ಮೂಡುಬಿದಿರೆ: ಅಕ್ಷರ ದಾಸೋಹ ನೌಕರರ ಸಂಘದಿಂದ ರಾಜ್ಯಸರಕಾರಕ್ಕೆ ಮನವಿ
ಮೂಡುಬಿದಿರೆ, ಮಾ.1: ಅಕ್ಷರ ದಾಸೋಹ ನೌಕರರ ಸಂಘ ಮೂಡುಬಿದಿರೆ ವಲಯ ಸಮಿತಿಯಿಂದ ಶಾಸಕ ಅಭಯಚಂದ್ರ ಅವರಿಗೆ ಮನವಿಯೊಂದನ್ನು ನೀಡಲಾಯಿತು.
ಅಕ್ಷರ ದಾಸೋಹದ ನೌಕರರಾಗಿ ದುಡಿಯುತ್ತಿರುವ ಮಹಿಳೆಯರು ಇದುವರೆಗೆ 2 ಸಾವಿರ ರೂಪಾಯಿಗಳ ಸಂಭಾವನೆಯಲ್ಲಿ ಜೀವನ ನಡೆಸುತ್ತಿದ್ದು, ಬೆಲೆಯೇರಿಕೆಯ ಈ ದಿನಗಳಲ್ಲಿ ಅವರ ಬದುಕು ದುಸ್ತರವಾಗಿದೆ. ಈ ಮಹಿಳೆಯರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಯಾಗುವ ತನಕ ಕನಿಷ್ಠ ರಾಜ್ಯ ಸರಕಾರ 5 ಸಾವಿರ ರೂಪಾಯಿ ವೇತನ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಹಾಗೂ ಇದಕ್ಕಾಗಿ ಬಜೆಟ್‌ನಲ್ಲಿ 428 ಕೋಟಿ ಹಣವನ್ನು ತೆಗೆದಿರಿಸುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡಿದ ಸಂದರ್ಭ ಸಿಐಟಿಯು ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ಶಂಕರ ವಾಲ್ಪಾಡಿ, ಸಂಚಾಲಕರಾದ ಗಿರಿಜಾ, ನೌಕರರ ಸಂಘದ ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ಯಶೋಧಾ, ಕೋಶಾಧಿಕಾರಿ ಶೋಭಾ ಉಪಸ್ಥಿತರಿದ್ದರು.
Next Story