ಭಾರತೀಯ ಸೇನೆಯಲ್ಲಿ ನೇಮಕಾತಿ ರ್ಯಾಲಿ ಆರಂಭ
ಶಿವಮೊಗ್ಗ, ಫೆ.5: ಭಾರತೀಯ ಸೇನೆಯು 2017-18ನೆ ಸಾಲಿನಲ್ಲಿ ಬಿಜಾಪುರದಲ್ಲಿ ಸೈನಿಕ ಹುದ್ದೆಗಳನ್ನು ಭರ್ತಿ ಮಂಗಳೂರು ಜಿಲ್ಲಾ ಕೇಂದ್ರದಲ್ಲಿ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ. ಇದರಲ್ಲಿ ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಬಿಜಾಪುರ, ದಾರವಾಡ, ಹಾವೇರಿ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಸೋಲ್ಜರ್ ಜನರಲ್ ಡ್ಯೂಟಿಗಾಗಿ ಎಸೆಸೆಲ್ಸಿಯಲ್ಲಿ ಶೇ.32 ಅಂಕಗಳನ್ನು ಪಡೆದಿದ್ದು ವಯೋಮಿತಿ 17.5 ರಿಂದ 21 ವರ್ಷದೊಳಗಿರಬೇಕು. ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಹುದ್ದೆಗಾಗಿ ಎಸೆಸೆಲ್ಸಿ ಮತ್ತು ಪಿಯುಸಿ ಎಲ್ಲಾ ವಿಷಯಗಳಲ್ಲೂ ಶೇ.40 ಅಂಕಗಳನ್ನು ಪಡೆದಿದ್ದು ವಯೋಮಿತಿ 17.5 ರಿಂದ 23 ವರ್ಷದೊಳಗಿರಬೇಕು. ಸೋಲ್ಜರ್ ಟೆಕ್ನಿಕ್ ಹುದ್ದೆಗಾಗಿ ಎಸೆಸೆಲ್ಸಿ ಮತ್ತು ಪಿಯುಸಿ (ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾತ್ಸ್) ಎಲ್ಲಾ ವಿಷಯಗಳಲ್ಲೂ ಶೇ.50 ಅಂಕಗಳನ್ನು ಪಡೆದಿದ್ದು ವಯೋಮಿತಿ 17.5 ರಿಂದ 23 ವರ್ಷದೊಳಗಿರಬೇಕು. ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್/ಟೆಕ್ನಿಕ್ (ಆರ್.ವಿ.ಸಿ.) ಹುದ್ದೆಗಾಗಿ ಎಸೆಸೆಲ್ಸಿ ಮತ್ತು ಪಿಯುಸಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯೋಲಜಿ) ಎಲ್ಲಾ ವಿಷಯಗಳಲ್ಲೂ ಶೇ.40 ಅಂಕಗಳನ್ನು ಪಡೆದಿದ್ದು, ವಯೋಮಿತಿ 17.5 ರಿಂದ 23 ವರ್ಷದೊಳಗಿರಬೇಕು. ಮತ್ತು ಸೋಲ್ಜರ್ ಟ್ರೇಡ್ಸ್ ಮೆನ್ ಹುದ್ದೆಗಾಗಿ ಎಸೆಸೆಲ್ಸಿ/ಐಟಿಐ/8ನೆ ತರಗತಿ ಪಾಸ್ ಆಗಿರಬೇಕು ವಯೋಮಿತಿ 17.5 ರಿಂದ 23 ವರ್ಷದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.