ಮಧುಮೇಹಕ್ಕೆ ಹೋಮಿಯೋಪಥಿ -ಆಯುಷ್ ಒತ್ತು!
ಈ ಔಷಧಿಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ 2016ರಲ್ಲಿ ಶಿಫಾರಸು ಮಾಡಿದ್ದಾರೆ. ಆದರೆ ಇದುವರೆಗೂ ಇದರ ಪರಿಣಾಮವನ್ನು ದೃಢಪಡಿಸುವ ಯಾವ ವರದಿಯೂ ವಿಮರ್ಶಾತ್ಮಕ ನಿಯತಕಾಲಿಕಗಳಲ್ಲಿ ಅಥವಾ ಪೇಟೆಂಟ್ ರೂಪದಲ್ಲಿ ಪ್ರಕಟವಾಗಿಲ್ಲ. ಇದು ಆಯುಷ್ ಸಚಿವಾಲಯದಿಂದ ಆಂಗೀಕರಿಸಲ್ಪಟ್ಟಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಕಾನೂನು ಅನ್ವಯ ಇದನ್ನು ಆಂಗೀಕರಿಸಲು ಯಾವ ಆಧಾರವೂ ಇಲ್ಲ.
ಆಯುಷ್ ಸಚಿವಾಲಯವು, ಈ ಬರಹ ಸ್ಪರ್ಧೆಯಲ್ಲಿ ಭಾಗವಹಿಸುವವರ ಪ್ರತಿಪಾದನೆಯನ್ನು ಪುರಸ್ಕರಿಸುವ ಮೂಲಕ ಮಧುಮೇಹ ರೋಗಿಗಳ ಜೀವಕ್ಕೆ ಸಂಚಕಾರ ತರುತ್ತಿದೆ ಎಂದೇ ಹೇಳಬೇಕಾಗುತ್ತದೆ. ಇದನ್ನು ನಂಬಿ ಜನ ಹೋಮಿಯೋಪಥಿ ಔಷಧಿಗಳನ್ನು ಖರೀದಿಸುವ ಮೂಲಕ ತಾವು ಸುರಕ್ಷಿತ ಎಂಬ ಭ್ರಮೆಗೆ ಒಳಗಾಗುವ ಹಾಗೂ ತಮ್ಮ ಸಂಪನ್ಮೂಲವನ್ನು ಚಿಕಿತ್ಸೆಗೆ ಪೂರಕವಾದ ಉದ್ದೇಶಕ್ಕೆ ವ್ಯರ್ಥಮಾಡಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಭಾರತದ ಅಲೋಪತಿಕ್ ಚಿಕಿತ್ಸಾ ಪದ್ಧತಿಯನ್ನೂ ಹೊಣೆ ಮಾಡಬೇಕಾಗುತ್ತದೆ. ಏಕೆಂದರೆ ನಗರಗಳ ಹೊರಗೆ ಕ್ಲಿನಿಕ್, ಆಸ್ಪತ್ರೆ ಸಂದರ್ಶನ ಹಾಗೂ ಔಷಧಿಗಳು ಕೈಗೆಟುಕುವಂತಿಲ್ಲ.
‘ಹೋಮಿಯೋಪಥಿಯಲ್ಲಿ ಮಧುಮೇಹ ಚಿಕಿತ್ಸೆ’ ವಿಷಯದ ಬಗ್ಗೆ ಆಯುಷ್ ಸಚಿವಾಲಯ ಜನವರಿ 16ರಂದು ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯ ಬಗ್ಗೆ ಪ್ರಕಟಿಸಿದೆ. ‘ಹೋಮಿಯೋಪಥಿ4ಡಯಾಬಿಟಿಸ್’ ಟ್ಯಾಗ್‌ಲೈನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರವನ್ನೂ ನೀಡಿದೆ. ಬಿಎಚ್‌ಎಂಎಸ್ ಪದವೀಧರರು 300-500 ಪದಗಳ ಲೇಖನಗಳನ್ನು ಈ ತಿಂಗಳ 31ರೊಳಗೆ ಟ್ಚಜಿಚ್ಝಞಛಿಜಿಢ್ಠಃಜಟ.ಜ್ಞಿ.ಗೆ ಸಲ್ಲಿಸಬೇಕು. ಈ ಪೈಕಿ ಐದು ಪ್ರಬಂಧಗಳನ್ನು ಗುಣಮಟ್ಟ ಮತ್ತು ಜನಪ್ರಿಯತೆ ಆಧಾರದಲ್ಲಿ 20 ಸಾವಿರ ನಗದು ಬಹುಮಾನಕ್ಕೆ ಆಯ್ಕೆ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ವಿವರಿಸಿದೆ.
ನೈಸರ್ಗಿಕ ಅಥವಾ ಕೃತಕವಾಗಿ ಸಿದ್ಧಪಡಿಸಿದ ಉತ್ಪನ್ನಗಳ ಅತ್ಯಂತ ದುರ್ಬಲ ರೂಪವನ್ನು ಚಿಕಿತ್ಸೆಗೆ ಬಳಸುವ ವೈದ್ಯಕೀಯ ಪದ್ಧತಿ ಎಂಬ ಅಪಕೀರ್ತಿಗೆ ಹೋಮಿಯೋಪಥಿ ಪಾತ್ರವಾಗಿದೆ. ದುರ್ಬಲವಾದಷ್ಟೂ ಅದರ ಶಕ್ತಿ ಹೆಚ್ಚು ಎನ್ನುವುದು ಅದರ ಸಿದ್ಧಾಂತ. ಪರ್ಯಾಯ ವೈದ್ಯಪದ್ಧತಿಯಾಗಿ ವಿಶ್ವದ ಹಲವೆಡೆ ಇದು ಬಳಕೆಯಲ್ಲಿದೆ. ಭಾರತದ ಹೊರತಾಗಿ ಸ್ವಿಝರ್ಲ್ಯಾಂಡ್, ಫ್ರಾನ್ಸ್, ಬ್ರಿಟನ್ ಹಾಗೂ ಡೆನ್ಮಾರ್ಕ್‌ನಲ್ಲೂ ರಾಷ್ಟ್ರೀಯ ವಿಮೆ ಸೌಲಭ್ಯವನ್ನು ಸರಕಾರಗಳು ಈ ಪದ್ಧತಿಗೆ ನೀಡುತ್ತಿವೆ. ಇದೇ ವೇಳೆ ವೈದ್ಯಕೀಯ ಸಂಘಸಂಸ್ಥೆಗಳು ಹೋಮಿಯೊಪಥಿಯನ್ನು ಹುಸಿವಿಜ್ಞಾನ ಎಂದು ಪರಿಗಣಿಸುತ್ತಿವೆ. ಹಲವು ಅಧ್ಯಯನಗಳು ಕೂಡಾ ಇದನ್ನು ದೃಢಪಡಿಸಿವೆ.
ಭಾರತದಲ್ಲಿ 1995ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಆಯುಷ್ ಇಲಾಖೆ ಆರಂಭವಾಯಿತು. ಆರಂಭಿಕವಾಗಿ ಇದರ ಹೆಸರು ಭಾರತೀಯ ವೈದ್ಯಪದ್ಧತಿಗಳ ಮತ್ತು ಹೋಮಿಯೋಪಥಿ ಇಲಾಖೆ ಎಂದಿತ್ತು. 2003ರಲ್ಲಿ ಇದನ್ನು ಆಯುಷ್ ಎಂದು ಬದಲಾಯಿಸಲಾಯಿತು. 2014ರ ನವೆಂಬರ್‌ನಲ್ಲಿ ಪ್ರತ್ಯೇಕ ಸಚಿವಾಲಯವಾಗಿ ಮಾರ್ಪಡಿಸಲಾಯಿತು. 2016ರ ಬಜೆಟ್‌ನಲ್ಲಿ ಸಚಿವಾಲಯಕ್ಕೆ ಹಿಂದಿನ ವರ್ಷದ ಬಜೆಟ್‌ಗಿಂತ ಶೇಕಡ 17.8ರಷ್ಟು ಅನುದಾನ ಹೆಚ್ಚಿಸಿ, ಒಟ್ಟು 1326.20 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಇಷ್ಟಾಗಿಯೂ ಸಚಿವಾಲಯ, ಈ ಪದ್ಧತಿಯ ಬಗ್ಗೆ ದೊಡ್ಡ ಪ್ರಮಾಣದ ವಿಮರ್ಶಾತ್ಮಕ ಮೌಲ್ಯಮಾಪನಕ್ಕೆ ಮುಂದಾಗಿಲ್ಲ. ಈ ಪದ್ಧತಿ ಬಗ್ಗೆ ಟೀಕೆಗಳು ವ್ಯಕ್ತವಾದಾಗಲೆಲ್ಲ, ಆಯುಷ್ ಪ್ರತಿಪಾದಕ ವಿಜ್ಞಾನಿಗಳು, ಈ ಪದ್ಧತಿಯ ಪರಿಣಾಮವನ್ನು ಅಲೋಪತಿ ಪದ್ಧತಿಯ ಜತೆ ಸಂಬಂಧ ಡಬಲ್ ಬ್ಲೈಂಡ್ ಆರ್‌ಸಿಟಿ ಅನ್ವಯ ಕಲ್ಪಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಡಬಲ್- ಬ್ಲೈಂಡ್ ಆರ್‌ಸಿಟಿ ವಿಧಾನದಲ್ಲಿ, ರೋಗಿಗಳಿಗೆ ಎರಡು ಪ್ರತ್ಯೇಕ ಗುಂಪುಗಳಾಗಿ, ಪರೀಕ್ಷಿತ ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಒಂದು ಗುಂಪು ವಾಸ್ತವ ಔಷಧಿ ರೂಪದ ಚಿಕಿತ್ಸೆ ಪಡೆದರೆ ಇನ್ನೊಂದು ಗುಂಪಿನ ರೋಗಿಗಳಿಗೆ ವಾಸ್ತವ ಔಷಧ ನೀಡದೆ ಅವರ ವೈಯಕ್ತಿಕ ಸಮಾಧಾನಕ್ಕಾಗಿ ಔಷಧಿ (ಪ್ಲೇಸ್‌ಬೊ) ನೀಡಲಾಗುತ್ತದೆ. ಆದರೆ ಎರಡೂ ಗುಂಪಿನ ರೋಗಿಗಳಿಗೆ ತಾವು ಯಾವ ಗುಂಪಿನ ಔಷಧಿ ಪಡೆಯುತ್ತಿದ್ದೇವೆ ಎಂಬ ಕಲ್ಪನೆ ಇರುವುದಿಲ್ಲ. ಇದು ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್‌ಗಳಿಗೂ ತಿಳಿದಿರುವುದಿಲ್ಲ. ಈ ಮೂಲಕ ಎರಡು ಗುಂಪುಗಳು ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತವೆ ಎಂದು ಅರಿಯುವ ಜತೆಗೆ ಪರಿಣಾಮಗಳನ್ನು ಕೂಡಾ ಅಧ್ಯಯನ ಮಾಡಲು ಸಾಧ್ಯ.
ಆದರೆ ಈ ವಿಧಾನವನ್ನು ಯೋಗದ ನಿರ್ದಿಷ್ಟ ಪರಿಣಾಮ ಅಳೆಯಲು ಪರೀಕ್ಷಿಸುವಂತಿಲ್ಲ ಎಂದು ಕೊಚ್ರೇನ್ ಲೈಬ್ರೆರಿ ಆಫ್ ರಿವ್ಯೆಸ್ ಇತ್ತೀಚಿನ ವರದಿಯಲ್ಲಿ ಹೇಳಿದೆ. ಆಯುರ್ವೇದ ಇನ್ನೂ ಸಂಕೀರ್ಣ. ಆಯುರ್ವೇದ ನಿರ್ದಿಷ್ಟ ರೋಗವನ್ನು ಔಷಧಿ ಅನ್ವಯಿಸುವಿಕೆ ಮೂಲಕ ಗುಣಪಡಿಸುವ ಬದಲು ಸಮಗ್ರ ಚಿಕಿತ್ಸೆ ಹಾಗೂ ವೈಯಕ್ತಿಕ ಸುಧಾರಣೆ ಸಿದ್ಧಾಂತ ಹೊಂದಿದೆ. ಆದ್ದರಿಂದ ಈ ವಿಧಾನವನ್ನು ಜ್ಯೋತಿಷ್ಯಶಾಸ್ತ್ರದಲ್ಲೇ ಉಲ್ಲೇಖಿಸಿದ್ದರೂ, ಇದನ್ನು ರೋಗಪತ್ತೆ ವಿಧಾನದಲ್ಲಿ ತಿರಸ್ಕರಿಸಲಾಗಿದೆ. ಆದ್ದರಿಂದ ಆಯುರ್ವೇದವನ್ನು ಕೂಡಾ ಆರ್‌ಸಿಟಿಗೆ ಬಳಸುವಂತಿಲ್ಲ. ಇದರಿಂದಾಗಿ ಆಯುರ್ವೇದ ವೈದ್ಯರನ್ನು ಕೂಡಾ ಹುಸಿವಿಜ್ಞಾನದ ಪರಿದಿಯಲ್ಲೇ ಪರಿಗಣಿಸಲಾಗುತ್ತದೆ.
ಹುಸಿವಿಜ್ಞಾನದ ಒಂದು ಪ್ರಮುಖ ಲಕ್ಷಣ ಎಂದರೆ, ಇಲ್ಲಿ ನಿರ್ದಿಷ್ಟ ಪ್ರತಿಪಾದನೆಗಳನ್ನು ಸಮರ್ಥಿಸುವ ಪುರಾವೆ ಇರುವುದಿಲ್ಲ. ಉದಾಹರಣೆಗೆ ಇತ್ತೀಚಿನ ಬಿಜಿಆರ್-34 ಎಂಬ ಮಧುಮೇಹ ನಿರೋಧಕ ಆಯುರ್ವೇದ ಔಷಧವನ್ನು ತೆಗೆದುಕೊಳ್ಳೋಣ. ಇದನ್ನು ರಾಷ್ಟ್ರೀಯ ಜೀವಶಾಸ್ತ್ರೀಯ ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರೀಯ ಔಷಧ ಹಾಗೂ ಸುಗಂಧಿತ ಸಸ್ಯಗಳ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ವಾಣಿಜ್ಯ ಉತ್ಪಾದನೆ ಹಾಗೂ ವಿತರಣೆಯನ್ನು ಖಾಸಗಿ ವಲಯದ ಎಐಎಂಐಎಲ್ ಫಾರ್ಮಸ್ಯೂಟಿಕಲ್ಸ್ ಎಂಬ ಸಂಸ್ಥೆಗೆ ವಹಿಸಲಾಗಿದೆ.
ಈ ಔಷಧಿಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ 2016ರಲ್ಲಿ ಶಿಫಾರಸು ಮಾಡಿದ್ದಾರೆ. ಆದರೆ ಇದುವರೆಗೂ ಇದರ ಪರಿಣಾಮವನ್ನು ದೃಢಪಡಿಸುವ ಯಾವ ವರದಿಯೂ ವಿಮರ್ಶಾತ್ಮಕ ನಿಯತಕಾಲಿಕಗಳಲ್ಲಿ ಅಥವಾ ಪೇಟೆಂಟ್ ರೂಪದಲ್ಲಿ ಪ್ರಕಟವಾಗಿಲ್ಲ. ಇದು ಆಯುಷ್ ಸಚಿವಾಲಯದಿಂದ ಆಂಗೀಕರಿಸಲ್ಪಟ್ಟಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಕಾನೂನು ಅನ್ವಯ ಇದನ್ನು ಆಂಗೀಕರಿಸಲು ಯಾವ ಆಧಾರವೂ ಇಲ್ಲ. ಆರ್‌ಸಿಟಿ ಪರೀಕ್ಷೆಯ 3ನೆ ಹಂತವನ್ನು ಕೂಡಾ ಪರೀಕ್ಷಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಳ್ಳುತ್ತಿದೆ. ಆದರೆ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ-1940ರ ಪ್ರಕಾರ ಅಗತ್ಯವಿರುವ 500 ಮಂದಿಯ ಬದಲು ಕೇವಲ 48 ಮಂದಿಗೆ ಈ ವಿಧಾನದಡಿ ಪರಿಣಾಮ ಪರೀಕ್ಷಿಸಲಾಗಿದೆ. ಆದರೆ ಹೋಮಿಯೋಪಥಿಯನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸಿದ್ದು, ಇದರ ಪರಿಣಾಮಕ್ಕೆ ಪುರಾವೆ ಕಂಡುಹಿಡಿಯುವ ಪ್ರಯತ್ನದಲ್ಲಿ ಇದುವರೆಗೂ ಯಶಸ್ಸು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ 2005ರಲ್ಲಿ ಪ್ರಕಟವಾದ ಲಾನ್ಸೆಟ್ ಪರಾಮರ್ಶನಾ ವರದಿ, ಹೋಮಿಯೋಪಥಿ ಹಾಗೂ ಇತರ ಸಾಂಪ್ರದಾಯಿಕ ವೈದ್ಯ ವಿಧಾನಗಳ ಬಗ್ಗೆ ಪ್ಲೇಸ್‌ಬೊ ನಿಯಂತ್ರಿತ ಪಕ್ಷಪಾತ ಧೋರಣೆ ಮುಂದುವರಿದಿದೆ ಎಂಬ ಭಾವನೆ ಇದೆ.
ಈ ಬಗ್ಗೆ ಅಧ್ಯಯನ ನಡೆಸಿದಾಗ, ಹೋಮಿಯೋಪಥಿಯ ವೈಜ್ಞಾನಿಕತೆಯನ್ನು ಹಾಗೂ ನಿರ್ದಿಷ್ಟ ಪರಿಣಾಮಗಳನ್ನು ಖಾತ್ರಿಪಡಿಸುವ ಯಾವ ಪುರಾವೆಯೂ ಸಿಕ್ಕಿಲ್ಲ. ಆದರೆ ಕೆಲ ಸಾಂಪ್ರದಾಯಿಕ ಹಸ್ತಕ್ಷೇಪಗಳಿಗೆ ನಿರ್ದಿಷ್ಟ ಪರಿಣಾಮಗಳು ಪತ್ತೆಯಾಗಿವೆ ಎಂದು ಹೇಳಿತ್ತು. 2015ರಲ್ಲಿ ಆಸ್ಟ್ರೇಲಿಯಾ ಸರಕಾರದ ರಾಷ್ಟ್ರೀಯ ಆರೋಗ್ಯ ಹಾಗೂ ವೈದ್ಯಕೀಯ ಸಂಶೋಧನಾ ಮಂಡಳಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ತೀವ್ರ, ಗಂಭೀರ ಕಾಯ್ದೆಗಳಿಗೆ ಹೋಮಿಯೋಪಥಿ ಬಳಸುವುದರಿಂದ ರೋಗ ಮತ್ತಷ್ಟು ಉಲ್ಬಣಿಸಬಹುದು ಎಂದೂ ಎಚ್ಚರಿಸಿದೆ.
ಈ ಎಲ್ಲ ಮಾಹಿತಿಗಳ ಹಿನ್ನೆಲೆಯಲ್ಲಿ ಆಯುಷ್ ಸಚಿವಾಲಯವು, ಈ ಬರಹ ಸ್ಪರ್ಧೆಯಲ್ಲಿ ಭಾಗವಹಿಸುವವರ ಪ್ರತಿಪಾದನೆಯನ್ನು ಪುರಸ್ಕರಿಸುವ ಮೂಲಕ ಮಧುಮೇಹ ರೋಗಿಗಳ ಜೀವಕ್ಕೆ ಸಂಚಕಾರ ತರುತ್ತಿದೆ ಎಂದೇ ಹೇಳಬೇಕಾಗುತ್ತದೆ. ಇದನ್ನು ನಂಬಿ ಜನ ಹೋಮಿಯೋಪಥಿ ಔಷಧಿಗಳನ್ನು ಖರೀದಿಸುವ ಮೂಲಕ ತಾವು ಸುರಕ್ಷಿತ ಎಂಬ ಭ್ರಮೆಗೆ ಒಳಗಾಗುವ ಹಾಗೂ ತಮ್ಮ ಸಂಪನ್ಮೂಲವನ್ನು ಚಿಕಿತ್ಸೆಗೆ ಪೂರಕವಾದ ಉದ್ದೇಶಕ್ಕೆ ವ್ಯರ್ಥಮಾಡಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಭಾರತದ ಅಲೋಪತಿಕ್ ಚಿಕಿತ್ಸಾ ಪದ್ಧತಿಯನ್ನೂ ಹೊಣೆ ಮಾಡಬೇಕಾಗುತ್ತದೆ. ಏಕೆಂದರೆ ನಗರಗಳ ಹೊರಗೆ ಕ್ಲಿನಿಕ್, ಆಸ್ಪತ್ರೆ ಸಂದರ್ಶನ ಹಾಗೂ ಔಷಧಿಗಳು ಕೈಗೆಟುಕುವಂತಿಲ್ಲ. ಜತೆಗೆ ಅರ್ಹ ವೈದ್ಯರ ಕೊರತೆ ಇನ್ನೊಂದು ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ 1000 ಮಂದಿಗೆ ಕನಿಷ್ಠ ಒಬ್ಬ ವೈದ್ಯ ಇರಬೇಕು. ಆದರೆ ಭಾರತದಲ್ಲಿ 1,700 ಮಂದಿಗೆ ಒಬ್ಬರಂತೆ ವೈದ್ಯರಿದ್ದಾರೆ. ಜತೆಗೆ ಐದು ಮಂದಿ ವೈದ್ಯರ ಪೈಕಿ ನಾಲ್ಕು ಮಂದಿ ನಗರ ಕೇಂದ್ರಿತರಾಗಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾರತದಲ್ಲಿ ನಕಲಿ ವೈದ್ಯರದ್ದೇ ಕಾರುಬಾರು.
ಆದರೆ ಈ ಯಾವ ಅಂಶಗಳು ಕೂಡಾ ಮೌಲಿಕವಲ್ಲದ ಪದ್ಧತಿಯನ್ನು ಆಯುಷ್ ಸಚಿವಾಲಯ ಅವಂಬಿಸುತ್ತಿರುವುದಕ್ಕೆ ಸಮರ್ಥನೆಯಲ್ಲ. ವಿಚಿತ್ರವೆಂದರೆ ಈ ಸ್ಪರ್ಧೆಯನ್ನು ಘೋಷಿಸಿ ಐದೇ ದಿನಗಳಲ್ಲಿ, ಗ್ರಾಹಕರನ್ನು ತಪ್ಪುದಾರಿಗೆಳೆಯುವಂಥ ಜಾಹೀರಾತುಗಳನ್ನು ಪತ್ತೆ ಮಾಡಿ ನಿಷೇಧಿಸುವ ಸಂಬಂಧ ಸಚಿವಾಲಯ, ಭಾರತದ ಜಾಹೀರಾತು ಗುಣಮಟ್ಟ ಮಂಡಳಿ ಜತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಸಚಿವಾಲಯ ಕಾರ್ಯದರ್ಶಿ ಅಜಿತ್ ಶರಣ್ ಹೇಳಿಕೆ ನೀಡಿ, ಭಾರತದ ಗ್ರಾಹಕರು ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಿಗಳನ್ನು ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಇದು ಆಯುಷ್ ಸಚಿವಾಲಯದ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಜನವರಿ 16ರಂದು ಈ ಹೇಳಿಕೆಯ ಜತೆಗೇ ಸಚಿವಾಲಯ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದು, ಇದು ಹೋಮಿಯೋಪಥಿಯ ದಕ್ಷತೆಯನ್ನು ಪ್ರತಿಪಾದಿಸಿಲ್ಲವಾದರೂ, ಈ ಸ್ಪರ್ಧೆ ಅದನ್ನು ಸ್ಪಷ್ಟಪಡಿಸುತ್ತದೆ.
ಪರಿಣಾಮಕಾರಿಯಲ್ಲದ ವೈದ್ಯಪದ್ಧತಿಯನ್ನು ಶಿಫಾರಸು ಮಾಡುತ್ತಿರುವ ಸಚಿವಾಲಯದ ವಿರುದ್ಧ ದೂರನ್ನು ಯಾರಿಗೆ ನೀಡಬೇಕು?