ಅಧ್ಯಕ್ಷ-ಸದಸ್ಯ ಸ್ಥಾನಕ್ಕೆ ಮುಂದುವರಿದ ಲಾಬಿ
ಮುಗಿದ ಸಾಹಿತ್ಯ ಅಕಾಡಮಿಗಳ ಅಕಾರಾವ
ಮಂಗಳೂರು, ೆ.26: ಮಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ ತುಳು, ಕೊಂಕಣಿ ಸಾಹಿತ್ಯ ಅಕಾಡಮಿಗಳ ಅಕಾರಾವ ೆ.26ಕ್ಕೆ ಕೊನೆಗೊಂಡಿದ್ದು, ನೂತನ ಅಧ್ಯಕ್ಷ-ಸದಸ್ಯ ಸ್ಥಾನಕ್ಕಾಗಿ ಲಾಬಿ ಮುಂದುವರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕಾರ ಸ್ವೀಕರಿಸಿದ ಒಂದು ವರ್ಷದ ಬಳಿಕ ತುಳು, ಕೊಂಕಣಿ, ಬ್ಯಾರಿ ಅಕಾಡಮಿಗಳ ಅಧ್ಯಕ್ಷ-ಸದಸ್ಯರ ನೇಮಕ ಮಾಡಲಾಗಿತ್ತು. ಕೊಡವ ಮತ್ತು ಅರೆ ಭಾಷೆ ಅಕಾಡಮಿಗೆ ನೇಮಕಮಾಡುವಾಗ ಮತ್ತಷ್ಟು ವಿಳಂಬವಾಗಿತ್ತು.
ಬ್ಯಾರಿ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷರು ಹೈಕೋರ್ಟ್ ಮೆಟ್ಟಲೇರಿದ ಕಾರಣ 2014ರಲ್ಲಿ ಸರಕಾರ ತಾನು ನೇಮಕ ಮಾಡಿದ್ದ ಆದೇಶವನ್ನು ವಾಪಸ್ ಪಡೆದಿತ್ತು. ಪ್ರಕರಣ ನ್ಯಾಯಾಲಯದಿಂದ ಮುಕ್ತಗೊಳ್ಳಲು ನಾಲ್ಕೆದು ತಿಂಗಳು ಬೇಕಾಗಿತ್ತು. ಅದರಂತೆ ಸರಕಾರ ಬ್ಯಾರಿ ಅಕಾಡಮಿಯ ಅಧ್ಯಕ್ಷ-ಸದಸ್ಯರ ಪಟ್ಟಿಯನ್ನು ಮತ್ತೊಮ್ಮೆ ಬಿಡುಗಡೆಗೊಳಿಸಿತ್ತು.
ತುಳು, ಕೊಂಕಣಿ ಅಕಾಡಮಿಯ ಅವಯು ೆ.26ಕ್ಕೆ ಕೊನೆಗೊಂಡಿದ್ದರೂ ಬ್ಯಾರಿ ಅಕಾಡಮಿಯ ಅವ ಆಗಸ್ಟ್‌ವರೆಗೆ ಮುಂದು ವರಿಯುವ ಸಾಧ್ಯತೆ ನಿಚ್ಚಳ ವಾಗಿದೆ. ಆದರೂ ಮೂರು ಅಕಾಡಮಿಗಳ ಅಧ್ಯಕ್ಷ-ಸದಸ್ಯ ಸ್ಥಾನಕ್ಕೆ ಬಿರುಸಿನ ಪೈಪೋಟಿ ಆರಂಭವಾಗಿದೆ.
1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಭಾಷಾ ಅಕಾಡಮಿಗಳ ಸ್ಥಾಪನೆಗೆ ನಾಂದಿ ಹಾಡಿದ್ದರು. ಆವಾಗ ಸಾಹಿತ್ಯ, ಭಾಷೆ, ಸಂಸ್ಕೃತಿಗೆ ಸಂಬಂಧಪಟ್ಟು ಕೆಲಸ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಸರಕಾರ ಬದಲಾವಣೆಗೊಂಡಾಗಲೆಲ್ಲಾ ಅಕಾಡಮಿಗಳ ಅಧ್ಯಕ್ಷ-ಸದಸ್ಯರ ಬದಲಾವಣೆಯಾಗತೊಡಗಿತು. ಹಾಗಾಗಿ ಅಕಾಡಮಿಗಳ ಉದ್ದೇಶ ಏನು ಎಂದು ಗೊತ್ತಿಲ್ಲದವರು ಕೂಡ ಸದಸ್ಯರಾಗಿ ನೇಮಕ ಗೊಳ್ಳತೊಡಗಿದರು. ಕೆಲವರಿಗೆ ಇದು ಗಂಜಿಕೇಂದ್ರವಾಗಿಯೂ ಮಾರ್ಪಾಟು ಆಗಿತ್ತು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇದೆ. ಮೂರು ಅಕಾಡಮಿಗಳ ಅಧ್ಯಕ್ಷ -ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್‌ನೊಳಗೆ ಪೈಪೋಟಿಯೂ ಇದೆ. ಹಾಲಿ ಸರಕಾರದ ಅವ ಇನ್ನು ಕೇವಲ 1 ವರ್ಷವಿದ್ದು, ಈಗ ನೇಮಕಗೊಂಡರೆ ಹೊಸ ಸರಕಾರ ಬಂದಾಗ ಮತ್ತೆ ಬದಲಾವಣೆಯಾಗಬಹುದು ಎಂಬ ಕಾರಣಕ್ಕಾಗಿ ಕೆಲವರು ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ. ಆದರೆ ವರ್ಷ ಒಂದಿರಲಿ, ಎರಡಿರಲಿ ಒಮ್ಮೆ ಅಧ್ಯಕ್ಷ ಅಥವಾ ಸದಸ್ಯರಾದರೆ ಸಾಕು ಎಂಬ ಭಾವನೆ ಹೊಂದಿದವರು ಪಕ್ಷದ ಶಾಸಕರು, ಸಚಿವರೊಂದಿಗೆ ಲಾಬಿ ಆರಂಭಿಸಿದ್ದಾರೆ. ಈ ಮಧ್ಯೆ ಸಾಹಿತ್ಯ ಪರಿಚಾರಿಕೆ ಮಾಡುವವರು ವೌನವಾಗಿ ಉಳಿದಿರುವುದು ಸುಳ್ಳಲ್ಲ.
ಕೊಂಕಣಿಯನ್ನು ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗಳಿಗೆ ಸೇರಿದ 41 ಸಮುದಾಯಗಳ ಜನರು ಮಾತನಾಡುತ್ತಾರೆ. ಹೆಚ್ಚಿನ ಸಮುದಾಯವು ಉತ್ತರ ಕರ್ನಾಟಕದಲ್ಲಿರುವುದು ವಿಶೇಷ. ಹಾಗಾಗಿ ಕೊಂಕಣಿ ಅಕಾಡಮಿಯ ಅಧ್ಯಕ್ಷ ಸ್ಥಾನ ಮಾತ್ರವಲ್ಲ ಅಕಾಡಮಿಯ ಕಚೇರಿಯನ್ನೂ ಕಾರವಾರಕ್ಕೆ ಸ್ಥಳಾಂತರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ.
ಇನ್ನು ತುಳು ಭಾಷೆಯನ್ನು ಬೇರೆ ಬೇರೆ ಜಾತಿಯ ಮಂದಿ ಮಾತನಾಡುತ್ತಾರೆ. ಕಳೆದ ಬಾರಿ ಸ್ವಲ್ಪದರಲ್ಲೇ ಅಧ್ಯಕ್ಷ ಸ್ಥಾನ ತಪ್ಪಿದವರಿಗೆ ಈ ಬಾರಿ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ ಈ ಹಿರಿಯ ಮುಖಂಡರಿಗೆ ಅಧ್ಯಕ್ಷ ಸ್ಥಾನ ಖಚಿತವಾದರೂ ಆಕಾಂಕ್ಷಿಗಳು ಸ್ಪರ್ಧೆಯಿಂದ ದೂರ ಉಳಿದಿಲ್ಲ.
ಬ್ಯಾರಿ ಅಕಾಡಮಿಗೆ ಕಳೆದ ಅವಯಲ್ಲಿ ಸ್ವಲ್ಪದರಲ್ಲೇ ಅಧ್ಯಕ್ಷ ಸ್ಥಾನದಿಂದ ವಂಚಿತ ರಾದವರ ಸಹಿತ 10ಕ್ಕೂ ಅಕ ಮಂದಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸದಸ್ಯ ಸ್ಥಾನಕ್ಕೂ ಭಾರೀ ಲಾಬಿ ಇದೆ. ಯಾವುದಕ್ಕೂ ಸಚಿವರ, ಶಾಸಕರ ಹಸಿರು ನಿಶಾನೆ ಸಿಗಬೇಕಿದೆ.