ದಲಿತ ಅಧ್ಯಾಪಕಿಯನ್ನು ಕ್ರೂರವಾಗಿ ಥಳಿಸಿದ ಬಿಜೆಪಿಗರು ಭೂಗತ
ನೇಮಂ,ಫೆ. 23: ದಲಿತ ಅಧ್ಯಾಪಕಿಯನ್ನು ಮನೆಗೆ ಕರೆಯಿಸಿಕೊಂಡು ಜಾತಿ ನಿಂದೆ ನಡೆಸಿದ್ದಲ್ಲದೆ ಕ್ರೂರವಾಗಿ ಥಳಿಸಿದ ಆರೋಪಿಗಳಾದ ಬಿಜೆಪಿ ಕಾರ್ಯಕರ್ತರು ಭೂಗತನಾಗಿದ್ದಾರೆ.ಪೊಲೀಸರು ಕೇಸು ದಾಖಲಿಸಿದೊಡನೆ ಅಡಗಿ ಕೂತ ಆರೋಪಿಗಳನ್ನು ಬಂಧಿಸಬೇಕೆಂದು ಕಲ್ಲಿಯೂರ್, ಪುನ್ನಮೂಡ್ ಪ್ರದೇಶದ ಸಿಪಿಎಂ , ಕೆಪಿಎಂಎಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ಮತ್ತು ಹರತಾಳ ನಡೆಸಿದ್ದರು. ಘರ್ಷಣೆಯ ಸಾಧ್ಯತೆಯಿದ್ದುದರಿಂದ ಪೊಲೀಸರು ಸ್ಥಳದಲ್ಲಿ ಬಂದೋಬಸ್ತು ಏರ್ಪಡಿಸಿದ್ದರು. ಮಂಗಳವಾರ ಮಧ್ಯಾಹ್ನದ ವೇಳೆ ದಲಿತ ಅಧ್ಯಾಪಕಿಯನ್ನು ಕಲ್ಲಿಯೂರ್ ಸೇವಾಭಾರತಿ ಸಮೀಪದ ಮನೆಯೊಂದಕ್ಕೆ ಕರೆಯಿಸಿಕೊಂಡು ಬಿಜೆಪಿ ಕಾರ್ಯಕರ್ತರು ಜಾತಿ ನಿಂದೆ ಮಾಡಿ ಹೊಡೆದಿದ್ದರು. ಕಲ್ಲಿಯೂರ್ ಬಿಡಿಜೆಎಸ್( ಭಾರತ್ ಧರ್ಮ ಜನ ಸೇನಾ) ನಾಯಕ ಪದ್ಮಕುಮಾರ್, ಈತನಸಹೋದರಿ ಬಿಂದುಲೇಖಾ, ಬಿಜೆಪಿ ನಾಯಕ ವೆಂಗನ್ನೂರ್ ಶ್ರೀಕುಮಾರ್ ಹಾಗೂ ಇತರ ಐವರ ವಿರುದ್ಧ ದಲಿತ ಅಧ್ಯಾಪಕಿಗೆ ಹಲ್ಲೆ, ಜಾತಿ ನಿಂದೆ ಮಾಡಿದ ಆರೋಪದಲ್ಲಿ ಪೊಲೀಸರು ಕೇಸುದಾಖಲಿಸಿದ್ದಾರೆ.
ಈಗ ಆರೋಪಿಗಳೆಲ್ಲರೂ ಅಡಗಿ ಕೂತಿದ್ದಾರೆ. ಅವರನ್ನು ಕೂಡಲೇ ಬಂಧಿಸಲಾಗುವುದು ಎಂದು ನೇಮಂ ಎಸ್ಸೈಯ ಸಂಪತ್ ಕೃಷ್ಣನ್ ತಿಳಿಸಿದ್ದಾರೆ. ದೂರು ನೀಡಿದರೆ ಅಧ್ಯಾಪಕಿಯನ್ನು ಕೊಲ್ಲುವುದಾಗಿ ಬಿಜೆಪಿ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ ಎಂದು ಅಧ್ಯಾಪಕಿ ಹೇಳಿದ್ದಾರೆಂದು ವರದಿ ತಿಳಿಸಿದೆ.