2016 ನೆ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪ್ರಕಟ
ಹೊಸದಿಲ್ಲಿ, ಡಿ. 23 : ಖ್ಯಾತ ಬಂಗಾಳಿ ಸಾಹಿತಿ ಹಾಗೂ ವಿಮರ್ಶಕ ಶಂಖಾ ಘೋಷ್ ಅವರು 2016 ನೆ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಶ್ರೇಷ್ಠ ಕೊಡುಗೆಗಾಗಿ ಭಾರತದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ.
1965 ರಲ್ಲಿ ಪ್ರಾರಂಭವಾದ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಆರನೇ ಬಂಗಾಳಿ ಸಾಹಿತಿ ಶಂಖಾ ಘೋಷ್. ಈಗಿನ ಬಾಂಗ್ಲಾ ದೇಶದ ಚಂದೀಪುರದಲ್ಲಿ ಜನಿಸಿದ ಘೋಷ್ ಅವರು ರವೀಂದ್ರ ನಾಥ ಠಾಗೋರ್ ಅವರ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರು.
ಘೋಷ್ ಅವರು ಈಗಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
Next Story