ಸುಬ್ರಹ್ಮಣ್ಯ: ವ್ಯಕ್ತಿ ನಾಪತ್ತೆ
ಸುಬ್ರಹ್ಮಣ್ಯ, ನ.21: ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ನಿವಾಸಿ ರಾಮಚಂದ್ರ(42) ಎಂಬವರು ಸಂಬಂಧಿಕರ ಮನೆಗೆ ಹಿಂದಿರುಗದೆ ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ರವಿವಾರ ದೂರು ದಾಖಲಾಗಿದೆ.
ನಾಪತ್ತೆಯಾದ ರಾಮಚಂದ್ರ ಸುಬ್ರಹ್ಮಣ್ಯ ಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಿಂದ ಆ.30ರಂದು ಸಕಲೇಶಪುರದಲ್ಲಿರುವ ಅಕ್ಕನ ಮನೆಗೆೆ ಹೋಗಿ ಅಲ್ಲಿಂದ ಹೊಸಕೋಟೆಯ ತಂಗಿ ಮನೆಗೆ ತೆರಳಿ 2ದಿನದ ಬಳಿಕ ಸುಬ್ರಹ್ಮಣ್ಯಕ್ಕೆ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದರು ಎನ್ನಲಾಗಿದೆ. ಆದರೆ ಕೆಲವು ದಿನ ಕಳೆದರೂ ಮನೆಗೆ ವಾಪಸ್‌ಬಾರದೆ ಇದ್ದುದ್ದನ್ನು ಗಮನಿಸಿ ಪತ್ನಿ ಕುಮುದಾ ರಾಮಚಂದ್ರರಿಗೆ ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story