ಓ ಮೆಣಸೆ...
ರಾಜಕೀಯ ನಿವೃತ್ತಿ ಎನ್ನುವುದು ನನ್ನ ನಿಘಂಟಿನಲ್ಲೇ ಇಲ್ಲ
- ಎಸ್.ಎಂ.ಕೃಷ್ಣ, ಮಾಜಿ ಮುಖ್ಯ ಮಂತ್ರಿ
ನಿಮ್ಮ ನಿಘಂಟನ್ನು ಬದಲಿಸುವುದೇ ಒಳ್ಳೆಯದು.
---------------------
ರಾಜ್ಯದಲ್ಲಿ ನಡೆಯುತ್ತಿರುವುದು ಕುರುಬರ ಸರಕಾರ
-ಜಾಫರ್ ಶರೀಫ್, ಕೇಂದ್ರ ಮಾಜಿ ಸಚಿವ
ಕುರುಬರು ಸರಕಾರ ನಡೆಸಬಾರದು ಎಂದು ಸಂವಿಧಾನ ಹೇಳಿದೆಯೇ?
---------------------
ನಾನು, ರಾಹುಲ್ ಒಂದೇ ಸೈಕಲ್‌ನ ಎರಡು ಚಕ್ರಗಳಿದ್ದಂತೆ
-ಅಖಿಲೇಶ್ ಯಾದವ್, ಉ.ಪ್ರ.ಮುಖ್ಯಮಂತ್ರಿ
ಸೈಕಲ್ ಚೈನ್ ಕಳಚಿಕೊಳ್ಳದ ಹಾಗೆ ನೋಡಿಕೊಳ್ಳಿ.
---------------------
ಬುದ್ಧಿಸಮ್‌ಗೆ ಸ್ವಂತ ಅಸ್ತಿತ್ವ ಇಲ್ಲ. ಅದು ಉಪನಿಷತ್‌ನ ಒಂದು ಭಾಗ
-ಡಾ. ಎಸ್.ಎಲ್.ಬೈರಪ್ಪ, ಹಿರಿಯ ಸಾಹಿತಿ
ನಿಮ್ಮ ಕಾದಂಬರಿಗಳೆಲ್ಲ ಮನುವಾದದ ಭಾಗವಂತೆ ನಿಜವೇ?
---------------------
ಎಸ್.ಎಂ.ಕೃಷ್ಣರ ಮಾರ್ಗದರ್ಶನ ಬಿಜೆಪಿಗೆ ಅಗತ್ಯವಿದೆ
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅಂತೂ ಈವರೆಗೆ ಮಾರ್ಗದರ್ಶನದ ಕೊರತೆಯಿತ್ತು ಎಂದಾಯಿತು.
---------------------
ಭಾರತದಲ್ಲಿ ಅತೀ ಹೆಚ್ಚು ಜಾತ್ಯತೀತ ಪ್ರಾಣಿ ಎಂದರೆ ಗೋವು
-ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್‌ನ ನಾಯಕ
ಆದುದರಿಂದಲೇ ನಿಮ್ಮ ಕಣ್ಣು ಅದರ ಮೇಲೆ ಬಿದ್ದಿದೆ.
---------------------
ಆರೆಸ್ಸೆಸ್ ಮಾತ್ರ ಸಮಾಜಕ್ಕಾಗಿ ಏನಾದರೂ ಒಳಿತನ್ನು ಮಾಡಬಲ್ಲುದೆಂದು ಪ್ರಜ್ಞಾವಂತ ಚಿಂತಕರು ನಂಬಿದ್ದಾರೆ
- ಮೋಹನ್ ಭಾಗವತ್, ಆರೆಸ್ಸೆಸ್‌ನ ಸರ ಸಂಘ ಚಾಲಕ
ಬಹುಶಃ ಆ ಚಿಂತಕರ ಹೆಸರು ಎಸ್. ಎಲ್. ಭೈರಪ್ಪ ಎಂದಿರಬೇಕು.
---------------------
ಹಿಂದಿ ಭಾಷೆಯ ಲಿಪಿಯೂ ಸಂಸ್ಕೃತದಿಂದಲೇ ಬಂದಿದೆ
-ಡಾ.ಸುಬ್ರಮಣಿಯನ್ ಸ್ವಾಮಿ, ರಾಜ್ಯ ಸಭಾ ಸದಸ್ಯ
ಲಿಪಿ ಯಾವುದರಿಂದಲೇ ಬರಲಿ, ಮೊದಲು ಆಡುವ ಭಾಷೆ ಮಾನವೀಯವಾಗಿರುವುದು ಅತ್ಯಗತ್ಯ.
---------------------
ರಾಜಕೀಯ ತುಂಬಾ ಕಷ್ಟ
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ನಿವೃತ್ತಿಯಾಗದಂತೆ ತಡೆದವರು ಯಾರು?
---------------------
ದೇಶಿಯ ಗೋವಿನ ಹಾಲಿಗಿಂತ ಕತ್ತೆ ಹಾಲು ಶ್ರೇಷ್ಠ
-ಕುಂ.ವಿರಭದ್ರಪ್ಪ, ಸಾಹಿತಿ
ಗೋವಿನ ಹಾಲು ಕುಡಿದವರು ಎಸಗುವ ಕೃತ್ಯಗಳನ್ನು ನೋಡಿದರೆ ನಿಜ ಅನ್ನಿಸುತ್ತೆ.
---------------------
ನಮ್ಮ ಅಮೆರಿಕಕ್ಕೆ ಬಲಿಷ್ಠ ಗಡಿಯ ಆವಶ್ಯಕತೆ ಇದೆ
-ಡೊನಾಲ್ಡ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅಷ್ಟೊಂದು ಶತ್ರುಗಳನ್ನು ಕಟ್ಟಿಕೊಂಡಿದೆಯೇ ಅಮೆರಿಕ?
---------------------
ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಶನಿ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಮಂಗಳೂರಿನ ಜನರಂತೂ ತಮ್ಮ ಪಾಲಿನ ಶನಿಯನ್ನು ಪ್ರತಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸುತ್ತಲೇ ಬಂದಿದ್ದಾರೆ.
---------------------
ಬಿಜೆಪಿ ಖಾಲಿ ಬಸ್‌ನಂತಾಗಿದೆ
-ಎಚ್.ಡಿ.ರೇವಣ್ಣ, ಮಾಜಿ ಸಚಿವ
ಎಲ್ಲ ಸೀಟುಗಳೂ ಕಾಂಗ್ರೆಸ್‌ನಲ್ಲಿರುವ ವೃದ್ಧರಿಗೆ ಮೀಸಲಂತೆ.
---------------------
ಅಧಿಕಾರವಿಲ್ಲ ಎಂದು ಬೇಜಾರು ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ
- ಅಂಬರೀಷ್, ಮಾಜಿ ಸಚಿವ
ಬೇಜಾರು ಮಾಡಿಕೊಂಡರೂ ಜನರಿಗೇನೂ ಬೇಜಾರಿಲ್ಲ.
---------------------
ಯಾವುದೇ ರಾಜಕೀಯ ಪಕ್ಷಗಳ ಏಳು-ಬೀಳಿನಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ
-ಯಡಿಯುರಪ್ಪ, ಮಾಜಿ ಮುಖ್ಯಮಂತ್ರಿ
ನಿಮ್ಮ ಬೀಳಿನಲ್ಲಿ ವಹಿಸಿದ ಪಾತ್ರವಂತೂ ಅಮೋಘ.
---------------------
ಜಾತ್ಯತೀತ ನಿಲುವಿನ ವಿಚಾರದಲ್ಲಿ ಎನ್‌ಸಿಪಿ ರಾಜಿ ಮಾಡಿಕೊಳ್ಳುವುದಿಲ್ಲ
-ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ
ಪದ್ಮವಿಭೂಷಣದ ಜೊತೆಗೆ ಭಾರತರತ್ನವೂ ನೀಡಬೇಕೇ?
---------------------
ಭವಿಷ್ಯದಲ್ಲಿ ಜೆಡಿಎಸ್ ಎಂದೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ
-ಎಚ್.ಡಿ.ಕುಮಾರ ಸ್ವಾಮಿ, ಜೆಡಿಎಸ್ ಅಧ್ಯಕ್ಷ
ಪಕ್ಷಕ್ಕೆ ಭವಿಷ್ಯವೇ ಇಲ್ಲದಿರುವಾಗ ಈ ಮಾತು ಸಹಜ.
---------------------
ಎಸ್.ಎಂ.ಕೃಷ್ಣ ಏಕೆ ರಾಜೀನಾಮೆ ನೀಡಿದರು ಎಂದು ನನಗೆ ಗೊತ್ತಿಲ್ಲ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೃಷ್ಣ ಅವರಿಗೂ ಗೊತ್ತಿಲ್ಲ.
---------------------
ಈ ಜಗತ್ತಿನಲ್ಲಿ ಧನದ ಮಹಿಮೆ ಅಪಾರವಾದುದು
- ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಹೌದು. ಅದರ ಮಹಿಮೆಯಲ್ಲಿ ಅದೆಷ್ಟೋ ಕೊಲೆ ಪ್ರಕರಣಗಳು ಈ ನಾಡಿನಲ್ಲಿ ಮುಚ್ಚಿ ಹೋಗಿವೆ.
---------------------
ಆಪ್, ಕಾಂಗ್ರೆಸ್‌ನಿಂದ ಹಣ ಪಡೆದು ಬಿಜೆಪಿಗೆ ಮತ ನೀಡಿ
- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
ಬಿಜೆಪಿ ಹಣ ಕೊಟ್ಟರೂ ಜನ ಆ ಪಕ್ಷಕ್ಕೆ ಮತ ಹಾಕುವ ಸ್ಥಿತಿ ಇಲ್ಲ.
---------------------
ನಾನು ನಟನೆ ಮಾಡುತ್ತೇನೆ, ರಾಜಕೀಯ ಮಾಡಲು ಬರುವುದಿಲ್ಲ
- ಶಾರುಖ್ ಖಾನ್, ಬಾಲಿವುಡ್ ನಟ
ರಾಜಕೀಯ ಮಾಡಲು ನಟನೆ ಅತ್ಯಗತ್ಯ.
---------------------
ಆಪ್ ಭಾರತೀಯ ರಾಜಕೀಯದಲ್ಲಿ ಉದಯವಾಗಿರುವ ಹೊಸ ವಂಚನೆ
-ಪ್ರಶಾಂತ್ ಭೂಷಣ್, ಹಿರಿಯ ನ್ಯಾಯವಾದಿ
ಮೋದಿಯ ಮುಂದೆ ಉಳಿದೆಲ್ಲ ವಂಚನೆಗಳೂ ಸಜ್ಜನಿಕೆಯಂತೆ ಕಾಣುತ್ತಿದೆ.
---------------------
ಜನಾರ್ದನ ಪೂಜಾರಿ ದೇವರು ಕೊಟ್ಟ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾೆ
- ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಭಾ ಸದಸ್ಯ
ಸಿದ್ದರಾಮಯ್ಯರ ವಿರುದ್ಧ ನೀವೇ ಅವರನ್ನು ಛೂ ಬಿಟ್ಟಿದ್ದೀರಿ ಅಂತಾಯಿತು.
---------------------
ನಾನು ನಾಗಪುರದ ಸಂಘವನ್ನು ಮಾತ್ರ ನಂಬುತ್ತೇನೆ
-ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
ಸಂವಿಧಾನವನ್ನು ಯಾವತ್ತು ನಂಬಲು ಶುರು ಮಾಡುತ್ತೀರಿ?