ಇಂದು ‘ಮನೆಗೊಂದು ಮರ’ ಅಭಿಯಾನಕ್ಕೆ ಚಾಲನೆ
ಮಂಗಳೂರು, ಡಿ.11: ಹಸಿರು ಮರೆಯಾಗಿ ತಾಪ ಹೆಚ್ಚಾಗುತ್ತಿರುವ ಈ ಸಂದರ್ಭ ಗಿಡನೆಟ್ಟು ಪೋಷಿಸುವವರು ಕಡಿಮೆಯಾಗುತ್ತಿದ್ದಾರೆ. ಹೀಗಿರುವಾಗ ಪರಿಸರವಾದಿ ಮಾಧವ ಉಳ್ಳಾಲ್ ದ.ಕ. ಜಿಲ್ಲಾದ್ಯಂತ ಸಾವಿರಾರು ಗಿಡಗಳನ್ನು ನೆಟ್ಟು ಹಸಿರು ಹೊದಿಕೆಗೆ ವೇದಿಕೆ ನಿರ್ಮಿಸುತ್ತಿದ್ದಾರೆ. ಇದೀಗ ಮನೆ ಮನೆಗಳಲ್ಲಿ ಗಿಡಗಳನ್ನು ನೆಡುವ ವಿನೂತನ ಯೋಜನೆ ಹಮ್ಮಿಕೊಂಡಿದ್ದಾರೆ. ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಡಿ.12ರಂದು ಬೆಳಗ್ಗೆ 10ಕ್ಕೆ ಕದ್ರಿ ಕಂಬಳ ಗುತ್ತುವಿನ ಕದ್ರಿ ನವನೀತ್ ಶೆಟ್ಟಿಯವರ ಮನೆಯಲ್ಲಿ ಜರಗಲಿದೆ. ಮುಂದಿನ 60 ವಾರಗಳಲ್ಲಿ ಮನೆ ಮನೆಗಳಲ್ಲಿ ಗಿಡ ನೆಡುವ ಅಭಿಯಾನ ಮುಂದುವರಿಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story