ಪತ್ನಿಯ ತಲೆಕತ್ತರಿಸಿ ಕೋರ್ಟಿಗೆ ತಂದ ಪತಿ!
ರಾಂಚಿ,ಫೆ. 24: ಪರಪುರಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಪತ್ನಿಯ ಕತ್ತರಿಸಿದ ರುಂಡದೊಂದಿಗೆ ವ್ಯಕ್ತಿಯೊಬ್ಬ ಕೋರ್ಟಿಗೆ ಹಾಜರಾಗಿದ್ದಾನೆ. ಜಾರ್ಖಂಡ್‌ನ ಗಟ್‌ಶಾಲ ಸಮೀಪದ ಭಂದ್‌ಮುತ್ತ್ ಗ್ರಾಮದಲ್ಲಿ ಈ ದಾರುಣ ಘಟನೆನಡೆದಿದೆ.
ಗಟ್‌ಶಾಲ ಎಂಬಲ್ಲಿನ ಭೂಪನ್ ಮರ್ಡಿ ಎನ್ನುವ ಮೂವತ್ತೈದು ವರ್ಷದ ವ್ಯಕ್ತಿ ತನ್ನ ಪತ್ನಿಗೆ ಪರಪುರುಷರೊಂದಿಗೆಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಪತ್ನಿ ಚುರಮಾಣಿ ಮರ್ಡಿಯ ತಲೆ ಕಡಿದಿದ್ದಾನೆ. ನಂತರ ಆ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಬಂದು ಕೋರ್ಟಿಗೆ ಶರಣಾಗಿದ್ದಾನೆ.
ಭೂಪನ್ ಮರ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಚುರಮಾಣಿ ಮರ್ಡಿಯ ತಲೆಯಿಲ್ಲದ ಮೃತದೇಹವನ್ನು ಮನೆಯ ಹತ್ತಿರ ಪತ್ತೆಮಾಡಿದ್ದಾರೆ. ಭೂಪನ್ ಮರ್ಡಿ ಮತ್ತುಪತ್ನಿ ನಡುವೆ ದಿನನಿತ್ಯ ಗಲಾಟೆ ನಡೆಯುತ್ತಿತ್ತು ಎಂದು ಸಮೀಪದ ಮನೆಯವರು ಪೊಲೀಸರಿಗೆ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಗಟ್‌ಶಾಲ ಡಿಎಸ್ಪಿ ಸಂಜೀವ್ ಬೆಸ್ರ ತಿಳಿಸಿದ್ದಾರೆಂದು ವರದಿಯಾಗಿದೆ.
Next Story