ಉಡುಪಿ: ಶೌಕತ್ ಹುಸೈನ್ ಅಸ್ಸಾದಿ ನಿಧನ
ಉಡುಪಿ, ಫೆ.13: ಉಡುಪಿ ನಿವಾಸಿ, ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶೌಕತ್ ಹುಸೈನ್ ಅಸ್ಸಾದಿ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಶೌಕತ್ ಹುಸೈನ್ ಅವರು ಉಡುಪಿಯ ಹಾಶಿಮಿ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಉಡುಪಿ ಮುಸ್ಲಿಮ್ ವೆಲ್ಪೇರ್ ಅಸೋಸಿಯೇಶನ್ ಅಜೀವ ಸದಸ್ಯರಾಗಿ, ಜಮಾಅತ್-ಇ-ಇಸ್ಲಾಮಿ ಹಿಂದ್ ಸಂಘಟನೆ ಉಡುಪಿ ಶಾಖೆಯ ಸಹಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸಂತಾಪ: ಶೌಕತ್ ಹುಸೈನ್ ಅಸ್ಸಾದಿ ನಿಧನಕ್ಕೆ ಜಮಾಅತ್-ಇ-ಇಸ್ಲಾಮಿ ಹಿಂದ್ ಸಂಘಟನೆ ಉಡುಪಿ ಶಾಖೆಯ ಅಧ್ಯಕ್ಷ ಅಬ್ದುಲ್ ಅಝೀಝ್, ಉಡುಪಿ ಮುಸ್ಲಿಮ್ ವೆಲ್ಪೇರ್ ಅಸೋಸಿಯೇಶನ್ ಅಧ್ಯಕ್ಷ ಕೆ.ಅಬ್ದುಲ್ ಗಫೂರ್ ಹಾಗೂ ಉಡುಪಿ ಹಾಶಿಮಿ ಮಸೀದಿಯ ಆಡಳಿತ ಸಮಿತಿ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Next Story