ಜಾಗತಿಕ ಬಡತನ ಸಮೀಕ್ಷೆ ಭಾರತದಲ್ಲಿ ಉಲ್ಬಣಿಸಿದೆ ಆರ್ಥಿಕ ಅಸಮಾನತೆ
ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಯ ವರದಿಯು ವಿಶ್ವದ ಬಡಮಕ್ಕಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದರ ಪ್ರಕಾರ ಬಡತನದ ಮಿತಿಯನ್ನು ದಿನಕ್ಕೆ 3.10 ಡಾಲರ್‌ಗೆ ನಿಗದಿಪಡಿಸಿದ ಹೊರತಾಗಿಯೂ, ಜಗತ್ತಿನ ಶೇ.45ರಷ್ಟು ಮಕ್ಕಳು ದಾರಿದ್ರದಲ್ಲಿ ಬದುಕುತ್ತಿದ್ದಾರೆ. ಇದರಷ್ಟೇ ಭಯಾನಕವಾದುದೆಂದರೆ, ಶಿಶು ಮರಣ ಪ್ರಮಾಣವು ಭಾರತದಲ್ಲಿ ಅತ್ಯಧಿಕವಾಗಿದೆ. ವಿಶ್ವಸಂಸ್ಥೆಯ 2014ರಲ್ಲಿ ಪ್ರಕಟಿಸಿದ ‘ಸಹಸ್ರಮಾನದ ಅಭಿವೃದ್ಧಿ ಗುರಿ’ ವರದಿಯ ಪ್ರಕಾರ ಭಾರತದಲ್ಲಿ 2012ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 14 ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ. ಹಾಗೆಯೇ ಬಡತನ, ಅನಾರೋಗ್ಯ ಹಾಗೂ ಅನಕ್ಷರತೆ ಸೇರಿದಂತೆ ನಮ್ಮ ದೇಶದ ಬಹುತೇಕ ಮಕ್ಕಳ ದುಸ್ಥಿತಿಯು, ನಮ್ಮ ದೇಶದ ಭವಿಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯೊಂದರ (ಟಛ್ಟಿಠಿ ಚ್ಞ ಚ್ಟಛಿ ಟ್ಟಟಛ್ಟಿಠಿ )ಪ್ರಕಾರ ವಿಶ್ವದ ಶೇ.30ರಷ್ಟು ಬಡವರು ಭಾರತದಲ್ಲಿ ವಾಸವಾಗಿದ್ದಾರೆ. ಜಗತ್ತಿನ 767 ದಶಲಕ್ಷ ಬಡವರ ಪೈಕಿ 224 ದಶಲಕ್ಷ ಮಂದಿ ಭಾರತದಲ್ಲಿದ್ದಾರೆ. ಈ ವಿಷಯದಲ್ಲಿ ಭಾರತವು ಜಗತ್ತಿನಲ್ಲೇ ನಂ.1 ದೇಶವೆಂಬ ಕುಖ್ಯಾತಿಯನ್ನು ಈ ವರದಿಯು ನೀಡಿದೆ.
ವಿಶ್ವಬ್ಯಾಂಕ್ ಬಡತನದ ಮಿತಿಯನ್ನು ಪ್ರತಿ ವ್ಯಕ್ತಿಗೆ 1.90 ಡಾಲರ್‌ಗೆ ನಿಗದಿಪಡಿಸಿದೆ. ಈ ಮೊತ್ತವನ್ನು ವಿದೇಶಿ ವಿನಿಮಯ ದರದಲ್ಲಿ ಪರಿ ಗಣಿಸಿದರೆ 2013ರಲ್ಲಿ ಅದು ಪ್ರತಿ ಡಾಲರ್‌ಗೆ 61.82 ರೂ.ನಂತೆ ಭಾರತದ ಕರೆನ್ಸಿಯಲ್ಲಿ 117.45 ರೂ. ಆಗಿರುತ್ತದೆ. ಆದರೆ ಇದೇ ಅವಧಿಯಲ್ಲಿ ಓರ್ವ ವ್ಯಕ್ತಿಯ ಖರೀದಿ ಸಾಮರ್ಥ್ಯದ ಸಮಾ ನತೆ(ಪಿಪಿಪಿ)ಯು 31.77 ರೂ.ಗೆ ಸರಿಸಮವಾಗಿದೆ (ಡಾಲರ್‌ಗೆ 16.72 ರೂ.)
ಪಿಪಿಪಿಯು ತಮ್ಮ ಖರೀದಿ ಸಾಮರ್ಥ್ಯಕ್ಕೆ ಸಂಬಂಧಿಸಿದ ಕರೆನ್ಸಿ ವೌಲ್ಯಗಳನ್ನು ಹೋಲಿಕೆ ಮಾಡುತ್ತದೆ. ಅದನ್ನು ಅತ್ಯಂತ ಸರಳವಾದ ರೀತಿಯಲ್ಲಿ ಹೀಗೆ ವಿವರಿಸಬಹುದಾಗಿದೆ. ಉದಾಹರಣೆಗೆ, ಭಾರತದಲ್ಲಿ ಒಂದು ಕಪ್ ಚಹಾದ ಬೆಲೆ 10 ರೂ. ಇದ್ದರೆ, ಅಮೆರಿಕದಲ್ಲಿ ಅದರ ಬೆಲೆ ಒಂದು ಡಾಲರ್ ಇದೆ ಎಂದಿಟ್ಟುಕೊಳ್ಳಿ. ಅಂದರೆ ಒಂದು ಡಾಲರ್‌ಗೆ ದೊರೆಯುವ ವಸ್ತುವಿನ ವೌಲ್ಯವು ಭಾರತದಲ್ಲಿ 10 ರೂ. ಎಂದಾಯಿತು. ಆದರೆ ವಿದೇಶಿ ವಿನಿಮಯ ದರದ ಪ್ರಕಾರ ಒಂದು ಡಾಲರ್‌ನ ವೌಲ್ಯವು ಇದಕ್ಕಿಂತ ತುಂಬಾ ಅಧಿಕವಾಗಿದ್ದು, ಭಾರತೀಯ ಕರೆನ್ಸಿಯಲ್ಲಿ 66.77 ರೂ. ಆಗಿರುತ್ತದೆ.
ಹೀಗಾಗಿ, ವಿಶ್ವಬ್ಯಾಂಕ್ ವಿಧಿಸಿರುವ ಬಡತನ ರೇಖೆಯ ಮಿತಿಯು ಬಹಳಷ್ಟು ಟೀಕೆಗೊಳಗಾಗಿರುವ ತೆಂಡುಲ್ಕರ್ ಮಿತಿಗಿಂತ ಹೆಚ್ಚೇನೂ ಉತ್ತಮವಾಗಿಲ್ಲ. ಸುರೇಶ್ ತೆಂಡುಲ್ಕರ್ ಸಮಿತಿಯು 2009ರಲ್ಲಿ ಸಲ್ಲಿಸಿರುವ ವರದಿಯಲ್ಲಿ ಬಡತನ ರೇಖೆಯಡಿಯಲ್ಲಿ ಓರ್ವ ವ್ಯಕ್ತಿಯ ದೈನಂದಿನ ವೆಚ್ಚವನ್ನು ಗ್ರಾಮಾಂತರ ಪ್ರದೇಶಗಳಲ್ಲಿ 27.2 ರೂ.ಗೆ ಹಾಗೂ ನಗರ ಪ್ರದೇಶಗಳಲ್ಲಿ 33.3 ರೂ.ಗೆ ನಿಗದಿಪಡಿಸಿತ್ತು.
ತರುವಾಯ ರಂಗರಾಜನ್ ಸಮಿತಿಯು ತನ್ನ ವರದಿಯಲ್ಲಿ ಬಡತನರೇಖೆಯ ಮಿತಿಯಲ್ಲಿ ತುಸು ಪರಿಷ್ಕರಣೆ ಮಾಡಿದ್ದು, ವೆಚ್ಚಮಿತಿಯನ್ನು ಪ್ರತಿ ವ್ಯಕ್ತಿಗೆ ಗ್ರಾಮಾಂತರ ಪ್ರದೇಶಗಳಲ್ಲಿ32 ರೂ. ಹಾಗೂ ನಗರ ಪ್ರದೇಶಗಳಲ್ಲಿ 47 ರೂ.ಗೆ ನಿಗದಿಪಡಿಸಿತ್ತು.
ವಿಶ್ವಬ್ಯಾಂಕ್ ನಿಗದಿಪಡಿಸಿದ ಮಾನದಂಡವು ಖಂಡಿತವಾಗಿಯೂ ಗಂಭೀರವಾದ ಟೀಕೆ ಹಾಗೂ ಖಂಡನೆಗೆ ಹೊರತಾದುದಾಗಿರಲಿಲ್ಲ. ಆದರೆ, ಆಗಿರುವ ತಪ್ಪನ್ನು ಸರಿಪಡಿಸುವುದಕ್ಕಾಗಿ ಈ ಮಿತಿಯಲ್ಲಿ ಮಾಡಲಾಗುವ ಯಾವುದೇ ಹೆಚ್ಚಳವು, ಖಂಡಿತವಾಗಿಯೂ ಭಾರತ ಸೇರಿದಂತೆ ವಿಶ್ವದಾದ್ಯಂತ ಬಡವರ ಸಂಖ್ಯೆಯನ್ನು ಹೆಚ್ಚಿಸಲಿದೆ. ಅಂದರೆ ಬಡವರ ಸಂಖ್ಯೆಯಲ್ಲಿ ಭಾರತ ಆಲಂಕರಿಸಿರುವ ನಂ.1 ಸ್ಥಾನಮಾನವು ಬದಲಾಗದೆ ಉಳಿಯಲಿದೆ. ಎರಡನೆ ಸ್ಥಾನದಲ್ಲಿರುವ ನೈಜೀರಿಯವು 86 ದಶಲಕ್ಷ ಬಡವರನ್ನು ಹೊಂದಿದೆ. ಆ ದೇಶದ ಮಟ್ಟಿಗೆ ಇದೊಂದು ದೊಡ್ಡ ಸಂಖ್ಯೆಯಾದರೂ, ಇದು ಭಾರತಲ್ಲಿರುವ ಒಟ್ಟು ಬಡವರ ಸಂಖ್ಯೆಯ ಶೇ.38ರಷ್ಟು ಮಾತ್ರವೇ ಆಗಿದೆ.
ಬಡವರ ಸಂಖ್ಯೆಯ ಹೊರತಾಗಿ, ಭಾರತವು ಕಡೆಗಣಿಸಲು ಸಾಧ್ಯ ವಾಗದಂತಹ ಇನ್ನೂ ಹಲವು ನಿರ್ಣಾಯಕವಾದ ಅಂಶಗಳನ್ನು ಹೊಂದಿದೆ. ಅತ್ಯಂತ ಕಳವಳಕಾರಿಯೆಂದರೆ ಜಗತ್ತಿನ ಒಟ್ಟು ಬಡವರ ಪೈಕಿ ಅರ್ಧದಷ್ಟು ಮಂದಿ 18 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಾಗಿ ದ್ದಾರೆ. 0-14 ವರ್ಷ ವಯೋಮಾನದೊಳಗಿನ ಬಡಮಕ್ಕಳ ಪಾಲು ವಿಶ್ವದ ಜನಸಂಖ್ಯೆಯಲ್ಲಿ ಇದಕ್ಕಿಂತಲೂ ಅಧಿಕವಾಗಿದೆ.
ಅದೇ ರೀತಿ ಬಡತನದ ಒಟ್ಟಾರೆ ಪಾಲಿನಲ್ಲಿ ಲೆಕ್ಕಹಾಕುವುದಾದರೆ ಭಾರತವು ಜಗತ್ತಿನ ಶೇ.30ರಷ್ಟು ಬಡಮಕ್ಕಳ ತಾಯ್ನಿಡಾಗಿದೆ. ಇನ್ನೂ ಕಳವಳಕಾರಿ ವಿಷಯವೆಂದರೆ ಶಿಶುಬಡತನವು, ಗ್ರಾಮಾಂತರ ಪ್ರದೇಶಗಳಲ್ಲಿಯೇ ದಟ್ಟವಾಗಿ ಕೇಂದ್ರೀಕೃತವಾಗಿದ್ದು, ಅಲ್ಲಿ ಪ್ರತಿ ಐದು ಮಂದಿ ಮಕ್ಕಳ ಪೈಕಿ ನಾಲ್ವರು ಕಡುಬಡತನದಲ್ಲಿ ಬದುಕುತ್ತಿದ್ದಾರೆ.
ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್)ಯ ವರದಿಯು ವಿಶ್ವದ ಬಡಮಕ್ಕಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅದರ ಪ್ರಕಾರ ಬಡತನದ ಮಿತಿಯನ್ನು ದಿನಕ್ಕೆ 3.10 ಡಾಲರ್‌ಗೆ ನಿಗದಿಪಡಿಸಿದ ಹೊರತಾಗಿಯೂ, ಜಗತ್ತಿನ ಶೇ.45ರಷ್ಟು ಮಕ್ಕಳು ದಾರಿದ್ರದಲ್ಲಿ ಬದುಕುತ್ತಿದ್ದಾರೆ. ಇದರಷ್ಟೇ ಭಯಾನಕವಾದುದೆಂದರೆ, ಶಿಶು ಮರಣ ಪ್ರಮಾಣವು ಭಾರತದಲ್ಲಿ ಅತ್ಯಧಿಕವಾಗಿದೆ. ವಿಶ್ವಸಂಸ್ಥೆಯ 2014ರಲ್ಲಿ ಪ್ರಕಟಿಸಿದ ‘ಸಹಸ್ರಮಾನದ ಅಭಿವೃದ್ಧಿ ಗುರಿ’ ವರದಿಯ ಪ್ರಕಾರ ಭಾರತದಲ್ಲಿ 2012ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 14 ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ. ಹಾಗೆಯೇ ಬಡತನ, ಅನಾರೋಗ್ಯ ಹಾಗೂ ಅನಕ್ಷರತೆ ಸೇರಿದಂತೆ ನಮ್ಮ ದೇಶದ ಬಹುತೇಕ ಮಕ್ಕಳ ದುಸ್ಥಿತಿಯು, ನಮ್ಮ ದೇಶದ ಭವಿಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಷ್ಟೇ ಆಘಾತಕಾರಿಯೆಂದರೆ ಬಡತನವು ನಮ್ಮ ಸಮಾಜಕ್ಕೆ ಅನ್ನ ದಾತರಾದ ರೈತರಲ್ಲಿಯೇ ಅಧಿಕವಾಗಿದೆ. ಜಗತ್ತಿನ ಶೇ.80ರಷ್ಟು ಬಡವರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರಾದರೆ, ಅವರಲ್ಲಿ ಶೇ.64 ಮಂದಿ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
ಇನ್ನೊಂದು ಯಾತನಾಮಯ ಸಂಗತಿಯೆಂದರೆ, ಭಾರತದಲ್ಲಿ ನಿರಂತರವಾದ ಬಡತನಕ್ಕೆ ಮೂಲಕಾರಣವೆಂದರೆ,ದೇಶದಲ್ಲಿ ಅಗಾಧವಾದ ಅಸಮಾನತೆಯಿರುವುದು. ಕೊರಿಯ ಗಣರಾಜ್ಯ, ದಕ್ಷಿಣ ಆಫ್ರಿಕ, ತೈವಾನ್, ಚೀನಾ ಹಾಗೂ ಅಮೆರಿಕ ಸೇರಿದಂತೆ ದೇಶದಲ್ಲಿ ಅತ್ಯಧಿಕ ಶ್ರೀಮಂತರ ಸಾಲಿನಲ್ಲಿರುವ ಶೇ.1ರಷ್ಟು ಭಾರತೀಯರ ಆದಾಯವು ಏರುತ್ತಲೇ ಹೋಗುತ್ತಿದೆ.
ಇನ್ನೊಂದು ಹಂತದಲ್ಲಿ ಭಾರತವು ವಿಶ್ವದ ಶ್ರೀಮಂತ ರಾಷ್ಟ್ರಗಳಿಗಿಂತ ತುಂಬಾ ಹಿಂದೆ ಬಿದ್ದಿಲ್ಲವೆಂಬಂತೆ ಬಿಂಬಿಸಲಾಗುತ್ತಿದೆ. ಭಾರತವು ವಿಶ್ವದ ಟಾಪ್ 10 ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿದೆ. 5600 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತಿನೊಂದಿಗೆ (ಎಲ್ಲಾ ವ್ಯಕ್ತಿಗಳು ಹೊಂದಿರುವ ಖಾಸಗಿ ಸಂಪತ್ತು, ಬಾಧ್ಯತೆಗಳನ್ನು ಕಳೆದು ಉಳಿದ ಆಸ್ತಿಗಳು), ಅದು ಏಳನೇ ಸ್ಥಾನದಲ್ಲಿದೆ.
‘ನ್ಯೂ ವರ್ಲ್ಡ್ ವೆಲ್ತ್’ ಸಂಸ್ಥೆಯ ವರದಿ ಪ್ರಕಾರ ಖರೀದಿ ಸಾಮ ರ್ಥ್ಯದ ಸಮಾನತೆ (ಪಿಪಿಪಿ)ಯಲ್ಲಿ ಭಾರತವು 2015ರಲ್ಲಿ ಕೆನಡ (4700 ಬಿಲಿಯನ್ ಡಾಲರ್), ಆಸ್ಟ್ರೇಲಿಯ (4500 ಬಿಲಿಯನ್ ಡಾ.) ಹಾಗೂ ಇಟಲಿ (4400 ಬಿಲಿಯನ್ ಡಾ.) ದೇಶಗಳಿಗಿಂತ ಮುಂದಿದೆ. 2015ರಲ್ಲಿ ಅದರ ಒಟ್ಟು ಆಂತರಿಕ ಉತ್ಪನ್ನವು 2.07 ಟ್ರಿಲಿಯನ್ ಡಾಲರ್‌ಗಳಾಗಿತ್ತು. ಯಾಕೆಂದರೆ ಭಾರತದಲ್ಲಿರುವ 130 ಶತಕೋಟಿಗೂ ಅಧಿಕ ಜನಸಂಖ್ಯೆಯಿರುವುದರಿಂದ ಇಂತಹ ತಪ್ಪುದಾರಿ ಗೆಳೆಯುವ ಪ್ರಚಾರವನ್ನು ನಡೆಸಲಾಗುತ್ತಿದೆ. 2015ರಲ್ಲಿ ತಲಾ ಆದಾಯದಲ್ಲಿ ಭಾರತವು ಜಗತ್ತಿನ ರಾಷ್ಟ್ರಗಳ ಪೈಕಿ 170ನೇ ಸ್ಥಾನದಲ್ಲಿತ್ತು. ಇದೇ ಅವಧಿಯಲ್ಲಿ ತಲಾವಾರು ಖರೀದಿ ಸಾಮರ್ಥ್ಯ ಸಮಾನತೆ (ಪಿಪಿಪಿ)ಯಲ್ಲಿ ಅದು ತಲಾ ವ್ಯಕ್ತಿಗೆ 6020 ಡಾಲರ್‌ಗಳೊಂದಿಗೆ 151ನೇ ಸ್ಥಾನದಲ್ಲಿತ್ತು.
ಅನುಮಾನಾಸ್ಪದ ಖ್ಯಾತಿ
ಇದಕ್ಕಿಂತಲೂ ಹೆಚ್ಚಾಗಿ ಆದಾಯ ವಿತರಣೆಯು ತುಂಬಾ ಅಸಮಾನತೆಯಿಂದ ಕೂಡಿದೆ. 1990ರಲ್ಲಿ 45.18ರಷ್ಟಿದ್ದ ಭಾರತೀಯ ಗಿನಿ ಸೂಚ್ಯಂಕ (ಆರ್ಥಿಕ ಅಸಮಾನತೆಯನ್ನು ಅಳೆಯುವ ಮಾನದಂಡ ಇದಾಗಿದೆ. ಈ ಸೂಚ್ಯಂಕವು ಅಧಿಕವಾಗಿದ್ದಲ್ಲಿ ಅಸಮಾನತೆಯು ಅಧಿಕವೆನಿಸಿಕೊಳ್ಳುವುದು)ವು 2013ರಲ್ಲಿ 51.36 ಅಂಕಗಳಿಗೆ ಏರಿದ್ದು, ಇದು ಲ್ಯಾಟಿನ್ ಅಮೆರಿಕ ದೇಶಗಳಿಗಿಂತಲೂ ಅತ್ಯಂತ ಕಳಪೆ ಸ್ಥಿತಿಯಲ್ಲಿರುವುದಾಗಿ ಅಂತಾರಾಷ್ಟ್ರೀಯ ವಿತ್ತೀಯ ಸಂಸ್ಥೆ (ಐಎಂಎಫ್)ಯ ವರದಿ ತಿಳಿಸಿದೆ. ವಾಸ್ತವವಾಗಿ ಭಾರತವು ಆರ್ಥಿಕ ಅಸಮಾನತೆಯಲ್ಲಿ ಅಗ್ರ ಸ್ಥಾನದಲ್ಲಿರುವ ಟಾಪ್ 10 ರಾಷ್ಟ್ರಗಳಲ್ಲೊಂದೆಂಬ ಕುಖ್ಯಾತಿಗೆ ಪಾತ್ರವಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಹಲವು ವರ್ಷಗಳಿಂದ ಭಾರತದಲ್ಲಿ ಬಡವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಲೆ ಬಂದಿದೆ. ಉದಾಹರಣೆಗೆ ಇತರ ರಾಷ್ಟ್ರಗಳಾದ ಚೀನಾ, ವಿಯೆಟ್ನಾಂ ಹಾಗೂ ಇಂಡೋನೇಶ್ಯಗಳಲ್ಲಿ 1990ರಲ್ಲಿ ಬಡತನದ ಮಟ್ಟವು ಭಾರತಕ್ಕಿಂತಲೂ ಅಧಿಕವಾಗಿತ್ತು. ಬಡವರ ಜೀವನಮಟ್ಟದಲ್ಲಿ ಗಮನಾರ್ಹ ಸುಧಾರಣೆಯಾಗದಿದ್ದರೂ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ.
2015ರ ಜಾಗತಿಕ ಸಂಪತ್ತಿನ ವರದಿ ಪ್ರಕಾರ ಭಾರತದಲ್ಲಿ 1 ದಶಲಕ್ಷ ಡಾಲರ್‌ಗೂ ಅಧಿಕ ಆದಾಯವಿರುವ ಅಧಿಕ ನಿವ್ವಳ ವೌಲ್ಯದ ವ್ಯಕ್ತಿಗಳ ಸಂಖ್ಯೆ 1.98 ಲಕ್ಷದಷ್ಟಿದೆ. ಅವರೆಲ್ಲರ ಒಟ್ಟು ಅಧಿಕ ನಿವ್ವಳ ವೌಲ್ಯವು 785 ಶತಕೋಟಿ ಡಾಲರ್‌ಗಳಾಗಿವೆ. ‘ಕ್ರೆಡಿಟ್ ಸೂಯಿಸ್ಸೆ’ ಸಂಸ್ಥೆಯ ವರದಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ.1ರಷ್ಟು ಮಂದಿ ದೇಶದ ಒಟ್ಟು ಸಂಪತ್ತಿನ ಶೇ.53 ಭಾಗದ ಮೇಲೆ ಒಡೆತನ ಹೊಂದಿದ್ದಾರೆ. ಇವರನ್ನೂ ಲೆಕ್ಕಹಾಕಿಕೊಂಡು ಶೇ.5ರಷ್ಟು ಮಂದಿ ಶೇ.68.6 ಶೇ ಹಾಗೂ ಶೇ.10ರಷ್ಟು ಮಂದಿ 76.3 ಶೇ. ಸಂಪತ್ತಿನ ಒಡೆತನ ಹೊಂದಿದ್ದಾರೆ. ತಳಸ್ತರದಲ್ಲಿರುವ ಶೇ. 50ರಷ್ಟು ಮಂದಿ ಒಟ್ಟು ಸಂಪತ್ತಿನ ಶೇ.4.1ರಷ್ಟು ಪಾಲನ್ನು ಮಾತ್ರವೇ ಪಡೆದಿದ್ದಾರೆ.
ಹೀಗಾಗಿ ವಿಶ್ವಬ್ಯಾಂಕ್ ಹಾಗೂ ಇತರ ಮೂಲಗಳಿಂದ ಬಂದಿರುವ ಇತ್ತೀಚಿನ ವರದಿಗಳನ್ನು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಪರಿಸ್ಥಿತಿಯು ಶೋಚನೀಯಾವಸ್ಥೆಯನ್ನು ತಲುಪುವ ಮೊದಲೇ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ.