ಮಾದರಿಯಾಗಲು ಮೈಲು ದೂರ
ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ, ಮಾನವ ಸಂಪನ್ಮೂಲ ಕೊರತೆ, ಆರೋಗ್ಯ ಲಭ್ಯತೆ ಹಾಗೂ ಕೈಗೆಟಕದ ಆರೋಗ್ಯ ಸೌಲಭ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ಪಡೆಯಲು ಭಾರತ ಸರಕಾರ ಉದ್ದೇಶಿಸಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಸ್ಥಾಪನೆಯಾಗಿರುವ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರ ಈ ನಿಟ್ಟಿನಲ್ಲಿ ಅಗತ್ಯ ತಾಂತ್ರಿಕ ನೆರವು ನೀಡುತ್ತಿದೆ. ಮೊಬೈಲ್ ಹೆಲ್ತ್ ಘಟಕಗಳು ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಿಕೊಡುವ ಹೊಣೆ ಇದರದ್ದು. ಈ ಕೇಂದ್ರದ ಆರೋಗ್ಯ ಸುರಕ್ಷೆ ತಂತ್ರಜ್ಞಾನ ಮತ್ತು ಅನುಶೋಧನೆ ವಿಭಾಗದ ಮುಖ್ಯಸ್ಥ ಡಾ.ಜಿತೇಂದ್ರ ಕುಮಾರ್ ಶರ್ಮಾ, ಇಡೀ ವ್ಯವಸ್ಥೆಯ ಸುಧಾರಣೆಯ ರೂಪುರೇಷೆಗಳನ್ನು ವಿವರಿಸಿದ್ದಾರೆ.
ನಮ್ಮ ಮುಖ್ಯ ಉದ್ದೇಶ ಆರೋಗ್ಯ ಕ್ಷೇತ್ರ ಬಲಪಡಿಸುವುದು. ಕ್ಲಿನಿಕಲ್ ಆರೋಗ್ಯ ಸೇವೆಯತ್ತ ನಮ್ಮ ಗಮನ. ಆರೋಗ್ಯ ಸೇವೆ ಎನ್ನುವುದು ಕ್ಲಿನಿಕಲ್ ಚಟುವಟಿಕೆ ಹಾಗೂ ಬೆಂಬಲಿತ ಪೂರಕ ಚಟುವಟಿಕೆಗಳ ಸಮ್ಮಿಶ್ರ. ಲಾಂಡ್ರಿ ಲಾಜಿಸ್ಟಿಕ್ನಂಥ ಸೇವೆಯನ್ನೂ ನಾವು ಆರೋಗ್ಯ ಸೇವೆಯಲ್ಲಿ ನೀಡುತ್ತಿದ್ದೇವೆ. ಆದರೆ ಸರಕಾರದ ಸ್ಪಷ್ಟ ಅಭಿಪ್ರಾಯವೆಂದರೆ, ಆರೋಗ್ಯ ವಿಭಾಗವು ರೋಗಿಗಳ ಆರೈಕೆಯ ಪ್ರಮುಖ ಚಟುವಟಿಕೆಗಳತ್ತ ಗಮನ ಹರಿಸಬೇಕು. ಇದಕ್ಕೆ ಬೆಂಬಲಿತ ಚಟುವಟಿಕೆಗಳು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಡೆಯಬೇಕು.
ಆರೋಗ್ಯ ಕ್ಷೇತ್ರದಲ್ಲಿ ತಂತ್ರಜಾನವನ್ನು ಸರಕಾರ ಹೇಗೆ ಬಳಕೆ ಮಾಡಿಕೊಳ್ಳುತ್ತದೆ?
-ರೋಗಪತ್ತೆ ಸೇವೆ ಅತ್ಯಂತ ಪ್ರಮುಖವಾಗಿರುವುದರಿಂದ ನಮ್ಮ ವಿಸ್ತೃತ ಕಾರ್ಯವನ್ನು ಈ ಕ್ಷೇತ್ರದಿಂದ ಆರಂಭಿಸುತ್ತಿದ್ದೇವೆ. ರೋಗಪತ್ತೆಯಲ್ಲಿ ರೋಗಲಕ್ಷಣ ಪತ್ತೆ ಯೋಜನೆ ಹಾಗೂ ಟೆಲಿರೇಡಿಯಾಲಜಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಇವೆಲ್ಲವೂ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಆರಂಭವಾಗುತ್ತಿದೆ. ಆಂಧ್ರಪ್ರದೇಶ, ಮಿಜೋರಾಂ, ಮಹಾರಾಷ್ಟ್ರ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಇದು ಜಾರಿಯಾಗಿದೆ. 29 ರಾಜ್ಯಗಳಲ್ಲೂ ಒಂದಲ್ಲ ಒಂದು ಆರೋಗ್ಯ ಯೋಜನೆ ಆರಂಭಿಸಿದ್ದೇವೆ.
ತಳಮಟ್ಟದಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
-ಉದಾಹರಣೆಗೆ ರೋಗಲಕ್ಷಣ ಪತ್ತೆ ಯೋಜನೆಯನ್ನು ವಿವರಿಸುತ್ತೇನೆ. ಇಂದೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಿದ್ದರೆ ಏನು ಮಾಡುತ್ತೀರಿ? ಒಂದು ಪ್ರಯೋಗಾಲಯಕ್ಕೆ ನಿಮ್ಮ ರಕ್ತಮಾದರಿಯನ್ನು ಕಳುಹಿಸಿ ಫಲಿತಾಂಶ ಪಡೆಯುತ್ತೀರಲ್ಲವೇ? ಆದರೆ ಪೆಥಾಲಜಿ ಯೋಜನೆಯಲ್ಲಿ, ರಾಜ್ಯವ್ಯಾಪಿ ಪಾಲುದಾರರನ್ನು ಗುರುತಿಸಲಾಗುತ್ತದೆ. ಅಂಥ ಸಂಸ್ಥೆಗಳು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತದ ಮಾದರಿ ಸಂಗ್ರಹಿಸಲು ಪೆಥಾಲಜಿ ತಜ್ಞರನ್ನು ನೇಮಕ ಮಾಡಿಕೊಳ್ಳುತ್ತವೆ. ಹೀಗೆ ಸಂಗ್ರಹಿಸಿದ ಫಲಿತಾಂಶಗಳನ್ನು ಕಳುಹಿಸಿ, ಆರು ಗಂಟೆಯ ಒಳಗಾಗಿ ವರದಿ ಪಡೆಯಲಾಗುತ್ತದೆ. ಇಡೀ ಪೆಥಾಲಜಿ ಯೋಜನೆಯು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತದೆ.
ಸಿಟಿ ಸ್ಕ್ಯಾನ್ ಹಾಗೂ ಡಯಾಲಿಸಿಸ್ಗೆ ಅಥವಾ ಅಧಿಕ ವೆಚ್ಚದ ಇತರ ಪರೀಕ್ಷೆಗಳಿಗೆ, ನಾವು ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಳಾವಕಾಶ ಕಲ್ಪಿಸುತ್ತೇವೆ. ಖಾಸಗಿ ಸೇವಾದಾರರು ಇಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿ, ಸೇವೆ ನೀಡುತ್ತವೆ. ತಪಾಸಣೆಯ ಹಣವನ್ನು ನಾವು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಪಾವತಿಸುತ್ತೇವೆ. ಇದು ಯೋಜನಾಬದ್ಧವಾದ ಸ್ಮಾರ್ಟ್ ಹೆಲ್ತ್ ಯೋಜನೆಯಾಗಿದೆ.
ವೈದ್ಯಕೀಯ ಸಾಧನ ನಿರ್ವಹಣೆ ಯೋಜನೆ ಇನ್ನೊಂದು ಆಯಾಮ. ನಮ್ಮಲ್ಲಿ 4,564 ಕೋಟಿ ರೂ.ಗಳ ವೈದ್ಯಕೀಯ ಸಾಧನ- ಸಲಕರಣೆಗಳು 29 ರಾಜ್ಯಗಳಲ್ಲಿವೆ. ಈ ಪೈಕಿ 1,015 ಕೋಟಿ ರೂ. ವೌಲ್ಯದ ಸಾಧನಗಳು ಕಾರ್ಯನಿರ್ವಹಿಸುತ್ತಿಲ್ಲ. ಅದನ್ನು ಸರಿಪಡಿಸಲು ನಮ್ಮಲ್ಲಿ ಇಂಜಿನಿಯರ್ಗಳಿಲ್ಲ. ಇದಕ್ಕೆ ಅಗತ್ಯ ಬಿಡಿ ಭಾಗಗಳನ್ನು ಖರೀದಿಸಲು ಸರಕಾರಿ ವ್ಯವಸ್ಥೆಯಲ್ಲಿ ಮೂರು ಕೊಟೇಷನ್ ಪಡೆಯಬೇಕು. ಇದೀಗ ರಾಜ್ಯವ್ಯಾಪಿ ಟೆಂಡರ್ ಕರೆದು, ಪಾಲುದಾರ ಸಂಸ್ಥೆಯನ್ನು ಆಯ್ಕೆ ಮಾಡಲಾಗುತ್ತದೆ. ಇಂಥ ಸಂಸ್ಥೆಗಳು ಇಂಜಿನಿಯರ್ಗಳನ್ನು ಒದಗಿಸಿಕೊಡುವ, ಬಿಡಿಭಾಗಗಳನ್ನು ಒದಗಿಸುವ ಮತ್ತು ಯಂತ್ರಗಳನ್ನು ನಿರ್ವಹಿಸುವ ಕಾರ್ಯ ಮಾಡುತ್ತವೆ. ಇದನ್ನು ಆನ್ಲೈನ್ನಲ್ಲೂ ಪರೀಕ್ಷಿಸಬಹುದಾಗಿದೆ.
ಯಾವ ಬಗೆಯ ಅನುಶೋಧನೆಗಳ ಬಗ್ಗೆ ಮಾತನಾಡುತ್ತಿದ್ದೇವೆ?
-ನಮ್ಮಲ್ಲಿ ರಾಷ್ಟ್ರೀಯ ಆರೋಗ್ಯ ಅನುಶೋಧನೆ ಪೋರ್ಟಲ್ ಇದ್ದು, ಇದರಲ್ಲಿ ಹಲವು ಮಂದಿ ತಮ್ಮ ಅನುಶೋಧನೆಗಳ ವಿವರಗಳನ್ನು ನೀಡುತ್ತಾರೆ. ಇದರಲ್ಲಿ ಆಸಕ್ತಿದಾಯಕ ಎನಿಸಿದ ಅನುಶೋಧನೆಗಳನ್ನು ವೌಲ್ಯಮಾಪನ ಮಾಡಿ ಅನುಮೋದನೆ ನೀಡುತ್ತೇವೆ. ಇದರಲ್ಲಿ ಕೆಲ ಯೋಜನೆಗಳು ಇಲ್ಲಿಂದ ಅಭಿವೃದ್ಧಿ ಹೊಂದಿದಂಥವು. ಕೆಲ ಅನುಶೋಧನೆಗಳು ಸರಕಾರದ್ದು.
ಒಂದು ತೀರಾ ಆಸಕ್ತಿದಾಯಕ ಅನುಶೋಧನೆ ಇದೆ. ಉಪಕೇಂದ್ರಗಳ ಮಟ್ಟದಲ್ಲಿ ನಮ್ಮಲ್ಲಿ ಎಎನ್ಎಂ (ಆನ್ಸಿಲರಿ ನರ್ಸ್ ಆ್ಯಂಡ್ ಮಿಡ್ವೈಫ್)ಗಳಿದ್ದಾರೆ. ಇವರಿಗೆ ಔಷಧಗಳನ್ನು ಬರೆದುಕೊಡುವ ಅಧಿಕಾರ ಇಲ್ಲ. ನಾವು ಮಾಡಿರುವುದೆಂದರೆ ಹೆಲ್ತ್ ಎಟಿಎಂ ವ್ಯವಸ್ಥೆ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮಲ್ಟಿಪ್ಯಾರಾ ಮಾನಿಟರ್ ಮೂಲಕ ಎಲ್ಲ ರೋಗಿಗಳ ಮಾಹಿತಿಯನ್ನು ಪಡೆಯಲಾಗುತ್ತದೆ. ಇದನ್ನು ವೈದ್ಯಕೀಯ ಕಾಲ್ಸೆಂಟರ್ಗೆ ಎಸ್ಎಂಎಸ್ ಮೂಲಕ ರವಾನಿಸಲಾಗುತ್ತದೆ.
ಜಿಎಸ್ಎಂ ಬೇಸ್ನಲ್ಲಿ ಇಂಟರ್ನೆಟ್ ಸಹಾಯ ಇಲ್ಲದೇ ರವಾನಿಸಲಾಗುತ್ತದೆ. ಕಾಲ್ಸೆಂಟರ್ನ ನಿರ್ದೇಶಕರು ಎಲ್ಲ ಪ್ರಮುಖ ಮಾಹಿತಿಗಳನ್ನು ಪಡೆದು, ಅಗತ್ಯಬಿದ್ದರೆ ರೋಗಿಗಳ ಜತೆ ಮಾತನಾಡುತ್ತಾರೆ. ಬಳಿಕ ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆಗೆ ಅನುಗುಣವಾಗಿ ಔಷಧಗಳನ್ನು ಬರೆದುಕೊಡುತ್ತಾರೆ. ಎಸ್ಸೆಮ್ಮೆಸ್ ಮೂಲಕ ಈ ಆದೇಶ ಬರುತ್ತದೆ.
ನಾವು ಲಘುಪಾನೀಯದ ಮಾರಾಟ ಯಂತ್ರವನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಲ್ಲಿ ಬಳಸುತ್ತೇವೆ. ಇದರ ಮೂಲಕ ವೈದ್ಯರು ಶಿಫಾರಸು ಮಾಡುವ ಔಷಧಗಳನ್ನು ನೀಡಲಾಗುತ್ತದೆ. ಅದರ ಸ್ಪ್ರಿಂಗ್ಗಾತ್ರವನ್ನು ಬದಲಿಸುವ ಮೂಲಕ ಔಷಧ ನೀಡಲು ಇದರಲ್ಲಿ ಅವಕಾಶವಿದೆ. ಇದು ಸ್ಪ್ರಿಂಗ್ ಆವರ್ತ ತತ್ವದಡಿ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ನಿಗದಿತ ಔಷಧದ ದಾಸ್ತಾನು ಪ್ರಮಾಣವನ್ನು ನೀವು ತಿಳಿದುಕೊಂಡಿದ್ದರೆ ಸಾಕು. ಇದು ಆಂಧ್ರಪ್ರದೇಶದ 25 ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ತರ ಪ್ರದೇಶದಲ್ಲಿ 100, ಒಡಿಶಾದಲ್ಲಿ ಮೂರು, ಹಿಮಾಚಲಪ್ರದೇಶದಲ್ಲಿ ಮೂರು, ಮಧ್ಯಪ್ರದೇಶದಲ್ಲಿ ನಾಲ್ಕು ಇಂಥ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಆರೋಗ್ಯ ಎಟಿಎಂಗಳ ಪೇಟೆಂಟ್ ಭಾರತ ಸರಕಾರದ್ದು.
ನಾವು ಆರೋಗ್ಯ ಕ್ಷೇತ್ರದ ಮೇಲೆ ತೀರಾ ಕಡಿಮೆ ಎಂದರೆ ಜಿಡಿಪಿಯ ಶೇ.2ರಷ್ಟನ್ನು ಮಾತ್ರ ವೆಚ್ಚ ಮಾಡುತ್ತಿದ್ದೇವೆ. ಆರೋಗ್ಯ ಸೇವೆಗಳಿಗೆ ಪರ್ಯಾಯವಾಗಿ ಅನುಶೋಧನೆಯನ್ನು ನಾವು ಎದುರು ನೋಡುತ್ತಿದ್ದೇವೆಯೇ?
-ವಾಸ್ತವವಾಗಿ ಅಲ್ಲ. ನಮ್ಮ ಮುಖ್ಯ ಉದ್ದೇಶ ಆರೋಗ್ಯ ಕ್ಷೇತ್ರ ಬಲಪಡಿಸುವುದು. ಕ್ಲಿನಿಕಲ್ ಆರೋಗ್ಯ ಸೇವೆಯತ್ತ ನಮ್ಮ ಗಮನ.
ಆರೋಗ್ಯ ಸೇವೆ ಎನ್ನುವುದು ಕ್ಲಿನಿಕಲ್ ಚಟುವಟಿಕೆ ಹಾಗೂ ಬೆಂಬಲಿತ ಪೂರಕ ಚಟುವಟಿಕೆಗಳ ಸಮ್ಮಿಶ್ರ. ಲಾಂಡ್ರಿ ಲಾಜಿಸ್ಟಿಕ್ನಂಥ ಸೇವೆಯನ್ನೂ ನಾವು ಆರೋಗ್ಯ ಸೇವೆಯಲ್ಲಿ ನೀಡುತ್ತಿದ್ದೇವೆ. ಆದರೆ ಸರಕಾರದ ಸ್ಪಷ್ಟ ಅಭಿಪ್ರಾಯವೆಂದರೆ, ಆರೋಗ್ಯ ವಿಭಾಗವು ರೋಗಿಗಳ ಆರೈಕೆಯ ಪ್ರಮುಖ ಚಟುವಟಿಕೆಗಳತ್ತ ಗಮನ ಹರಿಸಬೇಕು. ಇದಕ್ಕೆ ಬೆಂಬಲಿತ ಚಟುವಟಿಕೆಗಳು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಡೆಯಬೇಕು. ಅಂದರೆ ಐಆರ್ಸಿಟಿಸಿ ಮೂಲಕ ರೈಲುಗಳಿಗೆ ಲಾಂಡ್ರಿ ಸೇವೆಯನ್ನು ನೀಡುವಂಥವರು ಆಸ್ಪತ್ರೆಗಳಿಗೂ ನೀಡಬೇಕು. ಈ ಕೆಲಸವನ್ನು ವೈದ್ಯರು ಮಾಡಬೇಕಿಲ್ಲ. ಸರಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಈ ಚಟುವಟಿಕೆಗಳನ್ನು ನಿರ್ವಹಿಸಿದಾಗ, ಮಿತವ್ಯಯ ಸಾಧ್ಯವಾಗುತ್ತದೆ. ಪೂರಕ ಚಟುವಟಿಕೆಗಳ ವೆಚ್ಚ ಕಡಿಮೆಯಾಗುತ್ತದೆ.
ದೇಶದ ಹಲವು ಜಿಲ್ಲೆಗಳಲ್ಲಿ ವೈದ್ಯರು ಹಾಗೂ ಮೂಲಭೂತ ಆರೋಗ್ಯ ಸೌಲಭ್ಯಗಳೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಅನುಶೋಧನೆಗಳ ಬಗ್ಗೆ ಮಾತನಾಡುವುದು ವೈರುಧ್ಯ ಎನಿಸುವುದಿಲ್ಲವೇ?
-ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಕೆಲಸ ಮಾಡಬೇಕು. ನೀವು ಜಾರ್ಖಂಡ್ನ ಕತ್ರಾಸ್ನಿಂದ ರಾಂಚಿಗೆ ಬಂದರೆ, ನೀವು ಮಾಳವಿಯಿಂದ ಮಸಾಜು ಸೆಟ್ಸ್ ಗಳನ್ನು ನೋಡಿರುತ್ತೀರಿ. ಅದು ವಾಸ್ತವ. ಯೋಜನಾಗಾರರು ಮಾಡುವ ಕೆಲಸಕ್ಕೂ ಒಂದು ಮಿತಿ ಇದೆ. ಸ್ಥಳೀಯ ಸರಕಾರಗಳು ಮಾಡಬೇಕಾದ ಕೆಲಸಗಳೂ ಸಾಕಷ್ಟಿವೆ. ಮೂಲಭೂತ ವ್ಯವಸ್ಥೆಯೂ ಇಲ್ಲ ಎಂದಾದರೆ, ಸ್ಥಳೀಯ ಸರಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂಬ ಅರ್ಥ.
ಆಶಾ ಕಾರ್ಯಕರ್ತರು, ಎಎನ್ಎಂಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾರೆ ಎನಿಸುತ್ತದೆಯೇ?
-ಇದು ನಾವು ಅದನ್ನು ಹೇಗೆ ಪ್ಯಾಕೇಜ್ನಲ್ಲಿ ನೀಡುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ಇದು ಎಂಹೆಲ್ತ್ ಯೋಜನೆ. ಇದನ್ನು ಮಾಡಲೇಬೇಕು. ನೀವು ನಿಮ್ಮ ಮಾಹಿತಿಗಳನ್ನು ಟ್ಯಾಬ್ ಮೂಲಕ ಕಳುಹಿಸಿ ಎಂದು ಹೇಳಬೇಕು. ಇದು ಒಂದು ಸಣ್ಣ ವಲಸೆ ಪ್ರಕ್ರಿಯೆ. ಆದರೆ ಇದು ಅವರ ಕೆಲಸಕ್ಕೆ ವೌಲ್ಯವರ್ಧನೆ ನೀಡಿದಂತೆ. ಅವರ ಮೂಲ ಸೇವೆ ರೋಗಿಗಳ ಆರೈಕೆ.
ಉದಾಹರಣೆಗೆ ಎಎನ್ಎಂಗಳು ಹಿಮೋಗ್ಲೋಬಿನ್ ಪ್ರಮಾಣ ಅಳೆಯಬೇಕು. ಒಂದು ದೃಷ್ಟಿಕೋನವೆಂದರೆ ಅದರ ಮಾಪನಕ್ಕೆ ಸೂಚಿಸುವುದು ಮತ್ತು ಟ್ಯಾಬ್ನಲ್ಲಿ ಅದನ್ನು ಹಾಕಿದರೆ ರೋಗಿಯ ಮಾಹಿತಿಯಲ್ಲಿ ಅದು ಸೇರಿಕೊಳ್ಳುತ್ತದೆ.
ಹಿಮೋಗ್ಲೋಬಿನ್ ಪ್ರಮಾಣವನ್ನು ಸಾಹ್ಲಿ ವಿಧಾನದ ಮೂಲಕ ಎನ್/10 ಹೈಡ್ರೋಕ್ಲೋರಿಕ್ ಆಮ್ಲ ಬಳಸಿಕೊಂಡು ಮಾಡಬಹುದು. ಆದರೆ ಇದನ್ನು ಗ್ರಾಮಗಳಲ್ಲಿ ದಾಸ್ತಾನು ಮಾಡಲು ಸಾಧ್ಯವಿಲ್ಲ. ಆದರೆ ಹೊಸ ವ್ಯವಸ್ಥೆಯಲ್ಲಿ ಡಿಜಿಟಲ್ ಹಿಮೋಗ್ಲೋಬಿನ್ ಮೀಟರ್ ಇದೆ. ಇದು ಕಣ್ಣಿನ ಚಿತ್ರವನ್ನು ಫೋನ್ ಮೂಲಕ ತೆಗೆದುಕೊಂಡು, ಡಿಜಿಟಲ್ ಹಿಮೋಗ್ಲೋಬಿನ್ ಪ್ರಮಾಣವನ್ನು ನಿಮಗೆ ನೀಡುತ್ತದೆ. ಇದು ಸ್ಕ್ರೀನಿಂಗ್ಗೆ ಸಾಕಾಗುತ್ತದೆ. ಇದನ್ನು ರಾಷ್ಟ್ರೀಯ ಆರೋಗ್ಯ ಅನುಶೋಧನೆ ಪೋರ್ಟಲ್ನಲ್ಲಿ ಅಂಗೀಕರಿಸಿದ್ದೇವೆ.
ವಾಸ್ತವವಾಗಿ ನೀವು ಹಿಮೋಗ್ಲೋಬಿನ್ ಪ್ರಮಾಣವನ್ನು ಡಿಜಿಟಲ್ ವಿಧಾನದಲ್ಲಿ ಪಡೆಯಬಹುದಾಗಿದ್ದು, ಇದರಿಂದಾಗಿ ಸೂಜಿಯ ಗಾಯದ ಅಪಾಯ ಅಥವಾ ಸೋಂಕು ಹರಡುವಿಕೆ ತಪ್ಪುತ್ತದೆ. ಈ ಮಾಹಿತಿಯು ಮಾಹಿತಿ ಕೋಶಕ್ಕೆ ಸೇರುತ್ತದೆ. ಇದು ಎಎನ್ಎಂಗಳ ಮೂಲ ಚಟುವಟಿಕೆ ಎನಿಸಿದ ಆರೈಕೆಗೆ ಪೂರಕವಾಗುತ್ತದೆ. ಇದರ ಮೂಲಕ ವ್ಯವಸ್ಥೆಯಲ್ಲಿ ಆಕೆಯ ಕ್ಷಮತೆ ಹೆಚ್ಚುವ ಬದಲು, ಆಕೆಯೇ ತನ್ನ ಕೆಲಸವನ್ನು ದಕ್ಷವಾಗಿ ಮಾಡಲು ಸಹಕಾರಿಯಾಗುತ್ತದೆ.
ಇಂಟರ್ನೆಟ್ ಸಂಪರ್ಕ ದುರ್ಬಲವಾಗಿರುವ ಸಣ್ಣ ಪಟ್ಟಣ ಹಾಗೂ ಗ್ರಾಮಗಳಲ್ಲಿ ಇದನ್ನು ಹೇಗೆ ಬಳಸಲು ಸಾಧ್ಯ?
-ಇಂಟರ್ನೆಟ್ ಸಂಪರ್ಕ ಸುಧಾರಿಸುತ್ತಿದೆ. ಆದರೆ ನಾವು ಎಂಹೆಲ್ತ್ ಸಾಧನಗಳನ್ನು ಅಭಿವೃದ್ಧಿಪಡಿಸಿದಾಗಲೆಲ್ಲ, ಅದನ್ನು ಜಿಎಸ್ಎಂ ಬೇಸ್ನಲ್ಲಿ ಸ್ವೀಕರಿಸಿಕೊಳ್ಳುವುದನ್ನೂ ನೋಡುತ್ತೇವೆ. ಇಂಟರ್ನೆಟ್ ಇಲ್ಲದ ಪ್ರದೇಶದಲ್ಲಿ ಎಸ್ಸೆಮ್ಮೆಸ್ ಮೂಲಕ ನಿರ್ವಹಿಸಬೇಕಾಗುತ್ತದೆ.