ಗೋಡ್ಸೆ, ಆರೆಸ್ಸೆಸ್ ಮತ್ತು ಗಾಂಧಿ ಹತ್ಯೆ!
ಗಾಂಧೀಜಿಯವರ ಇಬ್ಬರು ಪುತ್ರರು ಹೇಳಿದಂತೆ, ಶಿಕ್ಷೆಗೆ ಒಳಗಾದವರು ಹಿಂದುತ್ವ ನಾಯಕರ ಅಡಿಯಾಳುಗಳು. ಆದ್ದರಿಂದ ಅವರ ಮರಣದಂಡನೆ ಶಿಕ್ಷೆಯನ್ನು ವಾಪಸು ಪಡೆಯಬೇಕು. ಹಂತಕರನ್ನು ಗಲ್ಲುಶಿಕ್ಷೆಗೆ ಗುರಿಪಡಿಸುವುದು ತಮ್ಮ ತಂದೆಯ ಪರಂಪರೆಗೆ ತೋರುವ ಅಗೌರವ. ಗಾಂಧೀಜಿಯವರು ಗಲ್ಲುಶಿಕ್ಷೆಯನ್ನು ವಿರೋಧಿಸುತ್ತಲೇ ಬಂದಿದ್ದರು ಎಂದು ಹೇಳಿದ್ದು ಇಲ್ಲಿ ಉಲ್ಲೇಖನೀಯ.
ಮಹಾತ್ಮಗಾಂಧೀಜಿಯವರನ್ನು ಹತ್ಯೆ ಮಾಡಿದ ಹಿಂದೂ ಮತಾಂಧ ನಾಥೂರಾಂ ಗೋಡ್ಸೆ ದೇಶದಲ್ಲಿ ಮೊಟ್ಟಮೊದಲ ಭಯೋತ್ಪಾದಕ ಕೃತ್ಯ ಎಸಗಿದ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಗಾಂಧಿ ಹತ್ಯೆ ವೇಳೆಗೆ ಹಿಂದೂಮಹಾಸಭಾ ಕಾರ್ಯಕರ್ತನಾಗಿದ್ದ ಗೋಡ್ಸೆ ಮಹಾರಾಷ್ಟ್ರದ ಪುಣೆಯ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ವ್ಯಕ್ತಿ. ಅದಕ್ಕೂ ಮುನ್ನ ಆರೆಸ್ಸೆಸ್ ಜೊತೆ ಗುರುತಿಸಿಕೊಂಡಿದ್ದ. ಆರೆಸ್ಸೆಸ್ನಪ್ರಥಮ ಮುಖ್ಯಸ್ಥ ಹೆಡಗೇವಾರ್ ಅವರ ಪ್ರವಾಸದ ವೇಳೆ, ಗೋಡ್ಸೆ ಜತೆಗಿದ್ದ. ಗೋಡ್ಸೆ 1930ರಲ್ಲಿ ಆರೆಸ್ಸೆಸ್ ಸೇರಿ, ಉತ್ತಮ ವಾಗ್ಮಿಯಾಗಿ, ಸಂಘಟಕನಾಗಿ ಗಮನ ಸೆಳೆದಿದ್ದ. ಹಿಂದೂ ಮತಾಂಧರು ಹೇಗೆ ಮಹಾತ್ಮರ ಹತ್ಯೆಗೆ ಸಂಚು ರೂಪಿಸಿದರು ಎನ್ನುವುದು ಇಡೀ ವಿಶ್ವಕ್ಕೆ ತಿಳಿದಿದೆ. ಆರೆಸ್ಸೆಸ್ ಮುಖಂಡರಾಗಿದ್ದ ಸಾವರ್ಕರ್ ಹಾಗೂ ಗೋಳ್ವಾಲ್ಕರ್ ಅವರ ಇಚ್ಛೆಗಳು ಹೇಗೆ ಆ ಹೇಯ ಕೃತ್ಯಕ್ಕೆ ವಾತಾವರಣ ನಿರ್ಮಿಸಲು ಪೂರಕವಾದವು ಎನ್ನುವುದೂ ಗೊತ್ತಿಲ್ಲದ ವಿಚಾರವಲ್ಲ. ಹಿಂದೂ ಮಹಾಸಭಾ ಸದಸ್ಯರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಬರೆದ ಪತ್ರದಲ್ಲಿ ಈ ಸಂಚಿನ ಹಿನ್ನೆಲೆ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದೆ (1948ರ ಜುಲೈ 18). ’’...ಈ ಎರಡು ಸಂಘಟನೆಗಳ ಕಾರ್ಯಚಟುವಟಿಕೆಗಳಿಂದ ಅದರಲ್ಲೂ ಮುಖ್ಯವಾಗಿ ಆರೆಸ್ಸೆಸ್ ಚಟುವಟಿಕೆಗಳಿಂದ, ಗಾಂಧೀಜಿ ಹತ್ಯೆಯಂಥ ದುರಂತ ಸಂಭವಿಸಲು ವಾತಾವರಣ ಸೃಷ್ಟಿಯಾಯಿತು ಎನ್ನುವುದು ನಮ್ಮ ವರದಿಗಳಿಂದ ತಿಳಿದುಬರುತ್ತದೆ.
ಹಿಂದೂ ಮಹಾಸಭಾದ ಉಗ್ರ ಗುಂಪೊಂದು ಈ ಸಂಚಿನಲ್ಲಿ ಶಾಮೀಲಾಗಿದೆ ಎನ್ನುವುದು ನನ್ನ ಖಚಿತ ನಂಬಿಕೆ. ಆರೆಸ್ಸೆಸ್ ಚಟುವಟಿಕೆಗಳು ಈ ದೇಶಕ್ಕೆ ಹಾಗೂ ಸರಕಾರಕ್ಕೆ ಸ್ಪಷ್ಟವಾದ ಭೀತಿ ಎಂಬಂತಿದೆ. ನಿಷೇಧದ ಹೊರತಾಗಿಯೂ ಈ ಚಟುವಟಿಕೆಗಳು ನಿಂತಿಲ್ಲ ಎನ್ನುವುದನ್ನು ವರದಿಗಳು ದೃಢಪಡಿಸಿವೆ. ಆರೆಸ್ಸೆಸ್ ವೃತ್ತವು ಪ್ರತಿಭಟನಾತ್ಮಕವಾಗಿದ್ದು, ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ’’ ಸ್ವತಂತ್ರ ಭಾರತದ ಆರು ದಶಕಗಳ ಇತಿಹಾಸದಲ್ಲಿ ನಡೆದ ಇಂಥದ್ದೇ ಘಟನೆಗಳ ಬಗ್ಗೆ ನಿಮ್ಮನ್ನು ಪ್ರಶ್ನಿಸಿದರೆ, ನಿಮ್ಮ ಉತ್ತರವೇನು? ಬಹುಶಃ ನೀವು ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕನೇ ಗುಂಡಿಟ್ಟು ಹತ್ಯೆ ಮಾಡಿರುವುದು, ಆತ್ಮಾಹುತಿ ಬಾಂಬರ್ ತಮಿಳು ಮಹಿಳೆ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದು, 500 ವರ್ಷ ಹಳೆಯ ಬಾಬರಿ ಮಸೀದಿಯನ್ನು ಆರೆಸ್ಸೆಸ್, ವಿಎಚ್ಪಿ, ಬಿಜೆಪಿ ಹಾಗೂ ಶಿವಸೇನೆ ಸೈನಿಕರು ಧ್ವಂಸ ಮಾಡಿದ್ದು ಮುಂತಾದ ಘಟನೆಯನ್ನು ಸೇರಿಸಬಹುದು. ಮತ್ತೆ ಚರ್ಚೆಯನ್ನು ಮುಂದುವರಿಸಿದರೆ 1984ರ ಸಿಖ್ಖರ ನರಮೇಧವನ್ನೂ ಸೇರಿಸಬಹುದು. ಇದರ ಜೊತೆಗೆ ಖಲಿಸ್ತಾನಿ ಭಯೋತ್ಪಾದನಾ ಚಳವಳಿ, ಹಿಂದೂ ಹೃದಯ ಸಾಮ್ರಾಟ ಎನಿಸಿಕೊಂಡ ವ್ಯಕ್ತಿಯಿಂದ ಆರೆಸ್ಸೆಸ್ ಮತ್ತು ಇತರ ಸಹಸಂಸ್ಥೆಗಳ ಮಾರ್ಗದರ್ಶನದಲ್ಲಿ ಸೇನೆಯ ನಿಖರತೆಯಲ್ಲಿ ನಡೆದ ಗುಜರಾತ್ ನರಮೇಧ ಕೂಡಾ ಪಟ್ಟಿಗೆ ಸೇರುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಭವಿಸಿದ ಈ ಎಲ್ಲ ಘಟನೆಗಳನ್ನು ಹೋಲಿಸಿದಾಗ, ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದಕ ಕೃತ್ಯ ಸಂಭವಿಸಿದರೆ ನಿಮ್ಮ ಮನಸ್ಸಿನಲ್ಲಿ ಈ ಚಿತ್ರ ಮೂಡುತ್ತದೆ. ಇದು ಬಹುಸಂಖ್ಯಾತ ಸಮುದಾಯದ ಚಿತ್ರಣಕ್ಕೆ ಹೋಲಿಕೆಯಾಗುತ್ತದೆಯೇ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಹೋಲಿಕೆಯಾಗುತ್ತದೆಯೇ? ಖಂಡಿತವಾಗಿಯೂ ದೇಶದ ಒಂದು ಅಲ್ಪಸಂಖ್ಯಾತ ಸಮುದಾಯ ನಿಮ್ಮ ಮನಃಪಟಲದಲ್ಲಿ ಮೂಡುತ್ತದೆ ಎನ್ನುವುದನ್ನು ನೀವು ಒಪ್ಪಿಕೊಳ್ಳಲೇಬೇಕಾಗುತ್ತದೆ.
80ರ ದಶಕದ ಕೊನೆಯಲ್ಲಿ ಅಥವಾ 90ರ ದಶಕದ ಆರಂಭದಲ್ಲಿ ಇದು ರುಮಾಲು ಸುತ್ತಿದ ಸಿಖ್ಖರನ್ನು ಬಿಂಬಿಸುತ್ತಿತ್ತು. ಆದರೆ 21ನೆ ಶತಮಾನದ ಮೊದಲ ದಶಕದ ಕೊನೆಯಲ್ಲಿ ಇದು ಮುಸಲ್ಮಾನರತ್ತ ಬೆಟ್ಟು ಮಾಡುತ್ತಿದೆ. ಇಂಥ ಭಯಾನಕ ಘಟನೆಗಳಲ್ಲಿ ತೊಡಗಿಸಿಕೊಂಡಿದ್ದರೂ, ಗಲಭೆಗಳನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ನಿರ್ದಿಷ್ಟ ಹತ್ಯಾಕಾಂಡವನ್ನು ರೂಪಿಸಿದ್ದಾಗಿ ಕ್ಯಾಮೆರಾ ಮುಂದೆ ಒಪ್ಪಿಕೊಂಡರೂ (ತೆಹಲ್ಕಾ ಸ್ಟಿಂಗ್ ಆಪರೇಷನ್ನಲ್ಲಿ ಕೇಕಾ ಶಾಸ್ತ್ರಿ ರೆಡಿಪ್.ಕಾಂಗೆ ನೀಡಿದ ಸಂದರ್ಶನ) ನಮ್ಮ ಸಮಾಜದಲ್ಲಿ ಭಯೋತ್ಪಾದಕ ಎಂದರೆ ಮತಾಂಧ ಹಿಂದೂಗಳು ಕಲ್ಪನೆಗೆ ಬರುವುದಿಲ್ಲ ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಸಾಧ್ವಿ ಪ್ರಜ್ಞಾ, ಮೇಜರ್ ಪುರೋಹಿತ್, ದಯಾನಂದ ಪಾಂಡೆ ಅಥವಾ ಸ್ವಾಮಿ ಅಸೀಮಾನಂದ ಭಯೋತ್ಪಾದಕ ಕೃತ್ಯಗಳ ಸಂಚು ರೂಪಿಸಿ ಕಾರ್ಯಗತಗೊಳಿಸಿದರೂ, ಹಲವು ಘಟನೆಗಳಲ್ಲಿ ಪೊಲೀಸರು ಇವರ ಕೈವಾಡ ಶಂಕಿಸಿದ್ದರೂ, ಅವರನ್ನು ಇಂಥ ಕೃತ್ಯಗಳಿಗೆ ಅಪವಾದ ಎಂದು ಸ್ವೀಕರಿಸಲು ನಾವು ಮುಂದಾಗಿದ್ದೇವೆ. ಆದರೆ ಒಬ್ಬ ಅಮಾಯಕ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದರೆ, ಮಾಧ್ಯಮ ಆತನಿಗೆ ಭಯೋತ್ಪಾದಕ ಎಂಬ ಬಣ್ಣ ಬಳಿಯಲು ಹಿಂದೆ ಮುಂದೆ ನೋಡುವುದಿಲ್ಲ.
ಬಹುಸಂಖ್ಯಾತರು ಸಿದ್ಧಪಡಿಸಿದ, ’’ಎಲ್ಲ ಮುಸಲ್ಮಾನರೂ ಭಯೋತ್ಪಾದಕರಲ್ಲ; ಆದರೆ ಎಲ್ಲ ಭಯೋತ್ಪಾದಕರು ಮುಸಲ್ಮಾನರು’’ ಎಂಬ ಘೋಷಣೆಗೆ ಏಕೆ ಖಂಡನೆ ಕೂಡಾ ವ್ಯಕ್ತವಾಗುವುದಿಲ್ಲ? ಬಹುಶಃ ಈ ಪ್ರಶ್ನೆಗೆ ಸರಳ ಉತ್ತರ ಸಿಗುವುದಿಲ್ಲ. ನಮ್ಮ ಗತಕಾಲದ ಬಗ್ಗೆ ಆಳವಾದ ನೋಟ, ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ಬಗ್ಗೆ ನಿಷ್ಪಕ್ಷಪಾತ ದೃಷ್ಟಿ ಹರಿಸುವ ಜತೆಗೆ ವಿಭಜನೆ ಸಂದರ್ಭದ ಹಿಂಸಾಚಾರದ ಕರಾಳ ಮುಖವನ್ನು ನೋಡಬೇಕಾಗುತ್ತದೆ. ಇದರ ಜೊತೆಗೆ ವರ್ತಮಾನದ ಘಟನಾವಳಿಗಳನ್ನು ಕೂಡಾ ಜೋಡಿಸಿ, ವಿವಿಧ ಸಿದ್ಧಾಂತಗಳು ಮತ್ತು ವಿವಿಧ ವ್ಯಕ್ತಿಗಳು ನಿರ್ವಹಿಸುವ ಪಾತ್ರವನ್ನು ಕೂಡಾ ವಿಶ್ಲೇಷಿಸಬೇಕಾಗುತ್ತದೆ. ಭಾರತದಂಥ ಬಹುಸಂಸ್ಕೃತಿಯ, ಬಹುಭಾಷೆಯ ದೇಶಗಳಲ್ಲಿ, ಪರಿಸ್ಥಿತಿಗಳ ಸಂಕೀರ್ಣತೆ ಕೂಡಾ ಅಷ್ಟರ ಮಟ್ಟಿಗೆ ಇರುತ್ತದೆ. ಅಂದರೆ ಬಹುಸಂಖ್ಯಾತ ಸಮುದಾಯದ ಕೋಮುವಾದವನ್ನು ನಾವು ರಾಷ್ಟ್ರೀಯತೆ ಎಂದು ಪರಿಗಣಿಸಿದರೆ, ಅಲ್ಪಸಂಖ್ಯಾತರ ಪ್ರತಿಪಾದನೆಗಳು ಕೋಮುವಾದದ ಬಣ್ಣ ಪಡೆಯುತ್ತದೆ. ಆದ್ದರಿಂದಲೇ ಬಹುಸಂಖ್ಯಾತರ ಭಯೋತ್ಪಾದಕ ಕೃತ್ಯಗಳಿಗೆ ಸಿಟ್ಟು ಕಟ್ಟೆಯೊಡೆದದ್ದರಿಂದ ಆದ ಘಟನೆ ಎಂಬ ಸಮರ್ಥನೆ ಇದ್ದರೆ, ಅಲ್ಪಸಂಖ್ಯಾತರ ಭಯೋತ್ಪಾದಕ ಕೃತ್ಯಗಳು ದೇಶಕ್ಕೆ ದೊಡ್ಡ ಅಪಾಯ ಎಂಬ ಅರ್ಥದಲ್ಲಿ ಬಿಂಬಿತವಾಗುತ್ತವೆ. ಭಯೋತ್ಪಾದನೆ ಸುತ್ತಲಿನ ಸಾಮಾಜಿಕ ಸಾಮಾನ್ಯ ಜ್ಞಾನವನ್ನು ಮೀರಿದ, ಒಂದು ಸಮುದಾಯದ ಬುದ್ಧಿಭ್ರಮಣೆಯ ಕೃತ್ಯಗಳಿಗೆ ಪ್ರಚೋದನೆ ನೀಡುವ ಪ್ರಯತ್ನವನ್ನು ನಾವು ಇಲ್ಲಿ ಕಾಣಬಹುದು. ಇದು ಸೆಪ್ಟಂಬರ್ 9ರ ಘಟನೆಯ ಬಳಿಕ ಅಮೆರಿಕ ಸಾರಿದ ಭಯೋತ್ಪಾದನೆ ವಿರುದ್ಧದ ಸಮರ ಅಥವಾ ಸಾಮ್ರಾಜ್ಯಶಾಹಿ ಹುನ್ನಾರ ಅಡಗಿದ ಸಮರದ ಬಳಿಕ ಇದಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಿದೆ. ಭಯೋತ್ಪಾದನೆ ಎನ್ನುವುದು ಯಾವುದೇ ಒಂದು ನಿರ್ದಿಷ್ಟ ಧರ್ಮದ ಏಕಸ್ವಾಮ್ಯವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಇಂದಿನ ತುರ್ತು ಅಗತ್ಯ. ಇದು ವಿಶಿಷ್ಟ ಪರಿಸ್ಥಿತಿಗಳ ಕೂಸು. ವಿಶ್ವದ ದೃಷ್ಟಿಕೋನದಲ್ಲಿ ಒಂದು ಪ್ರಾಬಲ್ಯದ ವಿರುದ್ಧ ಸಿಡಿದೇಳುವ ಒಂದು ಪ್ರಕ್ರಿಯೆ ಎನ್ನಬಹುದು.
ಈ ಹಿನ್ನೆಲೆಯಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಪಾಠವೆಂದರೆ, ಪ್ರತಿಯೊಂದು ಭಯೋತ್ಪಾದಕ ಕೃತ್ಯದ ಹಿಂದೆ ಅಡಗಿರುವ ಸತ್ಯವನ್ನು ಅನಾವರಣಗೊಳಿಸುವ ದೃಷ್ಟಿಕೋನವನ್ನು ಕಾನೂನು ಮತ್ತು ಸುವ್ಯವಸ್ಥೆಯ ಆಡಳಿತ ಯಂತ್ರ ಪ್ರದರ್ಶಿಸಬೇಕು ಎನ್ನುವುದು. ಅಂದರೆ ಕಳೆದ ಕೆಲ ವರ್ಷಗಳಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ ಎನ್ನಲಾದ ಒಂದು ಇಡೀ ಸಮುದಾಯದ ಮೇಲೆ ಗೂಬೆ ಕೂರಿಸುವಂತಾಗಬಾರದು. ಅಂತೆಯೇ ರಾಜಕೀಯ ಭೀತಿಯಿಂದ ಹಿಂದೂ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮೆದು ನೀತಿಯನ್ನೂ ಅನುಸರಿಸಬಾರದು. ಹಿಂದುತ್ವವಾದಿ ಮತಾಂಧರು ಗಾಂಧೀಜಿ ಬಗ್ಗೆ ಹೊಂದಿದ್ದ ದ್ವೇಷಭಾವನೆಯ ಬಗ್ಗೆ ಕೆಲವರಿಗಷ್ಟೇ ಗೊತ್ತು. ನಾಥೂರಾಂ ಗೋಡ್ಸೆ ಈ ಕೃತ್ಯ ಎಸಗುವ ಮುನ್ನ ನಾಲ್ಕು ಅಂಥದ್ದೇ ಪ್ರಯತ್ನಗಳು ನಡೆದಿದ್ದವು. (ಖ್ಯಾತ ಗಾಂಧಿವಾದಿ ಚುನಿಬಾಯಿ ವೈದ್ ಅವರ ಪ್ರಕಾರ ಇಂಥ ಆರು ಪ್ರಯತ್ನಗಳು ನಡೆದಿವೆ. ಕೆಳಗೆ ವಿವರಿಸಿದ ಐದು ಘಟನೆಗಳ ಜತೆ 1946ರ ಸೆಪ್ಟಂಬರ್ನಲ್ಲೂ ಒಂದು ಪ್ರಯತ್ನ ನಡೆದಿತ್ತು ಎಂದು ಅವರು ಹೇಳುತ್ತಾರೆ) ಮೊದಲ ಪ್ರಯತ್ನ 1934ರ ೂನ್ 25ರಂದು ಪುಣೆಯಲ್ಲಿ ಗಾಂಧೀಜಿ ಕಾರ್ಪೊರೇಷನ್ ಸಭಾಗೃಹದಲ್ಲಿ ಭಾಷಣಕ್ಕೆ ತೆರಳುತ್ತಿದ್ದಾಗ ನಡೆಯಿತು. ಪತ್ನಿ ಕಸ್ತೂರ್ಬಾ ಗಾಂಧಿ ಕೂಡಾ ಅವರ ಜತೆಗಿದ್ದರು. ಅದೃಷ್ಟವಶಾತ್ ಗಾಂಧೀಜಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ತೊಂದರೆ ಕಾಣಿಸಿಕೊಂಡು ಅವರ ಪ್ರಯಾಣ ವಿಳಂಬವಾಯಿತು. ಅವರ ಜೊತೆಗೆ ತೆರಳುತ್ತಿದ್ದ ಕಾರು ಸರಿಯಾದ ಸಮಯಕ್ಕೆ ಭಾಷಣದ ಸ್ಥಳ ತಲುಪಿದಾಗ ಅದರ ಮೇಲೆ ಬಾಂಬ್ ಎಸೆಯಲಾಯಿತು. ಈ ಸ್ಫೋಟದಿಂದ ಕೆಲ ನಾಗರಿಕರಿಗೆ ಮತ್ತು ಪೊಲೀಸರಿಗೆ ಗಾಯಗಳಾದವು. ಎರಡನೆ ಪ್ರಯತ್ನದಲ್ಲಿ ಸ್ವತಃ ನಾಥೂರಾಂ ಗೋಡ್ಸೆ ಶಾಮೀಲಾಗಿದ್ದ. 1944ರ ಮೇ ತಿಂಗಳಲ್ಲಿ ಗಾಂಧೀಜಿಯವರು ಪಂಚಗಣಿ ಬೆಟ್ಟಧಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಒಂದು ಬಾಡಿಗೆ ಬಸ್ಸಿನಲ್ಲಿ 15-20 ಮಂದಿಯ ಯುವಕರ ತಂಡ ಆಗಮಿಸಿತು. ಗಾಂಧೀಜಿ ವಿರುದ್ಧ ಅವರು ಇಡೀ ದಿನ ಪ್ರತಿಭಟನೆ ನಡೆಸಿದರು. ಆದರೆ ಗಾಂಧೀಜಿ ಮಾತುಕತೆಗೆ ಆಹ್ವಾನಿಸಿದಾಗ ಅವರು ಮುಂದೆ ಬರಲಿಲ್ಲ. ಸಂಜೆಯ ಪ್ರಾರ್ಥನೆ ವೇಳೆ, ನಾಥೂರಾಂ ಗೋಡ್ಸೆ ಕೈಯಲ್ಲಿ ಕಠಾರಿ ಹಿಡಿದು ಗಾಂಧೀಜಿಯವರ ಬಳಿಗೆ ಧಾವಿಸಿದ. ಆದರೆ ಆ ವೇಳೆಗೆ ಇತರರು ಆತನ ಮೇಲೆ ಎರಗಿದರು. ಮುಹಮ್ಮದಲಿ ಜಿನ್ನಾ ಜೊತೆ ಗಾಂಧೀಜಿ 1944ರ ಸೆಪ್ಟಂಬರ್ನಲ್ಲಿ ಮಾತುಕತೆ ಅರಂಭಿಸಿದಾಗ ಇಂಥ ಮತ್ತೊಂದು ಪ್ರಯತ್ನ ನಡೆಯಿತು. ಮುಂಬೈನ ಸೇವಾಗ್ರಾಮ ಆಶ್ರಮಕ್ಕೆ ಗಾಂಧೀಜಿ ಹೊರಟಾಗ, ನಾಥೂರಾಂ ಗೋಡ್ಸೆ ನೇತೃತ್ವದ ಮತಾಂಧ ಹಿಂದೂ ಗುಂಪು ಅವರನ್ನು ತಡೆಯುವ ಪ್ರಯತ್ನ ಮಾಡಿತು. ಜಿನ್ನಾ ಅವರ ಜೊತೆ ಮಾತುಕತೆ ನಡೆಸಲು ಮುಂಬೈಗೆ ಗಾಂಧೀಜಿ ಹೋಗಬಾರದು ಎನ್ನುವುದು ಅವರ ಇರಾದೆಯಾಗಿತ್ತು. ಗೋಡ್ಸೆ ಆಗಲೂ ಕೈಯಲ್ಲಿ ಕಠಾರಿ ಹಿಡಿದಿದ್ದುದು ಕಂಡುಬಂತು. ನಾಲ್ಕನೆ ಪ್ರಯತ್ನ 1948ರ ಜನವರಿ 20ರಂದು ನಡೆಯಿತು.
ಮದನ್ ಲಾಲ್ ಪಾಹ್ವಾ, ಶಂಕರ್ ಕಿಸ್ತಯ್ಯ, ದಿಗಂಬರ ಬಾಡ್ಗೆ, ವಿಷ್ಣು ಕರ್ಕರೆ, ಗೋಪಾಲ್ ಗೋಡ್ಸೆ, ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನೊಳಗೊಂಡ ಅದೇ ತಂಡ ಮತ್ತೆ ದಾಳಿ ಮಾಡಿತು. ಗಾಂಧೀಜಿ ಹಾಗೂ ಹುಸೈನ್ ಶಹೀದ್ ಸುಬ್ರಾವರ್ಡಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಈ ವಿಫಲ ಯತ್ನದಲ್ಲಿ ಮದನ್ ಲಾಲ್, ಬಾಂಬನ್ನು ಗಾಂಧೀಜಿ ತಂಗಿದ್ದ ಬಿರ್ಲಾಭವನದ ಪೋಡಿಯಂನ ಹಿಂದಕ್ಕೆ ಎಸೆದಿದ್ದ. ಆದರೆ ಯಾವುದೇ ಸಾವು ನೋವು ಉಂಟುಮಾಡದೆ ಬಾಂಬ್ ವಿಫಲವಾಯಿತು. ಮದನ್ ಲಾಲ್ನನ್ನು ಬಂಧಿಸಲಾಯಿತು. ಗಾಂಧೀಜಿ ಹತ್ಯೆಗೆ ನಿಯೋಜಿತರಾಗಿದ್ದ ಇತರರು ಕಾಲಿಗೆ ಬುದ್ಧಿ ಹೇಳಿದ್ದರು. ಕೊನೆಯ ಪ್ರಯತ್ನ 1948ರ ಜನವರಿ 30ರಂದು ಸಂಜೆ 5:17ಕ್ಕೆ ನಡೆಯಿತು. ನಾಥೂರಾಂ ಗೋಡ್ಸೆ ಗಾಂಧೀಜಿ ಬಳಿ ಆಗಮಿಸಿ ಮೂರು ಬಾರಿ ಗಾಂಧೀಜಿಯವರ ಗುಂಡಿಗೆಗೆ ಬ್ಲ್ಯಾಂಕ್ ರೇಂಜ್ನಿಂದ ಗುಂಡಿಟ್ಟ. ಈ ಸಂಚಿನಲ್ಲಿ ಶಾಮೀಲಾಗಿದ್ದ ಎಲ್ಲರನ್ನೂ ಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಲಾಯಿತು. ಇದು ಮಾಧ್ಯಮಗಳಲ್ಲೂ ವರದಿಯಾಯಿತು. ಗೋಡ್ಸೆ ಹಾಗೂ ನಾರಾಯಣ ಆಪ್ಟೆ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಇತರರಿಗೆ ಜೀವಾವಧಿ ಶಿಕ್ಷೆಯಾಯಿತು. ಆದರೆ ಸಾವರ್ಕರ್ ಅವರನ್ನು ಪುರಾವೆಗಳು ಇಲ್ಲದ ಕಾರಣದಿಂದ ದೋಷಮುಕ್ತಗೊಳಿಸಲಾಯಿತು. ಗಾಂಧೀಜಿಯವರ ಇಬ್ಬರು ಪುತ್ರರು ಹೇಳಿದಂತೆ, ಶಿಕ್ಷೆಗೆ ಒಳಗಾದವರು ಹಿಂದುತ್ವ ನಾಯಕರ ಅಡಿಯಾಳುಗಳು. ಆದ್ದರಿಂದ ಅವರ ಮರಣದಂಡನೆ ಶಿಕ್ಷೆಯನ್ನು ವಾಪಸು ಪಡೆಯಬೇಕು. ಹಂತಕರನ್ನು ಗಲ್ಲುಶಿಕ್ಷೆಗೆ ಗುರಿಪಡಿಸುವುದು ತಮ್ಮ ತಂದೆಯ ಪರಂಪರೆಗೆ ತೋರುವ ಅಗೌರವ. ಗಾಂಧೀಜಿಯವರು ಗಲ್ಲುಶಿಕ್ಷೆಯನ್ನು ವಿರೋಧಿಸುತ್ತಲೇ ಬಂದಿದ್ದರು ಎಂದು ಹೇಳಿದ್ದು ಇಲ್ಲಿ ಉಲ್ಲೇಖನೀಯ. ಗೋಡ್ಸೆ ಹಾಗೂ ಆಪ್ಟೆಯನ್ನು 1949ರ ನವೆಂಬರ್ 15ರಂದು ಅಂಬಾಲಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಗಾಂಧಿಹಂತಕರು ತಮ್ಮ ಕೃತ್ಯಕ್ಕೆ ಹೇಗೆ ತಾರ್ಕಿಕ ಸಮರ್ಥನೆ ನೀಡುವ ಪ್ರಯತ್ನ ಮಾಡಿದರು? ಅವರ ಪ್ರಕಾರ, ಗಾಂಧೀಜಿಯವರು ಮುಸಲ್ಮಾನರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಬೆಂಬಲಿಸಿದರು. ಈ ಕಾರಣದಿಂದ ಭಾರತ ವಿಭಜನೆಗೆ ಅವರು ಕಾರಣ. ಎರಡನೆಯದಾಗಿ ಮುಸಲ್ಮಾನರ ರಣೋತ್ಸಾಹಕ್ಕೆ ಗಾಂಧೀಜಿಯವರ ಓಲೈಕೆ ನೀತಿ ಕಾರಣ. ಮೂರನೆಯದಾಗಿ, ಕಾಶ್ಮೀರದಲ್ಲಿ ಪಾಕಿಸ್ತಾನದ ಅತಿಕ್ರಮಣದ ಹೊರತಾಗಿಯೂ, ಪಾಕಿಸ್ತಾನಕ್ಕೆ ಭಾರತ ಸರಕಾರ ನೀಡಬೇಕಿದ್ದ 55 ಕೋಟಿ ರೂಪಾಯಿ ಬಾಕಿಯನ್ನು ಪಾವತಿಸುವಂತೆ ಆಗ್ರಹಿಸಿ ಗಾಂಧೀಜಿ ನಿರಶನ ಸತ್ಯಾಗ್ರಹ ಕೈಗೊಂಡರು. ಆ ಕಾಲದ ಇತಿಹಾಸದ ಕಲ್ಪನೆ ಇರುವ ಪ್ರತಿಯೊಬ್ಬರಿಗೂ ಈ ಆರೋಪ ಆಧಾರರಹಿತ ಹಾಗೂ ಅಂಕಿ ಅಂಶಗಳಿಂದ ಕೂಡಾ ಸರಿಯಲ್ಲ ಎನ್ನುವುದು ತಿಳಿಯುತ್ತದೆ.
ಗಾಂಧೀಜಿಯವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಕೋಮು ಸಾಮರಸ್ಯದ ಪರಿಕಲ್ಪನೆ ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾಕ್ಕೆ ಅಸಹನೀಯವಾಗಿತ್ತು. ಹಿಂದುತ್ವಶಕ್ತಿಗಳ ಕಲ್ಪನೆಯಂತೆ ದೇಶ ಎನ್ನುವುದು ಧಾರ್ಮಿಕ ಸಂರಚನೆ. ಆದರೆ ಗಾಂಧೀಜಿ ಹಾಗೂ ಇತರ ರಾಷ್ಟ್ರೀಯವಾದಿ ನಾಯಕರಿಗೆ ಅದು ಪ್ರಾಂತೀಯ ಸಂರಚನೆ. ಅಥವಾ ವಿವಿಧ ಸಮುದಾಯಗಳ ಸಹಬಾಳ್ವೆಯ ಸಂರಚನೆ. ಗಾಂಧೀಜಿ ಮೇಲಿನ ದಾಳಿ ನಡೆಸುವ ಹದಿನಾಲ್ಕು ವರ್ಷಗಳ ವಿಫಲ ಪ್ರಯತ್ನದಿಂದ ತಿಳಿದುಬರುವ ಅಂಶವೆಂದರೆ, ಗಾಂಧೀಜಿಯವರನ್ನು ಹತ್ಯೆ ಮಾಡುವ ಸಂಚನ್ನು ಬಹಳಷ್ಟು ಹಿಂದೆಯೇ ರೂಪಿಸಲಾಗಿತ್ತು. ಅಂಥ ಹೀನ ಕೃತ್ಯಕ್ಕೆ ಹಿನ್ನೆಲೆಗಳನ್ನು ತಾರ್ಕಿಕಗೊಳಿಸುವ ಜಾಣ ನಡೆಯ ಮೂಲಕ ದಿಕ್ಕುತಪ್ಪಿಸುವ ಯತ್ನವೂ ನಡೆದಿದೆ. ನಾಥೂರಾಂ ಗೋಡ್ಸೆ ಆರೆಸ್ಸೆಸ್ ಜತೆಗೆ ಹೊಂದಿದ್ದ ಸಂಬಂಧದ ವಿಚಾರ ಇನ್ನೂ ಸ್ಪಷ್ಟವಾಗಿ ಇತ್ಯರ್ಥವಾಗಿಲ್ಲ. ಮಹಾತ್ಮಗಾಂಧೀಜಿಯವರ ಹತ್ಯೆ ವಿಚಾರದ ಬಗೆಗಿನ ಚರ್ಚೆಗಳು ಬಂದಾಗಲೆಲ್ಲ ಆರೆಸ್ಸೆಸ್ ಹಾಗೂ ಸಹ ಸಂಘಟನೆಗಳು ನಾಥೂರಾಂ ಗೋಡ್ಸೆ ಹಾಗೂ ಅವರ ತಂಡವನ್ನು ವಿರೋಧಿಸುತ್ತಲೇ ಬಂದಿವೆ. ಒಂದೆಡೆ, ಹತ್ಯೆ ಸಂದರ್ಭದಲ್ಲಿ ಆತನ ಜತೆಗೆ ಆರೆಸ್ಸೆಸ್ ಯಾವ ಸಂಬಂಧವನ್ನೂ ಹೊಂದಿಲ್ಲ ಎಂಬುದನ್ನು ಬಿಂಬಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಜತೆಗೆ ಗಾಂಧೀಜಿಯ ಕ್ರಮಗಳಿಂದ ಜನರಲ್ಲಿ ಉಂಟಾಗಿದ್ದ ಹತಾಶೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವುದನ್ನೂ ಅದು ಮರೆತಿಲ್ಲ. ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಹಿಂದೆ ಏನು ಹೇಳಿದ್ದರು ಎನ್ನುವುದನ್ನು ನೋಡೋಣ: ನಾಥೂರಾಂ ಗೋಡ್ಸೆ, ಆರೆಸ್ಸೆಸ್ನ ಕಟು ಟೀಕಾಕಾರ. ಆರೆಸ್ಸೆಸ್ ಹಿಂದೂಗಳನ್ನು ನಿರ್ವೀರ್ಯರನ್ನಾಗಿ ಮಾಡಿತು ಎನ್ನುವುದು ಅವನ ಆರೋಪ. ಗೋಡ್ಸೆಗೂ ನಮಗೂ ಯಾವ ಸಂಬಂಧವೂ ಇಲ್ಲ. ಬೇರೆ ಯಾವ ಮಾರ್ಗವೂ ಇಲ್ಲದಾಗ ಕಾಂಗ್ರೆಸ್ ನಮ್ಮ ವಿರುದ್ಧದ ಚಳವಳಿಗೆ ಮತ್ತೆ ಜೀವ ತುಂಬುವ ಪ್ರಯತ್ನ ಮಾಡುತ್ತಿದೆ (ಟೈಮ್ಸ್ ಆಫ್ ಇಂಡಿಯಾ, ನವೆಂಬರ್ 22, 1993). ಗಾಂಧೀಜಿಯವರನ್ನು ಹತ್ಯೆ ಮಾಡುವ ಸಂಚಿನಲ್ಲಿ ಶಾಮೀಲಾಗಿದ್ದ ನಾಥೂರಾಂ ಗೋಡ್ಸೆಯ ಸಹಚರರು, ಇಡೀ ಸಂಬಂಧದ ಬಗ್ಗೆ ಸಂಪೂರ್ಣ ವಿಭಿನ್ನ ನಿಲುವು ಹೊಂದಿದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ‘ನಾನೇಕೆ ಗಾಂಧಿಯನ್ನು ಕೊಂದೆ’ ಎಂಬ ಪುಸ್ತಕದಲ್ಲಿ ಗೋಪಾಲ ಗೋಡ್ಸೆ ಸ್ಪಷ್ಟವಾಗಿ, ‘‘ನಾಥೂರಾಂ ಗೋಡ್ಸೆ ಆರೆಸ್ಸೆಸ್ ತ್ಯಜಿಸಿದ್ದಾಗಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು. ಗೋಳ್ವಾಲ್ಕರ್ ಹಾಗೂ ಆರೆಸ್ಸೆಸ್ಗೆ ಗಾಂಧೀಜಿ ಹತ್ಯೆ ಬಳಿಕ ತೊಂದರೆಗಳಾದ ಹಿನ್ನೆಲೆಯಲ್ಲಿ ಅವರು ಹಾಗೆ ಹೇಳಿದ್ದರು. ಆದರೆ ಅವರು ವಾಸ್ತವವಾಗಿ ಆರೆಸ್ಸೆಸ್ ತ್ಯಜಿಸಿರಲಿಲ್ಲ’’ ಎಂದು ಹೇಳಿದ್ದರು. ಇದೇ ಕೃತಿಯಲ್ಲಿ, ನಾಥೂರಾಂ ಗೋಡ್ಸೆ ಆರೆಸ್ಸೆಸ್ ಸದಸ್ಯರಾಗಿರಲಿಲ್ಲ ಎಂಬ ಅಡ್ವಾಣಿ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ ಇದು ಮುಚ್ಚಿಹಾಕುವ ಪ್ರಯತ್ನ ಎಂದು ಹೇಳಿದ್ದರು. ಫ್ರಂಟ್ ಲೈನ್ ನಿಯತಕಾಲಿಕಕ್ಕೆ 1994ರ ಜನವರಿ 28ರಂದು ನೀಡಿದ ಸಂದರ್ಶನದಲ್ಲಿ ಗೋಪಾಲ ಗೋಡ್ಸೆ ತಾವು ಹೇಳಬೇಕಾದ್ದನ್ನು ಸ್ಪಷ್ಟವಾಗಿ ಪುನರುಚ್ಚರಿಸಿದ್ದರು.
ಪ್ರಶ್ನೆ: ನೀವು ಆರೆಸ್ಸೆಸ್ ಭಾಗವಾಗಿದ್ದೀರಾ?
ಉತ್ತರ: ನಾವು ಎಲ್ಲ ಸಹೋದರರು ಆರೆಸ್ಸೆಸ್ನಲ್ಲಿದ್ದೆವು. ನಾಥೂರಾಂ, ದತ್ತಾತ್ರೇಯ, ನಾನು ಹಾಗೂ ಗೋವಿಂದ್. ನಾವು ನಮ್ಮ ಮನೆಗಳಲ್ಲಿ ಬೆಳೆದದ್ದಕ್ಕಿಂತ ಆರೆಸ್ಸೆಸ್ ಒಡನಾಟದಲ್ಲಿ ಬೆಳೆದದ್ದೇ ಹೆಚ್ಚು. ಅದು ನಮಗೆ ಕುಟುಂಬ ಇದ್ದಂತೆ.
ಪ್ರ: ನಾಥೂರಾಂ ಆರೆಸ್ಸೆಸ್ನಲ್ಲೇ ಉಳಿದಿದ್ದರೇ? ಅವರು ಬಿಟ್ಟಿರಲಿಲ್ಲವೇ?
ಉ: ನಾಥೂರಾಂ ಆರೆಸ್ಸೆಸ್ನಲ್ಲಿ ಬೌದ್ಧಿಕ ಕಾರ್ಯವಾಹ ಆಗಿದ್ದರು. ಅವರು ಆರೆಸ್ಸೆಸ್ ತ್ಯಜಿಸಿದ್ದಾಗಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು. ಗೋಳ್ವಾಲ್ಕರ್ ಹಾಗೂ ಆರೆಸ್ಸೆಸ್ಗೆ ಗಾಂಧೀಜಿ ಹತ್ಯೆ ಬಳಿಕ ತೊಂದರೆಗಳಾದ ಹಿನ್ನೆಲೆಯಲ್ಲಿ ಅವರು ಹಾಗೆ ಹೇಳಿದ್ದರು. ಆದರೆ ಅವರು ವಾಸ್ತವವಾಗಿ ಆರೆಸ್ಸೆಸ್ ತ್ಯಜಿಸಿರಲಿಲ್ಲ.
ಪ್ರ: ಆರೆಸ್ಸೆಸ್ ಹಾಗೂ ಗೋಡ್ಸೆಗೆ ಯಾವ ಸಂಬಂಧವೂ ಇಲ್ಲ ಎಂದು ಅಡ್ವಾಣಿ ಇತ್ತೀಚೆಗೆ ಹೇಳಿದ್ದಾರಲ್ಲ?
ಉ: ನಾನು ಅದನ್ನು ವಿರೋಧಿಸಿದ್ದೆ. ಅದು ಹೇಡಿತನದ ಹೇಳಿಕೆ. ಹೋಗಿ ಗಾಂಧೀಜಿಯನ್ನು ಹತ್ಯೆ ಮಾಡಿ ಎಂದು ಆರೆಸ್ಸೆಸ್ ನಿರ್ಣಯ ಅಂಗೀಕರಿಸಿರಲಿಲ್ಲ ಎಂದು ಹೇಳಬಹುದು. ಆದರೆ ನಾಥೂರಾಂಗೆ ಆರೆಸ್ಸೆಸ್ ಜತೆ ಸಂಬಂಧವೇ ಇಲ್ಲ ಎಂದು ಹೇಳುವಂತಿಲ್ಲ. ಹಿಂದೂ ಮಹಾಸಭಾ ಆತನನ್ನು ಅಲ್ಲಗಳೆದಿಲ್ಲ. 1944ರಲ್ಲಿ ಗೋಡ್ಸೆ ಆರೆಸ್ಸೆಸ್ನ ಬೌದ್ಧಿಕ ಕಾರ್ಯವಾಹ ಆಗಿದ್ದ ಸಂದರ್ಭದಿಂದಲೇ ಹಿಂದೂ ಮಹಾಸಭಾ ಕೆಲಸ ಮಾಡುತ್ತಿದ್ದರು. ಗಲ್ಲಿಗೇರಿಸುವ ಮುನ್ನ ಸಹೋದರನ ಕೊನೆಯ ಕ್ಷಣಗಳ ಬಗ್ಗೆ ಮಾತನಾಡಿದ ಗೋಪಾಲ್ ಗೋಡ್ಸೆ, ತಮ್ಮ ಕೃತಿಯಲ್ಲಿ ಈ ಕೆಳಗಿನ ಅಂಶಗಳನ್ನು ವಿವರಿಸಿದ್ದಾರೆ. ವಧಾಸ್ಥಾನಕ್ಕೆ ಕರೆತಂದ ಬಳಿಕ ಕೂಡಾ ಆತ ರಾಷ್ಟ್ರಭಕ್ತಿಯ ಗಾನವನ್ನು ಹಾಡಿದ್ದ. ಆ ಸಾಲುಗಳು ಹೀಗಿವೆ: ನಮಸ್ತೇ ಸದಾ ವತ್ಸಲೇ ಮಾತೃಭೂಮೇ ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಂ ಮಹಾಮಂಗಲೇ ಪುಣ್ಯ ಭೂಮೇ ತ್ವರ್ಧತೇ ಪತತ್ವೇಶ ಕಾಯೊ ನಮಸ್ತೇ ನಮಸ್ತೇ.. ಆರೆಸ್ಸೆಸ್ ಶಾಖೆಯನ್ನು ಹತ್ತಿರದಿಂದ ನೋಡಿದ ಪ್ರತಿಯೊಬ್ಬರಿಗೂ ಸ್ಪಷ್ಟ�