ಉಪ್ಪಿನಂಗಡಿಯ ಅನ್ವರ್ ರೋಯಲ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ
ಉಪ್ಪಿನಂಗಡಿ, ಫೆ.18: ಇಲ್ಲಿನ ನಿನ್ನಿಕಲ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ, ಅನ್ವರ್ (36 ) ಸೌದಿ ಅರೇಬಿಯಾದ ಮೆಕ್ಕಾ ಸಮೀಪದ ತಾಹಿಫ್ನಲ್ಲಿ ಫೆ.18ರಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.
ಉಪ್ಪಿನಂಗಡಿ ರೋಯಲ್ ಕಾಂಪ್ಲೆಕ್ಸ್ ಮತ್ತು ಸಮೂಹ ಸಂಸ್ಥೆಗಳ ಕುಟುಂಬ ಸದಸ್ಯರಾಗಿರುವ ಅನ್ವರ್ ಕಳೆದ 10 ವರ್ಷಗಳಿಂದ ಸೌದಿ ಅರೇಬಿಯಾದ ತಾಹಿಫ್ನಲ್ಲಿ ಉದ್ಯೋಗದಲ್ಲಿದ್ದರು.
ನಸುಕಿನಲ್ಲಿ ಎದೆ ನೋವು ಆಗುತ್ತಿದೆ ಎಂದು ಹೇಳಿಕೊಂಡಿದ್ದ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಅವರು ಬೆಳಗ್ಗೆ ನಿಧನ ಹೊಂದಿದ್ದಾರೆ.
ಊರಿನಲ್ಲಿದ್ದ ಪತ್ನಿ ಸಫ್ರೀನ, ಮಕ್ಕಳಾದ ಅಫ್ದಲ್, ಅಲೂಫ್, ಅಲ್ಹಾನ್ ಫೆ. 16ರಂದು ಊರಿನಿಂದ ಸೌದಿ ಅರೇಬಿಯಾ ಹೋಗಿ ನಿನ್ನೆ ಸಂಜೆಯಷ್ಟೇ ಅನ್ವರ್ ಅವರನ್ನು ಸೇರಿಕೊಂಡಿದ್ದರು.
ಪತ್ನಿ ಮತ್ತು ಮಕ್ಕಳು ಸೌದಿ ಅರೇಬಿಯಾದಲ್ಲೇ ಇದ್ದುದರಿಂದಾಗಿ ಅನ್ವರ್ ಅವರ ಅಂತ್ಯ ಕ್ರಿಯೆ, ದಫನ ಕಾರ್ಯವನ್ನು ಅಲ್ಲೇ ನೆರೆವೇರಿಸುವ ಬಗ್ಗೆ ಕುಟುಂಬ ಮೂಲಗಳು ತಿಳಿಸಿವೆ.
Next Story