ಯಾವ ಸರಕಾರ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲದು: ರೈ
ಮಂಗಳೂರು, ಡಿ.31: ರಾಜ್ಯದಲ್ಲಿ ಯಾವುದೇ ಸರಕಾರ ಅಕಾರಕ್ಕೆ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಪಕ್ಷದ ನೂತನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಕಾರದಲ್ಲಿದ್ದಾಗ ತಂದ ಯೋಜನೆ ಇದಾಗಿದ್ದು, ಅದನ್ನು ಕಾಂಗ್ರೆಸ್ ಸರಕಾರ ಮುಂದುವರಿಸುತ್ತಿದೆ. ಎತ್ತಿನಹೊಳೆ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಈಗಾಗಲೇ ತಜ್ಞರ ಜೊತೆ ಮುಖ್ಯಮಂತ್ರಿಯವರು ಚರ್ಚೆ ನಡೆಸಿದ್ದಾರೆ. ಯೋಜನೆಯ ವಿರುದ್ಧದ ಹೋರಾಟಗಾರರಿಗೂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಯೋಜನೆಗೆ ಸಂಬಂಸಿದಂತೆ ಚರ್ಚೆ ನಡೆಸಲಾಗಿದ್ದು, ಆ ವೇಳೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದು ನಿಜ. ಆದರೆ ಸಭೆಯಲ್ಲಿ ಯಾವುದೇ ಅಪಸ್ವರ ಎತ್ತದ ಹೋರಾಟಗಾರರು ಹೊರ ಬಂದ ಬಳಿಕ ಭಿನ್ನ ಧ್ವನಿ ಎತ್ತಿರುವುದು ವಿಪರ್ಯಾಸ. ಕೆಲವರು ರಾಜಕೀಯ ಲಾಭಕ್ಕೋಸ್ಕರ ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಬಿಜೆಪಿಯವರಂತೂ ಹೊರಗೊಂದು, ಒಳಗೊಂದು ಹೇಳಿಕೆ ನೀಡುವುದನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ ಎಂದರು.
ಎತ್ತಿನಹೊಳೆ ಯೋಜನೆಗೆ ಸರಕಾರ ಅನುಮತಿ ಕೊಟ್ಟಿಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಇಲಾಖಾ ಸಚಿವ ಅನಿಲ್ ಮಾಧವ ಧವೆ ಮೂಡುಬಿದಿರೆಯಲ್ಲಿ ನೀಡಿದ ಪ್ರತಿಕ್ರಿಯೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ರೈ, ಹಾಗಿದ್ದರೆ ಅವರು ಈ ಯೋಜನೆಯನ್ನು ನಿಲ್ಲಿಸಬಹುದಲ್ಲಾ ಎಂದು ಮಾರ್ಮಿಕವಾಗಿ ಉತ್ತರಿಸಿದರಲ್ಲದೆ ಕೇಂದ್ರ ಅರಣ್ಯ ಸಚಿವರು ಮೂಡುಬಿದಿರೆಯಲ್ಲಿ ನೀಡಿದ ಈ ಹೇಳಿಕೆಯನ್ನು ಕೋಲಾರದಲ್ಲಿ ನೀಡಲು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರು.
*ವೈಯಕ್ತಿಕ ಟೀಕೆ ಮಾಡುವುದಿಲ್ಲ:
ಪಕ್ಷದ ಹಿರಿಯ ಅಥವಾ ಕಿರಿಯ ನಾಯಕರ ವಿರುದ್ಧ ನಾನು ಈವರೆಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ ವ್ಯಕ್ತಿ ನಾನು ಒಂದೇ ಕಾಲೇಜಿನ, ಒಂದೇ ಹಾಸ್ಟೆಲಿನ ಒಂದೇ ರೂಮ್‌ಮೇಟ್‌ಗಳಾಗಿದ್ದೆವು. ಅದರ ಹೊರತು ನಾನು ಏನನ್ನೂ ಹೇಳಲಾರೆ. ನಾನು ಯಾವತ್ತೂ ಪಕ್ಷದ ಶಿಸ್ತು ಮೀರುವುದಿಲ್ಲ. ಪಕ್ಷದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಶಿಸ್ತು ಸಮಿತಿಯೇ ಕ್ರಮ ಜರಗಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಮೊಯ್ದಿನ್ ಬಾವಾ, ರಾಜ್ಯ ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುೀರ್, ಜಿಲ್ಲಾ ವಕ್ತಾರರಾದ ಾರೂಕ್ ಉಳ್ಳಾಲ್, ಎ.ಸಿ.ವಿನಯರಾಜ್, ಪ್ರ.ನಝೀರ್ ಬಜಾಲ್, ಕಾರ್ಪೊರೇಟರ್‌ಗಳಾದ ಕವಿತಾ ಸನಿಲ್, ಡಿ.ಕೆ.ಅಶೋಕ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ತಾಪಂ ಸದಸ್ಯ ಪೃಥ್ವಿರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು.