ಸಿಬಿಎಸ್‌ಇ ಸ್ಕೂಲ್‌ಗಳಲ್ಲಿ ಎನ್‌ಸಿಆರ್‌ಟಿ ಪಾಠಪುಸ್ತಕಗಳು ಕಡ್ಡಾಯ
ಹೊಸದಿಲ್ಲಿ,ಫೆ. 16: ಸಿಬಿಎಸಿ ಸ್ಕೂಲ್‌ಗಳಲ್ಲಿ ಎನ್‌ಸಿಆರ್ಟಿ (ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್) ಪಾಠಪುಸ್ತಕಗಳು ಕಡ್ಡಾಯಗೊಳಿಸಲಾಗಿದೆಎಂದು ಕೇಂದ್ರಸರಕಾರ ತಿಳಿಸಿದೆ. 2017-18 ಅಧ್ಯಯನ ವರ್ಷದಲ್ಲಿ ಇದು ಜಾರಿಗೆ ಬರಲಿದೆ. ಸಿಬಿಎಸ್‌ಇ ಸ್ಕೂಲ್‌ಗಳಲ್ಲಿ ಪಠ್ಯಕ್ರಮಗಳನ್ನು ಏಕೀಕರಿಸುವುದರ ಅಂಗವಾಗಿ ಎನ್‌ಸಿಆರ್‌ಟಿ ಪಾಠಪುಸ್ತಕಗಳನ್ನು ಕಡ್ಡಾಯ ಗೊಳಿಸಲಾಗಿದೆ ಎಂದು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೋಸ ಯೋಜನೆ ಭರವಸೆ ದಾಯಕವಾಗಿದೆ. ಖಾಸಗಿ ಪ್ರಕಾಶಕರಿಂದ ಪಾಠಪುಸ್ತಕಗಳನ್ನು ಖರೀದಿಸಲು ಸ್ಕೂಲುಗಳು ಪೋಷಕರನ್ನು ನಿರ್ಬಂಧಿಸುವುದಿದೆ. ಎನ್‌ಸಿಆರ್‌ಟಿ ಪುಸ್ತಕಗಳಿಗಿಂತ 300-600 ರೂಪಾಯಿಗಳವರೆಗೂ ಖಾಸಗಿ ಪ್ರಕಾಶಕರು ಹೆಚ್ಚು ದರ ಪಡೆಯುತ್ತಾರೆ.
ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಈ ತೀರ್ಮಾನ ತಳೆಯಲಾಗಿದೆ. ಎಲ್ಲ ಸ್ಕೂಲ್‌ಗಳಲ್ಲಿ ಪಾಠಪುಸ್ತಕಗಳನ್ನು ಲಭಿಸುವಂತೆ ಮಾಡಲು ಎನ್ಸಿ ಆರ್‌ಟಿಗೆ ಸೂಚನೆ ನೀಡಲಾಗಿದೆಎಂದು ಸಚಿವಾಲಯ ತಿಳಿಸಿದೆ. ಎಷ್ಟು ಪುಸ್ತಕಗಳು ಅಗತ್ಯವಿದೆ ಎಂದು ಶಾಲೆಗಳು ಸಿಬಿಎಸ್‌ಇ ವೆಬ್‌ಸೈಟ್‌ಮೂಲಕ ತಿಳಿಸುವ ಅವಕಾಶವಿದೆ.
ಅಗತ್ಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎನ್‌ಸಿಆರ್‌ಟಿ ಪುಸ್ತಕಗಳು ಲಭಿಸುವುದಿಲ್ಲ ಎನ್ನುವ ದೂರು ವ್ಯಾಪಕವಾಗಿ ಕೇಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಪ್ರಕಾಶಕರ ಪುಸ್ತಕಗಳನ್ನು ಖರೀದಿಸಲು ಶಾಲೆಗಳು ಪೋಷಕರನ್ನುಒತ್ತಾಯಿಸುತ್ತವೆ ಎಂದು ವರದಿ ತಿಳಿಸಿದೆ.