ಓ ಮೆಣಸೇ ...
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವೇ ಅಧಿಕಾರಕ್ಕೆ ಬರುತ್ತೇವೆಂದು ಜೆಡಿಎಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ
-ಡಿ.ಕೆ ಶಿವಕುಮಾರ್, ಸಚಿವ
ತಾವು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಹಾಗೆ.
---------------------
ಸಿಂಧ್ ಪ್ರಾಂತ ಒಳಗೊಳ್ಳದಿದ್ದರೆ ಭಾರತ ಪೂರ್ಣಗೊಳ್ಳುವುದಿಲ್ಲ
-ಎಲ್.ಕೆ ಅಡ್ವಾಣಿ, ಬಿಜೆಪಿ ನಾಯಕ
ಮೊದಲು ಬೇರೆ ಬೇರೆಯಾಗುತ್ತಿರುವ ಭಾರತದ ಮನಸುಗಳನ್ನು ಒಳಗೊಳ್ಳುವಂತೆ ಮಾಡೋಣ.
---------------------
ಯಡಿಯೂರಪ್ಪ -ಈಶ್ವರಪ್ಪ ಗುದ್ದಾಟದಿಂದ ನೋವಾಗಿದೆ
-ಎಸ್.ಸುರೇಶ್ ಕುಮಾರ್, ಬಿಜೆಪಿ ಮುಖಂಡ
ಅನಂತಕುಮಾರ್ ಅವರು ಒಳಗೊಳಗೆ ಖುಷಿಯಾಗಿದ್ದಾರಂತೆ.
---------------------
ನವಜೋತ್ ಸಿಂಗ್ ಸಿಧು ಮುಳುಗುವ ಹಡಗಿನಲ್ಲಿ ಕುಳಿತಿದ್ದಾರೆ
-ಕಿರಣ್ ರಿಜಿಜು, ಕೇಂದ್ರ ಸಚಿವ
ಈಜು ಬರದವ ಮತ್ತೇನು ಮಾಡಬೇಕು?
---------------------
ನನ್ನ ಬಳಿ ಬ್ಲಾಕ್ ಮನಿಯೂ ಇಲ್ಲ, ವೈಟ್ ಮನಿಯೂ ಇಲ್ಲ. ಅಷ್ಟೇ ಅಲ್ಲ. ನಯಾಪೈಸೆಯೂ ಇಲ್ಲ, ನಾನು ಸನ್ಯಾಸಿ
-ಬಾಬಾ ರಾಮ್‌ದೇವ್, ಯೋಗ ಗುರು
ಕೈಯಲ್ಲಿ ಹಣ ಇಟ್ಟುಕೊಳ್ಳುವುದು ಅಪಾಯ ಎನ್ನುವುದನ್ನು ಮಾರ್ಜಾಲ ಸನ್ಯಾಸಿಗೆ ಪ್ರತ್ಯೇಕವಾಗಿ ಕಲಿಸಿಕೊಡಬೇಕೇ?
---------------------
ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ
- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಅದಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವಕಾಶ ನೀಡಬೇಕಲ್ಲ?
---------------------
ನಾನು ಹುಟ್ಟಿನಿಂದಲೇ ಕಾಂಗ್ರೆಸಿಗ
-ನವಜೋತ್ ಸಿಂಗ್ ಸಿಧು, ಮಾಜಿ ಸಂಸದ
ಕಾಮಿಡಿ ಸರ್ಕಸ್‌ನಲ್ಲಿ ಹೇಳಿ ನೋಡಿ.
---------------------
ಈಶ್ವರಪ್ಪ ಮತ್ತು ನನ್ನ ನಡುವೇ ಯಾವುದೇ ಭಿನ್ನಾಭಿಪ್ರಾಯವಿಲ್ಲ
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಬರೇ ಹೊಡೆದಾಟ ಮಾತ್ರ. ---------------------
ಈಗಲೂ ಅಪ್ಪನೇ ನನ್ನ ನಾಯಕ
-ಅಖಿಲೇಶ್ ಯಾದವ್, ಉ.ಪ. ಮುಖ್ಯಮಂತ್ರಿ
ಆದರೆ ಮಗನೇ ನನಗೆ ಖಳನಾಯಕ ಎಂದರಂತೆ ಮುಲಾಯಂ.
---------------------
ಯಡಿಯೂರಪ್ಪ ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಲ್ಲ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ತಮ್ಮ ಮುಖ ನೋಡಿದರೆ, ಜನರು ಮತಗಟ್ಟೆಗೆ ಬರಲ್ಲ.
---------------------
ಹಿರೋಶಿಮಾ, ನಾಗಸಾಕಿಗಳಲ್ಲಿದ್ದ ಆರ್ಥಿಕತೆ ಈಗ ಭಾರತದಲ್ಲಿದೆ
-ಉದ್ಧವ್ ಠಾಕ್ರೆ , ಶಿವಸೇನಾ ಮುಖ್ಯಸ್ಥ
ಯಶಸ್ವೀ ಅಣುಬಾಂಬ್ ಪರೀಕ್ಷೆ ಎಂದು ನಕ್ಕರಂತೆ ಮೋದಿ.
---------------------
ಎತ್ತಿನಹೊಳೆ ಯೋಜನೆ ಕಾಂಗ್ರೆಸಿಗರ ಹೊಟ್ಟೆ ತುಂಬಿಸುವ ಬಿಳಿ ಆನೆ
-ಸಿ.ಟಿ.ರವಿ, ಶಾಸಕ
ಆ ಆನೆ ಬಿಜೆಪಿಯ ಹೊಟ್ಟೆಯೊಳಗಿಂದ ಹೊರಬಂದಿರುವುದೇ ದೊಡ್ಡ ಸಮಸ್ಯೆಯಾಗಿರುವುದು.
---------------------
ನಾನು ಕುರಿಯಲ್ಲ, ಕುರುಬ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಬಹುಶಃ ನಿಮ್ಮನ್ನು ಹಿಂಬಾಲಿಸಿದವರು ಕುರಿಗಳಾಗಿರಬಹುದೇ?
---------------------
2020ರ ವೇಳೆಗೆ ಭಾರತ ಯುವ ರಾಷ್ಟ್ರವಾಗಿ ಹೊರಹೊಮ್ಮಲಿದೆ
-ಪ್ರಮೋದ್ ಮಧ್ವರಾಜ್, ಸಚಿವ
ಅಷ್ಟರಲ್ಲಿ ಮುದುಕರೆಲ್ಲ ದೇವರ ಪಾದ ಸೇರುತ್ತಾರೆಯೆ?
---------------------
ಗೋಹತ್ಯೆ ನಿಷೇಧ ಜಾತ್ಯತೀತ ಚಿಂತನೆ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಪಂಕ್ತಿಭೇದ ನಿಷೇಧ ಯಾವ ಚಿಂತನೆಯ ಸಾಲಿಗೆ ಸೇರುತ್ತದೆ ಎನ್ನುವುದನ್ನೂ ಹೇಳಿ.
---------------------
ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ
-ವಿನಯ ಕುಮಾರ್ ಸೊರಕೆ, ಶಾಸಕ
ಸಮಸ್ಯೆಯಿರುವುದು, ನಿಮ್ಮಂಥವರು ಇನ್ನೂ ಕಾಂಗ್ರೆಸ್‌ಗೆ ಅನಿವಾರ್ಯವಾಗಿರುವುದು.
---------------------
ಭಾರತದಲ್ಲಿ ಸತಿ ಪದ್ಧತಿ ಚಾಲ್ತಿಗೆ ಬರಲು ಮುಸ್ಲಿಮರ ದಾಳಿಯೇ ಕಾರಣ
-ಎಸ್.ಎಲ್ ಭೈರಪ್ಪ, ಸಾಹಿತಿ
ಮಹಾಭಾರತದಲ್ಲಿ ಮಾದ್ರಿ ಪಾಂಡುವಿನ ಚಿತೆಗೆ ಹಾರಲು ಯಾವ ಮುಸ್ಲಿಮನು ಕಾರಣ ಎನ್ನುವುದನ್ನು ಸಂಶೋಧನೆ ಮಾಡಿ.
---------------------
ಭಾರತ ವಿಶ್ವದ ಶಾಂತಿ, ಸೌಹಾರ್ದ, ಅಭಿವೃದ್ಧಿ ಬಯಸುತ್ತದೆ
-ನರೇಂದ್ರ ಮೋದಿ, ಪ್ರಧಾನಿ
ತಮ್ಮಿಂದ ಭಾರತ ಬಯಸುತ್ತಿರುವ ಶಾಂತಿ, ಸೌಹಾರ್ದ, ಅಭಿವೃದ್ಧಿಯ ಕತೆ ಏನು?
---------------------
ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕಕ್ಕೆ ಪೊಲೀಸ್ ಇಲಾಖೆ ಅನವಶ್ಯಕ ಅಡ್ಡಿಪಡಿಸುತ್ತಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ
-ಸುನಿಲ್ ಕುಮಾರ್, ಶಾಸಕ
ಜಲ್ಲಿಕಟ್ಟಕ್ಕೆ ನಡೆದ ಹೋರಾಟ ಕೋಳಿಕಟ್ಟಕ್ಕೂ ನಡೆಯಲಿ.
---------------------
ಜಾತಿ ಆಧಾರಿತ ಮೀಸಲಾತಿ ಕೊನೆಯಾಗಲಿ
- ಮನಮೋಹನ್ ವೈದ್ಯ, ಆರೆಸ್ಸೆಸ್ ನಾಯಕ
ಬಹುಶಃ ಮನು ಆಧಾರಿತ ಮೀಸಲಾತಿ ಪುನರಾರಂಭಿಸುವ ಉದ್ದೇಶವಿರಬೇಕು.
---------------------
ಪತ್ರಕರ್ತರು ಜಗತ್ತಿನಲ್ಲಿ ಅತ್ಯಂತ ಅಪ್ರಾಮಾಣಿಕರು
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ ಅದರಿಂದಲೇ ನಿಮ್ಮಂತಹ ಅಪ್ರಾಮಾಣಿಕ ನಾಯಕರು ದೇಶದ ನಾಯಕರಾಗಿ ಮೂಡಿ ಬರಲು ಸಾಧ್ಯವಾಗುತ್ತಿರುವುದು.
---------------------
ಸಾವಿರ ವರ್ಷ ಬದುಕಿದರೂ ಮೋದಿಗೆ ಗಾಂಧಿಯ ಸಮೀಪ ತಲುಪಲು ಸಾಧ್ಯವಿಲ್ಲ
-ವಿ. ಎಸ್. ಅಚ್ಯುತಾನಂದನ್, ಕೇರಳ ನಾಯಕ