ರಾಷ್ಟ್ರೀಯ ಲಾಂಛನ ರೂಪಿಸಿದ್ದ ಕಲಾವಿದ ಭಾರ್ಗವ ನಿಧನ
ಭೋಪಾಲ್,ಡಿ.25: ನಮ್ಮ ರಾಷ್ಟ್ರೀಯ ಲಾಂಛನವಾಗಿ ಸಾರನಾಥದ ಸಿಂಹ ಬೋದಿಗೆ ಮತ್ತು ಅಶೋಕ ಚಕ್ರವನ್ನು ವಿನ್ಯಾಸಗೊಳಿಸಿದ್ದ ಮತ್ತು ಕರಡು ಸಂವಿಧಾನದ ಪುಟಗಳನ್ನು ಸುಂದರಗೊಳಿಸಿದ್ದ ತಂಡದಲ್ಲಿ ಸಹ ಕಲಾವಿದರಾಗಿದ್ದ ದೀನಾನಾಥ ಭಾರ್ಗವ(89) ಅವರು ಶನಿವಾರ ಇಂದೋರನಲ್ಲಿ ನಿಧನರಾದರು. ಅವರು ಕಳೆದೊಂದು ದಶಕದಿಂದ ಹದ್ರೋಗದಿಂದ ಬಳಲುತ್ತಿದ್ದರು.
ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1927,ನ.1ರಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮುಲ್ತಾಯಿಯಲ್ಲಿ ಜನಿಸಿದ್ದ ಭಾರ್ಗವ ಅವರನ್ನು ಆಗ ಶಾಂತಿನಿಕೇತನದ ಕಲಾಭವನದ ಪ್ರಾಂಶುಪಾಲರಾಗಿದ್ದ ಖ್ಯಾತ ಕಲಾವಿದ ನಂದಲಾಲ ಬೋಸ್ ಅವರು ಭಾರತಿಯ ಸಂವಿಧಾನದ ಕರಡು ಪ್ರತಿಯ ಪುಟಗಳನ್ನು ವಿನ್ಯಾಸಗೊಳಿಸಿದ ತಂಡಕ್ಕೆ ಅಯ್ಕೆ ಮಾಡಿದ್ದರು. ಆಗ ಭಾರ್ಗವ ಶಾಂತಿ ನಿಕೇತನದಲ್ಲಿ ಫೈನ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದರು.
ಸರಕಾರವು 1950,ಜ.2ರಂದು ರಾಷ್ಟ್ರೀಯ ಲಾಂಛನವನ್ನು ಅಳವಡಿಸಿಕೊಂಡಿತ್ತು.
Next Story