ ಪೋಸ್ಟ್ ಮಾಡಿ.
8. ಯಾವುದಾದರೂ ಗ್ರೂಪ್ ತುಂಬಾ ನೊಟಿಫಿಕೇಶನ್ ಕೊಡುತ್ತಿದ್ದಲ್ಲಿ ಗ್ರೂಪ್ ಹೆಸರಿಗೆ ಹೋಗಿ ಮ್ಯೂಟ್ ಬಟನ್ ಒತ್ತಿ ಅದರಿಂದ ನೊಟಿಫಿಕೇಶನ್ ಬರದಂತೆ ಮಾಡಬಹುದು.
9. ಹಲವರಿಗೆ ಜೊತೆಯಲ್ಲಿ ಸಂದೇಶ ಕಳುಹಿಸುವ ಫೀಚರ್ ಕೂಡ ಇದೆ. ಚಾಟ್ ಸ್ಕ್ರೀನ್ ಗೆ ಹೋಗಿ ಮೆನು ಬಟನ್ ಒತ್ತಿ, ನ್ಯೂ ಬ್ರಾಡ್‌ಕಾಸ್ಟ್ ಒತ್ತಿ. ನಿಮಗೆ ಬೇಕಾದ ಕಾಂಟಾಕ್ಟ್ ಆರಿಸಿ ಸಂದೇಶ ಕಳುಹಿಸಿ.
10. ನಿಮ್ಮ ಸ್ಥಳದ ನಕ್ಷೆ ಕಳುಹಿಸಬಹುದು. ಅದಕ್ಕಾಗಿ ಶೇರ್ ಐಕಾನ್‌ಗೆ ಹೋಗಿ ನಿಮ್ಮ ಸ್ಥಳವನ್ನು ಹುಡುಕಿ ಹಂಚಿಕೊಳ್ಳಿ. ಜಿಪಿಎಸ್ ಆನ್ ಇದ್ದರೆ ಮಾತ್ರ ಇದು ಸಾಧ್ಯ.
11. ನಿಮ್ಮ ವಾಟ್ಸ್ ಆ್ಯಪ್‌ಗೆ ವಾಲ್‌ಪೇಪರ್ ಕೂಡ ಹಾಕಿಕೊಳ್ಳಬಹುದು. ಸೆಟ್ಟಿಂಗ್ ಅಡಿ ನಿಮಗೆ ಆಯ್ಕೆ ಸಿಗುತ್ತದೆ.
12. ನಿಮ್ಮ ಚಾಟ್ ಹಿಸ್ಟರಿ ಬೇಕೆಂದರೆ ಕಾಂಟಾಕ್ಟ್ ಸ್ಕ್ರೀನ್‌ಗೆ ಹೋಗಿ ಆಯ್ಕೆ ಬಟನ್ ಒತ್ತಿ ಸರ್ಚ್ ಕೊಡಿ. ನಿಮಗೆ ಬೇಕಾದ ಟೆಕ್ಸ್‌ಟ್ ಟೈಪ್ ಮಾಡಿ. ಆ್ಯಪ್ ನಿಮಗೆ ಬಯಸಿದ ಸಂದೇಶ ಕೊಡುತ್ತದೆ.
ಕೃಪೆ:indiatoday.intoday.in