ಅವಸರದ ನೋಟ್ ರದ್ದತಿಗೆ ಕಾರಣ...
ದಾಲ್ ಮೆ ಕುಚ್ ನಹೀ, ಬಹುತ್ ಕಾಲಾ ಹೈ
ಅವಸರದ ನೋಟ್ ರದ್ದತಿಗೆ ಕಾರಣವೇನೆಂಬುದನ್ನು ಪ್ರಶಾಂತ್ ಭೂಷಣ್ ಸಿಬಿಐ, ಸಿಬಿಡಿಟಿ,ಸಿವಿಸಿ ಮತ್ತು ಕಪ್ಪುಹಣ ಪತ್ತೆಗಾಗಿ ರಚಿಸಲಾದ SIT ಗೆ ಬರೆದ ಪತ್ರಗಳನ್ನು
ಉಲ್ಲೇಖಿಸಿ 'ಫ್ರಂಟ್ ಲೈನ್' ವರದಿ ಮಾಡಿದೆ:
'೨೦೧೪ರ ನವಂಬರ್ ತಿಂಗಳಲ್ಲಿ ವರಮಾನ ತೆರಿಗೆ ಇಲಾಖೆ ಸಹಾರಾ ಗ್ರೂಪ್ ಮೇಲೆ ದಾಳಿ ನಡೆಸಿತ್ತು. ಆಗ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ಸಹಾರ ಗ್ರೂಪ್ ನಿಂದ ಹಣ ಪಡೆದವರ ಅನೇಕ ಹೆಸರುಗಳಿದ್ದವು. ಅದರಲ್ಲಿ ಒಂದು ಹೆಸರು ಗುಜರಾತ್ ಮುಖ್ಯ ಮಂತ್ರಿ 'Modi ji'. 'ಜೈಸ್ವಾಲ್ ಜಿ' ಎಂಬವರ ಮೂಲಕ ಅಹ್ಮದಾಬಾದ್ ನಲ್ಲಿ ರೂ.೪೦.೧೦ ಕೋಟಿ ರೂಪಾಯಿಗಳನ್ನು ಮೋದಿಜಿಯವರಿಗೆ ಎಂಟು ಕಂತುಗಳಲ್ಲಿ ನೀಡಲಾಗಿತ್ತು ಎಂದು ಡೈರಿಯಲ್ಲಿ ಬರೆಯಲಾಗಿತ್ತು. ಇದೇ ಅವಧಿಯಲ್ಲಿ ನರೇಂದ್ರಮೋದಿ ಅವರನ್ನು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ.ಎಂದು ಘೋಷಿಸಲಾಗಿತ್ತು. ಪ್ರಶಾಂತ್ ಭೂಷಣ್ ಪ್ರಕಾರ ಆ ಡೈರಿಯಲ್ಲಿ CM MP, CM Chattisgarh ಮತ್ತು CM Delhi ಎಂಬ ಎಂಟ್ರಿಗಳಿವೆಯಂತೆ .
ಪ್ರಶಾಂತ್ ಭೂಷಣ್ ಪ್ರಕಾರ ಅಕ್ಟೋಬರ್ ೨೦೧೩ರಲ್ಲಿ ಆದಿತ್ಯ ಬಿಱ್ಲಾ ಗ್ರೂಪ್ ಮೇಲೆ ನಡೆಸಿದ್ದ ಐಟಿ ದಾಳಿಯಲ್ಲಿ ಪತ್ತೆಯಾದ ದಾಖಲೆ ಪತ್ರದಲ್ಲಿ 'CM Gujarath' ಇವರಿಗೆ ೨೫ ಕೋಟಿ ರೂ.ನೀಡಿರುವ ಎಂಟ್ರಿ ಇದೆಯಂತೆ.
ಪ್ರಶಾಂತ್ ಭೂಷಣ್ ಕಳೆದೆರಡು ವರ್ಷಗಳಿಂದ ಈಡೈರಿಗಳ ಹಿಂದೆ ಬಿದ್ದಿದ್ದಾರೆ. ಇದೇ ವೇಳೆ ರಾಮ ಜೇಠ್ಮಲಾನಿ ಕೂಡಾ ಕೇಂದ್ರ ಹಣಕಾಸು ಸಚಿವರಿಗೆ ಪತ್ರಬರೆದು ನೋಟ್ ರದ್ದತಿ ಯಾವುದೋ ದೊಡ್ಡ ಹಗರಣವನ್ನು ಮುಚ್ಚಿಹಾಕಲು ಜನಮನವನ್ನು ಬೇರೆಕಡೆ ಸೆಳೆಯಲು ಮಾಡಿದ ತಂತ್ರ ಎಂದು ಆರೋಪಿಸಿದ್ದಾರೆ.